ಪದೇ ಪದೇ ಗರ್ಭಪಾತವಾಗೋದರಿಂದ ಮಹಿಳೆ ಮೇಲೆ ಏನು ಪರಿಣಾಮ ಬೀರುತ್ತೆ?

First Published | Feb 15, 2023, 5:06 PM IST

ಗರ್ಭಿಣಿಯಾಗೋದು ಪ್ರತಿಯೊಬ್ಬ ಮಹಿಳೆಯ ಕನಸಾಗಿರುತ್ತೆ. ಕೆಲವು ಮಹಿಳೆಯರು ಬೇಗ ಗರ್ಭಧರಿಸುತ್ತಾರೆ, ಆದರೆ ಇನ್ನೂ ಕೆಲವರು ಪದೇ ಪದೇ ಗರ್ಭಪಾತದ ಸಮಸ್ಯೆಗೆ ಒಳಗಾಗುತ್ತಾರೆ ಮತ್ತು ಈ ಕಾರಣದಿಂದಾಗಿ, ಅವರ ಆರೋಗ್ಯವು ಹದಗೆಡುತ್ತಲೇ ಇರುತ್ತೆ. ಯಾಕೆ ಪದೇ ಪದೇ ಹೀಗಾಗುತ್ತದೆ? ಇದರ ಬಗ್ಗೆ ಹೆಚ್ಚು ತಿಳಿಯಲು ಮುಂದೆ ಓದಿ. 

ಕೆಲವು ಮಹಿಳೆಯರಿಗೆ ಮೊದಲ ಪ್ರೆಗ್ನೆನ್ಸಿಯಲ್ಲಿ(Pregnancy) ಗರ್ಭಪಾತ ಉಂಟಾಗುತ್ತೆ. ಆದರೆ ಆಗಾಗ್ಗೆ ಗರ್ಭಪಾತ ಉಂಟಾಗುವುದು ಕುಟುಂಬ ಮತ್ತು ದಂಪತಿಗೆ ಸಾಕಷ್ಟು ಆಘಾತಕಾರಿ. ಈ ಕಾರಣದಿಂದಾಗಿ, ದಂಪತಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಎರಡರ ಮೇಲೂ ಕೆಟ್ಟ ಪರಿಣಾಮ ಉಂಟಾಗುತ್ತೆ. ಆದರೆ ಇದು ಮಹಿಳೆಯ ದೇಹ ಮತ್ತು ಮಾನಸಿಕ ಸ್ಥಿತಿಯ ಮೇಲೆ ಯಾವ ಪರಿಣಾಮ ಬೀರುತ್ತೆ ಗೊತ್ತಾ?

ಕೆಲವೊಮ್ಮೆ ಗರ್ಭಪಾತವು(Miscarriage) ಆನುವಂಶಿಕ ಅಥವಾ ಕ್ರೋಮೋಸೋಮಲ್ ಅಸಹಜತೆಗಳಿಂದ ಉಂಟಾಗುತ್ತೆ, ಆದರೆ ಕೆಲವು ಸಂದರ್ಭಗಳಲ್ಲಿ ಇದು ತಪ್ಪು ಜೀವನಶೈಲಿ ಅಭ್ಯಾಸಗಳಿಂದ ಉಂಟಾಗುತ್ತೆ. ಕಾರಣ ಏನೇ ಇರಲಿ, ಅನೇಕ ಸಲ ಗರ್ಭಪಾತ ಸಂಭವಿಸಿದಾಗ, ಮಹಿಳೆಯ ದೇಹ ಸಾಕಷ್ಟು ಬಳಲಬೇಕಾಗುತ್ತೆ . ಇಲ್ಲಿ, ರಿಪೀಟೆಡ್ ಗರ್ಭಪಾತಗಳ ಪರಿಣಾಮದ ಬಗ್ಗೆ ತಿಳಿಯೋಣ.

Latest Videos


ರಿಪೀಟೆಡ್ ಗರ್ಭಪಾತದ  ಅರ್ಥವೇನು?
ಹೆಲ್ತ್ ಅಂಡ್ ಕ್ವಾಲಿಟಿ ಆಫ್ ಲೈಫ್ ಔಟ್ಕಮ್ಸ್ ಎಂಬ ಶೀರ್ಷಿಕೆಯ ವರದಿಯ ಪ್ರಕಾರ, ಕೊನೆಯ ಋತುಚಕ್ರದ(Period) ಅವಧಿಯಿಂದ 20 ವಾರಗಳ ಮೊದಲು ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಗರ್ಭಪಾತವಾದಾಗ, ಅದನ್ನು ರಿಪೀಟೆಡ್ ಗರ್ಭಪಾತ ಅಥವಾ ಪುನರಾವರ್ತಿತ ಗರ್ಭಪಾತ ಎಂದು ಕರೆಯಲಾಗುತ್ತೆ. 

ಸುಮಾರು 15% ಪ್ರಕರಣಗಳಲ್ಲಿ, ಪುನರಾವರ್ತಿತ ಗರ್ಭಪಾತದ ಸಮಸ್ಯೆ ಕಂಡುಬಂದಿದೆ. ರಿಪೀಟೆಡ್ ಗರ್ಭಪಾತಗಳಿಗೆ ರೋಗನಿರೋಧಕ(Immunity), ಆನುವಂಶಿಕ ಮತ್ತು ದೈಹಿಕ ಅಸಹಜತೆ, ಅಂತಃಸ್ರಾವಕ ಅಸ್ವಸ್ಥತೆ, ಸಾಂಕ್ರಾಮಿಕ ಮತ್ತು ಪರಿಸರೀಯ ಅಂಶಗಳಂತಹ ಅನೇಕ ಕಾರಣಗಳಿವೆ.

ಪುನರಾವರ್ತಿತ ಗರ್ಭಪಾತಗಳ 60% ಪ್ರಕರಣಗಳಲ್ಲಿ, ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಗರ್ಭಪಾತವು ಮಹಿಳೆಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಮತ್ತು ಗರ್ಭಪಾತದ ಬಳಿಕ ಮಹಿಳೆ ಆತಂಕ, ಮಾನಸಿಕ ಅಸ್ವಸ್ಥತೆಗಳಿಂದ(Mental health) ಬಳಲುತ್ತಾರೆ ಎಂದು ಅಧ್ಯಯನಗಳು ತೋರಿಸುತ್ತವೆ.
 

ಗರ್ಭಪಾತಕ್ಕೆ ಸಾಮಾನ್ಯ ಕಾರಣವೇನು?
ಅಮೇರಿಕದ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ (ಎಸಿಒಜಿ) ಪ್ರಕಾರ, ಫರ್ಟಿಲಿಟಿ ಸಮಯದಲ್ಲಿ ಭ್ರೂಣವು ಅಸಹಜ ಸಂಖ್ಯೆಯ ಕ್ರೋಮೋಸೋಮ್‌ಗಳನ್ನು (Chromosome) ಸ್ವೀಕರಿಸಿದಾಗ ಸುಮಾರು ಅರ್ಧದಷ್ಟು ಗರ್ಭಪಾತ ಸಂಭವಿಸುತ್ತವೆ. ಇದು ಯಾವುದೇ ವೈದ್ಯಕೀಯ ಕಾರಣಕ್ಕಾಗಿ ಸಂಭವಿಸೋದಿಲ್ಲ, ಆದರೆ ವಯಸ್ಸು ಹೆಚ್ಚಾದಂತೆ ಇದರ ಅಪಾಯ ಸಂಭವಿಸುತ್ತೆ.

ಏನು ಮಾಡಬೇಕು?
ಎನ್ಸಿಬಿಐ ಪ್ರಕಾರ, ಗರ್ಭಾಶಯದ ಅಸಹಜತೆ, ಎಪಿಎಸ್, ಅಂತಃಸ್ರಾವಕ ರೋಗವು ಪುನರಾವರ್ತಿತ ಗರ್ಭಪಾತಗಳಿಗೆ ಕಾರಣವಾಗಬಹುದು. ಫರ್ಟಿಲಿಟಿ (Fertility) ಮತ್ತು ಆರೋಗ್ಯ ಹೆಚ್ಚಿಸಲು ಕೆಲವು ಜೀವನಶೈಲಿ ಬದಲಾವಣೆಗಳನ್ನು ಮಾಡಬೇಕು. ರಿಪೀಟೆಡ್ ಗರ್ಭಪಾತದ ಸಂದರ್ಭದಲ್ಲಿ, ಮಹಿಳೆಯರು ಐವಿಎಫ್ ಸಹಾಯ ತೆಗೆದುಕೊಳ್ಳಬಹುದು. ಸ್ಪಷ್ಟ ಕಾರಣ ತಿಳಿದರೆ, ವೈದ್ಯರು ಅದಕ್ಕೆ ಚಿಕಿತ್ಸೆ ನೀಡಬಹುದು ಮತ್ತು ಈ ಸಮಸ್ಯೆಯನ್ನು ತೊಡೆದುಹಾಕಬಹುದು ಎಂದು ಎಸಿಒಜಿ ಹೇಳುತ್ತೆ.

ನೀವು ಆಗಾಗ್ಗೆ ಗರ್ಭಪಾತ ಹೊಂದುತ್ತಿದ್ದರೆ ಏನು ಮಾಡಬೇಕು
ಎಸಿಒಜಿ ಪ್ರಕಾರ, ಗರ್ಭಪಾತದ ಬಳಿಕ ತಾಯಿ (Mother) ದುಃಖ ಮತ್ತು ಆತಂಕ ಅನುಭವಿಸುತ್ತಾರೆ. ಕೆಲವೇ ದಿನಗಳಲ್ಲಿ, ದೇಹವು ಗರ್ಭಪಾತದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತೆ, ಆದರೆ ಮಾನಸಿಕ ಆಘಾತದಿಂದ ಹೊರಬರಲು ಸಮಯ ತೆಗೆದುಕೊಳ್ಳುತ್ತೆ. 
 

ಖಿನ್ನತೆ (Depression) ಮತ್ತು ಆತಂಕದ ಸಂದರ್ಭದಲ್ಲಿ, ನೀವು ವೃತ್ತಿಪರರ ಸಹಾಯ ತೆಗೆದುಕೊಳ್ಳಬಹುದು. ನಿಮ್ಮ ಮೆಡಿಕಲ್ ಹಿಸ್ಟ್ರಿ ಮತ್ತು ಹಿಂದಿನ ಗರ್ಭಧಾರಣೆಯ ಬಗ್ಗೆ ವೈದ್ಯರು ಕೇಳುತ್ತಾರೆ. ಫಿಸಿಕಲ್ ಟೆಸ್ಟ್ ನಂತರ, ಇಮ್ಮ್ಯೂನ್ ಸಿಸ್ಟಮ್ ಪರೀಕ್ಷಿಸಲು ರಕ್ತ ಪರೀಕ್ಷೆ ಮಾಡಬಹುದು. ಗರ್ಭಾಶಯದ ಸಮಸ್ಯೆಗಳಿಗೆ ಇಮೇಜಿಂಗ್ ಟೆಸ್ಟ್ಸ್ ಮಾಡಲಾಗುತ್ತೆ. ಸರಿಯಾದ ಸಮಯದಲ್ಲಿ ಸರಿಯಾದ ಡಾಕ್ಟರ್ ಬಳಿ ಹೋದರೆ ನಿಮ್ಮ ಸಮಸ್ಯೆ ನಿವಾರಣೆಯಾಗಿ ನೀವು ತಾಯಿಯಾಗಬಹುದು.  

click me!