ಮಲಗಿದ ಕೂಡ್ಲೇ ನಿದ್ದೆ (Sleep) ಬರ್ಬೇಕು ಅಂತಾನೇ ಎಲ್ರೂ ಮಲಗ್ತಾರೆ. ಆದ್ರೆ ಗಂಟೆಗಟ್ಟಲೆ ನಿದ್ದೆ ಬರದೆ ಅತ್ತಿತ್ತ ಹೊರಳಾಡೋದೆ ಆಗುತ್ತದೆ. ಹಾಗಿದ್ರೆ ಮಲಗಿದ ಕೆಲವೇ ನಿಮಿಷಗಳಲ್ಲಿ ನಿದ್ದೆ ಬರೋಕೆ ಏನ್ಮಾಡ್ಬೇಕು ? ಅಮೇರಿಕಾ ಯೋಧರು (American Soldiers) ಯೂಸ್ ಮಾಡೋ ಟ್ರಿಕ್ (Trick) ಬಗ್ಗೆ ಇಲ್ಲಿದೆ ಮಾಹಿತಿ.
ಮಲಗಿದ ತಕ್ಷಣ ನಿದ್ರೆ (Sleep) ಮಾಡುವವರು ಸುಖಿಗಳು ಎನ್ನುವ ಮಾತೊಂದಿದೆ. ನಿದ್ರೆ ಬಾರದಿರುವವರ ಮಟ್ಟಿಗಂತೂ ಇದು ಬಹಳ ಸತ್ಯವಾದ ಮಾತು. ಏಕೆಂದರೆ, ಎಂಥದ್ದೇ ವ್ಯವಸ್ಥೆ ಮಾಡಿಕೊಂಡು ಮಲಗಿದರೂ ಹಲವರಿಗೆ ಕಣ್ತುಂಬ ನಿದ್ರೆ ಬರುವುದಿಲ್ಲ. ನಿದ್ರಾಹೀನತೆಯ (Insomnia) ಸಮಸ್ಯೆ ಎಲ್ಲೆಲ್ಲೂ ಹೆಚ್ಚಾಗಿದೆ. ನಿದ್ರೆ ಕಡಿಮೆ ಆಗಿರುವುದರಿಂದ ಹಲವಾರು ರೀತಿಯ ಆರೋಗ್ಯ (Health) ಸಮಸ್ಯೆಗಳನ್ನು ಸಹ ಅನೇಕರು ಅನುಭವಿಸುತ್ತಿದ್ದಾರೆ.
ನಿಮ್ಮ ಅನುಭವಕ್ಕೆ ಬಂದಿರಬಹುದು. ಅದೆಂದರೆ, ಹೆಚ್ಚು ಕಾಲ ಭಾರೀ ಎಚ್ಚರಿಕೆಯಿಂದ ಕೆಲಸ ಮಾಡಿದಾಗ ಅಥವಾ ತೀವ್ರವಾದ ಸುಸ್ತಾದಾಗ ಚೆನ್ನಾಗಿ ನಿದ್ರೆ ಬರುವುದಿಲ್ಲ. ಅಂತಹ ಸಮಸ್ಯೆಗಳನ್ನು ನಮ್ಮೆಲ್ಲರಿಗಿಂತ ಹೆಚ್ಚಾಗಿ ದೇಶ ಕಾಯುವ ಯೋಧರು (Soldiers) ಅನುಭವಿಸುತ್ತಾರೆ. ಅವರು ನಮ್ಮ ಹಾಗಲ್ಲ, ಡ್ಯೂಟಿ ಮುಗಿಯುತ್ತಿದ್ದಂತೆ ನಿರ್ದಿಷ್ಟ ಸಮಯ (Time) ಮಲಗಬೇಕು, ಹಾಗೆಯೇ ಮತ್ತೆ ಕೆಲಸ ಶುರು ಮಾಡಬೇಕು. ಅಂತಹ ಸಮಯದಲ್ಲಿ ನಿದ್ರೆ ಬಾರದೆ ಇದ್ದರೆ ಸಮಸ್ಯೆ ಉಂಟಾಗುತ್ತದೆ.
ನಿದ್ದೆ ಮಾಡುವಾಗ ಹೀಗೆಲ್ಲಾ ಆದ್ರೆ ಹಠಾತ್ ಹೃದಯಾಘಾತದ ಸಾಧ್ಯತೆ ಹೆಚ್ಚು !
ಹೀಗಾಗಿ, ಅಮೆರಿಕದಂತಹ ದೇಶದಲ್ಲಿ ಸೈನಿಕರಿಗೆ ಮಲಗಿದಾಕ್ಷಣ ನಿದ್ರೆ ಬರಲು ತಂತ್ರ(Technique) ಒಂದನ್ನು ಹೇಳಿಕೊಡಲಾಗುತ್ತದೆ. ಅದನ್ನು ಅರಿತುಕೊಂಡರೆ ನಾವೂ ಮಲಗಿದ ಕೆಲವೇ ನಿಮಿಷಗಳಲ್ಲಿ (Minute) ನಿದ್ರೆಗೆ ಜಾರಲು ಸಾಧ್ಯವಾಗುತ್ತದೆ.
ಏನದು ಅಮೆರಿಕದ ನಿದ್ರಾ ತಂತ್ರ?
ಮಲಗುವ ಮುನ್ನ ಏನೇನು ವ್ಯವಸ್ಥೆ ಮಾಡಿಕೊಳ್ಳಬೇಕೋ ಅದನ್ನು ಮಾಡಿಕೊಳ್ಳಿ. ಅಂದರೆ, ಆಲಾರಾಂ ಇಡುವುದು, ಬೆಡ್ ಲ್ಯಾಂಪ್ ಹಾಕಿಕೊಳ್ಳುವುದು, ಎಸಿ ಅಥವಾ ಸೊಳ್ಳೆಪರದೆಗಳನ್ನು ಹಾಕಿಕೊಳ್ಳುವುದು, ಮೊಬೈಲ್ (Mobile) ಅನ್ನು ಸೈಲೆಂಟ್ ಗೆ ಹಾಕುವುದನ್ನು ಮಾಡಿಕೊಳ್ಳಿ. ಬಳಿಕ, ಹಾಸಿಗೆಯಲ್ಲಿ ಕುಳಿತುಕೊಂಡು ಕಣ್ಣುಮುಚ್ಚಿ ನಾಲ್ಕು ಬಾರಿ ದೀರ್ಘ ಉಸಿರಾಟ (Breathe) ಮಾಡಿ. ಮೊದಲು ಮುಖದ ಮಾಂಸಖಂಡಗಳು ರಿಲ್ಯಾಕ್ಸ್ (Relax) ಆಗುತ್ತಿವೆ ಎಂದು ಕಲ್ಪಿಸಿಕೊಳ್ಳಿ. ಹಾಗೂ ಅವುಗಳನ್ನು ಸಡಲಿಸಿ. ಒಮ್ಮೆ ಕುಗ್ಗಿಸಿ ಹಾಗೆಯೇ ಮತ್ತೆ ಸಡಲಿಸಿ ನಿಧಾನವಾಗಿ ವಿಶ್ರಾಂತಿ ನೀಡಿ. ಹಣೆಯ ಭಾಗ, ಕಿವಿ, ಗಲ್ಲ, ಹಾಗೆಯೇ ಕತ್ತುಗಳಿಗೆ ರಿಲ್ಯಾಕ್ಸ್ ನೀಡಿ.
ಕುತ್ತಿಗೆಯ ಕೆಳಭಾಗಕ್ಕೆ ಬಂದಾಗ ಮೊದಲು ಭುಜಗಳ ಕಡೆಗೆ ಗಮನ ನೀಡಿ. ಕೈಗಳು, ಕೈ ಬೆರಳುಗಳು, ಬೆನ್ನುಹುರಿ, ಹಿಂಭಾಗ, ಎದೆ, ಹೊಟ್ಟೆ, ಕಿಬ್ಬೊಟ್ಟೆ, ಸೊಂಟಗಳ ಮಾಂಸಖಂಡಗಳ ಮೇಲೆ ಗಮನ ಕೇಂದ್ರೀಕರಿಸುತ್ತ ಸಾಗಿ. ಅವು ವಿಶ್ರಾಂತಿಗೆ ಸಾಗುವಂತೆ ವಿಷುವಲೈಸೇಷನ್ ಮಾಡಿ. ತೊಡೆಗಳು, ಮಂಡಿ, ಕಾಲುಗಳ ಹಿಂಭಾಗ, ಪಾದಗಳು, ಬೆರಳು, ಹಿಮ್ಮಡಿ ಎಲ್ಲದರ ಬಗೆಗೂ ಗಮನ ಕೊಡಿ. ಇಡೀ ದೇಹ ಸಡಿಲವಾದಂತೆ ಭಾಸವಾಗುತ್ತದೆ. ಹಗುರವಾದಂತೆ ಅನಿಸುತ್ತದೆ.
Healthy Sleep: ಆರೋಗ್ಯಕ್ಕೆ 8 ಗಂಟೆಯ ನಿದ್ದೆಯ ಅಗತ್ಯವಿಲ್ಲ, ಮತ್ತೇನು ಬೇಕು ?
ಬಳಿಕ, ತಲೆಯ ಬಗ್ಗೆ ಗಮನ ನೀಡಿ ಅಲ್ಲಿ ಎಲ್ಲವೂ ಸರಳವಾದಂತೆ, ಖಾಲಿಯಾದಂತೆ ಕಲ್ಪಿಸಿಕೊಳ್ಳಿ. ಹತ್ತು ಸೆಕೆಂಡುಗಳ ಕಾಲ ಮಿದುಳನ್ನು ರಿಲ್ಯಾಕ್ಸ್ ಮಾಡಿ. ಕೆಲವೇ ಸೆಕೆಂಡುಗಳಲ್ಲಿ ಮನಸ್ಸು, ಬುದ್ಧಿಗಳಿಗೆ ಶಾಂತಿ ದೊರೆಯುತ್ತದೆ.
ಮೇಲೆ ನೀಲಾಕಾಶ, ಕೆಳಗೆ ನೀಲ ಸಮುದ್ರ (Space and Sea)
ಬಳಿಕ, ಕಣ್ಣು ಮುಚ್ಚಿಕೊಂಡೇ ಎರಡು ಅಂಶಗಳನ್ನು ಕಲ್ಪಿಸಿಕೊಳ್ಳಿ. ಮೇಲೆ ನೀಲಾಕಾಶ, ಕೆಳಗೆ ಶಾಂತವಾದ ನೀಲ ಸಮುದ್ರ. ನೀವು ಶಾಂತವಾಗಿ ಬೋಟಿನಲ್ಲಿ ಸಾಗುತ್ತಿದ್ದೀರಿ ಎಂದುಕೊಳ್ಳಿ. ಅಥವಾ ಬೆಳಕಿಲ್ಲದ ಒಂದು ರೂಮಿನೊಳಗೆ ಮಕಮಲ್ ಬಟ್ಟೆಯೊಳಗೆ ಹುದುಗುವಂತೆ ಕಲ್ಪಿಸಿಕೊಳ್ಳಿ.
ಸುಲಭವಾಗಿ ವಿಷುವಲೈಸೇಷನ್ (Visualisation) ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಮಧ್ಯೆ ಮಧ್ಯೆ “ಬೇರೆ ಯಾವ ಯೋಚನೆಯೂ ಬೇಡ’ ಎಂದು ಮನಸ್ಸಿಗೆ ತರಬೇತಿ ನೀಡುತ್ತ ಸಾಗಿ.
ಆರಂಭದಲ್ಲಿ ಈ ತಂತ್ರ ಅನುಸರಿಸಲು ಹೆಚ್ಚು ಸಮಯ ಅಥವಾ ಐದಾರು ನಿಮಿಷಗಳ ಸಮಯ ಬೇಕಾಗಬಹುದು. ಆದರೆ, 9ನೇ ದಿನದ ಹೊತ್ತಿಗೆ ಅಭ್ಯಾಸವಾಗುತ್ತದೆ. ಆಗ ಎರಡೇ ನಿಮಿಷ ಸಾಕು. ಮಾಂಸಖಂಡಗಳು ರಿಲ್ಯಾಕ್ಸ್ ಆದಂತೆಲ್ಲ ನಿದ್ರೆ ಬರಲು ಶುರುವಾಗುತ್ತದೆ. ಶಾಂತವಾದ ನಿದ್ರೆ ನಿಮ್ಮದಾಗುತ್ತದೆ, ಮಾರನೆಯ ದಿನ ನೀವು ಖಂಡಿತವಾಗಿ ಫ್ರೆಶ್ (Fresh) ಆಗಿರುತ್ತೀರಿ.