International Tea Day 2022: ಅಂತಾರಾಷ್ಟ್ರೀಯ ಚಹಾ ದಿನದ ಇತಿಹಾಸ ಮತ್ತು ಮಹತ್ವ

By Suvarna News  |  First Published May 21, 2022, 12:35 PM IST

ಬೆಳಗ್ಗೆ ಎದ್ದ ತಕ್ಷಣ ಹಾಗೂ ಸಂಜೆಯಾದ ಕೂಡ್ಲೇ ಒಂದು ಕಪ್‌ ಚಹಾ (Tea) ಕುಡಿದ್ರೆ ರಿಲ್ಯಾಕ್ಸ್ ಅಗಿಬಿಡುತ್ತೆ. ಇದಲ್ಲದೆ ದಿನಪೂರ್ತಿ ನಾನಾ ನೆಪವೊಡ್ಡಿ ಟೀ ಕುಡಿಯೋರು ಬೇರೆಯೇ ಇದ್ದಾರೆ. ಚಹಾ ಭಾರತೀಯರ ಅಚ್ಚುಮೆಚ್ಚಿನ ಪಾನೀಯ ಎಂದ್ರೆ ತಪ್ಪಾಗಲಾರದು. ಇವತ್ತು ಅಂತಾರಾಷ್ಟ್ರೀಯ ಚಹಾ ದಿನ (International Tea Day). ಈ ದಿನದ ಇತಿಹಾಸ (History), ಮಹತ್ವದ (Importance) ಬಗ್ಗೆ ತಿಳಿದುಕೊಳ್ಳೋಣ.


ಮೇ 21, 2022ರಂದು ಅಂತರರಾಷ್ಟ್ರೀಯ ಚಹಾ ದಿನ (International Tea Day)ವನ್ನು ಆಚರಿಸಲಾಗುತ್ತಿದೆ. ಚಹಾ ಸೇವನೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ದಿನವನ್ನು ಮುಖ್ಯವಾಗಿ ಆಚರಿಸಲಾಗುತ್ತದೆ. ಚಹಾ ಉತ್ಪಾದಿಸುವ ಹೆಚ್ಚಿನ ದೇಶಗಳಲ್ಲಿ ಚಹಾ ಉತ್ಪಾದನೆಯ ಋತುಮಾನವು ಮೇ ತಿಂಗಳಲ್ಲಿ  ಪ್ರಾರಂಭವಾಗುವುದರಿಂದ ಯುಎನ್ ಮೇ 21 ಅನ್ನು ಅಂತರರಾಷ್ಟ್ರೀಯ ಚಹಾ ದಿನವೆಂದು ಆಚರಿಸಲು ನಿರ್ಧರಿಸಿತು. 

ಅಂತರರಾಷ್ಟ್ರೀಯ ಚಹಾ ದಿನವನ್ನು ಯುಎನ್‌ನ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಆಚರಿಸುತ್ತದೆ. ಇದಕ್ಕೂ ಮುನ್ನ, ಚಹಾ ಉತ್ಪಾದಿಸುವ ರಾಷ್ಟ್ರಗಳಾದ ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ವಿಯೆಟ್ನಾಂ, ಇಂಡೋನೇಷ್ಯಾ, ಕೀನ್ಯಾ, ಮಲಾವಿ, ಮಲೇಷ್ಯಾ, ಉಗಾಂಡಾ, ಭಾರತ ಮತ್ತು ಟಾಂಜಾನಿಯಾಗಳಲ್ಲಿ ಡಿಸೆಂಬರ್ 15 ಅನ್ನು ಅಂತರರಾಷ್ಟ್ರೀಯ ಚಹಾ ದಿನವಾಗಿ ಆಚರಿಸಲಾಗುತ್ತಿತ್ತು

Tap to resize

Latest Videos

ಚಹಾವು ಔಷಧೀಯ ಮೌಲ್ಯವನ್ನು ಹೊಂದಿದೆ ಮತ್ತು ಜನರಿಗೆ ಆರೋಗ್ಯ ಪ್ರಯೋಜನ (Health benefits)ಗಳನ್ನು ತರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಯುಎನ್ ಹೇಳಿದೆ. 2019 ರಲ್ಲಿ, ವಿಶ್ವಸಂಸ್ಥೆ (ಯುಎನ್) ವಿಶ್ವದ ಅತ್ಯಂತ ಹಳೆಯ ಪಾನೀಯಗಳ ಮಹತ್ವವನ್ನು ಗುರುತಿಸಿದೆ. ಚಹಾವು ಅನೇಕ ಸಂಸ್ಕೃತಿಗಳಿಗೆ ಕೇಂದ್ರವಾಗಿದೆ. ಇದು ಉದ್ಯೋಗ, ರಫ್ತು ಗಳಿಕೆ ಮತ್ತು ಆಹಾರ ಭದ್ರತೆಗೆ ಕೊಡುಗೆ ನೀಡುತ್ತದೆ ಎಂದು ತಿಳಿದುಬಂದಿದೆ. ಚಹಾದ ಔಷಧೀಯ ಅಂಶವನ್ನು ಯುಎನ್ ಗುರುತಿಸಿದೆ ಮಾತ್ರವಲ್ಲ, ಪಾನೀಯವನ್ನು ತನ್ನ ಸುಸ್ಥಿರ ಅಭಿವೃದ್ಧಿ ಗುರಿ ಕಾರ್ಯಕ್ರಮದ ಪ್ರಮುಖ ಅಂಶವೆಂದು ಪರಿಗಣಿಸಿದೆ. ಪ್ರಪಂಚದಾದ್ಯಂತ ಹಸಿವು (Hungry) ಮತ್ತು ಬಡತನವನ್ನು ನಿರ್ಮೂಲನೆ ಮಾಡುವಲ್ಲಿ ಚಹಾ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗಿದೆ.

Lavender Tea: ವಿಶ್ವದ ಅತ್ಯಂತ ಆರೋಗ್ಯಕರ ಚಹಾದ ಬಗ್ಗೆ ನಿಮಗೆಷ್ಟು ಗೊತ್ತು

ಅಂತಾರಾಷ್ಟ್ರೀಯ ಚಹಾ ದಿನದ ಇತಿಹಾಸ
2005ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಚಹಾ ದಿನವನ್ನು ಭಾರತದಲ್ಲಿ ಆಚರಿಸಲಾಯಿತು. 2015 ರಲ್ಲಿ ಭಾರತ ಸರ್ಕಾರ ಜಾಗತಿಕವಾಗಿ ಈ ದಿನವನ್ನು ವಿಸ್ತರಿಸಲು ಪ್ರಸ್ತಾಪಿಸಿತು. ಈ ದಿನವನ್ನು ಮೇ ತಿಂಗಳಲ್ಲಿ ಆಚರಿಸಲಾಗುತ್ತದೆ. ಏಕೆಂದರೆ ವರ್ಷದ ಈ ಸಮಯದಲ್ಲಿ ಹೆಚ್ಚಿನ ದೇಶಗಳಲ್ಲಿ ಚಹಾ ಉತ್ಪಾದನೆಯು ಪ್ರಾರಂಭವಾಗುತ್ತದೆ. 

ಚಹಾ ಉದ್ಯಮವು ಕೆಲವು ಬಡ ದೇಶಗಳಿಗೆ ರಫ್ತು ಆದಾಯದ ಮುಖ್ಯ ಮೂಲವಾಗಿದೆ. ಹಾಗೆಯೇ ಅನೇಕರಿಗೆ ಉದ್ಯೋಗವನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಗ್ರಾಮೀಣಾಭಿವೃದ್ಧಿ, ಬಡತನ ನಿವಾರಣೆ ಮತ್ತು ಆಹಾರ ಸುರಕ್ಷತೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಲಕ್ಷಾಂತರ ಕುಟುಂಬಗಳು ಚಹಾ ನಂಬಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. 

ಭಾರತದಲ್ಲಿ ಕಾಶ್ಮೀರಿ ನೂನ್ ಚಹಾ, ಗುಜರಾತಿ ಉಕಾಡೋ, ಇರಾನಿ ಚಹಾ, ಬಂಗಾಳದ ಲಾಬೂ ಚಹಾ, ಮಂಗಳೂರಿನ ಕಸಾಯ್ ಮೊದಲಾದ ಚಹಾಗಳು ಲಭ್ಯವಿದೆ.

Mullein Tea: ನಿದ್ದೆ ಬರ್ತಿಲ್ವಾ ? ಜಸ್ಟ್ ಒಂದು ಕಪ್ ಸ್ಪೆಷಲ್ ಟೀ ಕುಡೀರಿ ಸಾಕು

ಚಹಾ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು:

ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ: ಚಹಾದಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಸಾಕಷ್ಟು ಕಂಡುಬರುವುದರಿಂದ, ಇವುಗಳು ನಮ್ಮ ದೇಹದಲ್ಲಿ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ಉತ್ತೇಜಿಸುವ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡಿ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ.ಚಹಾದಲ್ಲಿ ಪಾಲಿಫಿನಾಲ್‌ ಅಂಶಗಳಿವೆ. ಇದು ನಮ್ಮ ದೇಹದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಗ್ರೀನ್ ಟೀ (Green Tea) ದೇಹದಲ್ಲಿ ರೋಗ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಕೊಲೊರೆಕ್ಟಲ್ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

ದೇಹದ ಮೂಳೆಗಳು ಬಲಗೊಳ್ಳುತ್ತವೆ: ಚಹಾ ಸೇವನೆಯಿಂದ ಮೂಳೆಗಳು (Bone) ಬಲಗೊಳ್ಳುತ್ತವೆ. ಅಧ್ಯಯನಗಳು ಹೇಳುವಂತೆ ಯಾರಿಗೆ ಚಹಾ ಕುಡಿಯುವ ಅಭ್ಯಾಸವಿರುತ್ತದೆ ಯಾವುದೇ ಕೆಟ್ಟ ಅಭ್ಯಾಸಗಳನ್ನು ಹೊಂದಿದ್ದರೂ ಕೂಡ ಇತರರಿಗೆ ಹೋಲಿಸಿದರೆ ಬಲಶಾಲಿಗಳಾಗಿರುತ್ತಾರೆ.

ಚಹಾದಲ್ಲಿ ಕ್ಯಾಲೊರಿ ಅಂಶಗಳು ಕಡಿಮೆ: ಚಹಾದಲ್ಲಿ ಕ್ಯಾಲೊರಿ (Calorie) ಅಂಶಗಳು ಕಡಿಮೆ ಇರುತ್ತದೆ. ಹಾಗಾಗಿ ನೀವು ಕೇವಲ ಕುದಿಯುವ ನೀರಿಗೆ ಚಹಾದ ಪುಡಿಯನ್ನು ಹಾಕಿ ಕುದಿಸಿ ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.ಯಾವುದೇ ಕಾರಣಕ್ಕೂ ಹಾಲು ಅಥವಾ ಸಕ್ಕರೆ ಬೆರೆಸಿ ಕುಡಿಯಬಾರದು. 

ಶ್ವಾಸಕೋಶವನ್ನು ಹಾನಿಯಾಗೊಳಗಾದಂತೆ ರಕ್ಷಿಸುತ್ತದೆ: ಬ್ಲ್ಯಾಕ್ ಟೀಯಲ್ಲಿ ಅತಿ ಹೆಚ್ಚು ಕೆಫಿನ್ ಅಂಶವಿದೆ. ಇದು ಶ್ವಾಸಕೋಶವನ್ನು (Lungs) ಹಾನಿಯಾಗೊಳಗಾದಂತೆ ರಕ್ಷಿಸುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಹಾಗೆಯೇ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಇದು ಕಾಫಿಗಿಂತ ಕಡಿಮೆ ಕೆಫಿನ್ ಅಂಶ ಹೊಂದಿರುತ್ತದೆ.

ಹೃದಯಾಘಾತ, ಪಾರ್ಶ್ವವಾಯು ಸಮಸ್ಯೆಯಿಂದ ದೂರಾಗಬಹುದು: ಚಹಾ ಸೇವನೆಯಿಂದ ಹೃದಯಾಘಾತ (Heartattack) ಮತ್ತು ಪಾರ್ಶ್ವವಾಯು ಸಮಸ್ಯೆಯಿಂದ ದೂರಾಗಬಹುದು. ಏಕೆಂದರೆ ಚಹಾ ಕುಡಿದ ನಂತರದಲ್ಲಿ ಹೃದಯದ ಅಪಧಮನಿಗಳು ಮೃದುವಾಗುತ್ತವೆ ಎಂದು ಹೇಳುತ್ತಾರೆ. ಹೀಗಾಗಿ ಕೊಲೆಸ್ಟ್ರಾಲ್ ಅಂಶದಿಂದ ಮುಕ್ತಿ ಪಡೆದುಕೊಳ್ಳಲು ಚಹಾ ಒಂದು ಅತ್ಯದ್ಭುತ ಪಾನೀಯ ಎಂದು ಗುರುತಿಸಿಕೊಂಡಿದೆ. ಪ್ರತಿದಿನ ಮೂರರಿಂದ ಐದು ಕಪ್ ಚಹ ಕುಡಿಯುವುದರಿಂದ ಕಾಲುಭಾಗದಷ್ಟು ಹೃದಯದ ತೊಂದರೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.

click me!