ಋತುಚಕ್ರಕ್ಕೆ (periods) ಒಂದು ವಾರ ಮೊದಲು, ಹುಡುಗಿಯರಿಗೆ ಸೆಳೆತ, ಆಯಾಸ ಮತ್ತು ಕಿರಿಕಿರಿಯ ಸಮಸ್ಯೆ ಆಗೋದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.ಹೀಗಿರೋವಾಗ ಸಮಯಕ್ಕೆ ಸರಿಯಾಗಿ ಋತುಚಕ್ರ ಆಗದೇ ಇದ್ದಾಗ ಮಹಿಳೆಯರ ಚಿಂತೆ ಮತ್ತಷ್ಟು ಹೆಚ್ಚಾಗುತ್ತದೆ. ನಿಮಗೆ ಗೊತ್ತಾ? ದೀರ್ಘಕಾಲದವರೆಗೆ ಜಿಮ್ ನಲ್ಲಿ ವ್ಯಾಯಾಮ ಮಾಡುವ ಮತ್ತು ಫಿಟ್ನೆಸ್ ಫ್ರೀಕ್ ಮಹಿಳೆಯರಿಗೆ ಇರೆಗ್ಯುಲರ್ ಪಿರಿಯಡ್ಸ್ (irregular periods) ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ವ್ಯಾಯಾಮದಿಂದಾಗಿ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಗಳು ಈ ಸಮಸ್ಯೆಗೆ ಕಾರಣವಾಗಬಹುದು.
ಫಿಟ್ನೆಸ್ ರುಟೀನ್ ಋತುಚಕ್ರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಯುಎಸ್ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ಅಂಡ್ ಹ್ಯೂಮನ್ ಸರ್ವೀಸಸ್ ಪ್ರಕಾರ, ಹೆಚ್ಚು ವ್ಯಾಯಾಮ (heavy workout) ಮಾಡುವುದರಿಂದ ಅನಿಯಮಿತ ಋತುಚಕ್ರಕ್ಕೆ ಕಾರಣವಾಗಬಹುದು ಅಥವಾ ಪಿರಿಯಡ್ಸ್ ಆಗದೇ ಇರಬಹುದು. ಪ್ರತಿದಿನ ವ್ಯಾಯಾಮ ಮಾಡುವ ಮಹಿಳೆಯರು, ವಿಶೇಷವಾಗಿ ಕ್ರೀಡಾಪಟುಗಳು ಅನಿಯಮಿತ ಅಥವಾ ಮಿಸ್ಡ್ ಪಿರಿಯಡ್ಸ್ ಬಗ್ಗೆ ದೂರು ನೀಡಲು ಪ್ರಾರಂಭಿಸುತ್ತಾರೆ. ವಾಸ್ತವವಾಗಿ, ದೀರ್ಘಕಾಲದವರೆಗೆ ವ್ಯಾಯಾಮ ಮಾಡದಿರುವುದು ಮತ್ತು ನಂತರ ಇದ್ದಕ್ಕಿದ್ದಂತೆ ಫಿಟ್ನೆಸ್ ದಿನಚರಿಯನ್ನು ಅನುಸರಿಸುವುದು ಅನಿಯಮಿತ ಋತುಚಕ್ರದ ಸಮಸ್ಯೆಯನ್ನು (periods problem) ಹೆಚ್ಚಿಸುತ್ತದೆ.
ತೀವ್ರವಾದ ಅಥವಾ ಅತಿಯಾದ ವ್ಯಾಯಾಮವು (exercise) ಕೆಲವೊಮ್ಮೆ ಕೆಲವು ಮಹಿಳೆಯರಲ್ಲಿ ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಮಸ್ಯೆಯನ್ನು ಅಮೆನೋರಿಯಾ ಎಂದೂ ಕರೆಯಲಾಗುತ್ತದೆ. ಇದು ಅನಿಯಮಿತ ಋತುಚಕ್ರಕ್ಕೆ ಕಾರಣವಾಗಿದೆ.
ಯಾವ ಹುಡುಗಿಯರು ಪಿರಿಯಡ್ಸ್ ಸಮಸ್ಯೆ ಅನುಭವಿಸುವ ಸಾಧ್ಯತೆ ಹೆಚ್ಚಿರುತ್ತೆ?
ಕಡಿಮೆ ಬಾಡಿ ಫ್ಯಾಟ್ ಪರ್ಸೆಂಟೇಜ್
ತಮ್ಮ ದೇಹದಲ್ಲಿ ಕಡಿಮೆ ದೇಹದ ಕೊಬ್ಬು (low body fat percentage) ಹೊಂದಿರುವ ಹುಡುಗಿಯರು ಅನಿಯಮಿತ ಋತುಚಕ್ರದ ಸಮಸ್ಯೆ ಹೊಂದುವ ಸಾಧ್ಯತೆ ಹೆಚ್ಚಿದೆ. ವಿಶೇಷವಾಗಿ ಹೆವಿ ಟ್ರೈನಿಂಗ್ ಮಾಡುವ ಕ್ರೀಡಾಪಟುಗಳು ಅಥವಾ ಮಹಿಳೆಯರು ಈ ಸಮಸ್ಯೆಯನ್ನು ಎದುರಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ದೇಹಕ್ಕೆ ಸರಿಯಾದ ಪೋಷಣೆಯ ಅಗತ್ಯವಿದೆ.
ಶಕ್ತಿಯ ಸಮತೋಲನ
ಸಾಕಷ್ಟು ಕ್ಯಾಲೊರಿ ಸೇವನೆಯು ಮುಟ್ಟಿನ ಮೇಲೆ ಪರಿಣಾಮ (effect on periods) ಬೀರುತ್ತದೆ. ಹೆಚ್ಚಿನ ಶಕ್ತಿ ವ್ಯಯಿಸಲು ನಿಯಮಿತವಾಗಿ ಆರೋಗ್ಯಕರ ಆಹಾರ ತೆಗೆದುಕೊಳ್ಳುವುದು ಬಹಳ ಮುಖ್ಯ. ನೀವು ಸರಿಯಾದ ಪ್ರಮಾಣದ ಆಹಾರ ಸೇವಿಸದಿದ್ದರೆ ದೇಹದಲ್ಲಿನ ಶಕ್ತಿಯ ಸಮತೋಲನ ಕಾಯ್ದುಕೊಳ್ಳುವುದಿಲ್ಲ. ಇದು ಅನಿಯಮಿತ ಋತುಚಕ್ರಕ್ಕೆ ಕಾರಣವಾಗುತ್ತದೆ.
ಹೆಚ್ಚಿದ ದೈಹಿಕ ಒತ್ತಡದ ಮಟ್ಟ
ಹೆಚ್ಚಿನ ತೀವ್ರತೆಯ ವ್ಯಾಯಾಮವನ್ನು ನಿರಂತರವಾಗಿ ಮಾಡಿದ್ರೆ, ದೇಹದಲ್ಲಿ ತೀವ್ರವಾದ ದೈಹಿಕ ಒತ್ತಡ ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ಹಾರ್ಮೋನುಗಳ ಅಸಮತೋಲನಕ್ಕೆ (hormonal imbalance) ಮುಖ್ಯ ಕಾರಣವಾಗುತ್ತದೆ. ಇದು ಪಿರಿಯಡ್ಸ್ ಸಮಸ್ಯೆಯನ್ನು ಉಂಟು ಮಾಡುತ್ತೆ. ವಾಸ್ತವವಾಗಿ, ದೈಹಿಕ ಒತ್ತಡವು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ವ್ಯಾಯಾಮದ ವಿಧ ಮತ್ತು ಅವಧಿ
ವ್ಯಾಯಾಮದ ವಿಧ ಮತ್ತು ಅವಧಿ ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಕಡಿಮೆ ಮತ್ತು ಮಧ್ಯಮ ತೀವ್ರತೆಯ ವ್ಯಾಯಾಮಗಳಿಗಿಂತ ದೀರ್ಘಕಾಲೀನ ಮತ್ತು ಹೆಚ್ಚಿನ ತೀವ್ರತೆಯ ವ್ಯಾಯಾಮಗಳು ದೇಹದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಇದು ದೇಹದಲ್ಲಿ ದೌರ್ಬಲ್ಯವನ್ನು ಹೆಚ್ಚಿಸುತ್ತದೆ. ಇದು ಋತುಚಕ್ರದ ವಿಳಂಬಕ್ಕೆ (late periods) ಅಥವಾ ಮಿಸ್ ಆಗೋದಕ್ಕೆ ಕಾರಣವೆಂದು ತಿಳಿದು ಬಂದಿದೆ.
ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ
ಪಿರಿಯಡ್ಸ್ ನಲ್ಲಿ ಪದೇ ಪದೇ ತೊಂದರೆ ಅನುಭವಿಸುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಯಾಕೆಂದರೆ ಇದರಿಂದ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಹಾಗಾಗಿ ಅಂತಹ ಪರಿಸ್ಥಿತಿಯಲ್ಲಿ, ವೈದ್ಯರ ಸಲಹೆ ಬಹಳ ಮುಖ್ಯ.