ದಿನವಿಡೀ ಕಂಪ್ಯೂಟರ್ ನೋಡ್ತೀರಾ? ಈ ಸಿಂಡ್ರೋಮ್ ಇರ್ಬೋದು ಜೋಕೆ..!

By Suvarna News  |  First Published Feb 24, 2020, 9:49 AM IST

ನೀವು ನಿರಂತರವಾಗಿ ಒಂದು ಗಂಟೆ ಕಾಲ ಕಂಪ್ಯೂಟರ್‌ ಸ್ಕ್ರೀನ್‌ ನೋಡುತ್ತೀರಾ? ತಲೆನೋವು, ಬ್ಲರ್‌ ಆಗಿ ಕಾಣೋದು, ಕಣ್ಣುಗಳು ಒಣ ಒಣ ಅನಿಸೋದು ಇತ್ಯಾದಿ ಪ್ರಾಬ್ಲೆಂ ಗಳಾಗುತ್ತಿವೆಯಾ, ಹಾಗಿದ್ರೆ ನಿಮಗೆ ಕಂಪ್ಯೂಟರ್‌ ವಿಜನ್‌ ಸಿಂಡ್ರೋಮ್‌ ಇರಬಹುದು!


ಡಾ.ಸಂಜನಾ ವತ್ಸ| ಡಾ.ಅಗರ್‌ವಾಲ್ಸ್‌

ಕಂಪ್ಯೂಟರ್‌ ಅನ್ನೋದು ನಮ್ಮ ಲೈಫ್‌ನ ಭಾಗವೇ ಆಗಿದೆ. ಅದಿಲ್ಲದೇ ನಮ್ಮ ದಿನ ನಡೆಯೋದಿಲ್ಲ. ಆದರೆ ನಮ್ಮೆಲ್ಲರ ಹೊಟ್ಟೆಹೊರೆಯುವ ಕಂಪ್ಯೂಟರ್‌ ಸ್ಕ್ರೀನ್‌ ಇಂಡೈರೆಕ್ಟ್ ಆಗಿ ಒಂದಿಷ್ಟುಹಾನಿಯನ್ನೂ ಮಾಡುತ್ತದೆ. ಅದರಲ್ಲಿ ಬಹಳ ಮುಖ್ಯವಾದದ್ದು ಕಂಪ್ಯೂಟರ್‌ ವಿಜನ್‌ ಸಿಂಡ್ರೋಮ್‌.

Tap to resize

Latest Videos

ತಲೆನೋವು, ಕಣ್ಣಿನ ಒತ್ತಡ, ಮಸುಕಾಗಿ ಕಾಣಿಸುವುದು, ಕಣ್ಣು ಕೆಂಪಾಗುವುದು, ಒಣ ಕಣ್ಣುಗಳು, ಕುತ್ತಿಗೆ ಮತ್ತು ಭುಜ ನೋವು ಕಾಣಿಸಿಕೊಳ್ಳುವುದು ಇತ್ಯಾದಿ ಈ ಸಿಂಡ್ರೋಮ್‌ನ ಲಕ್ಷಣ.

ಸ್ಕ್ರೀನ್ ನೋಡಿ ನೋಡಿ ಕಣ್ಣಿಗೆ ಆಯಾಸ? ನಿಮ್ಮ ಮೊಬೈಲ್‌ನಲ್ಲೇ ಇದೆ ಪರಿಹಾರ!

ಈ ಡಿಜಿಟಲ್‌ ಐ ಸ್ಪ್ರೇನ್‌ ತಪ್ಪಿಸಲು ಕೆಲವು ಟಿಫ್ಸ್‌ಗಳಿವೆ.

- ಒಮ್ಮೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ. ದೋಷಗಳನ್ನು ಸರಿಪಡಿಸಿಕೊಳ್ಳಿ. ಇಲ್ಲದಿದ್ದರೆ ಕಣ್ಣಿನ ಒತ್ತಡ ಅಧಿಕವಾಗುತ್ತದೆ. ತೀಕ್ಷ$್ಣ ದೃಷ್ಟಿಮತ್ತು ಆಕ್ಯುಲರ್‌ ಆರಾಮದಾಯಕತೆಗೆ ವೈದ್ಯರ ಸಲಹೆ ಮೇರೆಗೆ ಗ್ಲಾಸ್‌ ಬಳಸುವುದು ಬಹುಮುಖ್ಯ.

- ಪ್ರತಿಫಲನ ನಿರೋಧಕ ಕೋಟಿಂಗ್‌ (ಎಆರ್‌ಸಿ) ಇರುವ ಗ್ಲಾಸ್‌ ಅನ್ನು ಧರಿಸಿ. ಇದರಿಂದ ಗ್ಲಾಸ್‌ನ ಮುಂಭಾಗ ಮತ್ತು ಹಿಂಭಾಗದ ಮೇಲೈನಿಂದ ಬೆಳಕಿನ ಪ್ರತಿಫಲನದ ಪ್ರಮಾಣ ಕಡಿಮೆಯಾಗುವ ಮೂಲಕ ಪ್ರಜ್ವಲತೆಯ ಪ್ರಮಾಣವು ಇಳಿಮುಖವಾಗುತ್ತದೆ. ನೀಲಿ ಬೆಳಕನ್ನು ಕಡಿಮೆ ಮಾಡಲು ಇದು ನೆರವಾಗುತ್ತದೆ. ಈ ನೀಲಿ ಬಣ್ಣದ ಬೆಳಕು ಕಣ್ಣಿಗೆ ಹೆಚ್ಚು ಒತ್ತಡವನ್ನು ತರುತ್ತದೆ. ಇದೇ ವೇಳೆ ಕಂಪ್ಯೂಟರ್‌ ಡಿಸ್‌ಪ್ಲೇಗೆ ಆ್ಯಂಟಿ ಗ್ಲೇರ್‌ ಸ್ಕ್ರೀನ್‌ ಅಳವಡಿಸಬಹುದು.

- ಒಳಾಂಗಣದಲ್ಲಿ ಕಣ್ಣು ಕೋರೈಸುವ ಬೆಳಕು ಇದ್ದಾಗ ಕಣ್ಣಿಗೆ ಹೆಚ್ಚು ಒತ್ತಡ ಬೀಳುತ್ತದೆ. ಕಡಿಮೆ ಪ್ರಖರತೆಯನ್ನು ನೀಡುವ ಬಲ್‌್ಬಗಳನ್ನು ಒಳಾಂಗಣಕ್ಕೆ ಬಳಸಿ.

- ಕಂಪ್ಯೂಟರ್‌ ಸ್ಕ್ರೀನ್‌ ಕಣ್ಣುಗಳಿಂದ 20-24 ಇಂಚುಗಳ ದೂರದಲ್ಲಿರಲಿ. ಸ್ಕ್ರೀನ್‌ನ ಕೇಂದ್ರ ಭಾಗ ನಿಮ್ಮ ಕಣ್ಣಿನ ಮಟ್ಟಕ್ಕಿಂತ 10 ರಿಂದ 15 ಡಿಗ್ರಿಯಷ್ಟುಕೆಳಗಿರಲಿ. ಇದರಿಂದ ನಿಮ್ಮ ತಲೆ ಮತ್ತು ಕುತ್ತಿಗೆ ಆರಾಮ ಸ್ಥಿತಿಯಲ್ಲಿ ಕಂಪ್ಯೂಟರ್‌ ಅನ್ನು ಬಳಸಲು ನೆರವಾಗುತ್ತದೆ.

- ಸ್ಕ್ರೀನ್‌ನ ಡಿಸ್‌ಪ್ಲೇಯ ಪ್ರಖರತೆ ನೀವಿರುವ ಜಾಗದ ಬೆಳಕಿಗೆ ಪ್ರಖರತೆ ಒಂದೇ ರೀತಿ ಇರಬೇಕು.

ಕಾಂಟ್ಯಾಕ್ಟ್ ಲೆನ್ಸ್ ಹಾಕಿದ್ರೆ ನೋಡಕೇನೋ ಚೆಂದ; ಕಣ್ಣಿನ ಆರೋಗ್ಯಕ್ಕೆ ಒಳ್ಳೆದಲ್ಲ!

- ಬಿಳಿ ಹಿನ್ನೆಲೆಯಲ್ಲಿ ಕಪ್ಪು ಪ್ರಿಂಟ್‌ ಇದ್ದರೆ ಆರಾಮದಾಯಕವಾಗಿರುತ್ತದೆ.

ಬ್ಲಿಂಕ್‌, ಬ್ಲಿಂಕ್‌ ಮತ್ತು ಬ್ಲಿಂಕ್‌!

ನಾವು ಕಂಪ್ಯೂಟರ್‌ನಲ್ಲಿ ಕೆಲಸದಲ್ಲಿ ತಲ್ಲೀನರಾಗಿರುವಾಗ ಕಣ್ಣನ್ನು ಮಿಟುಕಿಸುವುದನ್ನು ಮರೆತೇ ಬಿಟ್ಟಿರುತ್ತೇವೆ. ಮತ್ತು ಹಲವು ಬಾರಿ ಕಣ್ಣು ಮಿಟುಕಿಸಿದರೂ ಅರೆ ಬರೆಯಾಗಿ ರೆಪ್ಪೆಗಳನ್ನು ಬಡಿಯುತ್ತೇವೆ. ಇದರಿಂದ ಕಣ್ಣುಗಳಲ್ಲಿ ತೇವಾಂಶದ ಕೊರತೆ ಉಂಟಾಗುತ್ತದೆ. ಪರಿಣಾಮ ಗಂಭೀರ ಸ್ವರೂಪದಲ್ಲಿ ಒಣಗಣ್ಣಿನ ಸಮಸ್ಯೆ ಬರಬಹುದು. ಹಾಗಾಗಿ ಎಷ್ಟುಸಾಧ್ಯವೋ ಅಷ್ಟುಕಣ್ಣನ್ನು ಮುಚ್ಚಿ ತೆರೆಯಬೇಕು. ಜೊತೆಗೆ ಆಗಾಗ ನಡೆದಾಡಿ, ಸಣ್ಣಪುಟ್ಟವ್ಯಾಯಾಮ ಮಾಡಿ, ಕಣ್ಣಿಗೆ ವಿಶ್ರಾಂತಿ ಕೊಡಿ.

ಆರೋಗ್ಯಕಾರಿ ಆಹಾರ ಸೇವನೆಯೂ ಮುಖ್ಯ

ಒಮೆಗಾ -3 ಕೊಬ್ಬಿನಂಶದ ಆ್ಯಸಿಡ್‌ಗಳು ಟಿಯರ್‌ ಫಿಲ್ಮ್‌ನ ಪ್ರಮಾಣವನ್ನು ಹೆಚ್ಚು ಮಾಡುತ್ತವೆ ಮತ್ತು ಗುಣಮಟ್ಟವನ್ನು ಸುಧಾರಣೆ ಮಾಡುತ್ತವೆ. ಫ್ಲಾಕ್ಸ್‌ಸೀಡ್ಸ್‌, ಚಿಯಾ ಸೀಡ್ಸ್‌, ಪಂಪ್‌ಕಿನ್‌ ಸೀಡ್ಸ್‌, ಪಾಮ್‌ ಆಯಿಲ್‌, ಸೋಯಾಬೀನ್‌ ಆಯಿಲ್‌, ಫ್ಯಾಟಿ ಫಿಶ್‌ ಮತ್ತು ವಾಲ್‌ನಟ್‌ಗಳನ್ನು ಸೇವಿಸುವುದರಿಂದ ಒಮೆಗಾ-2 ಕೊಬ್ಬಿನಂಶದ ಆ್ಯಸಿಡ್‌ ಪ್ರಮಾಣ ಹೆಚ್ಚಾಗುತ್ತದೆ. ಅದೇ ರೀತಿ ವಿಟಮಿನ್‌ ಹೆಚ್ಚಿರುವ ಆಹಾರ ಪದಾರ್ಥಗಳಾದ ಚೀಸ್‌, ಎಗ್‌, ಹಾಲು, ಬೆಣ್ಣೆಯನ್ನು ಸೇವಿಸುವುದು ಸೂಕ್ತ. ಸ್ಪಿನ್ಯಾಚ್‌, ಬ್ಲ್ಯೂಬೆರೀಸ್‌, ಪ್ರತಿದಿನ ಸೇವಿಸುವುದು ಉತ್ತಮ. ಪ್ರತಿದಿನ 8-10 ಗ್ಲಾಸ್‌ನಷ್ಟುನೀರು ಕುಡಿಯುವ ಮೂಲಕ ದೇಹದಲ್ಲಿ ನೀರಿನ ಅಂಶ ಹೆಚ್ಚಿರುವಂತೆ ನೋಡಿಕೊಳ್ಳಿ.

ಕಣ್ಣುಗಳ ವ್ಯಾಯಾಮ ಮಾಡಿ

‘20-20-20 ನಿಯಮ’ ಪಾಲಿಸಿ. ಪ್ರತಿ 20 ನಿಮಿಷಕ್ಕೊಮ್ಮೆ ಕಂಪ್ಯೂಟರ್‌ನಿಂದ 20 ಅಡಿಗಳ ದೂರದವರೆಗೆ ಕನಿಷ್ಠ 20 ಸೆಕೆಂಡುಗಳ ಕಾಲ ನೋಡಿ. ಇದರಿಂದ ನಿಮ್ಮ ಕಣ್ಣುಗಳ ಮಾಂಸಖಂಡಗಳಿಗೆ ಸ್ವಲ್ಪ ವಿಶ್ರಾಂತಿ ಸಿಕ್ಕಂತಾಗುತ್ತದೆ. ಇದು ಕಣ್ಣಿನ ಸೆಳೆತವನ್ನು ಕಡಿಮೆ ಮಾಡುತ್ತದೆ. ಕಣ್ಣಿಗಾಗುವ ಆಯಾಸ ತಗ್ಗಿಸುತ್ತದೆ.

ಸಿಗರೇಟ್ ಸೇದಿದ್ರೆ ದೃಷ್ಟಿ ಕಳ್ಕೋಬೇಕಾಗುತ್ತೆ!

ಏರ್‌ ಕಂಡೀಶನರ್‌ಗಳಿಗೆ ನೇರವಾಗಿ ಎಕ್ಸ್‌ಪೋಶರ್‌ ಮಾಡುವುದನ್ನು ನಿಯಂತ್ರಿಸಿ

ಏರ್‌ ಕಂಡೀಶನರ್‌ಗಳನ್ನು ನಿಮ್ಮ ಹಿಂದೆ ಇಟ್ಟಿರಬೇಕೇ ಹೊರತು ಮುಂಭಾಗದಲ್ಲಿಡಬಾರದು. ಏಕೆಂದರೆ, ಇವುಗಳಿಗೆ ನೇರವಾಗಿ ಎಕ್ಸ್‌ಪೋಶರ್‌ ಆದರೆ ಕಣ್ಣಿನ ಟಿಯರ್‌ ಫಿಲ್ಮ್‌ ತ್ವರಿತವಾಗಿ ಒಣಗಲು ಕಾರಣವಾಗುತ್ತದೆ. ಇದರಿಂದ ಡ್ರೈ ಐ ಸಮಸ್ಯೆಗಳು ಎದುರಾಗುತ್ತವೆ. ಏರ್‌ ಹ್ಯುಮಿಡಿಫೈಯರ್‌ಗಳನ್ನು ಅಳವಡಿಸುವುದರಿಂದ ಏರ್‌ ಹ್ಯುಮಿಡಿಟಿಯನ್ನು ಹೆಚ್ಚು ಮಾಡುತ್ತದೆ ಮತ್ತು ಡ್ರೈ ಐ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

click me!