Health Tips: ವಾಯುಮಾಲಿನ್ಯದಿಂದ ಆಂಟಿಬಯಾಟಿಕ್ ನಿರೋಧಕ ಬ್ಯಾಕ್ಟೀರಿಯಾ ಬರೋದು ಎಲ್ಲಿಂದ?

By Suvarna News  |  First Published Aug 10, 2023, 7:00 AM IST

ಈಗಾಗಲೇ ಹಲವು ರೋಗರುಜಿನಗಳಿಂದ ಮಾನವ ತತ್ತರಿಸಿ ಹೋಗಿದ್ದಾನೆ. ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಆಂಟಿಬಯಾಟಿಕ್ ನಿರೋಧಕ ಬ್ಯಾಕ್ಟೀರಿಯಾಗಳು ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಿವೆ ಎನ್ನುವ ಆತಂಕಕಾರಿ ಸಂಗತಿಯನ್ನು ಇದೀಗ ತಜ್ಞರು ಹಂಚಿಕೊಂಡಿದ್ದಾರೆ. 
 


ವಾಯು ಮಾಲಿನ್ಯದಿಂದಾಗುವ ಅನಾಹುತಗಳನ್ನು ದಿನೇ ದಿನೇ ಕಾಣುತ್ತಿದ್ದೇವೆ, ಎಷ್ಟೋ ಕುಟುಂಬಗಳಲ್ಲಿ ಅನುಭವಿಸುತ್ತಿದ್ದೇವೆ. ವಾಯುಮಾಲಿನ್ಯದಿಂದ ನಗರ ಪ್ರದೇಶಗಳಲ್ಲಿ ಉಸಿರಾಟದ ಸಮಸ್ಯೆಗಳು, ಅಸ್ತಮಾ ಸೇರಿದಂತೆ ಹಲವು ರೀತಿಯ ಆರೋಗ್ಯ ತೊಂದರೆಗಳು ಸಂಭವಿಸುತ್ತಿವೆ. ಜತೆಗೆ, ನೆನಪಿನ ಶಕ್ತಿ ಕುಂದುವುದು ಸೇರಿದಂತೆ ಮಿದುಳಿನ ಮೇಲೂ ವಾಯು ಮಾಲಿನ್ಯದಿಂದ ಸಮಸ್ಯೆಯಾಗುವ ಬಗ್ಗೆ ಕೆಲವು ಅಧ್ಯಯನಗಳು ಹೇಳಿವೆ. ಹೃದಯ ತೊಂದರೆ, ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ ದೀರ್ಘಕಾಲದ ಸಮಸ್ಯೆಗಳೂ ವಾಯು ಮಾಲಿನ್ಯದಿಂದ ಉಂಟಾಗುತ್ತಿವೆ. ಇವು ಮನುಷ್ಯನ ಆರೋಗ್ಯದ ಮೇಲಾಗುವ ನೇರ ಪರಿಣಾಮಗಳಾದವು. ಇದೀಗ, ವಾಯು ಮಾಲಿನ್ಯದಿಂದಾಗುವ ಅನಾಹುತದ ಮತ್ತೊಂದು ಮುಖ ಅನಾವರಣಗೊಂಡಿದೆ. ಅದೆಂದರೆ, ಬ್ಯಾಕ್ಟೀರಿಯಾಗಳಲ್ಲಿ ಆಂಟಿಬಯಾಟಿಕ್ ನಿರೋಧಕ ಶಕ್ತಿ ದಿನೇ ದಿನೇ ವೃದ್ಧಿಯಾಗುತ್ತಿದೆ. ಈಗಾಗಲೇ ಕೆಲವು ರೋಗಾಣುಗಳು ಆಂಟಿಬಯಾಟಿಕ್ ಗೆ ಜಗ್ಗದ ಸಾಮರ್ಥ್ಯ ಬೆಳೆಸಿಕೊಂಡಿವೆ. ಇದಕ್ಕೆ ವಾಯು ಮಾಲಿನ್ಯವೂ ಕೊಡುಗೆ ನೀಡುತ್ತಿದೆ. ಇದು ಜಾಗತಿಕವಾಗಿ ಎದುರಾಗಿರುವ ಬಹುದೊಡ್ಡ ಅಪಾಯ ಎಂಬುದಾಗಿ ಹೊಸ ಅಧ್ಯಯನವೊಂದು ಹೇಳಿದೆ. 

ಆಂಟಿಬಯಾಟಿಕ್ ನಿರೋಧಕ (Antibiotic Resistance) ಬ್ಯಾಕ್ಟೀರಿಯಾ ವರ್ಧನೆ
ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಗಾಳಿಯಲ್ಲಿರುವ 2.5 ಮೈಕ್ರಾನ್ ಅಥವಾ ಅದಕ್ಕೂ ಕಡಿಮೆ ಗಾತ್ರದ ಕಣಗಳಿಂದ ಆಂಟಿಬಯಾಟಿಕ್ ನಿರೋಧಕ ಬ್ಯಾಕ್ಟೀರಿಯಾ (Bacteria) ಮತ್ತು ಜೀನ್ (Gene) ಗಳು ಉತ್ಪತ್ತಿಯಾಗುತ್ತಿವೆ ಎಂದು ಈ ಅಧ್ಯಯನ ಎಚ್ಚರಿಕೆ ನೀಡಿದೆ. ಇವು ಪರಿಸರ (Environment) ಮತ್ತು ಯಾವುದೇ ಮನುಷ್ಯರಿಂದಲೂ ಒಬ್ಬರಿಂದ ಇನ್ನೊಬ್ಬರಿಗೆ ಹರಡಬಹುದು.

Tap to resize

Latest Videos

Health Tips: ಒಮೆಗಾ 3 ಫ್ಯಾಟಿ ಆಸಿಡ್ ಹೆಚ್ಚಾದ್ರೆ ಅಡ್ಡ ಪರಿಣಾಮ ಇರೋದೆ

ಆಂಟಿಬಯಾಟಿಕ್ ನಿರೋಧಕ ಬ್ಯಾಕ್ಟೀರಿಯಾಗಳು ದಿನದಿಂದ ದಿನಕ್ಕೆ ಬಲವರ್ಧನೆಯಾಗುತ್ತಿವೆ. ಇದಕ್ಕೆ ಏರಿಕೆಯಾಗುತ್ತಿರುವ ವಾಯು ಮಾಲಿನ್ಯವೂ ಕಾರಣವಾಗಿದೆ. ಇದರಿಂದ ಮನುಷ್ಯನ ಜೀವಿತಾವಧಿ ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗಿದೆ. ದಿನನಿತ್ಯದ ಜೀವನದಲ್ಲಿ ನಾವು ಸಾಮಾನ್ಯವಾಗಿ ವಾಯುಮಾಲಿನ್ಯದಿಂದ ಅಲರ್ಜಿ, ಶೀತ, ನೆಗಡಿ, ಕೆಮ್ಮು, ಗಂಟಲು ಕೆರೆತ, ಉಸಿರಾಟದ ತೊಂದರೆಗಳನ್ನು ಅನುಭವಿಸುತ್ತೇವೆ. ಇದು ನಮ್ಮ ದೇಶದಲ್ಲೊಂದೇ ಅಲ್ಲ, ವಾಯು ಮಾಲಿನ್ಯ (Air Pollution) ಹೆಚ್ಚಾಗಿರುವ ವಿಶ್ವದ ಎಲ್ಲ ನಗರಗಳ ಸಮಸ್ಯೆಯಾಗಿದೆ.  
ಈ ಹೊಸ ಅಧ್ಯಯನದ (New Study) ಪ್ರಮುಖ ಲೇಖಕ ಹಾಂಗ್ ಚೆನ್ ಅವರು ಚೀನಾದ ಝೆಜಿಯಾನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿದ್ದಾರೆ. ಅವರ ಪ್ರಕಾರ, ವಾಯು ಗುಣಮಟ್ಟವನ್ನು (Air Quality) ಉತ್ತಮ ಪಡಿಸುವ ಬಗ್ಗೆ ಜಗತ್ತಿನ ಗಮನ ಸೆಳೆಯುವುದು ಅಧ್ಯಯನದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. 

ಆಂಟಿಬಯಾಟಿಕ್ ಮಿಸ್ ಯೂಸ್
ಆಂಟಿಬಯಾಟಿಕ್ ಗಳನ್ನು ತಪ್ಪಾಗಿ ಬಳಕೆ ಮಾಡುವುದು (Miss Use) ಮತ್ತು ಅತಿಯಾಗಿ ಬಳಕೆ (Over Use) ಮಾಡುವುದು ಎರಡೂ ಸರಿಯಲ್ಲ. ಸೋಂಕುಗಳನ್ನು ಗುಣಪಡಿಸಲು ಆಂಟಿಬಯಾಟಿಕ್ ಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ, ಇವುಗಳ ಬಳಕೆ ತಪ್ಪಾಗಿಯೂ ಇದೆ, ಅತಿಯಾಗಿಯೂ ಇದೆ. ಇದರಿಂದಲೂ ಆಂಟಿಬಯಾಟಿಕ್ ನಿರೋಧಕ ಬ್ಯಾಕ್ಟೀರಿಯಾಗಳು ನಿರ್ಮಾಣಗೊಳ್ಳುತ್ತವೆ. 

ಇನ್ನು 20 ವರ್ಷದಲ್ಲಿ ಜಗತ್ತಲ್ಲಿ ನಕ್ಷತ್ರಗಳೇ ಕಾಣಲ್ಲ! ಕಾರಣ ಹೀಗಿದೆ..

ಎಲ್ಲಿಂದ ಉತ್ಪತ್ತಿಯಾಗುತ್ತೆ?
ಆಸ್ಪತ್ರೆಗಳು (Hospitals), ತೋಟ (Farms) ಮತ್ತು ಚರಂಡಿ ಸಂಸ್ಕರಣಾ ವ್ಯವಸ್ಥೆಗಳ ಮೂಲಕ ಆಂಟಿಬಯಾಟಿಕ್ ನಿರೋಧಕ ಬ್ಯಾಕ್ಟೀರಿಯಾಗಳು ವಾತಾವರಣಕ್ಕೆ ಸೇರ್ಪಡೆಯಾಗುತ್ತಿವೆ ಎಂದು ಹೇಳಿದೆ ಈ ಅಧ್ಯಯನ. ಪಿಎಂ2.5 ಎಂದು ಕರೆಯುವ ಸಣ್ಣ ಕಣದ (Particles) ಪ್ರಭಾವದಿಂದ ಜಗತ್ತಿನಾದ್ಯಂತ ಈ ಸಮಸ್ಯೆ ಕಂಡುಬರುತ್ತಿದೆ. ಇದು ಮಾನವ ಕೂದಲಿನ 30 ಪಟ್ಟು ಸಣ್ಣದಾಗಿರುತ್ತದೆ!
ಅಧ್ಯಯನದ ಪ್ರಕಾರ, ವಿಶ್ವದ 7.3 ಶತಕೋಟಿ ಜನ ಪಿಎಂ2.5 ಕಣಗಳನ್ನು ಹೊಂದಿರುವ ಅಪಾಯಕಾರಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. 2018ರಿಂದ ಈ ಅಧ್ಯಯನ ಆರಂಭವಾಗಿದ್ದು, 116 ದೇಶಗಳ ದತ್ತಾಂಶಗಳನ್ನು ಒಳಗೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆ, ಯುರೋಪಿಯನ್ ಎನ್ವಿರಾನ್ ಮೆಂಟ್ ಸಂಸ್ಥೆ ಮತ್ತು ವಿಶ್ವ ಬ್ಯಾಂಕ್ ಗಳ ಸಂಪರ್ಕ ಮೂಲಗಳನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. 

click me!