ಬಿಳಿಯಕ್ಕಿ, ಕೆಂಪಕ್ಕಿ, ಕಪ್ಪಕ್ಕಿ: ನಿಮಗೆ ಯಾವುದು ಆರೋಗ್ಯಕರ?

By Suvarna News  |  First Published Aug 10, 2021, 3:26 PM IST

ಬಿಳಿ ಅಕ್ಕಿಯನ್ನೇ ರೈಸ್‌ಬಾತ್ ಮಾಡಲು ಎಲ್ಲ ಕಡೆ ಬಳಸುತ್ತಾರೆ. ನಾವು ಬೆಳಗ್ಗೆಯೂ ಅಕ್ಕಿ, ಮಧ್ಯಾಹ್ನವೂ ಅಕ್ಕಿ, ರಾತ್ರಿಯೂ ಅಕ್ಕಿ ಬಳಸುತ್ತಲೇ ಇರುತ್ತೇವೆ. ಆದರೆ ಯಾವ ಅಕ್ಕಿ ಆರೋಗ್ಯಕರ, ಎಷ್ಟು ಸೇವಿಸಬೇಕು?


ಭಾರತದಲ್ಲಿ ಹಲವು ವಿಧದ ಅಕ್ಕಿಗಳನ್ನು ಆಹಾರವಾಗಿ ಬಳಸುತ್ತಾರೆ. ಸಾಮಾನ್ಯವಾಗಿ ಕರಾವಳಿ ತೀರದವರು ಕುಚ್ಚಲಕ್ಕಿ (ಕೆಂಪು ಅಕ್ಕಿ) ಯನ್ನು ಬಳಸುವುದು, ಇತರರು ಬಿಳಿ ಅಕ್ಕಿಯನ್ನು ಬಳಸುವುದು ವಾಡಿಕೆ. ಆದರೆ ಯಾವುದು ಹೆಚ್ಚು ಆರೋಗ್ಯಕರ? ಯಾವುದು ರುಚಿಕರ? ಯಾವುದರಲ್ಲಿ ಎಷ್ಟು ಕ್ಯಾಲೊರಿ ಲಭ್ಯ? ಇದನ್ನು ತಿಳಿಯೋಣ ಬನ್ನಿ. 

ಬಿಳಿ ಅಕ್ಕಿ (ವೈಟ್ ರೈಸ್)

Tap to resize

Latest Videos

ಬಿಳಿ ಅಕ್ಕಿಯು ಭಾರತೀಯರು ಮನೆಮನೆಗಳಲ್ಲಿ ಬಳಸುವ ಅಕ್ಕಿಯ ಸಾಮಾನ್ಯ ವಿಧ. ಬಿಳಿ ಅಕ್ಕಿಯನ್ನು ಹೆಚ್ಚು ಸಂಸ್ಕರಿಸಲಾಗುತ್ತದೆ. ಹೆಚ್ಚು ಪಾಲಿಶ್ ಮಾಡಲಾಗುತ್ತದೆ. ಪ್ಯಾಕೇಜ್ ಮಾಡಿದ ನಂತರ ಇದರ ಶೆಲ್ಫ್ ಜೀವಿತಾವಧಿಯನ್ನು ಹೆಚ್ಚಿಸಲು ಇದರಲ್ಲಿರುವ ಹೊಟ್ಟು ಮತ್ತು ಜೀವಾಣುಗಳನ್ನು ತೆಗೆದುಹಾಕಲಾಗಿದೆ. ವ್ಯಾಪಕವಾದ ಸಂಸ್ಕರಣೆಯು ಈ ಆಹಾರ ಧಾನ್ಯದ ಅಗತ್ಯ ಪೋಷಕಾಂಶಗಳನ್ನು ಸಹ ತೆಗೆದುಹಾಕುತ್ತದೆ. ಇತರ ರೀತಿಯ ಅಕ್ಕಿಗೆ ಹೋಲಿಸಿದರೆ ಇದು ಕಡಿಮೆ ಪ್ರೋಟೀನ್, ಆಂಟಿ ಆಕ್ಸಿಡೆಂಟ್, ಮತ್ತು ಇತರ ಅಗತ್ಯ ಪೋಷಕಾಂಶಗಳಾದ ಥಯಾಮಿನ್ ಮತ್ತು ಬಿ ಜೀವಸತ್ವಗಳನ್ನು ಹೊಂದಿರುತ್ತದೆ. ಅಲ್ಲದೆ, ಫೈಬರ್ ಅಂಶ ಕಡಿಮೆ ಇರುವುದರಿಂದ ಬಿಳಿ ಅಕ್ಕಿ ಹೊಟ್ಟೆ ತುಂಬುವುದು ಕಡಿಮೆ. 100 ಗ್ರಾಂ ಬಿಳಿ ಅಕ್ಕಿಯಲ್ಲಿ 68 ಕ್ಯಾಲೋರಿಗಳು ಮತ್ತು 14.8 ಗ್ರಾಂ ಕಾರ್ಬೋಹೈಡ್ರೇಟ್‌ಗಳಿವೆ. ಇದು ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಮತ್ತು ಫೋಲೇಟ್ ಅನ್ನು ಮಾತ್ರ ಹೊಂದಿರುತ್ತದೆ.

ಕಂದು ಅಕ್ಕಿ (ಬ್ರೌನ್ ರೈಸ್)

ಬಿಳಿ ಅಕ್ಕಿಯಂತಲ್ಲದೆ, ಕಂದು ಅಕ್ಕಿಯಲ್ಲಿ ಹೊಟ್ಟು ಮತ್ತು ಜೀವಾಣು ಇರುತ್ತವೆ. ಆದ್ದರಿಂದ, ಇದು ಬಿಳಿ ಅಕ್ಕಿಗಿಂತ ಹೆಚ್ಚು ಪೌಷ್ಟಿಕವಾಗಿದೆ. ಫ್ಲೇವೊನೈಡ್ ಆಂಟಿಆಕ್ಸಿಡೆಂಟ್‌ಗಳು- ಎಪಿಜೆನಿನ್, ಕ್ವೆರ್ಸೆಟಿನ್ ಮತ್ತು ಲುಟಿಯೊಲಿನ್ ಇದ್ದು ಇದು ನಮ್ಮನ್ನು ಆರೋಗ್ಯಯುತವಾಗಿ ಮತ್ತು ರೋಗಮುಕ್ತವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಂದು ಅಕ್ಕಿಯು ಬಿಳಿ ಅಕ್ಕಿಯಷ್ಟೇ ಕ್ಯಾಲೊರಿ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಆದರೆ ಹೆಚ್ಚಿನ ಫೈಬರ್ ಮತ್ತು ಪ್ರೋಟೀನ್ ಅನ್ನು ಹೊಂದಿರುತ್ತವೆ, ಇದು ಬಿಳಿ ಅಕ್ಕಿಗಿಂತ ತುಲನಾತ್ಮಕವಾಗಿ ಆರೋಗ್ಯಕರ ಆಯ್ಕೆ. ಇದು ಹೆಚ್ಚು ಹೊಟ್ಟೆ ತುಂಬಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಅನ್ನು ನಿಯಂತ್ರಿಸುತ್ತದೆ. ಇದರಲ್ಲಿ ಮೆಗ್ನೀಸಿಯಮ್ ಕೂಡ ಅಧಿಕವಾಗಿದೆ. 

ಮುಂಜಾನೆ ಖಾಲಿ ಹೊಟ್ಟೆಗೆ ಟೀ ಕುಡಿಯೋ ಅಬ್ಯಾಸ ಇದ್ರೆ ಇಂದೇ ಬಿಟ್ಬಿಡಿ

ಕೆಂಪು ಅಕ್ಕಿ (ರೆಡ್ ರೈಸ್‌)

ಆಂಥೋಸಯಾನಿನ್ ಎಂಬ ಆಂಟಿ ಆಕ್ಸಿಡೆಂಟ್‌ಗಳಿಂದ ಈ ಅಕ್ಕಿ ತನ್ನ ಬಣ್ಣವನ್ನು ಪಡೆಯುತ್ತದೆ. ಕೆಂಪು ಅಕ್ಕಿಯಲ್ಲಿ ಕಂದು ಅಕ್ಕಿಯಂತೆ ಫೈಬರ್ ಕೂಡ ಇದೆ, ಇದು ಗಣನೀಯ ಪ್ರಮಾಣದ ಕಬ್ಬಿಣವನ್ನು ಹೊಂದಿರುತ್ತದೆ, ಹೀಗಾಗಿ ಉರಿಯೂತವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕ ಇಳಿಸಲು ಪ್ರಯತ್ನಿಸುವ ಎಲ್ಲರಿಗೂ ಈ ಅಕ್ಕಿ  ಪ್ರಯೋಜನಕಾರಿ. ಏಕೆಂದರೆ ಕೆಂಪು ಅಕ್ಕಿ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಇದರ ಪರಿಣಾಮವಾಗಿ ಅದು ನಿಮ್ಮನ್ನು ಹೊಟ್ಟೆ ತುಂಬಿದ ಸ್ಥಿತಿಯಲ್ಲಿಡುತ್ತದೆ ಮತ್ತು ಅನಾರೋಗ್ಯಕರ ಆಹಾರಗಳನ್ನು ತಿನ್ನುವುದನ್ನು ತಡೆಯುತ್ತದೆ. 100 ಗ್ರಾಂ ಕೆಂಪು ಅಕ್ಕಿಯು 455 ಕ್ಯಾಲೊರಿಗಳನ್ನು ಹೊಂದಿದೆ, ಅದರ ಪೌಷ್ಟಿಕಾಂಶದ ಕಾರಣದಿಂದಾಗಿ ಈ ಅಕ್ಕಿಯನ್ನು ಇಂದು ಎಲ್ಲ ಕಡೆ ಆಹಾರದಲ್ಲಿ ಸೇರಿಸುತ್ತಿದ್ದಾರೆ. ಕೆಂಪು ಅಕ್ಕಿಯಲ್ಲಿ ಆಂಥೋಸಯಾನಿನ್ಸ್, ಅಪಿಜೆನಿನ್, ಮೈರಿಸೆಟಿನ್ ಮತ್ತು ಕ್ವೆರ್ಸೆಟಿನ್‌ನಂತಹ ಫ್ಲೇವೊನೈಡ್‌ಗಳಿವೆ. ಇದು ದೇಹವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಮತ್ತು ಹೃದಯ ರೋಗಗಳು ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೋವಿಡ್ ವ್ಯಾಕ್ಸಿನ್ ಕುರಿತ ಈ ಮಿಥ್ಯೆಗಳಿಗೆ ಬಲಿಯಾಗಬೇಡಿ!

ಕಪ್ಪು ಅಕ್ಕಿ (ಬ್ಲ್ಯಾಕ್ ರೈಸ್)

ಕಪ್ಪು ಅಕ್ಕಿಯನ್ನು ನೇರಳೆ ಅಕ್ಕಿ ಎಂದೂ ಕರೆಯುತ್ತಾರೆ. ಹೊಟ್ಟುಗಳಲ್ಲಿ ಫೈಟೊಕೆಮಿಕಲ್ಸ್ ಇರುವುದರಿಂದ ಈ ಅಕ್ಕಿಯ ವಿಶಿಷ್ಟ ಬಣ್ಣವಾಗಿದೆ. ಇದು ಪ್ರೋಟೀನ್, ಫೈಬರ್ ಮತ್ತು ವಿಟಮಿನ್ ಇ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಕಪ್ಪು ಅಕ್ಕಿಯು ಎಲ್ಲಾ ವಿಧದ ಅಕ್ಕಿಗಳಿಗಿಂತ ಗರಿಷ್ಠ ಪ್ರಮಾಣದ ಆಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿರುತ್ತದೆ ಮತ್ತು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ ಎಂದು ಸಂಶೋಧನೆ ಸೂಚಿಸುತ್ತದೆ.

#BalancedDiet ಅಂದ್ರೆ ಏನು ಅನ್ನೋದು ಗೊತ್ತಾ? ಸರಿಯಾಗಿ ತಿಳ್ಕೊಂಡ್ರೆ ಅರೋಗ್ಯ ಉತ್ತಮ

ಆಂಟಿ ಆಕ್ಸಿಡೆಂಟ್‌ಗಳು ಜೀವಕೋಶಗಳನ್ನು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತವೆ, ಇದು ಕೆಲವು ರೀತಿಯ ಕ್ಯಾನ್ಸರ್ ಮತ್ತು ಖಿನ್ನತೆಯಂತಹ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗುತ್ತದೆ. 100 ಗ್ರಾಂ ಕಪ್ಪು ಅಕ್ಕಿಯಲ್ಲಿ 335 ಕ್ಯಾಲೋರಿಗಳಿವೆ, ತೂಕ ಇಳಿಸಿಕೊಳ್ಳಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಪ್ರಯತ್ನಿಸುವವರಿಗೆ ಇದು ಅತ್ಯುತ್ತಮವೆಂದು ಪರಿಗಣಿಸಲಾಗಿದೆ.

ಯಾವುದು ಒಳ್ಳೆಯದು?

ಈ ಮೇಲಿನ ಇಷ್ಟು ವಿಧದ ಅಕ್ಕಿಗಳಲ್ಲಿ, ಕೆಂಪು, ಕಪ್ಪು ಮತ್ತು ಕಂದು ಅಕ್ಕಿ ಹೆಚ್ಚು ಪೌಷ್ಟಿಕವಾಗಿವೆ. ಬಿಳಿ ಅಕ್ಕಿಗೆ ಹೋಲಿಸಿದರೆ ಅವು ಹೆಚ್ಚು ಆಂಟಿ ಆಕ್ಸಿಡೆಂಟ್‌ಗಳು ಫೈಬರ್, ಪ್ರೋಟೀನ್ ಮತ್ತು ಇತರ ಜೀವಸತ್ವಗಳು, ಖನಿಜಗಳನ್ನು ಹೊಂದಿರುತ್ತವೆ. ಬಿಳಿ ಅಕ್ಕಿಯ ಪ್ರಮುಖ ನ್ಯೂನತೆಯೆಂದರೆ ಅದು ಹೆಚ್ಚು ಸಂಸ್ಕರಿಸಲ್ಪಟ್ಟಿರುವುದರಿಂದ ಅಗತ್ಯ ಪೋಷಕಾಂಶಗಳನ್ನು ಒದಗಿಸುವಲ್ಲಿ ವಿಫಲವಾಗುತ್ತದೆ. ಮತ್ತು ಇತರ ತಳಿಗಳಂತೆ ಹೊಟ್ಟೆ ತುಂಬುವುದಿಲ್ಲ. ಯಾವ ವಿಧದ ಅಕ್ಕಿಯನ್ನು ಸೇವಿಸಿದರೂ, ಇದರಲ್ಲಿ ಕ್ಯಾಲೋರಿ ಹಾಗೂ ಕಾರ್ಬೋಹೈಡ್ರೇಟ್ ಹೆಚ್ಚು ಎಂಬುದನ್ನು ಮರೆಯಬೇಡಿ. ಕಾರ್ಬೋಹೈಡ್ರೇಟ್‌ನಷ್ಟೇ ಪ್ರೊಟೀನ್‌ ಕೂಡ ಸೇವಿಸಬೇಕು.

click me!