ನಮ್ಮ ದೇಹದ ಪ್ರತಿಯೊಂದು ಅಂಗವೂ ನಮಗೆ ಮುಖ್ಯ. ಕೆಲವು ದೇಹಕ್ಕೆ ಅತ್ಯಗತ್ಯ. ಅವು ಕೆಲಸ ನಿಲ್ಲಿಸಿದ್ರೆ ನಮ್ಮ ಕಥೆ ಮುಗಿದಂತೆ. ಇದ್ರಲ್ಲಿ ಲಿವರ್ ಕೂಡ ಒಂದು. ಲಿವರ್ ಹಾಳಾಗ್ತಿದ್ದಂತೆ ಕೆಲ ಲಕ್ಷಣ ನಮಗೆ ಗೋಚರವಾಗುತ್ತೆ.
ಲಿವರ್ ನಮ್ಮ ದೇಹದ ಬಹುಮುಖ್ಯ ಅಂಗಗಳಲ್ಲಿ ಒಂದು. ಯಕೃತ್ತು ದೇಹದೊಳಗೆ 500 ಕ್ಕೂ ಹೆಚ್ಚು ಕಾರ್ಯಗಳನ್ನು ನಿರ್ವಹಿಸುತ್ತದೆ. ಲಿವರನ್ನು ನಾಲ್ಕು ಮುಖ್ಯ ವಿಭಾಗಗಳಾಗಿ ವಿಂಗಡಿಸಬಹುದು. ಜೀರ್ಣಕ್ರಿಯೆ, ರಕ್ತ ಶುದ್ಧೀಕರಣ, ಪ್ರತಿರಕ್ಷಣಾ ಬೆಂಬಲ ಮತ್ತು ರಕ್ತ ಹೆಪ್ಪುಗಟ್ಟುವಿಕೆ. ಒಂದ್ವೇಳೆ ಯಕೃತ್ತಿಗೆ ಹಾನಿಯಾಗಿದೆ ಎಂದಾಗ ಅದು ತನ್ನ ಕೆಲಸವನ್ನು ಸರಿಯಾಗಿ ಮಾಡೋದಿಲ್ಲ. ಆಗ ನಿಮ್ಮ ದೇಹದಲ್ಲಿ ಕೆಲ ಲಕ್ಷಣಗಳು ಗೋಚರಿಸುತ್ತವೆ. ಲಿವರ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ಎಲ್ಲರಿಗೂ ಒಂದೇ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಬೇಕು ಎಂದೇನಿಲ್ಲ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಆದ್ರೂ ಕೆಲವೊಂದು ಲಕ್ಷಣಗಳು ಸಾಮಾನ್ಯವಾಗಿರುವುದಲ್ಲದೆ ಅತ್ಯಂತ ಅಪಾಯಕಾರಿ ಲಕ್ಷಣಗಳಾಗಿರುತ್ತವೆ. ನಾವಿಂದು ಲಿವರ್ ಗೆ ಹಾನಿಯಾದಾಗ ಅದು ಯಾವ ಲಕ್ಷಣದ ಮೂಲಕ ನಮಗೆ ಸೂಚನೆ ನೀಡುತ್ತದೆ ಎಂಬುದನ್ನು ಹೇಳ್ತೇವೆ.
ಲಿವರ್ (Liver )ಗೆ ಹಾನಿಯಾದಾಗ ನಮ್ಮನ್ನು ಕಾಡುವ ಸಮಸ್ಯೆ :
ಕಾಲು (Foot ) ನೋವು ಮತ್ತು ಊತ : ನಿಮ್ಮ ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾಗ ಅದರ ಪರಿಣಾಮ ನಿಮ್ಮ ದೇಹದ ಮೇಲಾಗುತ್ತದೆ. ನಿಮ್ಮ ದೇಹದ ಕೆಳಭಾಗದಲ್ಲಿ ಹೆಚ್ಚುವರಿ ದ್ರವ (Liquid) ಮತ್ತು ವಿಷ ನಿರ್ಮಾಣವಾಗುತ್ತದೆ. ಇದು ಬಾಹ್ಯ ಎಡಿಮಾ ಅಥವಾ ಪಿಇಗೆ ಕಾರಣವಾಗುತ್ತದೆ. ಈ ಸಮಸ್ಯೆಯಲ್ಲಿ ನಿಮ್ಮ ಕಾಲುಗಳು ಊದಿಕೊಳ್ಳುತ್ತವೆ. ಕಾಲು ಭಾರವಾದ ಅನುಭವವಾಗುತ್ತದೆ. ಕಾಲಿನಲ್ಲಿ ನೋವು ಹಾಗೂ ಬಿಗಿತ ಕಾಣಿಸಿಕೊಳ್ಳುತ್ತದೆ. ಕಾಲುಗಳು ಗಾಯಗೊಂಡಂತೆ ಕಾಣಲು ಶುರುವಾಗುತ್ತವೆ. ಕಾಲು ವಿಕಾರಗೊಂಡಿರುತ್ತದೆ. ಕಾಲು ಊದಿಕೊಂಡ ಕಾರಣ ಸರಿಯಾಗಿ ನಡೆಯಲು ಸಾಧ್ಯವಾಗೋದಿಲ್ಲ. ಇದಲ್ಲದೆ ಸಾಕ್ಸ್ ಅಥವಾ ಬೂಟನ್ನು ಧರಿಸಲು ನಿಮಗೆ ಸಾಧ್ಯವಾಗೋದಿಲ್ಲ. ನಿಮ್ಮ ಕಾಲಿನ ಭಾಗದಲ್ಲಿ ದ್ರವ ಹೆಚ್ಚಾಗುವ ಕಾರಣ ತೂಕದಲ್ಲಿ ಏರಿಕೆ ಕಂಡು ಬರುತ್ತದೆ.
ಸಾವಿನ ನಂತರ ಏನಾಗುತ್ತದೆ? ಸಾವಿನ ಕದತಟ್ಟಿ ಬಂದ ಜನ ಈ ಬಗ್ಗೆ ಏನು ಹೇಳ್ತಾರೆ ಕೇಳಿ…
ನಿಮ್ಮನ್ನು ಕಾಡುತ್ತೆ ಈ ಸಮಸ್ಯೆ : ಕಾಲಿನ ಊತ, ನೋವಿನ ಜೊತೆಗೆ ಲಿವರ್ ಸಮಸ್ಯೆಯಿಂದ ಬಳಲುತ್ತಿರುವವರು ಇನ್ನೂ ಕೆಲ ಸಮಸ್ಯೆಗೆ ಒಳಗಾಗ್ತಾರೆ. ಅವರಿಗೆ ಸರಿಯಾಗಿ ಹಸಿವಾಗೋದಿಲ್ಲ. ಜೀರ್ಣಕ್ರಿಯೆ ಸರಿಯಾಗಿ ಆಗದ ಕಾರಣ ಹಸಿವು ಕಡಿಮೆಯಾಗುತ್ತದೆ. ನಿದ್ರಾಹೀನತೆ ಸಮಸ್ಯೆಯಿಂದ ಅವರು ಬಳಲುತ್ತಾರೆ. ಲಿವರ್ ಸಮಸ್ಯೆಯಿಂದ ಬಳಲುವ ಪುರುಷರ ಸ್ತನದ ಗಾತ್ರ ದೊಡ್ಡದಾಗುತ್ತದೆ. ಲಿವರ್ ಸರಿಯಾಗಿ ಕೆಲಸ ಮಾಡದ ಕಾರಣ ಹಾರ್ಮೋನ್ ಗಳಲ್ಲಿ ಏರುಪೇರಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಇವರಿಗೆ ನೆನಪಿನ ಶಕ್ತಿಯಲ್ಲಿ ಕಡಿಮೆಯಾಗಲು ಶುರುವಾಗುತ್ತದೆ.
ಕೆಲವರಿಗೆ ಲಿವರ್ ನಲ್ಲಿ ಸಮಸ್ಯೆಯಿದೆ ಎಂಬುದು ಗೊತ್ತೇ ಆಗೋದಿಲ್ಲ. ಮತ್ತೆ ಕೆಲವರಿಗೆ ಮೇಲಿನ ಎಲ್ಲ ಲಕ್ಷಣದ ಜೊತೆ ಮಲ ಹಾಗೂ ಮೂತ್ರದ ಬಣ್ಣ ಬದಲಾಗೋದು, ಕಾಮಾಲೆ, ದೌರ್ಬಲ್ಯ, ಆಯಾಸ, ತೂಕ ನಷ್ಟ, ವಾಕರಿಕೆ, ವಾಂತಿ, ಜಿಐ ರಕ್ತಸ್ರಾವ, ಚರ್ಮದ ದದ್ದುಗಳು ಮತ್ತು ಮಾನಸಿಕ ಭ್ರಮೆ ಕಾಣಿಸಿಕೊಳ್ಳುತ್ತವೆ.
ಅರ್ಧ ಗಂಟೆ ಕಡಿಮೆ ಸೋಷಿಯಲ್ ಮೀಡಿಯಾ ಬಳಸಿ, ಆರೋಗ್ಯ ಹೇಗೆ ಸುಧಾರಿಸುತ್ತೋ ನೋಡಿ!
ಲಿವರ್ ಆರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಿ : ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಿಮ್ಮ ಕೈನಲ್ಲಿದೆ. ಲಿವರ್ ನಿಮ್ಮ ಜೀವ ತೆಗೆಯಬಹುದು. ಹಾಗಾಗಿ ಲಿವರ್ ಆರೋಗ್ಯದ ಬಗ್ಗೆಯೂ ನೀವು ಹೆಚ್ಚಿನ ಗಮನ ನೀಡಬೇಕು. ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ನೀವು ಲಿವರ್ ಆರೋಗ್ಯ ಕಾಪಾಡಬಹುದು. ಉತ್ತರ ಆಹಾರ ಸೇವನೆ, ನಿತ್ಯ ವ್ಯಾಯಾಮ, ತೂಕದಲ್ಲಿ ನಿಯಂತ್ರಣ ಮಾಡಿಕೊಳ್ಳಬೇಕು. ಸ್ಥೂಲಕಾಯ ಫ್ಯಾಟಿ ಲಿವರ್ ಜೊತೆ ಸಂಬಂಧ ಹೊಂದಿದೆ. ಇದು ಮುಂದೆ ಯಕೃತ್ತಿನ ಸಿರೋಸಿಸ್ ಮತ್ತು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು. ಹಾಗಾಗಿ ಮೊದಲಿನಿಂದಲೇ ಉತ್ತಮ ಜೀವನ ಶೈಲಿ ಪಾಲಿಸುತ್ತ ಬಂದಲ್ಲಿ ಮುಂದೆ ಯಾವುದೇ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ.