ಚಾಕೋಲೇಟ್ ತಿನ್ನೋಕೆ ಕುಳಿತ್ರೆ ಬಾಯಿ ನಿಲ್ಲೋದಿಲ್ಲ. ಆದ್ರೆ ಈ ಚಾಕೋಲೇಟ್ ಬಗ್ಗೆ ಕೇಳಿದ್ರೆ ಸರಿಯಾಗಿ ಯಾರಿಗೂ ಗೊತ್ತಿಲ್ಲ. ಅದನ್ನು ಯಾವುದ್ರಿಂದ ತಯಾರಿಸಲಾಗುತ್ತೆ ಎಂಬುದು ಅನೇಕರಿಗೆ ತಿಳಿದಿಲ್ಲ. ಚಾಕೋಲೇಟನ್ನು ಹಿಂದೆ ಹೇಗೆಲ್ಲ ಬಳಕೆ ಮಾಡ್ತಿದ್ದರು ಎಂಬ ವಿವರ ಇಲ್ಲಿದೆ.
ಚಾಕೋಲೇಟ್ ನಲ್ಲಿ ಸಾಕಷ್ಟು ವಿಧವಿದೆ. ಅದನ್ನು ತಿನ್ನುವ ಜನರ ಸಂಖ್ಯೆ ಕೂಡ ಹೆಚ್ಚಿದೆ. ದಿನಕ್ಕೊಂದು ವೆರೈಟಿ ಚಾಕೋಲೇಟ್ ಗಳನ್ನು ನಾವು ನೋಡ್ಬಹುದು. ಕೆಲವರಿಗೆ ಡಾರ್ಕ್ ಚಾಕೋಲೇಟ್ ಇಷ್ಟವಾದ್ರೆ ಮತ್ತೆ ಕೆಲವರು ನಾರ್ಮಲ್ ಚಾಕೋಲೇಟ್ ತಿನ್ನುತ್ತಾರೆ. ಚಾಕೋಲೇಟ್ ಯಾವುದೇ ಇರಲಿ, ಮನೆಯ ಫ್ರಿಜ್ ನಲ್ಲಿ, ವ್ಯಾನಿಟಿ ಬ್ಯಾಗ್ ನಲ್ಲಿ ಒಂದಾದ್ರೂ ಚಾಕೋಲೇಟ್ ಇರ್ಬೇಕು ಎನ್ನುವವರು ಅನೇಕ ಮಂದಿ. ಚಾಕೋಲೇಟ್ ಬಗ್ಗೆ ಕೆಲವೊಂದು ಮಿಥ್ಯವಿದೆ. ಚಾಕೋಲೇಟ್ ಸೇವನೆ ಮಾಡೋದ್ರಿಂದ ಹಲ್ಲು ಹಾಳಾಗುತ್ತೆ, ಆರೋಗ್ಯ ಹದಗೆಡುತ್ತೆ ಎಂಬ ಮಾತನ್ನು ನೀವು ಕೇಳಿರ್ತೀರಿ. ಆದರೆ ಎಲ್ಲ ಚಾಕೋಲೇಟ್ ನಿಮ್ಮ ಆರೋಗ್ಯ ಹಾಳ್ಮಾಡೋದಿಲ್ಲ. ಕೆಲ ಚಾಕೋಲೇಟ್ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ.
ದಿನಕ್ಕೆ ಒಂದಾದ್ರೂ ಚಾಕೋಲೇಟ್ (Chocolate) ತಿನ್ನುತ್ತೇನೆ ಎನ್ನುವ ನೀವು ಚಾಕೋಲೇಟ್ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದಿಲ್ಲವೆಂದ್ರೆ ಹೇಗೆ ಹೇಳಿ? ನಾವಿಂದು ನಿಮಗೆ ಚಾಕೋಲೇಟ್ ಗೆ ಸಂಬಂಧಿಸಿದ ಕೆಲ ಆಸಕ್ತಿಕರ ವಿಷ್ಯವನ್ನು ಹೇಳ್ತೆವೆ.
ವೈಟ್ (White) ಚಾಕೋಲೇಟ್ ಚಾಕೋಲೇಟೆ ಅಲ್ಲ ! : ಅಚ್ಚರಿಯಾದ್ರೂ ಇದು ಸತ್ಯ. ನೀವೂ ಕೂಡ ವೈಟ್ ಚಾಕೋಲೇಟನ್ನು ಚಾಕೋಲೇಟ್ ಅಂತಾ ಸೇವನೆ ಮಾಡ್ತಿರಬಹುದು. ಇನ್ಮುಂದೆ ಇದು ಚಾಕೋಲೇಟ್ ಅಲ್ಲ ಎಂಬ ಸತ್ಯ ತಿಳಿದುಕೊಳ್ಳಿ. ಬಿಳಿ ಚಾಕೋಲೇಟ್ ಗೆ ಹಾಲು, ಸಕ್ಕರೆ, ವೆನಿಲ್ಲಾ ಹಾಗೂ ಕೋಕೋ ಬೆಣ್ಣೆ ಬಳಸ್ತಾರೆ. ಕೋಕೋ ಬೀನ್ಸ್ ಬಳಸಿದ್ದು ಮಾತ್ರ ಚಾಕೋಲೇಟ್. ಇದ್ರಲ್ಲಿ ಅದನ್ನು ಬಳಕೆ ಮಾಡದ ಕಾರಣ ಇದು ಚಾಕೋಲೇಟ್ ಆಗಲು ಸಾಧ್ಯವಿಲ್ಲ.
Chocolate Day: ಚಾಕೊಲೇಟ್ ಡೇ ವಿಶೇಷತೆಯೇನು ? ಹೆಚ್ಚು ಚಾಕೊಲೇಟ್ ತಿಂದ್ರೆ ಏನಾಗುತ್ತೆ ?
ಹೀಗೆ ತಯಾರಾಗುತ್ತೆ ಚಾಕೋಲೇಟ್ : ಅನೇಕರಿಗೆ ಚಾಕೋಲೇಟಿನ ಮೂಲ ಯಾವುದು ಎಂಬುದೇ ತಿಳಿದಿಲ್ಲ. ಚಾಕೊಲೇಟ್ ಅನ್ನು ಕೋಕೋ (cocoa) ಮರದ ಹಣ್ಣುಗಳಿಂದ ತಯಾರಿಸಲಾಗುತ್ತದೆ. ಈ ಗಿಡ ಹೆಚ್ಚಾಗಿ ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಕಂಡುಬರುತ್ತದೆ. ಒಂದು ಹಣ್ಣಿನಲ್ಲಿ 40 ಕೋಕೋ ಬೀನ್ಸ್ ಇರುತ್ತದೆ. ಅದನ್ನು ಒಣಗಿಸಿ ಚಾಕೋಲೇಟ್ ತಯಾರಿಸಲು ಬಳಸಲಾಗುತ್ತದೆ.
ಕರೆನ್ಸಿತರ ಬಳಕೆಯಾಗ್ತಿತ್ತು ಚಾಕೋಲೇಟ್ : ರೀಡರ್ಸ್ ಡೈಜೆಸ್ಟ್‌ನಲ್ಲಿನ ಲೇಖನದ ಪ್ರಕಾರ, ಅಜ್ಟೆಕ್ಸ್ ಕೋಕೋ ಬೀನ್ಸ್ ಅನ್ನು ಕರೆನ್ಸಿಯಾಗಿ ಬಳಸಿದರು. ಯುದ್ಧದಲ್ಲಿ ಗೆದ್ದ ಸೈನಿಕರಿಗೆ ಕೋಕೋ ಬೀನ್ಸ್ ಅನ್ನು ಬಹುಮಾನವಾಗಿ ನೀಡಿದರು. ಆ ಸಮಯದಲ್ಲಿ 100 ಕೋಕೋ ಬೀನ್ಸ್ ನೀಡಿದ್ರೆ ಅಮೆರಿಕಾದಲ್ಲಿ ಕಂಡು ಬರುವ ಟರ್ಕಿ ಹಕ್ಕಿಯನ್ನು ಕೊಂಡುಕೊಳ್ಳಬಹುದಿತ್ತು.
ಆರೋಗ್ಯಕ್ಕೆ ಡಾರ್ಕ್ ಚಾಕೋಲೇಟ್ ಒಳ್ಳೆಯದು : ಡಾರ್ಕ್ ಚಾಕೋಲೇಟ್ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲಿರುವ ಮೆಗ್ನೀಸಿಯಮ್ ಅಂಶವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 2012ರಲ್ಲಿ ಆಸ್ಟ್ರೇಲಿಯಾದಲ್ಲಿ ಈ ಬಗ್ಗೆ ಅಧ್ಯಯನ ನಡೆದಿತ್ತು. ಅಧ್ಯಯನದ ಪ್ರಕಾರ, ಯಾರು ಆಗಾಗ, ಡಾರ್ಕ್ ಚಾಕೋಲೇಟನ್ನು ನಿಧಾನವಾಗಿ ಸೇವನೆ ಮಾಡ್ತಾರೋ ಅವರ ರಕ್ತದೊತ್ತಡ ನಿಯಂತ್ರಣಕ್ಕೆ ಬಂದಿತ್ತು. ಕೊಲೆಸ್ಟ್ರಾಲ್ ಕಂಟ್ರೋಲ್ ಮಾಡಲು ಇದು ಬೆಸ್ಟ್.
ಔಷಧಿ ರೂಪದಲ್ಲಿ ಬಳಕೆಯಾಗಿತ್ತು ಚಾಕೋಲೇಟ್ : ಚಾಕೋಲೇಟ್ ಹಿಂದಿನ ಕಾಲದಲ್ಲಿ ಕಹಿ ಇರ್ತಾಯಿತ್ತು. ಹಾಗಾಗಿ ಇದನ್ನು ಹೊಟ್ಟೆ ನೋವಿನ ಔಷಧಿಯಾಗಿ ಬಳಕೆ ಮಾಡ್ತಿದ್ದರು. 17ನೇ ಶತಮಾನದಲ್ಲಿ ಯುರೋಪಿನಲ್ಲಿ ಚಾಕೋಲೇಟ್ ಡ್ರಿಂಕ್ ಫ್ಯಾಷನ್ ಆಗಿ ಮಾರ್ಪಟ್ಟಿತ್ತು.
ಕಾರ್ನ್ಮೀಲ್ ಮತ್ತು ಮೆಣಸಿನಕಾಯಿ ಸೇರಿಸಿ ಚಾಕೋಲೇಟ್ ತಯಾರಿ : 16ನೇ ಶತಮಾನದವರೆಗೆ ಮೇಸೋ ಅಮೆರಿಕಾದಲ್ಲಿ ಮಾತ್ರ ಚಾಕೋಲೇಟ್ ಚಾಲ್ತಿಯಲ್ಲಿತ್ತು. ಸಮಯದಲ್ಲಿ ಚಾಕಲೇಟ್‌ನಲ್ಲಿ ಕಾರ್ನ್ ಮಿಲ್ ಮತ್ತು ಮೆಣಸಿನಕಾಯಿಯನ್ನು ಬೆರೆಸಿ ಪಾನೀಯ ತಯಾರಿಸಿ ಕುಡಿಯಲಾಗ್ತಿತ್ತು.
Hot chocolate ಸೇವನೆಯಿಂದ ಹಾರ್ಟ್ ಅಟ್ಯಾಕ್ ಅಪಾಯ ಕಡಿಮೆಯಾಗುತ್ತಾ?
ಚಾಕೋಲೇಟ್ ಪುಸ್ತಕ : ಚಾಕೊಲೇಟ್ ಬಗ್ಗೆ ಪುಸ್ತಕವೊಂದಿದೆ. ಸೋಫಿ ಮತ್ತು ಮೈಕೆಲ್ ಇದನ್ನು ಬರೆದಿದ್ದಾರೆ. ಪುಸ್ತಕದ ಹೆಸರು ಟ್ರೂ ಹಿಸ್ಟರಿ ಆಫ್ ಚಾಕೋಲೇಟ್. ಈ ಪುಸ್ತಕದಲ್ಲಿ ಚಾಕೋಲೇಟ್ ಅನ್ನು ದೇವರ ಆಹಾರ ಎಂದು ವಿವರಿಸಲಾಗಿದೆ.