ಮಾನಸಿಕವಾಗಿ ನೀವು ಸರಿಯಾದ ಆರೋಗ್ಯದಿಂದ ದಿನದಿನದ ಚಟುವಟಿಕೆಗಳನ್ನು ನಡೆಸುತ್ತಿದ್ದೀರಾ? ಅಥವಾ ಆಗಾಗ ಕಿರಿಕಿರಿ, ವ್ಯಗ್ರತೆ, ಡಿಪ್ರೆಶನ್‌ಗಳಿಗೆ ತುತ್ತಾಗುತ್ತಿದ್ದೀರಾ? ಹಾಗಿದ್ದರೆ ನಿಮಗೆ ಮಾನಸಿಕ ಶಾಂತಿ ಸಮಾಧಾನ ಕಾಪಾಡುವ ಈ ಕೆಲವು ಸಂಗತಿಗಳ ಅಗತ್ಯವಿದೆ.
ಏಳು ಭಾರತೀಯರಲ್ಲಿ ಒಬ್ಬರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಅಧ್ಯಯನವೊಂದು ಹೇಳಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಡೆಸಿದ ಅಧ್ಯಯನದ ಪ್ರಕಾರ 2017ರಲ್ಲಿ 19.73 ಕೋಟಿ ಮಂದಿ ಭಾರತದಲ್ಲಿ ಮಾನಸಿಕ ಅಸ್ವಸ್ಥತೆ ಹೊಂದಿದ್ದರಂತೆ. ಇದು 1990ರ ಅಂಕಿಸಂಖ್ಯೆ ದುಪ್ಪಟ್ಟು! ಭಾರತೀಯರು ಮೊದಲಿಗಿಂತ ಹೆಚ್ಚು ಕಾಲ ದುಡಿಯುತ್ತಿದ್ದಾರೆ; ಕಡಿಮೆ ನಿದ್ದೆ ಮಾಡುತ್ತಿದ್ದಾರೆ; ಕುಟುಂಬದ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿಲ್ಲ.
ಇದೆಲ್ಲದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಹೀಗಾಗಿ, ಮಾನಸಿಕ ಆರೋಗ್ಯ ಈ ವರ್ಷದ ಪ್ರಮುಖ ಕಾಳಜಿಗಳಲ್ಲಿ ಒಂದಾಗಿದೆ. ದೈನಂದಿನ ಬಿಡುವಿಲ್ಲದ ಚಟುವಟಿಕೆಮ ಬ್ಯುಸಿ ಕೆಲಸ ಇವೆಲ್ಲವುಗಳ ನಡುವೆಯೂ ನಮ್ಮ ಮೆಂಟಲ್ ಶಾಂತಿ ಸಮಾಧಾನ ಕಾಪಾಡಿಕೊಳ್ಳಲು ನಾವು ಕೆಲವು ಸರಕ್ರಮಗಳನ್ನು ತೆಗೆದುಕೊಳ್ಳಲೇಬೇಕು.
ಇದೇನಪ್ಪಾ! ಕನ್ನಡಿ ಮುಂದೆ ಊಟ ಮಾಡಿದ್ರೆ ಸಣ್ಣ ಆಗ್ತಾರಾ?
ಒಂದು ಗಂಟೆ ಮೊದಲೇ ನಿದ್ರಿಸಿ
undefined
ಸಾಕಷ್ಟು ನಿದ್ರೆ ಮಾಡುವುದು ಮಾನಸಿಕ ಆರೋಗ್ಯವನ್ನು ಕಾಪಾಡುವ ಮೊದಲ ಅಂಶ. ನಿದ್ರೆ ಎಂದರೆ ಮೆದುಳಿನ ಜೀವಕೋಶಗಳು ರಿಚಾರ್ಜ್ ಆಗುವ ಸಮಯ. ಆಗ ಮೆದುಳಿನ ಜೀವಕೋಶಗಳ ಚಟುವಟಿಕೆ ನಿಧಾನವಾಗುತ್ತದೆ; ಅವೂ ವಿಶ್ರಾಂತಿ ಪಡೆಯುತ್ತವೆ. ಆದರೆ ಅಪ್ರಜ್ಞಾವಸ್ಥೆಯಲ್ಲಿ ಕ್ರಿಯೆ ನಡೆಯುತ್ತಲೇ ಇರುತ್ತದೆ. ಅದು ನಿಮ್ಮ ದಿನನಿತ್ಯದ ಚಟುವಟಿಕೆಗಳಿಗೆ ಅಗತ್ಯವಾದ ಕಲ್ಪನೆ, ಚಿಂತನೆಯ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ನಿದ್ರೆ ಕಡಿಮೆಯಾದಷ್ಟೂ ಮೆದುಳು ನಿಷ್ಕ್ರಿಯವಾಗುತ್ತದೆ. ನಿದ್ರೆ ಹೆಚ್ಚಾದಂತೆ, ಮೆದುಳಿನ ಜೀವಕೋಶಗಳು ಇನ್ನಷ್ಟು ಹುರುಪು ಪಡೆಯುತ್ತವೆ.
ಧ್ಯಾನದ ಅಭ್ಯಾಸದಿಂದ ಶಾಂತಿ
ಸರಳವಾದ ಧ್ಯಾನದ ಕೆಲವು ತಂತ್ರಗಳನ್ನು ಕಲಿತುಕೊಂಡು, ಪ್ರತಿದಿನ ಅದರಲ್ಲಿ ಅರ್ಧ ಗಂಟೆ ತೊಡಗಿಕೊಳ್ಳುವುದು ತುಂಬಾ ಸಹಾಯಕಾರಿ. ಆತಂಕ ಮತ್ತು ಒತ್ತಡದ ಕಾಯಿಲೆಗಳನ್ನು ಇದು ಕಡಿಮೆ ಮಾಡುತ್ತದೆ ಎಂದು ಅಮೆರಿಕದ ಮಸಾಚುಸೆಟ್ಸ್ ಜನರಲ್ ಹಾಸ್ಪಿಟಲ್ ಅಧ್ಯಯನದಿಂದ ಕಂಡುಕೊಂಡಿದೆ. ಮಾರಕ ಕಾಯಿಲೆಗಳಿಂದ ಬಳಲಿದವರು, ಆಪರೇಶನ್‌ಗೆ ಒಳಗಾದವರು ಕೂಡ ಧ್ಯಾನದ ಮೂಲಕ ಮನಸ್ಸನ್ನು ಹೀಲ್ ಮಾಡಿಕೊಂಡು ಉದಾಹರಣೆಗಳು ಕಂಡುಬಂದಿವೆ.
ಶುಗರ್ ಕಾಯಿಲೆ ಇದ್ದರೆ ಎಚ್ಚರ: ದಿನಕ್ಕೆರಡು ಬಾಳೆಹಣ್ಣು ತಿಂದರೆ ಅಪತ್ತು ತಪ್ಪಿದ್ದಲ್ಲ!
ಬರೆದು ಹಗುರಾಗಿ
ರೋಚೆಸ್ಟರ್ ಮೆಡಿಕಲ್ ಸೆಂಟರ್ ಯೂನಿವರ್ಸಿಟಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ನಿಮ್ಮ ಮನಸ್ಸಿನ ಭಾವನೆಗಳನ್ನು ದಿನವೂ ಬರೆದಿಡುವುದು ಹಗುರಾಗುವ ಒಂದು ಕ್ರಮದಂತೆ ಕೆಲಸ ಮಾಡುತ್ತದೆ. ದಿನಾ ಒಂದ ಉಡೈರಿ ಮೇಂಟೇನ್ ಮಾಡಬಹುದು, ಅಥವಾ ಅದು ಲೇಖನ, ಬರಹದ ರೂಪದಲ್ಲಿರಬಹುದು. ಅಥವಾ ತನಗೆ ತಾನೇ ಹೇಳಿಕೊಂಡು ಸ್ವಗತದ ರೂಪದಲ್ಲೂ ಇರಬಹುದು. ಅದೇನೇ ಇದ್ದರೂ ನಿಮ್ಮ ಮನಸ್ಸಿನ ಭಾವನೆಗಳನ್ನು ನಿಮಗೇ ಅದು ಸ್ಪಷ್ಟಪಡಿಸುತ್ತದೆ.
ವಾಕಿಂಗ್‌ನ ಉಪಾಯ
ವಾಕಿಂಗ್ ಕೂಡ ಮಾನಸಿಕ ಆರೋಗ್ಯ ಸಮತೋಲನದಲ್ಲಿಡುವ ಒಂದು ಉಪಾಯ ಎಂದರೆ ನಿಮಗೆ ಅಚ್ಚರಿ ಆಗಬಹುದು. ಒಂದು ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯಂತೆ, ದಿನಕ್ಕೆ ಅರ್ಧ ಗಂಟೆ ಕಾಲ ವಾಕಿಂಗ್ ಮಾಡುವುದರಿಂದ, ಚೆನ್ನಾಗಿ ನಿದ್ರೆ ಬರುತ್ತದೆ. ನಿದ್ರೆ ಮನಸ್ಸಿನ ಆರೋಗ್ಯಕ್ಕೆ ಸಹಕಾರಿ, ವಾಕಿಂಗ್ ನಿಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ದೇಹವನ್ನು ಚುರುಕಾಗಿಡುತ್ತದೆ; ಒತ್ತಡವನ್ನು ಇಳಿಸುತ್ತದೆ.
ಸ್ಕ್ರೀನ್ ಟೈಮ್ ಮಿತಿಯಲ್ಲಿಡಿ
ಜರ್ನಲ್ ಆಫ್ ಸೋಶಿಯಲ್ ಆ್ಯಡ್ ಕ್ಲಿನಿಕಲ್ ಸೈಕಾಲಜಿ ಪ್ರಕಟಿಸಿದ ಪ್ರಕಾರ, ಮೊಬೈಲ್ ಅಥವಾ ಕಂಪ್ಯೂಟೆರ್ ಸಮಯವನ್ನು ಮಿತಿಗೊಳಿಸುವುದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಪೂರಕ. ಈ ಅಧ್ಯಯನದಲ್ಲಿ ಅದು 143 ಮಂದಿಯನ್ನು ಪ್ರಯೋಗಕ್ಕೊಳಪಡಿಸಿತು. ಪ್ರತಿದಿನ ಗಂಟೆಗಟ್ಟಲೆ ಸ್ಕ್ರೀನ್ ನೋಡುತ್ತಿದ್ದ ಯುವಕರ ಸೋಶಿಯಲ್ ತಾಣಗಳ ಓಡಾಟವನ್ನು ವಾರಕ್ಕೆ ಒಂದು ಗಂಟೆಗೆ ಇಳಿಸಿತು, ಇದರಿಂದ ಸಿಕ್ಕಿದ ಧನಾತ್ಮಕ ಫಲಿತಾಂಶ ಅವರನ್ನೇ ಚಕಿತಗೊಳಿಸಿದೆ. ಅಂದರೆ ಈ ಯುವಜನ ಮೊದಲಿನ ಒಂಟಿತನ, ಖಿನ್ನತೆಯನ್ನು ಈಗ ಅನುಭವಿಸುತ್ತಿಲ್ಲವಂತೆ. ಇದು ವೈದ್ಯರಿಗೂ ಖುಷಿ ಹಾಗೂ ಅಚ್ಚರಿ ನೀಡಿದ ಪ್ರಯೋಗ.