ಪಿರಿಯಡ್ಸ್ ಟೈಮಲ್ಲಿ ದೇವರ ಕೋಣೆಗೆ ಮಹಿಳೆಯರೇಕೆ ಹೋಗಬಾರದು?
ಪ್ರತಿ ತಿಂಗಳು ಬರುವ ಮುಟ್ಟಿನ ನೋವಿನ ಜೊತೆ ಈಗಿನ ಮಹಿಳೆಯರು ಮನೆಯ ಎಲ್ಲ ಕೆಲಸ ನಿಭಾಯಿಸ್ತಾರೆ. ವಿಶ್ರಾಂತಿ ಅಗತ್ಯವಿದ್ರೂ ಅದನ್ನು ಮೂಢನಂಬಿಕೆ ಎನ್ನುವವರೇ ಹೆಚ್ಚು. ಆದ್ರೆ ಅದ್ರ ಅಗತ್ಯ ಆಗ ಏಕಿತ್ತು? ಯಾಕೆ ನಿರ್ಬಂದನೆ ನಿಯಮ ಜಾರಿಗೆ ಬಂದಿತ್ತು ಅನ್ನೋದನ್ನು ಸದ್ಗುರು ಹೇಳಿದ್ದಾರೆ.
ಭಾರತದಲ್ಲಿ ಪಿಡಿಯಡ್ಸ್ ಬಗ್ಗೆ ಈಗ್ಲೂ ಸಾಕಷ್ಟು ಗೊಂದಲಗಳಿವೆ. ಮಕ್ಕಳಿಗೆ ಅದ್ರ ಬಗ್ಗೆ ಸರಿಯಾದ ಜ್ಞಾನವಿಲ್ಲ. ಇನ್ನೊಂದು ಕಡೆ ಪಿರಿಯಡ್ಸ್ ಬಗ್ಗೆ ಬಹಿರಂಗವಾಗಿ ಮಾತನಾಡೋರು ಕಡಿಮೆ. ಪಿರಿಯಡ್ಸ್ ಸಮಯದಲ್ಲಿ ಹಿಂದಿನವರು ಪಾಲಿಸಿಕೊಂಡು ಬಂದ ನಿಯಮಗಳನ್ನು ಈಗ್ಲೂ ಪಾಲಿಸಬೇಕಾ ಇಲ್ಲವಾ ಎಂಬ ಪ್ರಶ್ನೆಗೆ ಸರಿಯಾದ ಉತ್ತರವಿಲ್ಲ.
ಹಿಂದೆ ಮುಟ್ಟಿನ ಸಮಯದಲ್ಲಿ ಮಹಿಳೆ ಮೂರರಿಂದ ನಾಲ್ಕು ದಿನ ಮನೆಯಿಂದ ಹೊರಗೆ ಇರಬೇಕಾಗಿತ್ತು. ಮನೆಯ ಯಾವುದೇ ಕೆಲಸವನ್ನು ಆಕೆ ಮಾಡ್ತಿರಲಿಲ್ಲ. ದೇವಸ್ಥಾನ, ದೇವರ ಪೂಜೆಗೂ ಬ್ರೇಕ್ ಇರ್ತಾ ಇತ್ತು. ಒಂದೊಂದು ಊರಿನಲ್ಲಿ ಮುಟ್ಟಿ (periods) ಗೆ ಸಂಬಂಧಿಸಿದಂತೆ ಬೇರೆ ಬೇರೆ ನಿಯಮಗಳಿದ್ದವು. ಕೆಲವು ಕಡೆ ಮಹಿಳೆಯರು ವಿಪರೀತ ಹಿಂಸೆ ಅನುಭವಿಸಿದ್ರೆ ಮತ್ತೆ ಕೆಲವು ಕಡೆ ಮಹಿಳೆಯರಿಗೆ ಹಿತವೆನ್ನಿಸುವ ಪದ್ಧತಿ ಜಾರಿಯಲ್ಲಿತ್ತು. ಈಗ ಕಾಲ ಬದಲಾಗಿದೆ. ಮುಟ್ಟಿನ ಸಮಯದಲ್ಲಿ ಅನುಸರಿಸುವ ನಿಯಮ, ಪದ್ಧತಿಗಳು ಮೂಡ ನಂಬಿಕೆ ಎನ್ನುವ ಕಾರಣಕ್ಕೆ ಅನೇಕರು ಅದನ್ನು ತೊರೆದಿದ್ದಾರೆ. ಪಿರಿಯಡ್ಸ್ ಸಮಯದಲ್ಲಿ ಮನೆಯ ಎಲ್ಲ ಕೆಲಸವನ್ನು ಮಾಡುವ ಮಹಿಳೆಯರು ದೇವಸ್ಥಾನ (temple) ಕ್ಕೆ ಹೋಗಲು ಸಿದ್ಧವಿದ್ದಾರೆ. ಮುಟ್ಟಿನ ಈ ನಿಯಮ ಎಷ್ಟು ಸರಿ ಹಾಗೂ ಹಿಂದಿನವರು ಮಾಡಿದ್ದ ನಿಯಮದ ಹಿಂದಿರುವ ಕಾರಣವೇನು ಎಂಬುದನ್ನು ಸದ್ಗುರು ಹೇಳಿದ್ದಾರೆ.
ಮುಟ್ಟಿನ ಸಮಯದಲ್ಲಿ ನಿರ್ಬಂದನೆ ಹಿಂದಿನ ಕಾರಣ : ಸದ್ಗುರು (Sadhguru) ಮುಟ್ಟು ನೈಸರ್ಗಿಕ. ಅದನ್ನು ಅನೈರ್ಮಲ್ಯ ಎಂದು ಒಪ್ಪಿಕೊಳ್ಳುವುದಿಲ್ಲ. ಅದನ್ನು ಅನೈರ್ಮಲ್ಯ, ಅಶುಭವೆಂದು ಭಾವಿಸಿದ್ದರೆ ನಮ್ಮ ಜನನವಾಗ್ತಿರಲಿಲ್ಲ ಎನ್ನುವ ಸದ್ಗುರು, ಪಿರಿಯಡ್ಸ್ ಸಮಯದಲ್ಲಿ ಆ ಕಾಲದಲ್ಲಿ ಮಹಿಳೆಯರಿಗೆ ಹೇರಿದ್ದ ನಿರ್ಬಂದನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ವೀಕ್ನೆಸ್ ಇದ್ದರೂ ಗಂಡು ಹೆಣ್ಣಿಗೆ ಸುಖ ಕೊಡೋದು ಹೇಗೆಂದು ವಾತ್ಸಾಯನ ಹೇಳಿದ್ದಾನೆ!
ಸದ್ಗುರು ಪ್ರಕಾರ ಮುಟ್ಟಿನ ಸಮಯದಲ್ಲಿ ಹೇರಿದ್ದ ನಿರ್ಬಂದನೆ ವಿಶ್ರಾಂತಿ ಜೊತೆ ಥಳುಕು ಹಾಕಿಕೊಂಡಿದೆ. ಮಹಿಳೆಗೆ ರಜೆ ಎನ್ನುವುದಿಲ್ಲ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಮಕ್ಕಳಿಗೆ ಶಾಲೆ, ಪುರುಷರಿಗೆ ಕಚೇರಿ ಕೆಲಸಕ್ಕೆ ರಜೆ ಇದ್ರೂ ಮಹಿಳೆ ಕೆಲಸ ಮಾಡ್ತಿರುತ್ತಾಳೆ. ಈಗಿನ ಕಾಲದಲ್ಲಿ ಪುರುಷ ಸಣ್ಣಪುಟ್ಟ ಮನೆ ಕೆಲಸ ಮಾಡ್ತಾನೆ ಅಂದ್ರೂ ಹಿಂದೆ ಹಾಗಿರಲಿಲ್ಲ. ದೊಡ್ಡ ಸಂಸಾರದಲ್ಲಿ ಹೆಚ್ಚಿಗೆ ಮಹಿಳೆಯರು ಇರ್ತಾ ಇದ್ದರು. ಒಂದಿಷ್ಟು ಮಹಿಳೆಯರು ಅಡಿಗೆ ಮಾಡಿದ್ರೆ ಮತ್ತೆ ಕೆಲವರು ಕ್ಲೀನಿಂಗ್, ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ತಿದ್ದರು. ಪಿರಿಯಡ್ಸ್ ಸಮಯದಲ್ಲಿ ಮಹಿಳೆ ದೇಹ ವಿಶ್ರಾಂತಿ ಬಯಸುತ್ತದೆ. ದೈಹಿಕ ಕೆಲಸ ಮಾಡೋದು ಕಷ್ಟವಾಗುತ್ತದೆ. ಹಿಂದೆ ಈಗಿನಂತೆ ಸೌಲಭ್ಯಕೂಡ ಇರಲಿಲ್ಲ. ತರಕಾರಿ ಕತ್ತರಿಸೋದು, ದೂರದಿಂದ ನೀರು ತರೋದು, ಭಾರದ ವಸ್ತುಗಳನ್ನು ಎತ್ತೋದು, ರುಬ್ಬುವ ಕಲ್ಲಿನಲ್ಲಿ ಆಹಾರ ರುಬ್ಬೋದು ಸೇರಿದಂತೆ ಅನೇಕ ಕೆಲಸಗಳಿರ್ತಾ ಇದ್ವು. ಪಿರಿಯಡ್ಸ್ ಸಮಯದಲ್ಲಿ ಅದು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಆಕೆಗೆ ತಿಂಗಳಿನಲ್ಲಿ ಮೂರು ದಿನ ರಜೆ ನೀಡಲಾಗ್ತಾಯಿತ್ತು.
ಗಂಡ-ಹೆಂಡತಿಯಾದ್ರೂ ಭಾವನೆ ಶೇರ್ ಮಾಡಿಕೊಳ್ಳದೇ ಹೋದ್ರೆ, ಸಂಬಂಧ ಸ್ಟೇಬಲ್ ಆಗಿರೋಲ್ಲ!
ಇನ್ನು ದೇವರ ಮನೆಯ ಕೆಲಸ ಕೂಡ ಸುಲಭವಾಗಿರಲಿಲ್ಲ. ದೊಡ್ಡ ರೂಮಿನಲ್ಲಿ ಸಾಲು ಸಾಲಾಗಿ ದೇವರ ಫೋಟೋಗಳಿರುತ್ತಿದ್ದವು. ಅವುಗಳನ್ನು ಕ್ಲೀನ್ ಮಾಡೋದು ಸುಲಭವಾಗಿರಲಿಲ್ಲ. ಪ್ರತ್ಯೇಕವಾಗಿ ದೇವರಿಗೆ ನೀರು ತಂದು ಕ್ಲೀನ್ ಮಾಡ್ಬೇಕಿತ್ತು. ಹೂವು, ಪ್ರಸಾದ ಎಲ್ಲವನ್ನೂ ಮಾಡೋದು ಪಿರಿಯಡ್ಸ್ ಸಮಯದಲ್ಲಿ ಕಷ್ಟವಾಗ್ತಿತ್ತು. ಮಹಿಳೆಗೆ ಸುಸ್ತಾಗ್ತಿತ್ತು ಎನ್ನುವ ಕಾರಣಕ್ಕೆ ಮಹಿಳೆಗೆ ಬ್ರೇಕ್ ನೀಡಲಾಗಿತ್ತು.
ತಿಂಗಳಲ್ಲಿ ಬರೀ ಮೂರು ದಿನ ಮಾತ್ರ ಎಲ್ಲ ಕೆಲಸಕ್ಕೆ ಮಹಿಳೆಗೆ ವಿಶ್ರಾಂತಿ ಸಿಗ್ತಿತ್ತು. ಈ ವಿಶ್ರಾಂತಿ ಆಕೆಗೆ ಅಗತ್ಯವಿತ್ತು ಎನ್ನುತ್ತಾರೆ ಸದ್ಗುರು. ಹಿಂದೆ ಮಕ್ಕಳ ಸಂಖ್ಯೆ ಹೆಚ್ಚಿದ ಕಾರಣ ಜೀವನದಲ್ಲಿ ಮಹಿಂಎ ೧೦೦ ಬಾರಿ ಪಿರಿಯಡ್ಸ್ ಆಗೋದು ಅನುಮಾನವಿತ್ತು. ಆದ್ರೆ ಈಗ ಹಾಗಿಲ್ಲ. ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಮಹಿಳೆ ಪ್ರತಿ ತಿಂಗಳು ನೈಸರ್ಗಿಕ ಕ್ರಿಯೆಗೆ ಒಳಗಾಗ್ತಾಳೆ. ಹಿಂದಿನ ಪದ್ಧತಿಯನ್ನು ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನೀವು ಅದನ್ನು ಪಾಲಿಸ್ಬೇಕಾಗಿಲ್ಲ. ನಿಮ್ಮಿಷ್ಟದ ಸ್ಥಳಕ್ಕೆ ನೀವು ಹೋಗ್ಬಹುದು ಎನ್ನುತ್ತಾರೆ ಸದ್ಗುರು.