ದಿಶಾ ಪರ್ಮಾರ್ ಶೇರ್ ಮಾಡಿರುವ ವಿಡಿಯೋ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ದಿಶಾ ಅವರು ಬಿಕಿನಿಯಲ್ಲಿ ತನ್ನ ಟೋನ್ ಬಾಡಿಯನ್ನು ತೋರಿಸಿದ್ದಾರೆ. ಇದು ಫ್ಯಾನ್ಸ್‌ನಿಂದ ಸಖತ್ ಮೆಚ್ಚುಗೆ ಗಳಿಸಿದೆ.
ದಿಶಾ ಪರ್ಮಾರ್ ವೀಡಿಯೊವನ್ನು ಹಂಚಿಕೊಂಡು ಬೇವಾಚ್‌ನಿಂದ ನೇರವಾಗಿ ಎಂದು ಕ್ಯಾಪ್ಷನ್ ನೀಡಿದ್ದಾರೆ. ಇದರೊಂದಿಗೆ ಅವರು ನಗುವ ಎಮೋಜಿಯನ್ನು ಸಹ ಹಂಚಿಕೊಂಡಿದ್ದಾರೆ.
ಇವರನ್ನು ಬಿಕಿನಿಯಲ್ಲಿ ನೋಡಿದ ಅಭಿಮಾನಿಗಳು ಮುಗಿಬಿದ್ದಿದ್ದಾರೆ.ದಿಶಾ ಪರ್ಮಾರ್ ಅವರ ಫೋಟೋ ನೋಡಿ, ನೀವು ತುಂಬಾ ಸುಂದರವಾಗಿದ್ದೀರಿ ಮೇಡಮ್. ಆದರೆ ನನಗೆ ಸೀರೆ ಮತ್ತು ಸೂಟ್‌ಗಳು ಹೆಚ್ಚು ಇಷ್ಟ, ಉಳಿದದ್ದು ನಿಮ್ಮ ಆಯ್ಕೆ.. ಮೇಡಂ.. ದ್ವೇಷವಿಲ್ಲ ಪ್ರೀತಿ ಮಾತ್ರ 'ಎಂದು ಒಬ್ಬರು ಕಮೆಂಟ್ (comment) ಬರೆದಿದ್ದಾರೆ.
ಮದುವೆ ನಂತರ ಇಷ್ಟು ಹಾಟ್ ಮತ್ತು ಸೆಕ್ಸಿಯಾಗಿ ಹೇಗೆ ಕಾಣಿಸಬಹುದು ಎಂದು ಇನ್ನೊಬ್ಬರು ಬರೆದಿದ್ದಾರೆ. ನೀವು ತುಂಬಾ ಹಾಟ್ ಆಗಿ ಕಾಣುತ್ತಿದ್ದೀರಿ ಮತ್ತು ಸೌಂದರ್ಯದ ಮೇಲೆ ಶ್ರೇಷ್ಠತೆ, ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಒಬ್ಬ ಅಭಿಮಾನಿ ಕಾಮೆಂಟ್ ಬಾಕ್ಸ್‌ನಲ್ಲಿ ಬರೆದಿದ್ದಾರೆ. ಓಹ್.. ತುಂಬಾ ಮಾದಕ ಎಂದು ಮತ್ತೊಬ್ಬರು ಹೇಳಿದ್ದಾರೆ.
27 ವರ್ಷದ ದಿಶಾ ಪರ್ಮಾರ್ ಟಿವಿ ಜಗತ್ತಿನಲ್ಲಿ ಚಿರಪರಿಚಿತ ಹೆಸರು. ಅವರು 2012ರಲ್ಲಿ ಪ್ಯಾರ್ ಕಾ ದರ್ದ್ ಹೈ ಮೀಥಾ ಮೀಥಾ ಪ್ಯಾರಾ ಪ್ಯಾರ್ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.
ಈ ಧಾರಾವಾಹಿಯಿಂದ ಮನೆ ಮನೆಯಲ್ಲಿ ಫೇಮಸ್ ಆದರು. ಇದಲ್ಲದೇ, ದಿಶಾ ಪರ್ಮಾರ್ ಇತರ ಕೆಲವು ಧಾರಾವಾಹಿಗಳು ಮತ್ತು ವೆಬ್ ಸರಣಿಗಳಲ್ಲಿಯೂ ಕೆಲಸ ಮಾಡಿದ್ದಾರೆ. ಆಗಸ್ಟ್ 2021 ರಲ್ಲಿ ಪ್ರಾರಂಭವಾಗಿರುವ ಬಡೇ ಅಚೇ ಲಗ್ತೆ ಹೈ 2 ಧಾರಾವಾಹಿಯಲ್ಲಿ ಅವರು ನಕುಲ್ ಮೆಹ್ತಾ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ
ಟಿವಿ ಧಾರಾವಾಹಿಗಳಲ್ಲಿ ಸರಳವಾಗಿ ಕಾಣುವ ದಿಶಾ ಪರ್ಮಾರ್, ರಿಯಲ್ ಜೀವನದಲ್ಲಿ (Real Life) ಸಾಕಷ್ಟು ಬೋಲ್ಡ್ ಮತ್ತು ಹಾಟ್ ಲುಕ್‌ನಲ್ಲಿ ಕಾಣಿಸುತ್ತಿದ್ದಾರೆ. ಆಕೆಯ ಇನ್‌ಸ್ಟಾಗ್ರಾಮ್‌ನಲ್ಲಿ ಅನೇಕ ಮನಮೋಹಕ ಫೋಟೋಗಳನ್ನು ನೋಡಬಹುದು.
ದಿಶಾ ಪರ್ಮಾರ್ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಅವರು ಜುಲೈ 2021ರಲ್ಲಿ ತಮ್ಮ ಗೆಳೆಯ ರಾಹುಲ್ ವೈದ್ಯ ಅವರನ್ನು ವಿವಾಹವಾದರು. ಅವರ ಈ ಅದ್ಧೂರಿ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ ಆಗಿವೆ.