ಒಂದೇ ಕಡೆ ಗಂಟೆಗಟ್ಟಲೆ ಕುಳಿತು ಮಾಡುವ ಕೆಲಸ, ಮೊಬೈಲ್, ಟಿವಿ ವೀಕ್ಷಣೆಗೆ ನಾವು ನೀಡ್ತಿರುವ ಹೆಚ್ಚಿನ ಸಮಯ ನಮ್ಮ ಆರೋಗ್ಯ ಹಾಳು ಮಾಡ್ತಿದೆ. ಸಾಂಕ್ರಾಮಿಕವಲ್ಲದ ಅಪಾಯಕಾರಿ ರೋಗಕ್ಕೆ ದಾರಿ ಮಾಡ್ತಿದೆ. ದಿನ ದಿನಕ್ಕೂ ತೂಕವನ್ನು ಹೆಚ್ಚಿಸುತ್ತಿದೆ.
ನಮ್ಮನ್ನು ನಾವು ಫಿಟ್ ಎಂದುಕೊಂಡಿದ್ದೇವೆ. ಆದ್ರೆ ವಾಸ್ತವವೇ ಬೇರೆ ಇದೆ. ಭಾರತದಲ್ಲಿ ಪೋಷಕಾಂಶದ ಕೊರತೆ ಹಾಗೂ ಬೊಜ್ಜಿನ ಸಮಸ್ಯೆ ಮಿತಿ ಮೀರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ಭಾರತದ ಮೇಲೆ ನಡೆಸಿದ ಸಮೀಕ್ಷೆಯ ಫಲಿತಾಂಶ ಬೆಚ್ಚಿಬೀಳಿಸುವಂತಿದೆ.
ಭಾರತ (India) ದಲ್ಲಿ ಒಂದ್ಕಡೆ ಕೋಟಿಗಟ್ಟಲೆ ಮಕ್ಕಳು ಅಪೌಷ್ಟಿಕತೆಗೆ (Malnutrious) ಬಲಿಯಾಗುತ್ತಿದ್ದರೆ ಇನ್ನೊಂದೆಡೆ ಬೊಜ್ಜು (Obesity) ಇಲ್ಲಿನ ದೊಡ್ಡ ರೋಗವಾಗಿ ಹೊರಹೊಮ್ಮಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ದೈಹಿಕ ಚಟುವಟಿಕೆಯ ಕೊರತೆ ಮತ್ತು ಪೌಷ್ಟಿಕಾಂಶದ ಸಮಸ್ಯೆಯೇ ಈ ಅಧಿಕ ತೂಕ (Weight ) ಮತ್ತು ಬೊಜ್ಜಿಗೆ ಕಾರಣ ಎಂಬುದನ್ನು ಕೂಡ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.
undefined
ORAL CANCER : ಆರಂಭದಲ್ಲೇ ಪತ್ತೆಯಾದ್ರೆ ಗುಣಪಡಿಸಬಲ್ಲ ಬಾಯಿ ಕ್ಯಾನ್ಸರ್ ಲಕ್ಷಣವೇನು?
ವಿಶ್ವ ಆರೋಗ್ಯ ಸಂಸ್ಥೆ (World Health Orgnasiation) ಡೇಟಾದಲ್ಲಿ ಏನೆಲ್ಲ ಇದೆ?: ಜಾಗತಿಕವಾಗಿ ಅಧಿಕ ತೂಕ ಅಥವಾ ಬೊಜ್ಜಿನ ಸಮಸ್ಯೆ 1975ಕ್ಕೆ ಹೋಲಿಕೆ ಮಾಡಿದ್ರೆ ಈಗ ಮೂರು ಪಟ್ಟು ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯು ಕಳೆದ 15 ವರ್ಷಗಳಿಂದ ಇದ್ರ ಮೇಲೆ ಕೆಲಸ ಮಾಡ್ತಿದೆ. ಅದು ಭಾರತದ 15 ರಿಂದ 49 ವರ್ಷ ವಯಸ್ಸಿನ ಮಹಿಳೆಯರು ಮತ್ತು 15 ರಿಂದ 49 ವರ್ಷ ವಯಸ್ಸಿನ ಪುರುಷರು ಅಧಿಕ ತೂಕ ಅಥವಾ ಸ್ಥೂಲಕಾಯ ಸಮಸ್ಯೆ ಬಗ್ಗೆ ವಿಶ್ಲೇಷಣೆ ನಡೆಸಿದೆ. ಬಂದ ವರದಿ ಪ್ರಕಾರ, ಭಾರತದ ಮಹಿಳೆಯರ ಬೊಜ್ಜು ಶೇಕಡಾ 12.6 ರಿಂದ ಶೇಕಡಾ 24 ಕ್ಕೆ ಏರಿದೆ. ಇನ್ನು ಪುರುಷರಲ್ಲಿ ಶೇಕಡಾ 9.3 ರಿಂದ ಶೇಕಡಾ 22.9ರಷ್ಟು ಏರಿಕೆ ಕಂಡು ಬಂದಿದೆ. ಭಾರತದಲ್ಲಿ 20 ವರ್ಷ ಮೇಲ್ಪಟ್ಟ 4.4 ಕೋಟಿ ಮಹಿಳೆಯರು ಮತ್ತು 2.6 ಕೋಟಿ ಪುರುಷರು ಬೊಜ್ಜು ಹೊಂದಿರುವುದು ಕಂಡುಬಂದಿದೆ.
ವಿಶ್ವದ ಇತರ ದೇಶಗಳಿಗೆ ಹೋಲಿಕೆ ಮಾಡಿದ್ರೆ ಬೊಜ್ಜು ಹರಡುವ ವಿಷ್ಯದಲ್ಲಿ ಭಾರತದ ಮಹಿಳೆಯರು 197 ದೇಶಗಳಲ್ಲಿ 182 ನೇ ಸ್ಥಾನದಲ್ಲಿದ್ದಾರೆ. ಪುರುಷರು 180 ನೇ ಸ್ಥಾನದಲ್ಲಿದ್ದಾರೆ.
ನೀತಿ ಆಯೋಗ ಕೂಡ ಕೆಲ ದಿನಗಳ ಹಿಂದೆ ಸ್ಥೂಲಕಾಯದ ಬಗ್ಗೆ ವರದಿ ನೀಡಿತ್ತು. ಅದ್ರ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಸ್ಥೂಲಕಾಯ ಹೊಂದಿರುವ ರಾಜ್ಯದಲ್ಲಿ ಪಂಜಾಬ್ ಮುಂದಿದೆ. ಪಂಜಾಬ್‌ನಲ್ಲಿ ಸುಮಾರು ಶೇಕಡಾ 14.2ರಷ್ಟು ಮಹಿಳೆಯರು ಮತ್ತು ಶೇಕಡಾ 8.3 ರಷ್ಟು ಪುರುಷರು ಬೊಜ್ಜಿನ ಸಮಸ್ಯೆ ಹೊಂದಿದ್ದಾರೆ. ಕೇರಳವು ಭಾರತದ ಅತ್ಯಂತ ಆರೋಗ್ಯಕರ ರಾಜ್ಯವಾಗಿದೆ.
ಸ್ಥೂಲಕಾಯಕ್ಕೆ (Obesity) ಕಾರಣ : ಸ್ಥೂಲಕಾಯ ಕೊಬ್ಬಿನ ಅಸಹಜ ಅಥವಾ ಅತಿಯಾದ ಶೇಖರಣೆ. ಬೊಜ್ಜಿನಿಂದ ಅನೇಕ ಆರೋಗ್ಯ ಸಮಸ್ಯೆಗಳು (Health Issues) ನಮ್ಮನ್ನು ಕಾಡುತ್ತವೆ. 25ಕ್ಕಿಂತ ಹೆಚ್ಚಿನ ಬಾಡಿ ಮಾಸ್ ಇಂಡೆಕ್ಷನ್ (Mass Indection) ಅಧಿಕ ತೂಕ ಎಂದು ಪರಿಗಣಿಸಲಾಗುತ್ತದೆ. 30 ಕ್ಕಿಂತ ಹೆಚ್ಚು ಬಾಡಿ ಮಾಸ್ ಇಂಡೆಕ್ಷನ್ ಸ್ಥೂಲಕಾಯತೆ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಸ್ಥೂಲಕಾಯದಿಂದ ಬರುವ ಖಾಯಿಲೆಗಳ ಸಂಖ್ಯೆ ಹೆಚ್ಚಾಗ್ತಿದೆ. ಸ್ಥೂಲಕಾಯದಿಂದ ಹೃದ್ರೋಗ, ಪಾರ್ಶ್ವವಾಯು ಮತ್ತು ಮಧುಮೇಹದ ಸಮಸ್ಯೆ ಜನರನ್ನು ತೀವ್ರವಾಗಿ ಕಾಡುತ್ತದೆ. ಬೊಜ್ಜು ಹದಿಹರೆಯದವರಲ್ಲಿ ಟೈಪ್ 2 ಮಧುಮೇಹಕ್ಕೆ ಕಾರಣವಾಗುತ್ತಿದೆ.
ಮಕ್ಕಳ ಮೆಮೊರಿ ಕಂಪ್ಯೂಟರ್ ಗಿಂತ ವೇಗವಾಗಬೇಕಾದ್ರೆ… ಬೇಗ ಈ ಕೆಲ್ಸ ಮಾಡಿ!
ಸ್ಥೂಲಕಾಯ ಹೆಚ್ಚಾಗಲು ಪ್ರಮುಖ ಕಾರಣ, ಸಾಂಪ್ರದಾಯಿಕ ಆಹಾರ (Traditional Food) ಮತ್ತು ದೈಹಿಕ ಚಟುವಟಿಕೆಯಲ್ಲಿ (Physical Activities) ಇಳಿಕೆ. ಕೆಲಸದ ಒತ್ತಡದಿಂದಾಗಿ (Work Stress) ಮಹಿಳೆಯರು ದೈಹಿಕ ಚಟುವಟಿಕೆಗೆ ಹೆಚ್ಚು ಸಮಯ ನೀಡುತ್ತಿಲ್ಲ. ವ್ಯಾಯಾಮ (Exercise), ಯೋಗ (Yoga), ವಾಕಿಂಗ್ (Walking) ಸೇರಿದಂತೆ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆ ಆಗಿದೆ. ಅತಿ ಹೆಚ್ಚು ಸಮಯ ಒಂದೇ ಕಡೆ ಕುಳಿತು ಕೆಲಸ ಮಾಡುವುದು ಈ ಬೊಜ್ಜಿಗೆ ಕಾರಣವಾಗ್ತಿದೆ. ಅಲ್ಲದೆ ಸಂಸ್ಕರಿಸಿದ ಆಹಾರ ಕೂಡ ಮುಖ್ಯವಾಗ್ತಿದೆ.