ಭಾರತದಲ್ಲಿ Honor MagicBook X14, MagicBook 15 ಲ್ಯಾಪ್‌ಟ್ಯಾಪ್ ಲಾಂಚ್, ಬೆಲೆ ಎಷ್ಟು?

By Suvarna News  |  First Published Mar 31, 2022, 6:29 PM IST

*ಹಾನರ್ ಮ್ಯಾಜಿಕ್‌ಬುಕ್ ಎಕ್ಸ್ 14ನಲ್ಲಿ ಇಂಟೆಲ್ ಐ3 ಪ್ರೊಸೆಸರ್ ಒಳಗೊಂಡಿದೆ.
*ಮ್ಯಾಜಿಕ್‌ಬುಕ್ ಎಕ್ಸ್ 15 ಲ್ಯಾಪ್‌ಟ್ಯಾನಲ್ಲಿ ಇಂಟೆಲ್ ಐ5 ಪ್ರೊಸೆಸರ್ ಇದೆ.
*ಈ ಎರಡೂ ಲ್ಯಾಪ್‌ಟ್ಯಾಪ್‌ಗಳು ಸಿಲ್ವರ್ ಬಣ್ಣದ ಆಯ್ಕೆಯಲ್ಲಿ ದೊರೆಯಲಿವೆ.


ಲ್ಯಾಪ್‌ಟ್ಯಾಪ್ (Laptop) ಹಾಗೂ ಸ್ಮಾರ್ಟ್‌ಫೋನ್ (Smartphone) ಸಾಧನಗಳ ಉತ್ಪಾದನೆಯಲ್ಲಿ ಜಾಗತಿಕ ಕಂಪನಿಗಳ ಪೈಕಿ ಹಾನರ್ (Honor) ಕೂಡ ಮುಂಚೂಣಿಯಲ್ಲಿದ್ದು, ವಿವಿಧ ಸ್ತರದಲ್ಲಿ ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲೂ ಅತ್ಯುತ್ತಮ ಪಾಲು ಹೊಂದಿರುವ ಕಂಪನಿಯು, ವಿಶೇಷವಾಗಿ ಲ್ಯಾಪ್‌ಟ್ಯಾಪ್ ವಿಭಾಗದಲ್ಲಿ ಒಳ್ಳೆಯ ಗ್ರಾಹಕವಲಯವನ್ನು ತನ್ನದಾಗಿಸಿಕೊಂಡಿದೆ. ಇದೀಗ ಕಂಪನಿಯು ಭಾರತದಲ್ಲಿ ಹಾನರ್ ಮ್ಯಾಜಿಕ್ ಬುಕ್ ಎಕ್ಸ್14 (Honor MagicBook X14) ಮತ್ತು ಹಾನರ್ ಮಾಜ್ಯಾಕ್ ಬ ಕ್ ಎಕ್ಸ್ 15 (Honor MagicBook X15) ಲ್ಯಾಪ್‌ಟ್ಯಾಪ್‌ಗಳನ್ನು ಲಾಂಚ್ ಮಾಡಿದೆ. ವಾಸ್ತವದಲ್ಲಿ ಈ ಎರಡೂ ಲ್ಯಾಪ್‌ಟ್ಯಾಪ್‌ಗಳನ್ನು ಕಂಪನಿಯು ಈ ಹಿಂದೆಯೇ ಅಂದರೆ ಕಳೆದ ವರ್ಷವೇ ಚೀನಾ (China) ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಅಲ್ಲಿ ಒಳ್ಳೆಯ ಪ್ರತಿಕ್ರಿಯೆಯೂ ಸಿಕ್ಕಿತ್ತು. ಹಾಗಾಗಿ, ಕಂಪನಿಯು ಈ ಅದೇ ಲ್ಯಾಪ್‌ಟ್ಯಾಪ್‌ಗಳನ್ನು ಭಾರತದಲ್ಲೂ ಬಿಡಗುಡೆ ಮಾಡುತ್ತಿದೆ. ಈ ಎರಡೂ ಲ್ಯಾಪ್‌ಟ್ಯಾಪ್‌ಗಳು ಸುತ್ತ ಬೆಜೆಲ್‌ಗಳನ್ನು ಒಳಗೊಂಡ ಎಫ್ಎಚ್‌ಡಿ ಸ್ಕ್ರೀನ್ ಒಳಗೊಂಡಿದೆ. 10 ಜನರೇಷನ್ ಇಂಟೆಲ್ ಕೋರ್ ಐ3 (Intel Core i3 ) ಮತ್ತು ಐ5 ಪ್ರೊಸೆಸರ್‌ (i5 processor)ಗಳಿದ್ದು, 8 ಜಿಬಿ RAMನೊಂದಿಗೆ ಸಂಯೋಜಿತಗೊಂಡಿವೆ.

ಏ.2ಕ್ಕೆ Samsung Galaxy M33 5G ಲಾಂಚ್, ಕ್ಯಾಮೆರಾ ಹೇಗಿದೆ? ಫೀಚರ್‌ಗಳೇನು?

Tap to resize

Latest Videos

ಮ್ಯಾಜಿಕ್‌ಬುಕ್ ಎಕ್ಸ್ 14 ವಿಶೇಷತೆಗಳು
ಹಾನರ್ ಮ್ಯಾಜಿಕ್ ಬುಕ್ ಎಕ್ಸ್14 (Honor MagicBook X14) ಲ್ಯಾಪ್‌ಟ್ಯಾಪ್ 14 ಇಂಚಿನ್ ಡಿಸ್‌ಪ್ಲೇ (Display) ಹೊಂದಿದೆ. 1920x1080 ಪಿಕ್ಸೆಲ್ ರೆಸುಲೂಷನ್ ಹಾಗೂ 16:9 ಅನುಪಾತ ದರವನ್ನು ಹೊಂದಿವೆ. ಮ್ಯಾಜಿಕ್‌ಬುಕ್ ಎಕ್ಸ್ 14 ಲ್ಯಾಪ್‌ನಲ್ಲಿ ನೀವು 10ನೇ ತಲೆಮಾರಿನ ಇಂಟೆಲ್ ಕೋರ್ ಐ3 ಪ್ರೋಸೆಸರ್ ಕಾಣಬಹುದು ಮತ್ತು ಇದನ್ನು 8 ಜಿಬಿ RAM ಹಾಗೂ 512 ಜಿಬಿ ಎಸ್ಎಸ್‌ಡಿ ಸ್ಪೇಸ್‌ನೊಂದಿಗೆ ಸಂಯೋಜಿತಗೊಳಿಸಲಾಗಿದೆ. ಇಂಟೆಲ್ ಯುಎಚ್‌ಡಿ (UHD) ಗ್ರಾಫಿಕ್ಸ್‌ಗಳಿದೆ. ವಿಂಡೋಸ್ 10 ಹೋಮ್ (Windows 10 Home) ಆಪರೇಟಿಂಗ್ ಸಿಸ್ಟಮ್ ಮೇಲೆ ರನ್ ಆಗುತ್ತದೆ. ಪವರ್ ಬಟನ್‌ನೊಳಗೇ ಪಿಂಗರ್‌ಪ್ರಿಂಟ್ ಸೇರಿಸಲಾಗಿದೆ. ಸ್ಪೋರ್ಟ್ ಪಾಪ್ ಅಪ್-ವೆಬ್ ಕಾಮ್ ಮತ್ತು ವೈಫೈ, ಬ್ಲೂಟೂಥ್, ಯುಎಸ್‌ಬಿ ಟೈಪ್ ಸಿ, ಎಚ್‌ಡಿಎಂಐ ಮತ್ತು ಯುಎಸ್‌ಬಿ ಟೈಪ್ ಎ ಪೋರ್ಟ್ಸ್ ಕನೆಕ್ಟಿವಿಟಿಗಳನ್ನು ನೀಡಲಾಗುತ್ತದೆ. ಈ ಲ್ಯಾಪ್‌ಟ್ಯಾಪ್‌ನಲ್ಲಿ ಕಂಪನಿಯು 56 ವ್ಯಾಟ್ ಬ್ಯಾಟರಿಯನ್ನು ನೀಡಲಾಗಿದೆ. 

ಮ್ಯಾಜಿಕ್ ಬುಕ್ ಎಕ್ಸ್ 15 ವಿಶೇಷತೆಗಳು
ಹಾನರ್‌ ಮ್ಯಾಜಿಕ್‌ಬುಕ್ ಎಕ್ಸ್ 15 ಲ್ಯಾಪ್‌ಟ್ಯಾಪ್ ಹಾಗೂ ಮ್ಯಾಜಿಕ್ ಬುಕ್ ಎಕ್ಸ್ 14 ಲ್ಯಾಪ್‌ಟ್ಯಾಪ್ ಮಧ್ಯೆ ಸಾಕಷ್ಟು ಸಾಮ್ಯತೆಗಳಿವೆ. ಕೆಲವೊಂದು ಫೀಚರ್‌ಗಳಲ್ಲಿ ವ್ಯತ್ಯಾಸವನ್ನು ಕಾಣಬಹುದು. ಮ್ಯಾಜಿಕ್ ಬುಕ್ ಎಕ್ಸ್ 14 ಲ್ಯಾಪಿ 14 ಇಂಚಿನ್ ಸ್ಕ್ರೀನ್ ಹೊಂದಿದ್ದರೆ, ಮ್ಯಾಜಿಕ್ ಬುಕ್ ಎಕ್ಸ್ 15 ಲ್ಯಾಟ್‌ಟ್ಯಾಪ್ 15 ಇಂಚಿನ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಅದೇ ರೀತಿ, ಇದು 10ನೇ ತಲೆಮಾರಿನ ಇಂಟಲೆ ಕೋರ್ ಐ5 ಪ್ರೊಸೆರ್‌ ಪ್ರೇರಿತವಾಗಿದ್ದು, 42 ವ್ಯಾಟ್ ಬ್ಯಾಟರಿ(Battery)ಯನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಯಾವುದೇ ವ್ಯತ್ಯಾಸಗಳಿಲ್ಲ. ಎರಡೂ ಲ್ಯಾಪ್‌ಟ್ಯಾಪ್ ಒಂದೆತೆರನಾದ ಫೀಚರ್‌ಗಳನ್ನು ಒಳಗೊಂಡಿದೆ.

ಬೆಲೆ ಎಷ್ಟು?
ಭಾರತೀಯ ಮಾರುಕಟ್ಟೆಯಲ್ಲಿ ಹಾನರ್ ಮ್ಯಾಜಿಕ್‌ಬುಕ್ ಎಕ್ಸ್ 14 ಬೆಲೆ 38,900 ರೂಪಾಯಿ ಇದ್ದರೆ, ಮ್ಯಾಜಿಕ್ ಬುಕ್ ಎಕ್ಸ್ 15 ಲ್ಯಾಪ್‌ಟ್ಯಾಪ್ ಬೆಲೆ 40,990 ರೂಪಾಯಿ ಇದೆ. ಹಾಗೆ ನೋಡಿದರೆ, ಈ ಲ್ಯಾಪ್‌ಟ್ಯಾಪ್‌ಗಳೇನೂ ತೀರಾ ತುಟ್ಟಿಯಲ್ಲ ಎಂದು ಹೇಳಬಹುದು. ಅಮೆಜಾನ್ ಇಂಡಿಯಾ ವೆಬ್‌ಸೈಟ್ ಮೂಲಕ ಏಪ್ರಿಲ್ 6ರಂದು ಮಾರಾಟಕ್ಕೆ ದೊರೆಯಲಿವೆ. ಲಾಂಚ್ ಆಫರ್ಸ್ ಜತೆಗೆ, ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಗ್ರಾಹಕರಿಗೆ 2000 ರೂ.ಡಿಸ್ಕೌಂಟ್ ಕೂಡ ಇದೆ. 

ಭಾರತದಲ್ಲಿ Nokia C01 Plus 32GB ಫೋನ್ ಬಿಡುಗಡೆ: ಬೆಲೆ, ವೈಶಿಷ್ಟ್ಯಗಳೇನು?

click me!