ಗಂಡು ಮಕ್ಕಳಿಗೆ ಹೋಲಿಕೆ ಮಾಡಿದರೆ ಹೆಣ್ಣುಮಕ್ಕಳು ಹೆಚ್ಚು ಎತ್ತರ ಇರುವುದಿಲ್ಲ. ಹೆಣ್ಣುಮಕ್ಕಳು ಹುಡುಗರಿಗಿಂತ ಎರಡು ವರ್ಷ ಮುನ್ನವೇ ಕಿಶೋರಾವಸ್ಥೆ ತಲುಪುವುದರಿಂದ ಅವರ ಬೆಳವಣಿಗೆ ಕುಂಠಿತವಾಗುತ್ತದೆ. ಮಾಸಿಕ ಋತುಸ್ರಾವ ಆರಂಭವಾದ ಬಳಿಕವಂತೂ ಹುಡುಗಿಯರ ಬೆಳವಣಿಗೆ ಭಾರೀ ನಿಧಾನವಾಗುತ್ತದೆ.
ನಮಗೆ ಎದುರಾಗುವ ಜನರನ್ನು ನೋಡಿ. ಕೆಲವರು ಎತ್ತರ, ಕೆಲವರು ಕುಳ್ಳ, ಮತ್ತೆ ಕೆಲವರು ಮಧ್ಯಮ ಎತ್ತರದ ಜನ. ಹುಡುಗರಿಗೆ ಹೋಲಿಸಿದರೆ ಹುಡುಗಿಯರ ಎತ್ತರ ಕಡಿಮೆ. ಎತ್ತರವಿರುವುದನ್ನು ಸಾಮಾನ್ಯವಾಗಿ ಎಲ್ಲರೂ ಬಯಸುತ್ತಾರೆ. ಎತ್ತರದ ದೇಹಿಗಳು ಎಲ್ಲರ ಗಮನ ಸೆಳೆಯಬಲ್ಲರು. ಮಕ್ಕಳು ಎತ್ತರ ಬೆಳೆಯಲೆಂದು ಪಾಲಕರು ಏನೇನೋ ಕಸರತ್ತುಗಳನ್ನು ಮಾಡುವುದುಂಟು. ಅಷ್ಟಕ್ಕೂ ಮನುಷ್ಯ ಜೀವಮಾನವಿಡೀ ಎತ್ತರ ಬೆಳೆಯುತ್ತ ಹೋಗುವುದಿಲ್ಲ. ಅದಕ್ಕೊಂದು ವಯೋಮಿತಿಯಿದೆ. ಬೆಳವಣಿಗೆ ಎಲ್ಲ ಮಕ್ಕಳಲ್ಲೂ ಒಂದೇ ಸಮನಾಗಿ ಇರುವುದಿಲ್ಲ ಎಂದರೆ ನಿಮಗೆ ಅಚ್ಚರಿ ಎನಿಸಬಹುದು. ಹುಡುಗರಿಗಿಂತ ಹುಡುಗಿಯರ ಬೆಳವಣಿಗೆ ಬಹುಬೇಗ ನಿಧಾನವಾಗುತ್ತದೆ. ಹುಡುಗಿಯರ ದೇಹದಲ್ಲಾಗುವ ಹಾರ್ಮೋನುಗಳ ಬದಲಾವಣೆಯಿಂದ 14-15ರ ವಯೋಮಾನದ ಬಳಿಕ ಬೆಳವಣಿಗೆಯ ವೇಗ ಕಡಿಮೆಯಾಗುತ್ತದೆ. ಆಗ ಎತ್ತರ ಬೆಳೆಯುವ ಪ್ರಮಾಣವೂ ಕಡಿಮೆ ಆಗುತ್ತದೆ. ಬಾಲ್ಯದಲ್ಲಿ ಹುಡುಗಿಯರು ವೇಗವಾಗಿ ಎತ್ತರೆತ್ತರ ಬೆಳೆಯುತ್ತಾರೆ. ಆದರೆ, ಅವರು ಕಿಶೋರಾವಸ್ಥೆ ಅಥವಾ ಪ್ಯೂಬರ್ಟಿ ಹಂತ ತಲುಪುವ ಸಮಯದಲ್ಲಿ ಅವರ ಬೆಳವಣಿಗೆಯ ವೇಗ ಸ್ವಲ್ಪ ನಿಧಾನವಾಗುತ್ತದೆ. ಯಾವಾಗ ಮಾಸಿಕ ಋತುಸ್ರಾವ ಆರಂಭವಾಗುತ್ತದೆಯೋ ಆಗ ಬೆಳವಣಿಗೆ ಇನ್ನಷ್ಟು ಕಡಿಮೆಯಾಗುತ್ತ ಸಾಗುತ್ತದೆ. ಹೀಗಾಗಿ, ಹೆಣ್ಣುಮಕ್ಕಳ ಎತ್ತರ ಹುಡುಗರಿಗಿಂತ ಕಡಿಮೆ ಇರುತ್ತದೆ.
ಮಾಸಿಕ ಋತುಸ್ರಾವ (Monthly Periods) ಆಗುವುದಕ್ಕೂ ಒಂದು ಅಥವಾ ಎರಡು ವರ್ಷಕ್ಕೆ ಮೊದಲು ಹುಡುಗಿಯರ (Girls) ದೇಹದಲ್ಲಿ ಸಾಕಷ್ಟು ಬದಲಾವಣೆ (Change), ಬೆಳವಣಿಗೆ (Development) ಕಂಡುಬರುತ್ತದೆ. ಬಹಳಷ್ಟು ಹೆಣ್ಣುಮಕ್ಕಳಿಗೆ 8ರಿಂದ 13ನೇ ವಯೋಮಾನದಲ್ಲಿ ಕಿಶೋರಾವಸ್ಥೆ ಆರಂಭವಾಗುತ್ತದೆ. ಹೀಗಾಗಿ, 10-14ರೊಳಗೆ ಅವರು ಬಹುಬೇಗ ಎತ್ತರ (Height) ಬೆಳೆದುಬಿಡುತ್ತಾರೆ. ಮಾಸಿಕ ಋತುಸ್ರಾವವಾದ ಬಳಿಕ 1-2 ವರ್ಷಗಳಲ್ಲಿ ಅವರು ಕೇವಲ ಒಂದೆರಡು ಇಂಚಿನಷ್ಟು ಮಾತ್ರ ಬೆಳೆಯಬಲ್ಲರು. ಹೀಗಾಗಿ, ವಯಸ್ಕರಾಗುವಾಗಿನ ಎತ್ತರವನ್ನು ಅವರು ಆಗಲೇ ಹೊಂದುತ್ತಾರೆ. ಯಾವಾಗ ನಿಮ್ಮ ಹೆಣ್ಣುಮಕ್ಕಳಿಗೆ ಮುಟ್ಟು ಆರಂಭವಾಗಿದೆ ಎನ್ನುವುದರ ಮೇಲೆ ಇದು ನಿರ್ಧಾರವಾಗುತ್ತದೆ.
ಗರ್ಭನಿರೋಧಕ ಬಳಕೆಯಿಂದ ಪಿರಿಯಡ್ಸ್ ಮೇಲೆ ಪರಿಣಾಮ ಬೀರುತ್ತದೆಯೇ?
ಹುಡುಗಿಯರದ್ದು ಭಿನ್ನ ಬೆಳವಣಿಗೆ
ಹುಡುಗಿಯರಿಗೆ ಹೋಲಿಕೆ ಮಾಡಿದರೆ ಹುಡುಗರಲ್ಲಿ ಪ್ಯೂಬರ್ಟಿ (Puberty) ಶುರುವಾಗುವುದು ತಡವಾಗಿ. ಸಾಮಾನ್ಯವಾಗಿ ಹುಡುಗರಲ್ಲಿ 10-13ರ ವಯೋಮಾನದಲ್ಲಿ ಪ್ಯೂಬರ್ಟಿ ಆರಂಭವಾಗುತ್ತದೆ. 15ರವರೆಗೂ ಅವರ ಬೆಳವಣಿಗೆ ವೇಗವಾಗಿ (Fast) ಆಗುತ್ತದೆ. ಅಂದರೆ, ಹೆಣ್ಣುಮಕ್ಕಳಲ್ಲಿ ಬೆಳವಣಿಗೆ ಆರಂಭವಾದ ಎರಡು ವರ್ಷಗಳ ಬಳಿಕ ಗಂಡುಮಕ್ಕಳ ಬೆಳವಣಿಗೆ ಆರಂಭವಾಗುತ್ತದೆ. ಬಹಳಷ್ಟು ಹುಡುಗಿಯರಲ್ಲಿ 16ನೇ ವರ್ಷಕ್ಕೆಲ್ಲ ಎತ್ತರ ಬೆಳೆಯುವುದು ಸಂಪೂರ್ಣವಾಗಿ ನಿಂತೇ ಹೋಗುತ್ತದೆ. ಹೀಗಾಗಿ, ಹೆಣ್ಣುಮಕ್ಕಳ ಸರಾಸರಿ ಎತ್ತರದ ಪ್ರಮಾಣ ಕೇವಲ 63.7 ಇಂಚು ಎಂದು ಗುರುತಿಸಲಾಗಿದೆ. ಅಂದರೆ, 5 ಅಡಿ 4 ಇಂಚು ಎತ್ತರ.
ಎತ್ತರ ಬೆಳೆಯೋದು ಹೇಗೆ?
ನಿಮಗೆ ಗೊತ್ತೇ ಇದೆ. ನಮ್ಮ ಬಣ್ಣ, ಎತ್ತರ, ದಪ್ಪ, ಮೈಕಟ್ಟಿನ ರೂಪುಗಳೆಲ್ಲವೂ ಅಪ್ಪ-ಅಮ್ಮನ ಕೊಡುಗೆ. ಅಂದರೆ ಇಲ್ಲಿ ಆನುವಂಶಿಕ ಗುಣಗಳು ಹೆಚ್ಚಾಗಿರುತ್ತದೆ. ಮಕ್ಕಳ ಎತ್ತರವೂ ಪಾಲಕರ (Parents) ಎತ್ತರವನ್ನು ಅವಲಂಬಿಸಿದೆ. ಪಾಲಕರು ಎತ್ತರವಾಗಿದ್ದರೆ ಮಕ್ಕಳೂ ಎತ್ತರವಾಗಿರುವುದು ಹೆಚ್ಚು. ನೀವು ಮಕ್ಕಳ ಎತ್ತರ ಹಾಗೂ ಗಾತ್ರಕ್ಕೆ ಸಂಬಂಧಿಸಿ ವೈದ್ಯರ ಬಳಿಗೆ ಕರೆದೊಯ್ದರೆ ಅವರು ಮೊದಲು ಪ್ರಶ್ನಿಸುವುದು ಪಾಲಕರ ದೇಹಸ್ಥಿತಿಯ ಬಗ್ಗೆಯೇ ಇರುತ್ತದೆ. ಹೀಗಾಗಿ, ಮಕ್ಕಳು ಎತ್ತರವಾಗಿಲ್ಲ, ದಪ್ಪಗಿಲ್ಲ, ಸಣ್ಣ ಶರೀರ ಹೊಂದಿದ್ದಾರೆ ಎನ್ನುವುದರ ಬಗ್ಗೆ ಯಾವುದೇ ಅಪರಾಧಿ ಪ್ರಜ್ಞೆ ಬೇಕಾಗಿಲ್ಲ. ಅದು ನಿಮ್ಮದೇ ಕೊಡುಗೆ. ಅವರ ಬೆಳವಣಿಗೆಯ ವಯಸ್ಸಿನಲ್ಲಿ ಸೈಕಲ್ ರೈಡಿಂಗ್, ಈಜು, ಆಟೋಟಗಳಲ್ಲಿ ನಿರತರಾಗಿ ಇರುವಂತೆ ನೋಡಿಕೊಳ್ಳಬೇಕು.
Periodsನಲ್ಲಿ ಬೆಂಬಿಡದೇ ಕಾಡುತ್ತಾ ಬೆನ್ನು ನೋವು, ಚಿಂತೆ ಏಕೆ, ಇಲ್ಲಿದೆ ಪರಿಹಾರ
ಬೆಳವಣಿಗೆ ಏಕೆ ನಿಧಾನ?
ಆನುವಂಶಿಕ ಕಾರಣದ ಹೊರತಾಗಿ, ಅಪೌಷ್ಟಿಕತೆ (Malnutrition) ಮತ್ತು ಕೆಲವು ಔಷಧಿಗಳ (Medicine) ಪ್ರಭಾವದಿಂದಲೂ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಇವು ಮಕ್ಕಳ ಬೆಳವಣಿಗೆಯ ಮೇಲೆ ಗಾಢ ಪರಿಣಾಮ ಬೀರುತ್ತವೆ. ಹಲವಾರು ಆರೋಗ್ಯ ಸಮಸ್ಯೆಗಳಿಂದಲೂ ಹುಡುಗಿಯರ ಹಾರ್ಮೋನ್ (Hormones) ಸ್ರವಿಕೆಯ ಮೇಲೆ ಪರಿಣಾಮ ಉಂಟಾಗಿ ಬೆಳವಣಿಗೆ ಕಡಿಮೆಯಾಗುತ್ತದೆ ಹಾಗೂ ನಿಧಾನವಾಗುತ್ತದೆ.