Samantha Style: ಡಿವೋರ್ಸ್ ನಂತ್ರ ಸಖತ್ ಬೋಲ್ಡ್ ಆದ ನಟಿ, ರೆಡ್‌ ಡ್ರೆಸ್‌ ಹಾಟ್ ಲುಕ್

First Published | Nov 25, 2021, 12:44 PM IST

ಸಮಂತಾ ರುಥ್ ಪ್ರಭು(Samantha ruth prabhu) ಸೌತ್‌ನ ಸ್ಟೈಲಿಷ್ ನಟಿಯರಲ್ಲಿ ಒಬ್ಬರು. ವಿಚ್ಚೇದನೆ ನಂತರ ನಟಿ ಹೆಚ್ಚು ಬೋಲ್ಡ್ ಆಗಿ ಹೊರಗಡೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ನಟಿ ಕೆಂಬಣ್ಣದ ಹೈಸ್ಲಿಟ್ ಸೀರೆಯಲ್ಲಿ(Red saree) ಮಿಂಚಿದ್ದಾರೆ. ಹಾಟ್ ರೆಡ್ ಲುಕ್‌ನಲ್ಲಿ ಸಮಂತಾ ಫೋಟೋಸ್ ವೈರಲ್ ಆಗಿವೆ.

Samantha

ದಕ್ಷಿಣ ಭಾರತದ ಸೆನ್ಸೇಷನ್ ಸಮಂತಾ ರುತ್ ಪ್ರಭು(Samantha Ruth Prabhu) ತಮ್ಮ ಸ್ಟೈಲಿಷ್ ಫೋಟೋಗಳಿಂದ ಅಭಿಮಾನಿಗಳಿಗೆ ಸರ್ಪೈಸ್ ಕೊಡುತ್ತಲೇ ಇರುತ್ತಾರೆ.

ನಾಲ್ಕು ವರ್ಷಗಳ ದಾಂಪತ್ಯ ಜೀವನ ಕೊನೆಗೊಳಿಸಿ ಪತಿ ನಾಗ ಚೈತನ್ಯ ಅವರೊಂದಿಗೆ ವಿಚ್ಚೇದನೆ ಪಡೆದು ಇತ್ತೀಚೆಗೆ ಬೇರ್ಪಟ್ಟ ನಟಿ ಈಗ ಸಂಪೂರ್ಣವಾಗಿ ತಮ್ಮ ವೃತ್ತಿಜೀವನದ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ.

Tap to resize

ಇತ್ತೀಚೆಗೆ ಅವರು ಪ್ಯಾನೆಲ್ ಡಿಸ್ಕಷನ್ ಭಾಗವಾಗಿ ಗೋವಾದ(Goa) IFFI ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ತನ್ನ ಚುರುಕಾದ ನಡೆಯಿಂದ ಎಲ್ಲರ ಮನಸು ಗೆದ್ದರೂ, ಅವರ ಸ್ಟೈಲ್ ಫ್ಯಾಷನ್(Fashion) ಮೆಚ್ಚುಗೆ ಗಳಿಸಿತು.

ಸಮಂತಾ ಸೀರೆ ಸ್ಟೈಲ್‌ನಲ್ಲಿ ಕಡುಗೆಂಪು ಬಣ್ಣದ ಸ್ಕರ್ಟ್ ತೊಟ್ಟಿದ್ದರು. ಬ್ರೈಡ್ ರೆಡ್ ಡ್ರೆಸ್, ರೆಡ್ ಲಿಪ್‌ಸ್ಟಿಕ್‌ನಲ್ಲಿ ಅದ್ಭುತವಾಗಿ ಕಾಣಿಸಿದ್ದಾರೆ ಸೌತ್ ನಟಿ.

ಡಿಸೈನರ್ ಕ್ರೇಶಾ ಬಜಾಜ್ ಅವರ ವಿನ್ಯಾಸದ ಕಡುಗೆಂಪು ಆಸ್ಟೋರಾಯ್ಡಿಯಾ ಸೆಟ್‌ನಲ್ಲಿ ನಟಿಯ ಲುಕ್ ಡಿಫರೆಂಟಾಗಿತ್ತು. ತೊಡೆ ಎತ್ತರದ ಸೀಳು, ಪೂರ್ಣ ತೋಳಿನ ಬ್ಲೌಸ್ ಮತ್ತು ದುಪಟ್ಟಾದೊಂದಿಗೆ ಸುತ್ತುವ ಸ್ಕರ್ಟ್ ನಟಿಗೆ ಬೋಲ್ಡ್ ಲುಕ್ ಕೊಟ್ಟಿತ್ತು.

ಸಮಂತಾ ನಾಗ ಚೈತನ್ಯ ಜೊತೆ ವಿಚ್ಚೇದನೆ ನಂತರ ಬಹಳಷ್ಟು ವಿಚಾರವಾಗಿ ಹೈಲೈಟ್ ಆದರು. ಅವರ ಸ್ಟೈಲಿಷ್ಟ್ ಜೊತೆಗಿನ ಸಂಬಂಧ, ಪ್ರೆಗ್ನೆನ್ಸಿ ಹೀಗೆ ಬಹಳಷ್ಟು ವಿಚಾರಕ್ಕಾಗಿ ಸುದ್ದಿಯಾದರು ನಟಿ.

ಅದರೆ ಸ್ಟ್ರಾಂಗ್ ಆಗಿಯೇ ಎಲ್ಲವನ್ನೂ ಫೇಸ್ ಮಾಡಿದ ನಟಿ ತಮಗೆ ನಾಗ ಚೈತನ್ಯನಿಂದ ಬರಲಿದ್ದ 200 ಕೋಟಿ ಜೀವನಾಂಶಕ್ಕೂ ನೋ ಹೇಳಿದ್ದಾರೆ.

Latest Videos

click me!