ಬ್ರಹ್ಮಾಸ್ತ್ರ 2 ನಲ್ಲಿ ಬಾಲಿವುಡ್‌ನ ಹಾಟ್ ಜೋಡಿ; ಸಸ್ಪೆನ್ಸ್ ಬಯಲು
First Published | Sep 16, 2022, 5:30 PM ISTರಣಬೀರ್ ಕಪೂರ್ (Ranbir Kapoor)ಮತ್ತು ಆಲಿಯಾ ಭಟ್ (Alia Bhatt) ಅಭಿನಯದ ಬ್ರಹ್ಮಾಸ್ತ್ರ (Brahmastra) ಸೆಪ್ಟೆಂಬರ್ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರವು ಪ್ರೇಕ್ಷಕರಿಂದ ಅಪಾರ ಪ್ರೀತಿಯನ್ನು ಪಡೆಯುತ್ತಿದೆ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮೊತ್ತವನ್ನು ಗಳಿಸಿತು. ವರದಿಗಳ ಪ್ರಕಾರ ಚಿತ್ರವು ಶೀಘ್ರದಲ್ಲೇ 200 ಕೋಟಿ ಕ್ಲಬ್ ಸೇರಲಿದೆ. ಅಯಾನ್ ಮುಖರ್ಜಿ ಈ ಚಿತ್ರದ ಮೂರು ಭಾಗಗಳನ್ನು ಬಿಡುಗಡೆ ಮಾಡಲಿದ್ದಾರ ಮೊದಲ ಭಾಗ ಬ್ರಹ್ಮಾಸ್ತ್ರ: ಶಿವ ಭಾಗ 1 ಬಿಡುಗಡೆಯಾಗಿದೆ. ಈಗ ಅದರ ಎರಡನೇ ಭಾಗ ಅಂದರೆ ಬ್ರಹ್ಮಾಸ್ತ್ರ: ದೇವ್ ಭಾಗ 2 ಬಗ್ಗೆ ಚರ್ಚೆ ನಡೆಯುತ್ತಿದೆ. ಚಿತ್ರದ ಎರಡನೇ ಭಾಗದ ಬಗ್ಗೆ ಅಯಾನ್ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. 2025ರಲ್ಲಿ ಎರಡನೇ ಭಾಗ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ ಮತ್ತು ಚಿತ್ರದ ನಾಯಕನಟನ ಬಗ್ಗೆ ಸಸ್ಪೆನ್ಸ್ ಕಾಯ್ದುಕೊಂಡಿದ್ದಾರೆ, ಆದರೆ ಈಗ ಅವರ ಸಸ್ಪೆನ್ಸ್ ಬಯಲಾಗಿದೆ.