ಹಾಲು ತರಕಾರಿ ತರಲಿಕ್ಕೂ ಸ್ಕೂಟರ್ ಬಳಸೋ ತಲೆಮಾರು ಬೇಗ ಕಾಯಿಲೆಗೆ ತುತ್ತಾಗುತ್ತೆ!

By Kannadaprabha News  |  First Published May 30, 2021, 5:03 PM IST

ಯುದ್ಧಕ್ಕಿಂತ ಯುದ್ಧದ ಭಯವೇ ಹೆಚ್ಚು ಅಪಾಯಕಾರಿ ಅಂತಾರೆ ನಿರ್ದೇಶಕ ಅಕಿರಾ ಕುರಸೋವಾ. ಇದೀಗ ಬ್ಲಾ ್ಯಕ್ ಪಂಗಸ್ ಕತೆಯಲ್ಲೂ ಹಾಗೇ ಆಗುತ್ತಿದೆ. ಈ ಫಂಗಸ್ ಕುರಿತಾದ ಜನರ ಭಯವೇ ಅವರನ್ನು ಕಂಗೆಡಿಸುತ್ತಿದೆ. ಹಿರಿಯ ಇಎನ್‌ಟಿ ತಜ್ಞ ಡಾ. ದೀಪಕ್ ಹಳದಿಪುರ್ ಮ್ಯೂಕರ್ ಮೈಕೋಸಿಸ್ ಅಂದರೆ ಬ್ಲಾ ್ಯಕ್ ಫಂಗಸ್ ಬಗ್ಗೆ ಹೀಗೆ ವಿವರವಾಗಿ ಹೇಳುತ್ತಾರೆ.


ಪ್ರಿಯಾ ಕೆರ್ವಾಶೆ

ಕೊರೋನಾ ಬರದವರಿಗೂ ಈ ಬ್ಲ್ಯಾಕ್ ಫಂಗಸ್ ಬರಬಹುದಾ?

Tap to resize

Latest Videos

undefined

ಬ್ಲ್ಯಾಕ್ ಫಂಗಸ್, ವೈಜ್ಞಾನಿಕ ಭಾಷೆಯಲ್ಲಿ ಹೇಳೋದಾದರೆ ಮ್ಯೂಕರ್ ಮೈಕೋಸಿಸ್ ಇದಕ್ಕೆ ಕಾರಣವಾದ ಮ್ಯೂಕರ್ ಕ್ರಿಮಿ ಇವತ್ತು ಬಂದಿದ್ದಲ್ಲ, ಶತಮಾನಗಳಿಂದ ನಾವು ಉಸಿರಾಡುವ ಗಾಳಿಯಲ್ಲಿದೆ. ಆದರೆ ಇಷ್ಟು ಕಾಲ ಇಲ್ಲದ ಇದರ ಸಮಸ್ಯೆ ಈಗ ಯಾಕೆ ಬಂತು ಅನ್ನೋದಕ್ಕೆ ಒಂದು ಉದಾಹರಣೆ ನೋಡೋಣ. ಒಂದು ಸ್ವಚ್ಛವಾಗಿರುವ ಕೋಣೆ. ಎಲ್ಲೂ ಒಂದು ಇರುವೆಯೂ ಇಲ್ಲ. ತಿನ್ನೋ ಬರ್ಫಿನ ನೆಲದ ಮೇಲೆ ಬಿಸಾಕಿ, ನಾಳೆ ಬೆಳಗ್ಗೆ ಅಲ್ಲಿ ಹೋಗಿ ನೋಡಿ.. ಅಲ್ಲೊಂದು ಆಕರ್ಷಣೆ ಬಂದಾಗ ಇರುವೆ ಬಂತು. ಹಾಗೇ ಇದು.

1990ರಿಂದ ನಾನು ಕಿವಿ, ಮೂಗು, ಗಂಟಲು ತಜ್ಞನಾಗಿ ಕೆಲಸ ಮಾಡ್ತಾ ಇದ್ದೀನಿ. ಅವಾಗಿಂದಲೂ ಮ್ಯೂಕರ್ ಇತ್ತು. ವರ್ಷಕ್ಕೆ ಹೆಚ್ಚೆಂದರೆ ಒಂದು ಅಥವಾ ಎರಡು ಕೇಸ್‌ಗಳು ಬರುತ್ತಿದ್ದವು. ಈ ಮೂವತ್ತು ವರ್ಷಗಳ ಎನ್‌ಎನ್‌ಟಿ ಪ್ರಾಕ್ಟೀಸ್‌ನಲ್ಲಿ ನಾನು 18 ಬ್ಲಾಕ್ ಫಂಗಸ್ ಕೇಸ್ ನೋಡಿರಬಹುದು. ಆದರೆ ಕಳೆದ 27 ದಿನಗಳಲ್ಲಿ ಆ ಸಂಖ್ಯೆಯ ಏಳು ಪಟ್ಟು ಹೆಚ್ಚು ಕೇಸ್‌ಗಳನ್ನು ನೋಡಿದ್ದೀನಿ. ಇಲ್ಲಿ ಇರುವೆಗೆ ಸಕ್ಕರೆ ಯಾವುದು ಅಂದರೆ, ನಿಮ್ಮ ರೋಗ ನಿರೋಧಕ ಶಕ್ತಿ ಕಡಿಮೆಯಾಗೋದು. ಆಗ ಈ ಬ್ಲಾಕ್ ಫಂಗಸ್ ಬರುತ್ತೆ. ಹಿಂದೆಲ್ಲ ಮೈಯಲ್ಲಿ ರಕ್ತದ ಅಂಶ ತೀರಾ ಕಡಿಮೆಯಾದಾಗ, ಅಪೌಷ್ಟಿಕತೆ ಕಾಡಿದಾಗ, ಹಿಮೊಗ್ಲೋಬಿನ್ 4ರವರೆಗೂ ಇಳಿದವರಿಗೆ, ಡಯಾಲಿಸಿಸ್ ಮಾಡಿಸಿಕೊಳ್ತಾ ಇದ್ದವರಿಗೆ, ಕಿಡ್ನಿ ಸಂಬಂಧಿಸಿದ ಕಾಯಿಲೆ ಇದ್ದವರಲ್ಲಿ, ಕ್ಯಾನ್ಸರ್‌ಗೆ ಕೀಮೋ ಥೆರಪಿ, ರೇಡಿಯೇಶನ್ ಥೆರಪಿ ತಗೊಂಡವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಾ ಇತ್ತು.

ಸರ್ಜಿಕಲ್ ಮಾಸ್ಕ್, N -95: ಇವುಗಳಲ್ಲಿ ಯಾವ ಮಾಸ್ಕ್ ಬಳಕೆಗೆ ಉತ್ತಮ 

ಈ ಸಲ ಎರಡನೇ ಅಲೆಯಲ್ಲಿ ಕೋವಿಡ್ ವೈರಾಣು ಪ್ರತೀ ಹತ್ತು ಹತ್ತು ದಿನಗಳಿಗೆ ರೂಪಾಂತರಗೊಳ್ಳುತ್ತಾ ಹೋಯ್ತು. ಈಗ ಪ್ರಚಲಿತದಲ್ಲಿರುವ 8.1 ರೂಪಾಂತರಿ ವೈರಾಣು ಜನರ ಮೂಗಿನ ಪ್ರತಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತಿದೆ. ಮೊದಲು ಬೇರೆ ಕಾಯಿಲೆಯಲ್ಲಿ ಇಡೀ ದೇಹದ ಪ್ರತಿರೋಧ ಶಕ್ತಿ ಕುಸಿಯುತ್ತಿತ್ತು. ಮೂಗು ದೇಹದ ಒಂದು ಅಂಗವಾದ್ದರಿಂದ ಅಲ್ಲೂ ಕಡಿಮೆ ಆಗ್ತಿತ್ತು. ಈಗ ಮೂಗಿಗೇ ಈ ವೈರಾಣುವಿನಿಂದ ಎಫೆಕ್‌ಟ್ ಆಗಿದೆ.

ಮಧುಮೇಹ ಇರುವವರಿಗೆ ಇದು ಹೆಚ್ಚು ಅಪಾಯಕಾರಿಯಾ?

ಹಿಂದೆಲ್ಲ ಬೇರೆ ಕಾಯಿಲೆಗಳಿಗೆ ಟ್ರೀಟ್‌ಮೆಂಟ್ ಕೊಡುತ್ತಿರುವಾಗ ಇನ್ಸುಲಿನ್ ಕೊಟ್ಟ ಕೂಡಲೇ ಮಧುಮೇಹ ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ ಈಗ ಕೋವಿಡ್ ಎರಡನೇ ಸೋಂಕಿಗೆ ಟ್ರೀಟ್‌ಮೆಂಟ್ ಕೊಡುವಾಗ ಇನ್ಸುಲಿನ್ ಕೊಟ್ಟರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತಿಲ್ಲ. ಇಲ್ಲಿಯವರೆಗೆ ಕೋವಿಡ್ ಬಂದವರನ್ನು ಉಳಿಸಿಕೊಳ್ಳಲಿಕ್ಕೆ ನಮ್ಮ ಪೂರ್ಣ ಲಕ್ಷ್ಯ ಹೋಯಿತು. ಈ ಗಂಭೀರತೆಯಲ್ಲಿ ಮಧುಮೇಹದ ಬಗ್ಗೆ ಹೆಚ್ಚಿನ ಗಮನ ಹೋಗಿರಲಿಲ್ಲ. ಇದಕ್ಕೆ ಕೋವಿಡ್ ರೋಗಿಗಳಿಗೆ ನೀಡುತ್ತಿದ್ದ ರೆಮ್‌ಡಿಸಿವಿರ್‌ಅನ್ನು ದೂರುವುದರಲ್ಲಿ ಅರ್ಥವಿಲ್ಲ. ಯಾಕೆಂದರೆ ಕೋವಿಡ್‌ನ ಎರಡನೇ ಅಲೆ ನಮಗೆ ಹೊಸತಾಗಿರುವ ಕಾರಣ ಇದಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ತಪ್ಪು ಅನ್ನೋದಕ್ಕಾಗಲ್ಲ. ಈ ರೂಪಾಂತರಿ ಕೋವಿಡ್ ವೈರಾಣು ಮಧುಮೇಹವನ್ನು ಹೆಚ್ಚು ಮಾಡುತ್ತಾ, ಮೂಗಿನ ಪ್ರತಿರೋಧ ಶಕ್ತಿಯನ್ನು ಕಡಿಮೆ ಮಾಡುತ್ತಿದೆ. ಇದಕ್ಕೆ ಚಿಕಿತ್ಸೆಯನ್ನು ದೂರುವ ಬದಲು ನಮ್ಮ ತಪ್ಪುಗಳ ಬಗ್ಗೆ ಆತ್ಮಾವಲೋಕ ಮಾಡಿಕೊಳ್ಳೋಣ.

1. ಮಧುಮೇಹವನ್ನು ಮೊದಲಿನಿಂದಲೂ ನಾವು ನಿಯಂತ್ರಣದಲ್ಲಿ ಇಟ್ಟುಕೊಂಡಿಲ್ಲ. ವ್ಯಾಯಾಮ ಮಾಡಲ್ಲ. ರುಚಿಗೆ ರುಚಿಯ ಮೋಹಕ್ಕೆ ಬಿದ್ದು ತಿನ್ನೋದು ಜಾಸ್ತಿ ಆಗಿದೆ. ಲಾಕ್‌ಡೌನ್‌ನಲ್ಲಿ ಮನೆಯಲ್ಲೇ ಇರುವ ಕಾರಣ ತಿನ್ನೋದಕ್ಕೆ ಲಿಮಿಟ್ಟೇ ಇಲ್ಲದ ಹಾಗಾಗಿದೆ.

2. ಕೈನೆಟಿಕ್ ಹೋಂಡಾ ಕ್ರೌಡ್‌ಗೆ ಈ ಬಾರಿಯ ಕೊರೋನಾ ಹೆಚ್ಚು ಬಂದಿದೆ. ಈ ಸಮಸ್ಯೆ ತೀರಾ ಶ್ರೀಮಂತರಲ್ಲೂ ಅಷ್ಟಾಗಿ ಇಲ್ಲ. ತೀರಾ ಬಡವರಿಗೆ ಜಾಸ್ತಿ ಕಾಡಿಯೇ ಇಲ್ಲ. ಮಾತೆತ್ತಿದರೆ ಕೊತ್ತಂಬರಿ ಸೊಪ್ಪು ತರೋದಕ್ಕೂ ಕೈನೆಟಿಕ್‌ನಲ್ಲಿ ಓಡಾಡ್ತಾರಲ್ಲ, ಅವರಿಗೆ ಹೆಚ್ಚಾಗಿದೆ.

ಮಧುಮೇಹಿಗಳು ಕೊರೋನಾದಿಂದ ಬಚಾವಾಗೋದು ಹೇಗೆ? 

3. ಈ ಬಾರಿ ಯುವಕರು ಹೆಚ್ಚು ಕೋವಿಡ್‌ಗೆ ಬಲಿಯಾಗ್ತಿದ್ದಾರೆ ಅನ್ನೋ ಮಾತಿದೆ. ಇದಕ್ಕೆ ಕಾರಣ ಅವರ ಜೀವನ ಶೈಲಿ. ಜಂಕ್ ಫುಡ್ ಸೇವನೆ. ಇದರಿಂದ ಸಕ್ಕರೆ ಕಾಯಿಲೆ ಬಂದಿರುತ್ತೆ. ಆದರೆ ಅವರು ಕೋವಿಡ್ ಸ್ಟಿರಾಯ್‌ಡ್ನಿಂದ ಶುಗರ್ ಬಂತು ಅಂತಾರೆ. ಇದಕ್ಕೂ ಮೊದಲು ಟೆಸ್‌ಟ್ ಮಾಡಿಸಿದ್ದೀರಾ ಅಂತ ಕೇಳಿದ್ರೆ ಇಲ್ಲ ಅಂತಾರೆ. ಮತ್ತೆ ನಿಮಗೆ ಹೇಗೆ ಗೊತ್ತಾಯ್ತು ಅಂತ ಕೇಳಿದ್ರೆ ನಮಗೆ ಗೊತ್ತಾಗುತ್ತಲ್ವಾ ಅಂತಾರೆ. ವೈದ್ಯರಾದ ನಮಗೇ ರಕ್ತ ಪರೀಕ್ಷೆ ಮಾಡಿಸದೇ ಸಕ್ಕರೆ ಕಾಯಿಲೆ ಇದೆಯೋ ಇಲ್ವೋ ಅಂತ ಗೊತ್ತಾಗಲ್ಲ, ಇವರಿಗೆ ಹೇಗೆ ಗೊತ್ತಾಗೋದಕ್ಕೆ ಸಾಧ್ಯ. ಪರಿಣಾಮ ಕೋವಿಡ್‌ನಿಂದ ಇಮ್ಯುನಿಟಿ ಕಡಿಮೆಯಾಗಿ ಶುಗರ್ ನಿಯಂತ್ರಣಕ್ಕೆ ಬರದೇ ಬ್ಲಾ ್ಯಕ್ ಫಂಗಸ್ ಕಾಣಿಸಿಕೊಳ್ಳೋದು.

ಈ ವೈಟ್ ಫಂಗಸ್, ಯಲ್ಲೋ ಫಂಗಸ್‌ಗಳೂ ಇಷ್ಟೇ ಅಪಾಯಕಾರಿಗಳಾ?

ವೈಟ್ ಫಂಗಸ್, ಯಲ್ಲೋ ಫಂಗಸ್, ರೆಡ್ ಫಂಗಸ್ ಅನ್ನೋದೆಲ್ಲ ವೈಭವೀಕರಣ. ಸದ್ಯಕ್ಕೆ ಅವುಗಳ ಪ್ರಮಾಣ ತೀರಾ ಕಡಿಮೆ, ನಗಣ್ಯ ಅನ್ನುವಷ್ಟು. ಅವು ಈ ಫಂಗಸ್‌ನಷ್ಟು ಅಪಾಯಕಾರಿಗಳೂ ಅಲ್ಲ. ನಾನಂತೂ ಒಂದು ಕೇಸೂ ನೋಡಿಲ್ಲ. ಹಸುಗೂಸಿನ ಬಾಯಲ್ಲಿ ಮೊಸರಿನ ಥರದ ದ್ರವ ಬರುತ್ತಲ್ಲಾ ಅದನ್ನೇ ವೈಟ್ ಫಂಗಸ್ ಅನ್ನೋದು. ಮುಂದೇನಾದ್ರೂ ಅದು ಜಾಸ್ತಿ ಆದ್ರೆ ಆ ಬಗ್ಗೆ ಮಾತಾಡೋಣ. ಸದ್ಯಕ್ಕೆ ಬೇಡ.

ಆಮ್ಲಜನಕ ಮಟ್ಟ ಹೆಚ್ಚಿಸಲು ಮನೆಯಲ್ಲಿಯೇ ಮಾಡಿ ಈ ಪ್ರಯೋಗ, ಹೇಳಿದ್ದು ಅರೋಗ್ಯ ಸಚಿವಾಲಯ 

ಬ್ಲ್ಯಾಕ್ ಫಂಗಸ್ ಲಕ್ಷಣಗಳೇನು, ಚಿಕಿತ್ಸೆ ಹೇಗಿರುತ್ತೆ?

- ಕೋವಿಡ್‌ನಿಂದ ಗುಣಮುಖರಾಗಿ ಮನೆಗೆ ಬಂದವರಿಗೆ ಮುಖದ ಒಂದು ಬದಿ ಭಯಂಕರ ಅನಿಸುವಷ್ಟು ನೋವು ಶುರುವಾಗುತ್ತೆ. ಅದು ನರಕ್ಕೆ ಸಂಬಂಧಿಸಿದ ನೋವು ಆದ ಕಾರಣ ನಿದ್ದೆ ಬರದಷ್ಟು ತಡೆಯಲಾರದಷ್ಟು ನೋವು.

- ಮರುದಿನ ಕೆಳ ತುಟಿಗಳು ಬೆಂಡ್ ಆಗಿರುತ್ತವೆ. ಆ ಭಾಗದಲ್ಲಿ ಸ್ಪರ್ಶಜ್ಞಾನ ಕಳೆದುಕೊಂಡ ಹಾಗಿರುತ್ತೆ.

- ಮೂರನೇ ದಿನಕ್ಕೆಲ್ಲ ಕಣ್ಣು ಮುಂದೆ ಬರುತ್ತೆ. ಬಾಯಲ್ಲಿ ಮೇಲ್ಭಾಗ ದೊಡ್ಡ ತೂತು ಆಗುತ್ತೆ.

- ಯಾವ ಭಾಗದಲ್ಲಿ ನೋವಿರುತ್ತೋ ಆ ಭಾಗದ ಒಂದು ಕಣ್ಣಿನ ದೃಷ್ಟಿ ಕಡಿಮೆ ಆಗುತ್ತೆ.

ಚಿಕಿತ್ಸೆ

ಇಂಥ ಲಕ್ಷಣ ಕಾಣಿಸಿಕೊಂಡ ತಕ್ಷಣ ಇನ್‌ಎನ್‌ಟಿ ತಜ್ಞರನ್ನು ಭೇಟಿ ಮಾಡಬೇಕು. ಇದಕ್ಕೆ ಆಪರೇಶನ್ ಹಾಗೂ ಔಷಧ ಎರಡನ್ನೂ ನೀಡಲಾಗುತ್ತೆ. ಈಗ ಇಂಜೆಕ್ಷನ್‌ಗಳು ಲಭ್ಯವಿಲ್ಲದ ಕಾರಣ ಮಾತ್ರೆ ನೀಡುತ್ತೀವಿ. ಇವೂ ಶೇ.70 ರಷ್ಟು ಪರಿಣಾಮಕಾರಿ. ಆದರೆ ಕೆಲವರು ಆಪರೇಶನ್‌ಗೆ ಹೆದರಿ ಮಾತ್ರ ಮಾತ್ರ ತಗೊಳ್ತೀವಿ ಅಂತಾರೆ. ಆದರೆ ಇದು ಗ್ಯಾಂಗ್ರಿನ್ ಥರ. ಆಪರೇಶನ್ ಮಾಡಿ ಔಷಧಿ ಕೊಟ್ಟರೇ ಉಪಯೋಗ. ಹಾಗೇ ಔಷಧ ಕೊಟ್ಟರೆ ಉಪಯೋಗಕ್ಕೆ ಬರಲ್ಲ. ತುಂಬ ವಯಸ್ಸಾದವರಿಗೆ, ಬಹಳ ಕೃಶಕಾಯ ಹೊಂದಿರುವವರಿಗೆ ಮಾತ್ರ ಔಷಧವಷ್ಟೇ ಕೊಡುತ್ತೇವೆ. ವೆಂಟಿಲೇಟರ್ ಇರುವ ಸುಸಜ್ಜಿತ ಆಸ್ಪತ್ರೆಯಲ್ಲೇ ಆಪರೇಶನ್ ಮಾಡಿಸಿಕೊಳ್ಳಬೇಕು. ಏಕೆಂದರೆ ಕೋವಿಡ್ ಬಂದವರ ಶ್ವಾಸಕೋಶದಲ್ಲಿ ಕೋವಿಡ್ ನ್ಯೂಮೋನಿಯಾ ಅಂಶ ಇರುತ್ತೆ. ಇದಕ್ಕೆ ಅರಿವಳಿಕೆ ನೀಡುವಾಗ ಬಹಳ ಎಚ್ಚರ ಅಗತ್ಯ. ಈ ಚಿಕಿತ್ಸೆಯೂ ಬಹಳ ಸೂಕ್ಷ್ಮದ್ದು.

ಕೋವಿಡ್, ಬ್ಲ್ಯಾಕ್ ಫಂಗಸ್, ಲಸಿಕೆ ಇವುಗಳ ಬಗೆಗಿನ ಮಿಥ್‌ಗಳೇನು?

1. ಲಸಿಕೆ ತಗೊಂಡ್ರೆ ಪುರುಷತ್ವ ಹೋಗುತ್ತೆ ಎಂಬ ಮೂಢನಂಬಿಕೆ

ಲಸಿಕೆ ಹಾಕಿಸ್ಕೊಳ್ಳಿ ಅಂತ ಹಿಂದೆ ಸರ್ಕಾರ ಹೇಳಿದಾಗ ಕೆಲವೊಂದು ಸಮುದಾಯದವರು ಅದನ್ನು ಹಾಕಿಸಿಕೊಳ್ಳಲು ಒಪ್ಪಲಿಲ್ಲ. ಅದು ನಮ್ಮ ದೇವರ ಆಜ್ಞೆಗೆ ವಿರುದ್ಧ, ಲಸಿಕೆಯಿಂದ ನಮ್ಮ ಪುರುಷತ್ವ ಹೋಗುತ್ತೆ ಅಂತೆಲ್ಲ ಮೂಢನಂಬಿಕೆಗಳ ಹಿಂದೆ ಬಿದ್ದರು. ಇದು ಅರ್ಥವಿಲ್ಲದ್ದು.

2. ಸ್ಟೀಮ್ ತಗೊಂಡ್ರೆ ಕೊರೋನಾ ಬರಲ್ಲ ಅನ್ನೋದು ಸುಳ್ಳು

ದಿನಕ್ಕೆ ನಾಲ್ಕು ಸಲ, ಹತ್ತು ಸಲ ಸ್ಟೀಮ್ ತಗೊಳ್ಳೋರೂ ಇರ್ತಾರೆ. ಅದು ಬಿಸಿ ಹೆಚ್ಚಾದಷ್ಟೂ ವೈರಸ್ ಸಾಯುತ್ತೆ ಅನ್ನೋ ನಂಬಿಕೆ. ಇದು ದೊಡ್ಡ ಮೂರ್ಖತನ. ಜೊತೆಗೆ ಅಪಾಯಕಾರಿಯೂ. ಹೀಗೆ ಸ್ಟೀಮ್ ತಗೊಳ್ಳೋದರಿಂದ ಮೂಗಿನ ಪ್ರತಿರೋಧ ಶಕ್ತಿ ಕುಗ್ಗುತ್ತದೆ.

3. ಬಳಸಿದ ಮಾಸ್‌ಕ್ಅನ್ನೇ ಬಳಸುತ್ತಿದ್ದರೆ ಬ್ಲಾ ್ಯಕ್ ಫಂಗಸ್ ಬರತ್ತೆ ಅನ್ನೋದು ನಿರಾಧಾರ.

ಬಳಸಿದ ಮಾಸ್‌ಕ್ಅನ್ನೇ ಮತ್ತೆ ಮತ್ತೆ ಬಳಸೋದ್ರಿಂದ ಬ್ಲಾ ್ಯಕ್ ಫಂಗಸ್ ಬಂದಿರುವ ಒಂದು ಪ್ರಕರಣವೂ ದಾಖಲಾಗಿಲ್ಲ. ಇದು ಗುಮಾನಿ ಅಷ್ಟೇ. ಭಾರತದಲ್ಲಿ ಕೊರೋನಾ ಹೆಚ್ಚಾಗೋದಕ್ಕೆ ಇದು ಕಾರಣ ಇರಬಹುದಾ ಅನ್ನೋ ಅನುಮಾನ. ಆದ್ರೆ ನಿಜ ಆಗಿಲ್ಲ.

4. ಸ್ವಯಂ ವೈದ್ಯ

ಮನೆಯಲ್ಲಿ ಯಾರಿಗೂ ಕೋವಿಡ್ ಬಂದಿರುತ್ತೆ. ಇವರಿಗೂ ಲಕ್ಷಣ ಕಾಣಿಸಿಕೊಂಡು ಟೆಸ್‌ಟ್ ಮಾಡಿಸಿದಾಗ ಪಾಸಿಟಿವ್ ಬಂತು ಅಂತಿಟ್ಕೊಳ್ಳಿ. ಇವರು ಡಾಕ್ಟರ್ ಹತ್ರ ಹೋಗಲ್ಲ. ಸೇಮ್ ಮೆಡಿಸಿನ್ ಇರುತ್ತೆ ಬಿಡು ಅಂತ ಮೊದಲಿನವರಿಗೆ ಕೊಟ್ಟ ಮೆಡಿಸಿನ್ ತಗೊಳ್ತಾರೆ. ಇದು ಅಪಾಯಕಾರಿ.

5. ನಮಗೆ ಹರ್ಡ್ ಇಮ್ಯೂನಿಟಿ ಇದೆ ಎಂಬ ಭ್ರಮೆ.

ಈ ಕಾರಣಕ್ಕೇ ಮಾಸ್‌ಕ್ ಹಾಕ್ಕೊಳದೇ ಓಡಾಡಿದೆವು. ನಿಯಮಕ್ಕೆ ವಿರುದ್ಧ ಹೋದದ್ದಕ್ಕೆ ಈಗ ಪರಿಣಾಮ ಎದುರಿಸುತ್ತಾ ಇದ್ದೀವಿ.

ಪ್ರತಿರೋಧ ಶಕ್ತಿ ಹೆಚ್ಚಿಸಿಕೊಳ್ಳೋದು ಹೇಗೆ?

- ಹೆಚ್ಚಿನವರಿಗೆ ಗೊತ್ತಿಲ್ಲ, ಆದರೆ ನಮಗೆ ಡಾಕ್ಟರ್ಸ್‌ಗೆ ಗೊತ್ತಿದೆ, ಇಮ್ಯುನಿಟಿ ಅನ್ನೋದು ಶೇ.70ರಷ್ಟು ನಮ್ಮ ಧೈರ್ಯ ಮತ್ತು ವಿಲ್ ಪವರ್‌ನಿಂದ

ಬರುತ್ತೆ. ಶೇ.30 ರಷ್ಟು ಮಾತ್ರ ಮೆಡಿಕಲ್ ಹಾಗೂ ದೈಹಿಕವಾಗಿ ಬರುತ್ತೆ. ದೈಹಿಕ ಶ್ರಮ ಹೆಚ್ಚಿದ್ದು, ಮಾನಸಿಕ ಒತ್ತಡ ಕಡಿಮೆ ಇರುವವರಲ್ಲಿ ಇದರ ಗಂಭೀರತೆ ಕಡಿಮೆ.

- ಈ ಕೊರೋನಾ ಒಂಥರಾ ಬೀದಿಲಿ ಹೋಗೋ ನಾಯಿ ಥರ. ನೀವು ಹೆದರಿಕೊಂಡರೆ ಅಟ್ಟಿಸಿಕೊಂಡು ಬರುತ್ತೆ. ಧೈರ್ಯದಲ್ಲಿ ನಿಂತರೆ ಬಾಲ ಮಡಿಸಿಕೊಂಡು ಹೋಗುತ್ತೆ. ಕಳೆದ ವರ್ಷದ ಮಾರ್ಚ್‌ನಿಂದ ಲಾಕ್‌ಡೌನ್‌ನಿಂದ ಇಂದಿನವರೆಗೆ ಭಾನುವಾರ ಹೊರತುಪಡಿಸಿ ಬೇರೆ ಎಲ್ಲ ದಿನಗಳಲ್ಲೂ ರೋಗಿಗಳನ್ನು ನೋಡುತ್ತಿದ್ದೇನೆ. ಈ ರೋಗ ಮೂಗಿಂದ ಬರುವ ಗಾಳಿ, ಬಾಯಿಯಿಂದ ಹಾಗೂ ಕೆಮ್ಮಿನಿಂದ ಹರಡುತ್ತೆ. ನಾನು ಎಲ್ಲ ರೋಗಿಗಳ ಮೂಗು, ಗಂಟಲು ನೋಡಲೇಬೇಕು. ಅದೃಷ್ಟವಶಾತ್ ನನಗೆ ಇಲ್ಲಿವರೆಗೆ ಪಾಸಿಟಿವ್ ಆಗಿಲ್ಲ.

- ಈಗ ಲಾಕ್‌ಡೌನ್ ಇದ್ದರೂ ಯಾರಿಲ್ಲದ ಹೊತ್ತಲ್ಲಿ ಬೆಳಗ್ಗೆ ನಾಲ್ಕರಿಂದ ಆರರವರೆಗೆ ವಾಕಿಂಗ್ ಮಾಡಿ. ವ್ಯಾಯಾಮ ಮಾಡಿ.

- ನೆಗೆಟಿವ್ ಯೋಚನೆಗಳು, ಕೋವಿಡ್ ಬಗ್ಗೆ ಭಯ ಹುಟ್ಟಿಸುವ ವಿಚಾರಗಳನ್ನು ಹತ್ತಿರಕ್ಕೂ ಸೇರಿಸಬೇಡಿ.

- ನಿಮ್ಮ ಶುಗರ್ ಲೆವೆಲ್ ಟೆಸ್‌ಟ್ ಮಾಡಿಸಿ. ಮಧುಮೇಹ ಇದ್ದರೆ ನಿಯಂತ್ರಣದಲ್ಲಿರುವ ಹಾಗೆ ನೋಡಿಕೊಳ್ಳಿ.

ಮುಂದಿನ ಅಲೆ ಮಕ್ಕಳಿಗೆ ಅಪಾಯಕಾರಿ ಅಂತಾರಲ್ಲಾ?

ತಜ್ಞರು ಹಾಗಂತಾರೆ. ಆದರೆ ಮಕ್ಕಳ ಮನಸ್ಸು ನಿಷ್ಕಲ್ಮಶ, ಪೂರ್ವಾಗ್ರಹ, ಒತ್ತಡ ಇರಲ್ಲ. ಓಡಾಡುತ್ತಾ ಇರುವ ಕಾರಣ ಬೊಜ್ಜೂ ಹೆಚ್ಚಿರಲ್ಲ. ಹಾಗಾಗಿ ಮಕ್ಕಳಿಗೆ ಬಂದರೂ ಅಷ್ಟಾಗಿ ಎಫೆಕ್‌ಟ್ ಆಗಲ್ಲ. ಅಲ್ಲೊಂದು ಇಲ್ಲೊಂದು ಸಿವಿಯರ್ ಕೇಸ್‌ಗಳು ಕಾಣಬಹುದೇನೋ. ಹೆಚ್ಚು ಅಪಾಯಕಾರಿ ಆಗಲ್ಲ ಅಂತ ನನ್ನ ಅನಿಸಿಕೆ.
 

click me!