ದಕ್ಷಿಣ ಭಾರತದಲ್ಲಿನ(South Indian) ಬಹುತೇಕ ಆಹಾರ ಪದ್ಧತಿ(Food Culture) ಆರೋಗ್ಯಕ್ಕೆ(Health) ಉತ್ತಮ ಕೊಡುಗೆ ನೀಡುತ್ತವೆ. ಈ ಸಾಲಿನಲ್ಲಿ ಹುರುಳಿ(Horse Gram) ಸಹ ತನ್ನದೇ ಆದ ಮಹತ್ವ ಪಡೆದಿದೆ. ಪ್ರಧಾನ ಆಹಾರಗಳಲ್ಲಿ ಹುರುಳಿಯೂ ಒಂದಾಗಿದ್ದು, ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ದಕ್ಷಿಣ ಭಾರತದಲ್ಲಿನ(South Indian) ಬಹುತೇಕ ಆಹಾರ ಪದ್ಧತಿ(Food Culture) ಆರೋಗ್ಯಕ್ಕೆ(Health) ಉತ್ತಮ ಕೊಡುಗೆ ನೀಡುತ್ತವೆ. ಪೌಷ್ಠಿಕ(Nutritious) ಆಹಾರಗಳಾಗಿದ್ದು ಎಲ್ಲರೂ ಮೆಚ್ಚುವಂತಹ ಕಾಳು(Seeds), ಬೇಳೆ(Grams), ತರಕಾರಿಗಳನ್ನು(Vegetables) ಸೇವಿಸುತ್ತಾರೆ. ಈ ಸಾಲಿನಲ್ಲಿ ಹುರುಳಿ ಸಹ ತನ್ನದೇ ಆದ ಮಹತ್ವ ಪಡೆದಿದೆ. ಪ್ರಧಾನ ಆಹಾರಗಳಲ್ಲಿ ಹುರುಳಿಯೂ ಒಂದಾಗಿದ್ದು, ಮಳೆಗಾಲದಲ್ಲಿ(Monsoon) ಇದರ ಸಾರು ಮಾಡಿ ಸೇವಿಸಿದರೆ ಸೂಪ್(Soup) ಕುಡಿದಂತಹ ಅನುಭವ ನೀಡುತ್ತದೆ. ಈ ಹುರುಳಿ ಸೇವನೆಯಿಂದ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಮಾಹಿತಿ ಇಲ್ಲಿದೆ. ಹುರುಳಿ ನೋಡಲು ಸಣ್ಣದಾಗಿದ್ದರೂ ಆರೋಗ್ಯದ ಮೇಲೆ ಅದರ ಪ್ರಭಾವ ಬಹಳಷ್ಟಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ನ್ಯೂಟ್ರೀಷನ್(Nutrition), ಖನಿಜಾಂಶ(Manganese) ಇದ್ದು, ಫಾಸ್ಫರಸ್(Phosphorus), ಕ್ಯಾಲ್ಶಿಯಂ(Calcium), ಪ್ರೋಟಿನ್(Protein), ಐರನ್(Iron) ಹೇರಳವಾಗಿದೆ. ಕೇವಲ ಮನುಷ್ಯನಿಗಷ್ಟೇ ಅಲ್ಲದೆ ಪ್ರಾಣಿಗಳಿಗೂ(Animals) ಇದು ಉತ್ತಮ ಆಹಾರವಾಗಿದೆ.
ಹುರುಳಿಯನ್ನು ಮ್ಯಾಕ್ರೋಟೈಲೋಮಾ ಯುನಿಫ್ಲೋರಮ್(Macrotyloma Uniflorum) ಎಂದು ವೈಜ್ಞಾನಿಕವಾಗಿ(Scientific) ಕರೆಯಲಾಗುತ್ತದೆ. ಡಾರ್ಕ್ ಬ್ರೌನ್(Dark Brown) ಬಣ್ಣದಲ್ಲಿನ ಈ ಕಾಳು ಮನುಷ್ಯನ ದೇಹಕ್ಕೆ ಬೇಕಾದ ಚಿಕಿತ್ಸಕ ಗುಣಲಕ್ಷಣಗಳನ್ನು ಹೊಂದಿದೆ.
ಈ 6 ವಸ್ತುಗಳನ್ನು ರಾತ್ರಿ ನೀರಲ್ಲಿ ಹಾಕಿ ಬೆಳಿಗ್ಗೆ ಕುಡಿದ್ರೆ ರೋಗ ದೂರ
ಪ್ರಯೋಜನಗಳು
1. ಸಾಮಾನ್ಯ ಶೀತ(Cold) ಹಾಗೂ ಜ್ವರಕ್ಕೆ(Fever) ಉತ್ತಮ ಔಷಧೀಯ ಆಹಾರವಾಗಿದೆ. ಶೀತ, ಜ್ವರ ಬಂದಾಗ ರೋಗನಿರೋಧಕ ಶಕ್ತಿ(Immunity Power) ಕಡಿಮೆಯಾಗಿರುತ್ತದೆ ಈ ಸಮಯದಲ್ಲಿ ಹುರುಳಿ ಸೇವಿಸಿದರೆ ವೈರಸ್(Virus), ಬ್ಯಾಕ್ಟೀರಿಯಾಗಳ(Bacteria) ವಿರುದ್ಧ ಹೋರಾಡುವುದಲ್ಲದೆ, ದೇಹಕ್ಕೆ ಬೇಕಾದ ಪೌಷ್ಠಿಕಾಂಶವನ್ನು(Nutrition) ನೀಡುತ್ತದೆ. ಆಯುರ್ವೇದದಲ್ಲೂ(Ayurveda) ಹುರುಳಿಯನ್ನು ಔಷಧವಾಗಿ(Medicine) ಕಾಣಲಾಗುತ್ತದೆ. ಹಾಗಾಗಿ ನಮ್ಮ ಪೂರ್ವಜರು ಜ್ವರ, ಕೆಮ್ಮು, ಶೀತ, ಶ್ವಾಸನಾಳದ ಸಮಸ್ಯೆ(Respiratory Problem), ಅಸ್ತಮಾ(Asthma) ಸಮಸ್ಯೆ ಕಾಣಿಸಿಕೊಂಡಾಗ ಹುರುಳಿಯನ್ನು ಸೇವಿಸಲು ಹೇಳುತ್ತಾರೆ. ಹುರುಳಿಯನ್ನು ಸೂಪ್ ರೀತಿ ಸೇವಿಸಿದಾಗ ಕಟ್ಟಿದ ಮೂಗು(Blocked Nose) ನಿವಾರಣೆಯಾಗುತ್ತಲ್ಲದೆ, ಬಹುಬೇಗ ಶೀತ ಕಡಿಮೆಯಾಗಿ ರಿಲ್ಯಾಕ್ಸ್ ಫೀಲ್ ನೀಡುತ್ತದೆ.
2. ಅತಿಯಾಗಿ ಆಹಾರ ಸೇವಿಸಿ, ಅಸಿಡಿಟಿ(Acidity) ಅಥವಾ ಹೊಟ್ಟೆ ಭಾರದ ಸಮಸ್ಯೆಯನ್ನು ಗಂಟೆಗಟ್ಟಲೆ ಅನುಭವಿಸುತ್ತಿದ್ದರೆ ಅದು ಅಜೀರ್ಣಕ್ಕೆ(Indigestion) ಕಾರಣವಾಗುತ್ತದೆ. ಹೀಗೆ ಕಾಣಿಸಿಕೊಂಡಾಗ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ(Empty Stomach) ಹುರುಳಿಯನ್ನು ಸೇವಿಸಬೇಕು. ಇದು ಜೀರ್ಣಕ್ರಿಯೆಗೆ(Digestion) ಸಹಕರಿಸುತ್ತದೆ.
3. ಪ್ರತೀ ದಿನ ಬೆಳಗ್ಗೆ(Morning) ಹುರುಳಿಯನ್ನು ಸೇವಿಸಿದರೆ ತೂಕ ಕಡಿಮೆಯಾಗುತ್ತದೆ(Weight Loss) ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಹುರುಳಿ ಪುಡಿ, ಜೀರಿಗೆ ಪುಡಿ(Cumin Powder) ಎರಡನ್ನೂ ನೀರಿನಲ್ಲಿ(Water) ಹಾಕಿ ಖಾಲಿ ಹೊಟ್ಟೆಯಲ್ಲಿ ಪ್ರತೀ ದಿನ ಎರಡು ಬಾರಿ(Twice a Day) ಸೇವಿಸುವುದರಿಂದ ಬೇಗ ಫಲಿತಾಂಶ ಪಡೆಯಬಹುದು. ಕೆಲವರು ಹುರುಳಿ ಪುಡಿ ರೂಪದಲ್ಲಿ ಸೇವಿಸಬಾರದು ಎನ್ನುತ್ತಾರೆ. ಅಂತಹವರಿಗೆ ಮೊಳಕೆ ಕಟ್ಟಿದ ಹುರುಳಿಗೆ ಕಾಳುಮೆಣಸಿನ ಪುಡಿ(Pepper Powder), ಕಡಲೇ ಕಾಳು ಹಾಕಿ ಸಲಾಡ್(Salad) ರೀತಿ ಸೇವಿಸಿದರೂ ತೂಕ ಕಡಿಮೆಯಾಗುತ್ತದೆ.
4. ಮುಟ್ಟಿನ ಸಮಸ್ಯೆಯಲ್ಲಿ(Mensural Problem) ಸಂಕಟ ಹೆಚ್ಚು. ಕೆಲವರಿಗೆ ಹೊಟ್ಟೆ ನೋವು(Stomach Pain), ಸುಸ್ತಾಗುವುದು, ನಿಶ್ಯಕ್ತಿಯಾಗುವುದು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ. ಈ ಸಮಯದಲ್ಲಿ ಹುರುಳಿಯ ಸೂಪ್ ಅಥವಾ ಸಲಾಡ್ ಮಾಡಿ ಸೇವಿಸುವುದರಿಂದ ಈ ಸಮಯದಲ್ಲಾಗುವ ಕಿರಿಕಿರಿಯಿಂದ(Irritation) ಪರಿಹಾರ ಸಿಗುತ್ತದೆ. ಅನಿಯಮಿತ ಮುಟ್ಟಿನ ಚಕ್ರಗಳು(Improper Periods) ಅಥವಾ ಅತಿಯಾದ ರಕ್ತಸ್ರಾವವಾದಲ್ಲಿ ಹುರುಳಿ ಸೇವಿಸುವುದು ಉತ್ತಮ. ಏಕೆಂದರೆ ಇದರಲ್ಲಿನ ಕಬ್ಬಿಣಾಂಶವು(Iron) ದೇಹದಲ್ಲಿ ಹಿಮೋಗ್ಲೋಬಿನ್(Hemoglobin) ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
5. ಸೇವಿಸುವ ಆಹಾರದಲ್ಲಿ ಫೈಬರ್(Fiber) ಅಂಶ ಕಡಿಮೆ ಇದ್ದಲ್ಲಿ, ನೀರಿನ ಸೇವನೆ ಕಡಿಮೆ(Lack Of Water Intake), ಖಿನಿಜಾಂಶಗಳ ಕೊರತೆ, ಅನಾರೋಗ್ಯಕಾರಿ ಜೀವನಶೈಲಿ(Unhealthy Lifestyle), ಒತ್ತಡ(Stress) ಹೀಗಾ ನಾನಾ ಕಾರಣಗಳಿಂದ ಮಲಬದ್ಧತೆ(Constipation) ಸಮಸ್ಯೆ ಎದುರಾಗುತ್ತದೆ. ಏಕೆಂದರೆ ಕರುಳು ಮತ್ತು ಹಟ್ಟೆಯ ಒಳಪದರವು ಡ್ಯುವೋಡೆನಮ್‌ನ ಮೇಲ್ಭಾಗದಲ್ಲಿ ಸಾಮಾನ್ಯವಾಗಿ ವಿಸ್ತರಿಸಯವ ಮತ್ತು ಸಂಕುಚಿತಗೊಳ್ಳುವ ಸ್ಥಿತಿಯಲ್ಲಿದಿದ್ದಾಗ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹುರುಳಿಯಲ್ಲಿ ಫೈಬರ್ ಪ್ರಮಾಣ ಹೆಚ್ಚಿದ್ದು ಮಲಬದ್ಧತೆ ಸಮಸ್ಯೆಯನ್ನು ಎದುರಿಸಲು ಸಹಾಯ ಮಾಡುತ್ತದೆ. ಈ ರೀತಿಯ ಸಮಸ್ಯೆಯಲ್ಲಿ ನೆನೆಸಿಟ್ಟ ಹುರುಳಿಯನ್ನು(Soaked Horse Gram) ಸಲಾಡ್ ರೂಪದಲ್ಲಿ ಸೇವಿಸಬೇಕು.
6. ಪ್ರತೀ ದಿನ ಹುರುಳಿಯನ್ನು ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳ(Kidney Stone) ಸಂಭವ ಹಾಗೂ ನಿವಾರಣೆಗೆ ಸಹಕರಿಸುತ್ತದೆ. ಕಿಡ್ನಿ ಸ್ಟೋನ್ ಮೂಲತಃ ಕ್ಯಾಲ್ಸಿಯಂ ಆಕ್ಸಲೇಟ್ ಎಂದಯ ಕರೆಯಲ್ಪಡುವ ಸಂಯುಕ್ತದ ಮಿಶ್ರಣವಾಗಿದೆ. ಹುರುಳಿಯು ಸಾಮಾನ್ಯವಾಗಿ ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ರಾತ್ರಿ(Night) ಸಮಯದಲ್ಲಿ ತೆಗೆದುಹಾಕುತ್ತದೆ. ಏಕೆಂದರೆ ಹುರುಳಿಯಲ್ಲಿ ಕಬ್ಬಿಣಾಂಶ(Iron) ಹಾಗೂ ಪಾಲಿಫಿನಾಲ್(Polyphinal) ಅಂಶವು ಹೇರಳವಾಗಿದೆ. ಅಲ್ಲದೆ ಮೂತ್ರಪಿಂಡದ ಕಲ್ಲುಗಳಲ್ಲಿ ಆಂಟಿಆಕ್ಸಿಡೆAಟ್(Antioxidant) ಮಟ್ಟವು ಹೆಚ್ಚಿರುತ್ತವೆ. ಹಾಗಾಗಿ ಕಿಡ್ನಿ ಸ್ಟೋನ್ ಸಮಸ್ಯೆಗೆ ಒಳಗಾದವರು ರಾತ್ರಿ ಹುರುಳಿ ನೆನೆಸಿಟ್ಟು ಮರು ದಿನ ಬೆಳಗ್ಗೆ ಅದನ್ನು ಸೇವಿಸಬೇಕು.
7. ಹುರುಳಿಯಲ್ಲಿನ ಔಷಧೀಯ ಗುಣಗಳಿಂದ ಅಲ್ಸರ್(Ulcer), ಪೈಲ್ಸ್(Piles), ಉರಿ ಮೂತ್ರ, ನಿರ್ಜಲೀಕರಣ(Dehydrate), ಚರ್ಮ ಸಮಸ್ಯೆ(Skin Problem), ಕೊಬ್ಬು(Cholesterol) ಮುಂತಾದ ಸಮಸ್ಯೆಗಳನ್ನು ಗುಣಪಡಿಸುತ್ತದೆ.
ಬೂದುಗುಂಬಳಕಾಯಿ ಜ್ಯೂಸ್ ಕುಡಿದು, ತೂಕ ಇಳಿಸಿ
ಹುರುಳಿ ಸೂಪ್ ಅಥವಾ ಸಾರು ಮಾಡುವುದು ಹೀಗೆ?
ಹುರುಳಿಯನ್ನು ಒಂದು ದಿನ ಚೆನ್ನಾಗಿ ನೆನೆಸಿ, ಅದರ ನೀರು ತೆಗೆದು ಒಂದು ಕಾಟನ್ ಬಟ್ಟೆಯಲ್ಲಿ(Cotton Cloth) ಹರಡಿ. ನೀರು ಡ್ರೆöÊಯಾದ(Dry) ನಂತರ ಕಾಟನ್ ಬಟ್ಟೆಯಲ್ಲಿ ಗಟ್ಟಿಯಾಗಿ ಕಟ್ಟಿ. ಮರುದಿನ ಮೊಳಕೆ ಬಂದ ಹುರುಳಿಯನ್ನು ಕುಕ್ಕರ್‌ನಲ್ಲಿ(Cooker) ನೀರು ಹಾಕಿ ಚೆನ್ನಾಗಿ ಬೇಯಿಸಿ. ಹುರುಳಿ ಸಾಫ್ಟ್(Soft) ಆಗಿ ಬೆಂದ ಮೇಲೆ, ಅದನ್ನು ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ಎಣ್ಣೆ, ಸಾಸಿವೆ(Mustard), ಜೀರಿಗೆ ಪುಡಿ, ಹಿಂಗ್(Hing), ಅರಿಶಿಣ(Turmeric), ಕರಿಬೇವು(Curry Leaves), ರುಬ್ಬಿದ ಮಿಶ್ರಣ, ಬೇಯಿಸಿದ ಹುರುಳಿ ನೀರು, ಸಾರಿನ ಪುಡಿ, ಸ್ವಲ್ಪ ಹುಣಸೆ ರಸ ಹಾಗೂ ಚೂರು ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಸಿದರೆ ಹುರುಳಿ ರಸಂ ಅಥವಾ ಸೂಪ್ ಸವಿಯಲು ಸಿದ್ಧ.