ವ್ಹಿಸ್ಕಿಯ ಮುಂದೆ ಬೇರೆ ಸ್ಪಿರಿಟ್ಟೇ ಇಲ್ಲ. ಯಾವ ಸ್ಪಿರಿಟ್ ಇದ್ದರೂ ಸ್ವಲ್ಪ ವ್ಹಿಸ್ಕಿ ಸುರಿದುಕೊಂಡರೆ ದೇಹದಿಂದ ಮೇಲೆ ಬಂದು ತೇಲಾಡಲೇಬೇಕು. ಇದು ಪುರುಷ ಪುಂಗವರ ಪಾನೀಯ. ವ್ಹಿಸ್ಕಿಯ ಹೊಡೆತ ತಾಳಿಕೊಳ್ಳಲೂ ಒಂದು ಗಂಡೆದೆ ಬೇಕು. ಒಳಗೊಳಗೇ ಅದನ್ನು ಎದುರಿಸುವ, ಅದರೊಂದಿಗೆ ಸಹಬಾಳ್ವೆ ಮಾಡುವ ಛಾತಿ ಇರಬೇಕು. ಇದು ಅಳ್ಳೆದೆಯವರಿಗಲ್ಲ. ಇದು ತೀರಾ ಸಭ್ಯರಿಗೂ ಅಲ್ಲ.
ಸಾರಾಯಿ ಅಂದ್ರೆ ಒರಟೊರಟಾದ ಶೀಷೆ. ರಮ್ ಅಂದ್ರೆ ರುಚಿಯ ಹಂಗಿಲ್ಲದೆ ಒಮ್ಮೆಗೇ ಕಿಕ್ ಏರಿಸುವಂತೆ ಗಟಾಗಟಾ ಕುಡಿದು ಹೊರನಡೆದುಬಿಡುವಂಥ ಡ್ರಿಂಕು. ಬ್ರಾಂಡಿ ಅಂದ್ರೆ ಜ್ವರ ಬಂದಾಗ ಕುಡಿಯೋಕೆ ಹೇಳ್ತಾರಲ್ಲ ಡಾಕ್ಟರ್, ಅಷ್ಟೇ ಅದು. ಇನ್ನು ವೈನ್, ಕೆಮ್ಮಿನ ಟಾನಿಕ್ ಕುಡಿದ ಹಾಗಿರುತ್ತೆ. ಅದೂ ಒಂದು ಡ್ರಿಂಕಾ! ಜಿನ್ ಹೆಣ್‌ಮಕ್ಕಳಿಗೇ ಸರಿ. ವೋಡ್ಕಾ, ಅದೂ ಸಭ್ಯರಿಗೆ ಮಾತ್ರ. ವ್ಹಿಸ್ಕಿ ಅಂದ್ರೆ ಮಾತ್ರ ಧ್ವನಿ ನೋಡಿ- ಎಂತಾ ಹಸ್ಕಿ. ಅರೇ ಇಸ್ಕೀ!
ವ್ಹಿಸ್ಕಿಯ ಮುಂದೆ ಬೇರೆ ಸ್ಪಿರಿಟ್ಟೇ ಇಲ್ಲ. ಯಾವ ಸ್ಪಿರಿಟ್ ಇದ್ದರೂ ಸ್ವಲ್ಪ ವ್ಹಿಸ್ಕಿ ಸುರಿದುಕೊಂಡರೆ ದೇಹದಿಂದ ಮೇಲೆ ಬಂದು ತೇಲಾಡಲೇಬೇಕು. ಇದು ಪುರುಷ ಪುಂಗವರ ಪಾನೀಯ. ಈ ಮಾತಿನಲ್ಲಿ ಪಿತೃ ಪ್ರಾಧಾನ್ಯದ ಅಮಲು ಇದೆ ಅನ್ನಿಸಿದರೆ ಕ್ಷಮಿಸಿ. ಆದರೆ ವ್ಹಿಸ್ಕಿಯ ಹೊಡೆತ ತಾಳಿಕೊಳ್ಳಲೂ ಒಂದು ಗಂಡೆದೆ ಬೇಕು. ಒಳಗೊಳಗೇ ಅದನ್ನು ಎದುರಿಸುವ, ಅದರೊಂದಿಗೆ ಸಹಬಾಳ್ವೆ ಮಾಡುವ ಛಾತಿ ಇರಬೇಕು. ಇದು ಅಳ್ಳೆದೆಯವರಿಗಲ್ಲ. ಇದು ತೀರಾ ಸಭ್ಯರಿಗೂ ಅಲ್ಲ. ನಾನು ಸಭ್ಯತನ ಮೀರೋಕೆ ಬಯಸುತ್ತೀನಿ ಅಂತ ಯಾರಾದರೂ ಬಯಸಿ ವ್ಹಿಸ್ಕಿಯ ಸಿಪ್ ಏರಿಸಿದರೆ ಅಂಥವರಿಗೆ ಮಾಫಿ!
ವ್ಹಿಸ್ಕಿ ಸೇವಿಸುವ ಬಗೆಯಲ್ಲಿ ಒಂದು ಬಗೆಯ ರಾಜಾ ಮರ್ಜಿ ಇದೆ. ಇದು ವೈನ್ ಶಾಪಿಗೆ ಹೋಗಿ ಥಟ್ಟನೇ ಒಂದು ಪೆಗ್ ಹಾಕಿ ಹೊರನಡೆದುಬಿಡುವಂಥ ಜಾತಿಯದಲ್ಲ. ಮೊದಲು ಇದಕ್ಕೊಂದು ಸುಖಾಸನ ಬೇಕು. ವಾತಾವರಣದಲ್ಲಿ ಮಂದ ಬೆಳಕಿರಬೇಕು. ಹಿಂದಿಯ ಗಜಲ್‌ಗಳು ಹಿನ್ನೆಲೆಯಲ್ಲಿ ಮೆಲೊಡಿಯಾಗಿ ಕೇಳ್ತಾ ಇರಬೇಕು. ವ್ಹಿಸ್ಕಿಗಾಗಿಯೇ ಇರುವ ವಿಶಿಷ್ಟ ಶೇಪಿನ ಗ್ಲಾಸ್‌ಗಳಿರಬೇಕು. ಬಾಟಲಿಯ ಮುಚ್ಚಳ ತೆಗೆದು ಫ್ರೆಶ್ ಆದ ವ್ಹಿಸ್ಕಿಯನ್ನು ಇಷ್ಟೇ ಇಷ್ಟು ಗ್ಲಾಸಿನ ತುಟಿಯಂಚಿನಿಂದ ಸುರಿದು, ಮೊದಲು ಅದರ ಪರಿಮಳ ಹೀರಬೇಕು. ನಂತರ ಗ್ಲಾಸಿಗೆ ಎರಡು ಪೀಸ್ ಐಸ್ ಹಾಕಿಕೊಳ್ಳಬೇಕು- ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ. ಐಸ್ ಅರ್ಧ ಕರಗಿದ ಬಳಿಕ, ಗ್ಲಾಸನ್ನು ತುಟಿಯ ಬಳಿಗೆ ಒಯ್ದು ಒಂದು ಸಣ್ಣ ಸಿಪ್ ತೆಗೆದುಕೊಳ್ಳಬೇಕು. ಬೇರೆ ಯಾರಾದರೂ ಜೊತೆಗೆ ಇದ್ದರೆ ಚಿಯರ್ಸ್ ಹೇಳುವುದು ಕಡ್ಡಾಯ. ಚಿಯರ್ಸ್ ಹೇಳಿ ಗ್ಲಾಸಿಗೆ ಗ್ಲಾಸು ತಾಗಿಸಿ ಕಣಕ್ಕೆನಿಸುವಾಗಲೂ ಹಿರಿಯರ ಗ್ಲಾಸು ಮೇಲಿರಬೇಕು, ಕಿರಿಯರದು ಕೆಳಗೆ. ನಂತರ ಸಿಪ್ ತೆಗೆದುಕೊಳ್ಳಬಹುದು. ಈಗ ಆ ದ್ರವ ನಿಮ್ಮ ಗಂಟಲಿನಿಂದ ಅನ್ನನಾಳಕ್ಕಿಳಿದು ಜಠರ ಸೇರುವ ಮಾರ್ಗದ ಅಷ್ಟೂ ಚಲನೆ ನಿಮಗೆ ಗೊತ್ತಾಗುತ್ತಾ ಇರುತ್ತದೆ.
ಬೇಸಿಗೆ ಸೆಕೆ ಓಡಿಸೋ ಮಾವಿನ ಕೂಲ್ ಕೂಲ್ ರೆಸಿಪಿ
ವ್ಹಿಸ್ಕಿಯನ್ನು ಸೇವಿಸಬೇಕಾದ್ದು ಹೀಗೆ. ಇದನ್ನು ಆನ್ ದಿ ರಾಕ್ಸ್ ಅಂತಾರೆ. ವ್ಹಿಸ್ಕಿಗೆ ನೀರು ಸೇವಿಸುವವನು ಪಾಪಿ. ವ್ಹಿಸ್ಕಿಗೆ ಥಮ್ಸ್‌ಅಪ್, ಸ್ಪ್ರೈಟ್ ಇತ್ಯಾದಿ ಲಘು ಪಾನೀಯ ಸೇವಿಸುವವನು ಡಬಲ್ ಪಾಪಿ. ಇಂಥವರು ವ್ಹಿಸ್ಕಿ ಕುಡಿದು ಅದಕ್ಕೆ ಅನ್ಯಾಯ ಮಾಡುವುದಕ್ಕಿಂತ ಕಷಾಯ ಕುಡಿಯುವುದು ಒಳ್ಳೆಯದು.
ತಂಪು ತಂಪು ತರಕಾರಿ ಜ್ಯೂಸ್, ಬಾಯಿಗೂ ರುಚಿ, ದೇಹಕ್ಕೂ ಹಿತ
ವ್ಹಿಸ್ಕಿ ಅಂದ್ರೆ ಸ್ಕಾಚ್. ಸ್ಕಾಚ್ ಅಂದ್ರ ವ್ಹಿಸ್ಕಿ. ಎರಡೂ ಅವಿನಾಭಾವ. ಸ್ಕಾಚ್ ಅಂದ್ರೆ ಸ್ಕಾಟ್ಲೆಂಡಿನಲ್ಲಿ ತಯಾರ್ ಆದದ್ದು ಅಂತ. ಸ್ಕಾಟ್ಲೆಂಡಿನವರೇ ಮೊದಲು ವ್ಹಿಸ್ಕಿ ತಯಾರಿಸಿದ್ದು. 1824ರಲ್ಲಿ ಜಾಜ್F ಸ್ಮಿತ್ ಎಂಬಾತ ಮೊದಲ ಬಾರಿಗೆ ವ್ಹಿಸ್ಕಿ ಡಿಸ್ಟಿಲ್ ಮಾಡುವು ಲೈಸೆನ್ಸ್ ಪಡೆದುಕೊಂಡ. ಅಂದಿನಿಂದ, ಸ್ಕಾಟ್ಲೆಂಡಿನಿಂದ ತಯಾರಾಗಿ ಬರುವ ವ್ಹಿಸ್ಕಿಗೆ ಜಗತ್ತಿನ ತುಂಬ ಭಾರಿ ಮಾನ್ಯತೆ ಇದೆ. ಬೇರೆ ದೇಶಗಳೂ ತಯಾರು ಮಾಡುತ್ತವಾದರೂ, ಪಳಗಿದ ಕುಡುಕರು ನಿಜವಾದ ಸ್ಕಾಚ್ ವ್ಹಿಸ್ಕಿ ಮತ್ತು ಆರ್ಡಿನರಿ ವ್ಹಿಸ್ಕಿಯ ವ್ಯತ್ಯಾಸವನ್ನು ಥಟ್ಟನೆ ಕಂಡುಹಿಡಿದುಬಿಡುತ್ತಾರೆ. ಒಳ್ಳೇ ರಸಿಕರು ಸ್ಕಾಚ್ ಅಲ್ಲದೆ ಬೇರೇನೂ ಮೂಸಿ ನೋಡುವುದೂ ಇಲ್ಲ. ಅಷ್ಟರ ಮಟ್ಟಿಗೆ ಅವರು ಡ್ರಿಂಕ್ ಲೋಕದ ಪತಿವ್ರತರು. ಅದರಲ್ಲೂ ಅವರಿಗೆ ಸಿಂಗಲ್ ಮಾಲ್ಟ್ ವ್ಹಿಸ್ಕಿಯೇ ಆಗಬೇಕು. ಹಾಗೆಂದರೆ ಒಂದೇ ಡಿಸ್ಟಿಲರಿಯಲ್ಲಿ ತಯಾರ್ ಆದದ್ದು ಅಂತ ಅರ್ಥ. ಹೆಚ್ಚಾಗಿ ಬಾರ್ಲಿಯಿಂದ ಮಾಡುತ್ತಾರೆ. ಒಂದಕ್ಕಿಂತ ಹೆಚ್ಚು ಡಿಸ್ಟಿಲರಿಯಲ್ಲಿ ಸಿದ್ಧವಾದದ್ದು ಡಬಲ್ ಮಾಲ್ಟ್ ವ್ಹಿಸ್ಕಿ. ಜಾನಿ ವಾಕರ್, ಶಿವಾಸ್ ರೀಗಲ್ ಇವೆಲ್ಲ ಸಿಂಗಲ್ ಮಾಲ್ಟ್‌ನ ಫೇಮಸ್ ಬ್ರಾಂಡ್‌ಗಳು.
ಲಾಕ್‌ಡೌನಲ್ಲಿ ಆನ್‌ಲೈನಲ್ಲಿ ಹೆಚ್ಚು ಹುಡುಕಾಡಿದ ರೆಸಿಪಿಗಳಿವು
ಯಾವ ಬ್ರಾಂಡ್ ಆದ್ರೂ ಸರಿ. ವ್ಹಿಸ್ಕಿ ತಗೊಳಿ. ಹ್ಯಾಪಿಯಾಗಿರಿ. ಲಾಕ್‌ಡೌನ್‌ನ ಕಾರಣ ಬಾರ್‌ಗಳು ಓಪನ್ ಇಲ್ಲದೆ ಕಷ್ಟವಾಗಿದೆ ನಿಜ. ಆದರೆ ನಿಜವಾದ ಗೆಳೆಯರು ಇದ್ದಷ್ಟು ಕಾಲ ಒಂದು ಗುಟುಕು ವ್ಹಿಸ್ಕಿಗೇನೂ ಕೊರತೆ ಆಗಲಾರದು!