ಫಿಸಿಕಲ್ ಬ್ಯೂಟಿ ಜೊತೆ ಲೈಂಗಿಕ ಸುಖ ಕನೆಕ್ಟ್ ಆಗಿರುತ್ತಾ?

First Published | Jul 26, 2023, 6:22 PM IST

ನಮ್ಮ ದೇಹದ ತೂಕ ಸಹ ಸೆಕ್ಸ್ ಲೈಫ್ ಮೇಲೆ ತುಂಬಾನೆ ಪರಿಣಾಮ ಬೀರುತ್ತೆ ಹೆಚ್ಚಾದ ತೂಕ, ಹಾರ್ಮೋನ್ ಬದಲಾವಣೆಗಳು, ಒಬೆಸಿಟಿ, ಇವೆಲ್ಲವೂ ಸೆಕ್ಸ್ ಡ್ರೈವ್ ಕುಂಠಿತವಾಗುವಂತೆ ಮಾಡುತ್ತೆ. 
 

ದೇಹದ ತೂಕವು ಸೆಕ್ಸ್ ಡ್ರೈವ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಸೆಕ್ಸ್ ಡ್ರೈವ್ (sex drive) ವಿಷಯಕ್ಕೆ ಬಂದಾಗ, ಅದು ದೇಹದ ತೂಕದಿಂದ ಹೆಚ್ಚು ಪರಿಣಾಮ ಬೀರುತ್ತದೆ.  ಜೊತೆಗೆ ನಿಮ್ಮ ಲೈಂಗಿಕ ಕಾರ್ಯಕ್ಷಮತೆ ಮತ್ತು ಬಯಕೆ ನಿಮ್ಮ ಬಗ್ಗೆ ನೀವು ಹೇಗೆ ಭಾವಿಸುತ್ತೀರಿ ಎಂಬುದರ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಅಧಿಕ ತೂಕ ಇದ್ರೆ ಸೆಕ್ಸ್ ಡ್ರೈವ್ ಕಡಿಮೆಯಾಗುತ್ತೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಬೇರೆ ಯಾವೆಲ್ಲಾ ವಿಷಯಗಳು ಕಾಮಾಸಕ್ತಿಯನ್ನು ಕಡಿಮೆ ಮಾಡುತ್ತೆ?

ಹಾರ್ಮೋನುಗಳ ಬದಲಾವಣೆ (hormonal changes)
ದೇಹದ ತೂಕ ಹೆಚ್ಚಾದ್ರೆ ಸೆಕ್ಸ್ -ಹಾರ್ಮೋನ್-ಬೈಂಡಿಂಗ್ ಗ್ಲೋಬುಲಿನ್ ಹೆಚ್ಚಳಕ್ಕೆ ಕಾರಣವಾಗಬಹುದು, ಇದು ಲೈಂಗಿಕ ಹಾರ್ಮೋನ್ ಆಗಿರುವ ಟೆಸ್ಟೋಸ್ಟೆರಾನ್ ಕುಸಿಯಲು ಕಾರಣವಾಗುತ್ತದೆ. ಲೈಂಗಿಕ ಹಾರ್ಮೋನ್ ಕುಸಿತದಿಂದಾಗಿ, ಸೆಕ್ಸ್ ಮಾಡೋ ಬಯಕೆ ಮತ್ತು ಕಾಮಾಸಕ್ತಿ ತೀವ್ರವಾಗಿ ಕಡಿಮೆಯಾಗಬಹುದು, ಇದು ಸೆಕ್ಸ್ ಡ್ರೈವ್ ಮೇಲೆ ಭಾರಿ ಪರಿಣಾಮ ಬೀರುತ್ತದೆ.

Tap to resize

ಬಾಡಿ ಇಮೇಜ್ ಸಮಸ್ಯೆಗಳು (body image)
ಮಹಿಳೆಯ ಲೈಂಗಿಕ ಡ್ರೈವ್ ಅವರ ದೇಹದ ಶೇಪ್ ಮತ್ತು ಅವರ ಆತ್ಮವಿಶ್ವಾಸದೊಂದಿಗೆ ಸಂಬಂಧ ಹೊಂದಿದೆ ಎನ್ನುತ್ತೆ ಸಂಶೋಧನೆಗಳು. ಅಧಿಕ ತೂಕ ಹೊಂದಿರೋ ಮಹಿಳೆಯರ ಆತ್ಮವಿಶ್ವಾಸ ಕಡಿಮೆ ಇರುತ್ತೆ. ಮತ್ತೊಂದೆಡೆ, ಸದೃಢ ಮತ್ತು ಆರೋಗ್ಯವಂತ ಜನರು ಹೆಚ್ಚು ಆತ್ಮವಿಶ್ವಾಸ ಹೊಂದಿರ್ತಾರೆ. ನೀವು ನಿಮ್ಮನ್ನು ಹೇಗೆ ನೋಡುತ್ತೀರಿ ಎಂಬುದು ಸೆಕ್ಸ್ ಡ್ರೈಕ್ಸ್  ಡ್ರೈವ್ ಮೇಲೆ ನೇರ ಪರಿಣಾಮ ಬೀರುತ್ತೆ

ಪುರುಷರಲ್ಲಿ ಬೊಜ್ಜು ಮತ್ತು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ
ಸ್ಥೂಲಕಾಯದಿಂದ ಬಳಲುತ್ತಿರುವ ಪುರುಷರು ತಮ್ಮ ಲೈಂಗಿಕ ಬಯಕೆಗಳನ್ನು ಉತ್ತೇಜಿಸಲು ಕಷ್ಟಪಡ್ತಾರೆ. ತಜ್ಞರ ಪ್ರಕಾರ, ಬೊಜ್ಜು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಕಡಿಮೆ ಮಾಡುತ್ತದೆ, ಇದು ಸೆಕ್ಸ್ ಡ್ರೈವ್ ಅನ್ನು ಸಹ ಕಡಿಮೆ ಮಾಡುತ್ತದೆ. ಇದು ಕೆಲವೊಮ್ಮೆ ಪುರುಷರಲ್ಲಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗಬಹುದು. ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಪುರುಷರಲ್ಲಿ ಹೃದ್ರೋಗ, ಮಧುಮೇಹ ಮತ್ತು ಹೆಚ್ಚಿನ ಕೊಲೆಸ್ಟ್ರಾಲ್ ಹೆಚ್ಚಾಗುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಇದು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯ (erectile dysfunction in men)ಸಾಧ್ಯತೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಕ್ಲೈಮ್ಯಾಕ್ಸ್ ಆಗೋದೇ ಇಲ್ಲ
ಅಧಿಕ ತೂಕವು ರಕ್ತನಾಳಗಳನ್ನು ಕಿರಿದಾಗಿಸುತ್ತದೆ. ಇದರಿಂದ ನಿಮ್ಮ ಜನನಾಂಗಗಳಿಗೆ ರಕ್ತದ ಹರಿವು ಸರಿಯಾಗಿ ಆಗೋದಿಲ್ಲ. ಆದ್ದರಿಂದ, ಸರಿಯಾದ ರಕ್ತದ ಹರಿವು ಇಲ್ಲದೆ, ಪುರುಷರು ಮತ್ತು ಮಹಿಳೆಯರು ಪರಾಕಾಷ್ಠೆ (orgasm) ತಲುಪಲು ಕಷ್ಟಪಡ್ತಾರೆ. ಇದು ಸೆಕ್ಸ್ ಡ್ರೈವ್ ಕ್ಷೀಣಿಸಲು ಕಾರಣವಾಗಬಹುದು.
 

ಸೆಕ್ಸ್ ಪೊಜಿಶನ್ (sex position)
ಸೆಕ್ಸ್ ಪೊಜಿಶನ್ಸಹ ಸೆಕ್ಸ್ ಸುಖ ಆನಂದಿಸಲು ಸಹಾಯ ಮಾಡುತ್ತೆ. ನೀವು ಬೊಜ್ಜು ಹೊಂದಿದ್ದರೆ, ಲೈಂಗಿಕ ಚಲನೆಗಳು ನಿರ್ಬಂಧಿಸಲ್ಪಡುವ ಸಾಧ್ಯತೆಗಳಿವೆ. ಇದರಿಂದ ಬೇರೆ ಬೇರೆ ರೀತಿಯ ಸೆಕ್ಸ್ ಪೊಜಿಶನ್ ಟ್ರೈ ಮಾಡಲು ಸಾಧ್ಯವಿಲ್ಲ. ಹಾಗಾಗಿ ಸೆಕ್ಸ್ ಡ್ರೈವ್ ಮೇಲೆ ಎಫೆಕ್ಟ್ ಬೀಳುತ್ತೆ. 

ಸೆಕ್ಸ್ ಡ್ರೈವ್ ಹೆಚ್ಚಿಸುವುದು ಹೇಗೆ?
ದೈಹಿಕ ಚಟುವಟಿಕೆಗಳು (physical activities) ಮತ್ತು ನಿಯಮಿತ ವ್ಯಾಯಾಮವು ಸೆಕ್ಸ್ ಡ್ರೈವ್ ಹೆಚ್ಚಿಸುತ್ತದೆ. ಆರೋಗ್ಯಕರ ಲೈಫ್ ಸ್ಟೈಲ್ ಕಾಪಾಡಿಕೊಳ್ಳುವುದು ಆರೋಗ್ಯಕರ ಲೈಂಗಿಕ ಜೀವನಕ್ಕೆ ತುಂಬಾ ಮುಖ್ಯ,. ಇದಲ್ಲದೆ, ನಿಮ್ಮ ದೇಹದ ಶೇಪ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಬದಲಿಗೆ ನಿಮ್ಮನ್ನು ಮತ್ತು ನಿಮ್ಮ ದೇಹವನ್ನು ಅದು ಹೇಗಿದೆಯೋ ಹಾಗೇ ಪ್ರೀತಿಸಿ. ಇದರಿಂದ ಸೆಕ್ಸ್ ಲೈಫ್ ಚೆನ್ನಾಗಿರುತ್ತೆ. 

Latest Videos

click me!