ಅಧಿಕ ರಕ್ತದೊತ್ತಡದ ಸಮಸ್ಯೆ ಉಂಟಾಗಬಾರದು ಎಂದಾದರೆ ಆಹಾರದಲ್ಲಿ ಕೆಲವು ಪದಾರ್ಥಗಳನ್ನು ಸೇರಿಸಿಕೊಳ್ಳಬಾರದು. ಉಪ್ಪು, ಸಕ್ಕರೆ ಅಂಶ ಹೆಚ್ಚಾಗಿರುವ ಆಹಾರಗಳು ನೀವು ಅಂದುಕೊಂಡಿರುವುದಕ್ಕಿಂತ ಹೆಚ್ಚು ಅಪಾಯ ಉಂಟುಮಾಡಬಲ್ಲವು. ಹೀಗಾಗಿ, ಆರಂಭಿಕ ಹಂತದಲ್ಲಿದ್ದರೆ ಆಹಾರದಿಂದ ಈ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯ.
ಅಧಿಕ ರಕ್ತದೊತ್ತಡದ ಸಮಸ್ಯೆ ಇಂದು ಸರ್ವೇ ಸಾಮಾನ್ಯ ಎನಿಸಿದೆ. ಇದನ್ನೇ ಹೈಪರ್ ಟೆನ್ಷನ್ ಎಂದೂ ಹೇಳಲಾಗುತ್ತದೆ. ದೇಹದ ರಕ್ತನಾಳಗಳ ಮೇಲೆ ಗಂಭೀರವಾಗಿ ಪರಿಣಾಮ ಉಂಟುಮಾಡುವ ಸ್ಥಿತಿ ಇದು. ಒಂದೊಮ್ಮೆ ನಿಮಗೆ ಅಧಿಕ ರಕ್ತದೊತ್ತಡ ಇದ್ದರೆ ರಕ್ತದ ಹರಿವೂ ಒತ್ತಡದಿಂದ ಕೂಡಿರುತ್ತದೆ. ರಕ್ತದ ಹರಿವಿಗೆ ಹೃದಯ ಹೆಚ್ಚುವರಿ ಶ್ರಮ ಪಡಬೇಕಾಗುತ್ತದೆ. ಅಧಿಕ ರಕ್ತದೊತ್ತಡಕ್ಕೆ ನಾವು ಸೇವಿಸುವ ಆಹಾರವೂ ಕಾರಣವಾಗುತ್ತದೆ. ನೀವು ಕೇಳಿರಬಹುದು, ರಕ್ತದೊತ್ತಡದ ರೀಡಿಂಗ್ 120/80 ಇದ್ದರೆ ಅದು ಆರೋಗ್ಯಪೂರ್ಣ. ಒಂದೊಮ್ಮೆ ರಕ್ತದೊತ್ತಡದ ಸಿಸ್ಟೊಲಿಕ್ ರೀಡಿಂಗ್ 120-129ರವರೆಗಿದ್ದು, ಡಯಾಸ್ಟೊಲಿಕ್ ರೀಡಿಂಗ್ 80 ಅಥವಾ ಅದಕ್ಕಿಂತ ಕಡಿಮೆ ಇದ್ದರೂ ಅದನ್ನು ಸ್ವಲ್ಪ ಏರುಒತ್ತಡವೆಂದು ಪರಿಗಣಿಸಲಾಗುತ್ತದೆ. ಈ ಸ್ಥಿತಿಗೆ ಔಷಧದ ಅಗತ್ಯವಿರುವುದಿಲ್ಲ. ಜೀವನಶೈಲಿ ಹಾಗೂ ಆಹಾರದಲ್ಲಿ ಬದಲಾವಣೆ ತಂದುಕೊಂಡರೆ ಸಾಕಾಗುತ್ತದೆ. ಆದರೆ, ಸಿಸ್ಟೊಲಿಕ್ ರೀಡಿಂಗ್ 130ರಿಂದ 139 ಹಾಗೂ ಡಯಾಸ್ಟೊಲಿಕ್ ರೀಡಿಂಗ್ 80-89 ಇದ್ದರೆ ಅದನ್ನು ಸ್ಟೇಜ್ 1 ರಕ್ತದೊತ್ತಡವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ 140/90 ಇದ್ದಾಗ ಸ್ಟೇಜ್ 2 ರಕ್ತದೊತ್ತಡ, 180-120 ಇದ್ದಾಗ ಹೈಪರ್ ಟೆನ್ಸಿವ್ ಕ್ರೈಸಿಸ್ ಎಂಬುದಾಗಿ ಪರಿಗಣಿಸಲಾಗುತ್ತದೆ. ಇದಕ್ಕೆ ತಕ್ಷಣ ಔಷಧದ ಅಗತ್ಯ ಇರುತ್ತದೆ.
ರಕ್ತದೊತ್ತಡದ (High Blood Pressure) ಸಮಸ್ಯೆ ಇರುವವರು ಕೆಲವು ರೀತಿಯ ಆಹಾರವನ್ನು (Food) ತ್ಯಜಿಸಲೇಬೇಕಾಗುತ್ತದೆ. ಏಕೆಂದರೆ, ಅವುಗಳಲ್ಲಿರುವ ಅಂಶಗಳು ರಕ್ತದೊತ್ತಡ ಹೆಚ್ಚಿಸಲು ಕಾರಣವಾಗುತ್ತವೆ. ಇದರಿಂದ ಹೃದಯಾಘಾತ (Heart Attack), ರಕ್ತನಾಳಗಳು (Blood Vessel) ಸಂಕುಚಿತಗೊಳ್ಳುವ ಅಪಾಯ ಹೆಚ್ಚುತ್ತದೆ.
ತೂಕ, ಪ್ರೆಶರ್, ಶುಗರ್, ಕೊಲೆಸ್ಟ್ರಾಲ್ ಎಲ್ಲವನ್ನೂ ಕಂಟ್ರೋಲಿನಲ್ಲಿಡುತ್ತೆ ರವೆ
• ಉಪ್ಪು (Salt)
ಸೋಡಿಯಂ ಅಥವಾ ಅಧಿಕ ಉಪ್ಪುಭರಿತ ಆಹಾರ ಸೇವನೆ ಮಾಡುವುದರಿಂದ ರಕ್ತದ ಒತ್ತಡ ಹೆಚ್ಚುತ್ತದೆ. ದಿನಕ್ಕೆ 2300 ಮಿಲಿಗ್ರಾಮ್ ನಷ್ಟು ಸೋಡಿಯಂ (Sodium) ನಮ್ಮ ದೇಹಕ್ಕೆ ಸಾಕು. ಮನೆಯ ಆಹಾರದಲ್ಲೇ ಇದಕ್ಕಿಂತ ಹೆಚ್ಚಿನ ಅಂಶ ಸೇವಿಸುತ್ತೇವೆ. ಜತೆಗೆ, ಬಾಹ್ಯ ಚಿಪ್ಸ್ (Chips), ಸಂಸ್ಕರಿತ ಆಹಾರ (Processed Food) ಸೇವಿಸಿದರೆ ಅಧಿಕ ಪ್ರಮಾಣದ ಸೋಡಿಯಂ ದೇಹ ಸೇರುತ್ತದೆ. ಬ್ರೆಡ್ (Bread), ಪಿಜ್ಜಾ (Pizza), ಸ್ಯಾಂಡ್ ವಿಚ್, ಸಂಸ್ಕರಿತ ಮಾಂಸ, ಸೂಪ್, ಟ್ಯಾಕೋಸ್ ಮತ್ತು ಬರಿಟೊಸ್ ಗಳಲ್ಲಿ ಸೋಡಿಯಂ ಹೆಚ್ಚಿರುತ್ತದೆ.
• ಅಧಿಕ ಸಕ್ಕರೆ ಭರಿತ (High Sugary) ಆಹಾರ
ಸಕ್ಕರೆಯುಕ್ತ ಆಹಾರದಿಂದ ತೂಕ ಹೆಚ್ಚಾಗಿ, ರಕ್ತದೊತ್ತಡದ ಸಮಸ್ಯೆ ಉಂಟಾಗುತ್ತದೆ. 2014ರಲ್ಲಿ ನಡೆದ ಅಧ್ಯಯನದ ಪ್ರಕಾರ, ಉಪ್ಪು ಸೇವನೆಗಿಂತ ಸಕ್ಕರೆ ಸೇವನೆ ಹಾನಿಕರ. ಅಧಿಕ ಫ್ರಕ್ಟೋಸ್ ಕಾರ್ನ್ ಸಿರಪ್ (Fructose Corn Syrup) ಹೊಂದಿರುವ ಆಹಾರದಿಂದ ರಕ್ತದೊತ್ತಡ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಸಂಸ್ಕರಿತ ಆಹಾರ, ಪ್ರಿ ಪ್ಯಾಕೇಜಡ್ ಮೀಲ್, ಸ್ವೀಟ್ ಚಾಕೋಲೇಟ್, ನ್ಯೂಟ್ರಿಷನ್ ಬಾರ್, ಪೀನಟ್ ಬಟರ್ ಗಳಲ್ಲಿ ಈ ಅಂಶ ಅಧಿಕವಾಗಿರುತ್ತದೆ.
• ರೆಡ್ ಮೀಟ್ (Red Meat)
ಇದರಿಂದ ರಕ್ತದೊತ್ತಡ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಾಗುತ್ತದೆ. ಬೀಫ್ (Beef), ಲಾಂಬ್ (Lamb), ಪೋರ್ಕ್, ವೀಲ್, ವೆನ್ಸನ್, ಮೇಕೆ ಮಾಂಸದಿಂದ ತಕ್ಷಣ ರಕ್ತದ ಒತ್ತಡ ಹೆಚ್ಚುವುದು ಸಾಬೀತಾಗಿದೆ.
• ಸ್ಯಾಚುರೇಟೆಡ್ ಫ್ಯಾಟ್ (Saturated Fat)
ಚಾಕೋಲೇಟ್, ಕ್ಯಾಂಡಿ (Candy), ಕೇಕ್ (Cakes), ಕುಕ್ಕೀಸ್, ಸಾಸ್, ಅಡುಗೆ ಎಣ್ಣೆ, ಕ್ರೀಮ್, ಮೊಸರು, ಬೆಣ್ಣೆಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಾಗಿರುತ್ತದೆ. ಅನ್ ಸ್ಯಾಚುರೇಟೆಡ್ ಕೊಬ್ಬು ಇನ್ನಷ್ಟು ಹಾನಿಕರವಾಗಿದ್ದು, ಸಂಸ್ಕರಿತ ಆಹಾರದಲ್ಲಿ ಹೆಚ್ಚಿರುತ್ತದೆ. ಇವುಗಳನ್ನು ಸೇವಿಸಲೇಬಾರದು.
Child Health: ಚಿಕ್ಕ ಮಕ್ಕಳಲ್ಲಿ ಕಾಡುವ ಬಿಪಿಗೆ ಕಾರಣವೇನು ಗೊತ್ತಾ?
• ಕಾಂಡಿಮೆಂಟ್ಸ್ (Condiments) ಹೋಗುವುದನ್ನು ನಿಲ್ಲಿಸಿ
ಕಾಂಡಿಮೆಂಟ್ ಗಳಲ್ಲಿ ಸೇವಿಸುವ ಕೆಚಪ್, ಚಿಲ್ಲಿ ಸಾಸ್, ಸೋಯಾ ಸಾಸ್, ಸಲಾಡ್ ಡ್ರೆಸ್ಸಿಂಗ್ ಗಳಲ್ಲಿ ಸೋಡಿಯಂ, ಸಕ್ಕರೆ ಅಂಶ ಹೆಚ್ಚಿರುತ್ತದೆ.
• ಪಾನೀಯ ದೂರವಿಡಿ
ಸಕ್ಕರೆಭರಿತ ಸಂಸ್ಕರಿತ ಪಾನೀಯ, ಆಲ್ಕೋಹಾಲ್ ಭರಿತ ಪಾನೀಯ, ಅಧಿಕ ಕೆಫೀನ್ ದೂರವಿಡಿ. ಬದಲಿಗೆ, ಧಾನ್ಯಗಳು (Grains), ಹಣ್ಣು, ತರಕಾರಿ, ಹಸಿರು ಸೊಪ್ಪು (Leaf), ಬೆಣ್ಣೆಹಣ್ಣು, ಬೆರ್ರಿ, ಸಿಟ್ರಸ್ ಜಾತಿಯ ಹಣ್ಣುಗಳನ್ನು ಸೇವಿಸಬೇಕು. ಪ್ರೊಟೀನ್ ಭರಿತ ಆಹಾರ, ನಟ್ಸ್ (Nuts), ಕಿರುಧಾನ್ಯ ಮುಂತಾದವುಗಳನ್ನು ಸೇವಿಸಬೇಕು.