ಸ್ಟ್ರಾಬೆರಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಚಳಿಗಾಲದಲ್ಲಿ ಬೆಳೆಯುವ ಈ ಹಣ್ಣನ್ನು ನಾನಾ ರೂಪದಲ್ಲಿ ಸೇವನೆ ಮಾಡ್ಬಹುದು. ಹಿಂದೆ ಮಾಲ್ ಗೆ ಸೀಮಿತವಾಗಿದ್ದ ಈ ಹಣ್ಣು ಈಗ ಟ್ರಾಫಿಕ್ ಸಿಗ್ನಲ್ ನಲ್ಲಿ ಜಾಗ ಪಡೆದಿದೆ.
ಬೆಂಗಳೂರಿನ ಟ್ರಾಫಿಕ್ ನಲ್ಲಿ ಪೇರಲೆ ಹಣ್ಣು, ಅನಾನಸ್, ಸೌತೆಕಾಯಿ ಮಾರಾಟ ಮಾಡೋದು ಸಾಮಾನ್ಯ ಸಂಗತಿ. ಬೆಂಗಳೂರಿನ ಮಾಲ್ ಗಳಲ್ಲಿ ಮತ್ತು ಅಂಗಡಿಗಳಲ್ಲಿ ಸಿಗ್ತಿದ್ದ ಸ್ಟ್ರಾಬೆರಿ ಈಗ ಬೀದಿಗೆ ಬಂದಿದೆ ಅನ್ನೋದು ಈಗಿನ ವಿಶೇಷ. ಬೆಂಗಳೂರನ್ನು ರೌಂಡ್ ಹಾಕೋರು ನೀವಾಗಿದ್ದರೆ ಸ್ಟ್ರಾಬೆರಿ ಮಾರಾಟಗಾರರು ನಿಮ್ಮ ಕಣ್ಣಿಗೂ ಕಂಡಿರಬಹುದು. ಚಳಿಗಾಲದಲ್ಲಿ ಹೆಚ್ಚಾಗಿ ಬೆಳೆಯುವ ಸ್ಟ್ರಾಬೆರಿ ಈ ವರ್ಷ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಾಟವಾಗಿದೆ.
ಬೆಂಗಳೂರಿ (Bangalore) ಗೆ ಎಲ್ಲಿಂದ ಬರುತ್ತೆ ಸ್ಟ್ರಾಬೆರಿ (Strawberry) ? : ಮಹಾರಾಷ್ಟ್ರ (Maharashtra) ದ ಗಿರಿಧಾಮವಾದ ಮಹಾಬಲೇಶ್ವರದಿಂದ ಈ ಸ್ಟ್ರಾಬೆರಿಯನ್ನು ತರಲಾಗುತ್ತದೆ. ಭಾರತದ ಸುಮಾರು ಶೇಕಡಾ 85ರಷ್ಟು ಸ್ಟ್ರಾಬೆರಿಗಳನ್ನು ಪಶ್ಚಿಮ ಘಟ್ಟಗಳ ಪ್ರಸಿದ್ಧ ಪ್ರವಾಸಿ ತಾಣವಾದ ಮಹಾಬಲೇಶ್ವರ (Mahabaleshwar) ಬೆಟ್ಟದ ಇಳಿಜಾರಿನಲ್ಲಿ ಬೆಳೆಯಲಾಗುತ್ತದೆ. ಮಹಾಬಲೇಶ್ವರ ಪ್ರವಾಸಿ ಸ್ಥಳವೂ ಹೌದು. ಬೆಂಗಳೂರಿನ ಬೀದಿ ಬದಿಯ ಸ್ಟ್ರಾಬೆರಿ ವ್ಯಾಪಾರಿಯೊಬ್ಬರ ಪ್ರಕಾರ, ರಸ್ತೆಬದಿಯಲ್ಲಿ ಸ್ಟ್ರಾಬೆರಿ ಮಾರುವುದು ವಡೋದರಾ, ಅಹಮದಾಬಾದ್ ಮತ್ತು ಮುಂಬೈನಲ್ಲಿ ಸಾಮಾನ್ಯವಾಗಿದೆ. ಎರಡು ವರ್ಷಗಳ ಹಿಂದೆ ಹೈದರಾಬಾದ್ ಮತ್ತು ದಕ್ಷಿಣದ ಇತರ ನಗರಗಳನ್ನು ಪ್ರಯತ್ನಿಸೋಣ ಎಂದು ಯಾರೋ ಹೇಳಿದ್ದರು. ಅದ್ರ ನಂತ್ರ ಬೀದಿ ಬದಿಯಲ್ಲಿ ಸ್ಟ್ರಾಬೆರಿ ವ್ಯಾಪಾರ ಶುರು ಮಾಡಿದೆ ಎನ್ನುತ್ತಾರೆ.
ಹೀಗಿದೆ ಸ್ಟ್ರಾಬೆರಿ ವ್ಯಾಪಾರ : ಇವರು ಎರಡು ದಿನಕ್ಕೊಮ್ಮೆ ಕಲಾಸಿಪಾಳ್ಯ ಮಾರುಕಟ್ಟೆಗೆ ಹೋಗಿ ಸ್ಟ್ರಾಬೆರಿ ತರ್ತಾರಂತೆ. ಒಂದು ಪೆಟ್ಟಿಗೆಯಲ್ಲಿ 8 ಬಾಕ್ಸ್ ಬರುತ್ತದೆಯಂತೆ. ಒಂದು ಬಾಕ್ಸ್ ನಲ್ಲಿ 18 ಹಣ್ಣುಗಳವರೆಗೆ ಇರುತ್ತದೆ. ಬಾಕ್ಸ್ ಗೆ 80 ರೂಪಾಯಿಯಂತೆ ಮಾರಾಟ ಮಾಡ್ತಾರೆ ಇವರು. ಬೆಂಗಳೂರಿನ 20 ಅಪಾರ್ಟ್‌ಮೆಂಟ್‌ಗಳಿಗೂ ಸ್ಟ್ರಾಬೆರಿಯನ್ನು ಪೂರೈಕೆ ಮಾಡ್ತಿದ್ದಾರಂತೆ. ಬೆಂಗಳೂರಿನ ಕೆಲ ಅಪಾರ್ಟ್ಮೆಂಟ್ ಮುಂದೆ ನೀವು ಸ್ಟ್ರಾಬೆರಿ ಬುಟ್ಟಿ ಹಿಡಿದು ಕುಳಿತುಕೊಳ್ಳುವ ವ್ಯಾಪಾರಸ್ಥರನ್ನು ನೋಡ್ಬಹುದು.
Interesting Facts : ಅಷ್ಟಕ್ಕೂ ಚಪಾತಿ ಯಾಕೆ ರೌಂಡ್ ಶೇಪ್‌ನಲ್ಲಿ ಇರ್ಬೇಕು?
ಸ್ಟ್ರಾಬೆರಿ ಮಾರಾಟಕ್ಕೆ ಇಲ್ಲಿಂದ ಬಂದಿದ್ರು ವ್ಯಾಪಾರಸ್ಥರು : ಬೀದಿ ಬದಿಯಲ್ಲಿ ಸ್ಟ್ರಾಬೆರಿ ಮಾರಾಟ ಮಾಡ್ತಿದ್ದ ಬಹುತೇಕರು ಉತ್ತರ ಪ್ರದೇಶದಿಂದ ಬಂದವರು. ಸ್ಟ್ರಾಬೆರಿ ಋತು ಮುಗಿದ್ಮೇಲೆ ಅವರು ತವರಿಗೆ ವಾಪಸ್ ಹೊಗ್ತಾರೆ. ವೈಟ್ ಫೀಲ್ಡ್ ನಲ್ಲಿ ಡಿಸೆಂಬರ್ ನಲ್ಲಿ 70 -80 ಸ್ಟ್ರಾಬೆರಿ ಮಾರಾಟಗಾರರನ್ನು ಕಾಣ್ಬಹುದಾಗಿತ್ತು. ಈಗ 10 ಜನ ಉಳಿದುಕೊಂಡಿದ್ದಾರೆ. ಮಾವಿನ ಋತು ಬರ್ತಿದ್ದಂತೆ ಇವರೆಲ್ಲ ವಾಪಸ್ ಬರುವ ಸಾಧ್ಯತೆಯಿದೆ.
ಈ ಬಾರಿ ಹೆಚ್ಚಿತ್ತು ಸ್ಪರ್ಧೆ : ಈ ಹಿಂದೆ ಸ್ಟ್ರಾಬೆರಿ ತಿನ್ನುವವರ ಸಂಖ್ಯೆ ಕೂಡ ಕಡಿಮೆಯಿತ್ತು. ಮಾರಾಟಗಾರರ ಸಂಖ್ಯೆಯೂ ಕಡಿಮೆಯಿತ್ತು. ಮಾಲ್ ಗಳಲ್ಲಿ ಸಣ್ಣ ಹಣ್ಣಿನ ಅಂಗಡಿಯಲ್ಲಿ ಇದು ಸಿಗ್ತಿತ್ತು. ಆದ್ರೆ ಈ ವರ್ಷ ಸದಾಶಿವನಗರ, ಯಶವಂತಪುರ, ಗೊರಗುಂಟೆಪಾಳ್ಯದ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಸ್ಟ್ರಾಬೆರಿ ಮಾರಾಟ ಮಾಡುವ ವ್ಯಾಪಾರಿಗಳ ಸಂಖ್ಯೆ ಅತಿ ಹೆಚ್ಚಿನ ಪ್ರಮಾಣದಲ್ಲಿತ್ತು. ಡಿಸೆಂಬರ್‌ನಲ್ಲಿ ಬೆಂಗಳೂರಿನಾದ್ಯಂತ ಸುಮಾರು 500 ಮಾರಾಟಗಾರರು ಸ್ಟ್ರಾಬೆರಿಗಳನ್ನು ಮಾರಾಟ ಮಾಡಿದ್ದಾರೆ. ಹಿಂದಿನ ವರ್ಷಗಳಲ್ಲಿ ಅವರ ಸಂಖ್ಯೆ 10 ಅಥವಾ 15 ಮೀರಿರಲಿಲ್ಲ. ಆದರೆ ಈ ಬಾರಿ ಚೆನ್ನೈ ಮತ್ತು ಹೈದರಾಬಾದ್‌ನಿಂದಲೂ ಸ್ಟ್ರಾಬೆರಿ ಮಾರಾಟಗಾರರು ಬೆಂಗಳೂರಿಗೆ ಆಗಮಿಸಿದ್ದರು. ಇದ್ರಿಂದಾಗಿ ಸ್ಪರ್ಧೆ ಹೆಚ್ಚಿತ್ತು. ಇದು ವೈಯಕ್ತಿಕ ಮಾರಾಟದ ಮೇಲೆ ಪರಿಣಾಮ ಬೀರುತ್ತು ಎನ್ನುತ್ತಾರೆ ಪೂರೈಕೆದಾರರು.
ಸಾಮಾನ್ಯವಾಗಿ ಬೀದಿಯಲ್ಲಿ ಮಾರಾಟ ಮಾಡಿದ್ರೆ ಅದು ನೇರವಾಗಿ ರೈತರಿಂದ ನಮಗೆ ಸಿಗ್ತಿದೆ ಎಂದು ನಾವು ಭಾವಿಸ್ತೇವೆ. ಹಾಗಾಗಿ ಅದನ್ನೇ ಖರೀದಿಸಲು ಮುಂದಾಗ್ತೇವೆ. ಬೀದಿಯಲ್ಲಿ ವ್ಯಾಪಾರ ಮಾಡೋದು ಮಾರ್ಕೆಟಿಂಗ್ ತಂತ್ರ ಎನ್ನುತ್ತಾರೆ ತಜ್ಞರು. ಸೂಪರ್ ಮಾರ್ಕೆಟ್ ಜೊತೆ ಇನ್ನೂ ಕೈಜೋಡಿಸದ ರೈತರು ತಮ್ಮ ಬೆಳೆಯನ್ನು ಮಾರಾಟ ಮಾಡಲು ಈ ಹುಡುಗರ ಸಹಾಯ ಪಡೆಯುತ್ತಾರೆ ಎಂಬುದು ಕೆಲವರ ವಾದ.
Cholesterol Problem: ಎಷ್ಟು ಯತ್ನಿಸಿದ್ರೂ ಕೊಬ್ಬು ಕಡಿಮೆಯಾಗ್ತಿಲ್ವಾ? ಇದಿರಬಹುದು ಕಾರಣ
ಸ್ಟ್ರಾಬೆರಿ ಸೇವನೆಯಿಂದ ಲಾಭವೇನು? : ಸ್ಟ್ರಾಬೆರಿ ಹೃದಯ ಸಂಬಂಧಿ ಖಾಯಿಲೆಗಳಿಗೆ ಒಳ್ಳೆಯದು. ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ. ಕ್ಯಾನ್ಸರ್ ವಿರುದ್ಧ ಹೋರಾಡಲು ನಮ್ಮ ದೇಹವನ್ನು ಸದೃಢಗೊಳಿಸುವ ಸ್ಟ್ರಾಬೆರಿ, ತೂಕ ಇಳಿಕೆಗೂ ಸಹಕಾರಿಯಾಗಿದೆ.