ನಾನ್‌ವೆಜ್ ಪ್ರಿಯರ ಫುಡ್ ಲಿಸ್ಟ್‌ನಲ್ಲಿ ಫಿಶ್ ಮೊದಲನೇ ಸ್ಥಾನದಲ್ಲಿರುತ್ತೆ. ಫ್ರೆಶ್ ಮೀನು ಕೊಯ್ದು ಖಾರದಪುಡಿ, ಅರಿಶಿನ ಹಚ್ಚಿ, ರುಚಿಗೆ ತಕ್ಕಷ್ಟು ಉಪ್ಪು, ಹುಳಿ ಸೇರಿಸಿ ಕರಿ ಅಥವಾ ಫ್ರೈ ಮಾಡಿದರೆ ತಿನ್ನಲು ಸಖತ್ತಾಗಿರುತ್ತೆ. ಆದ್ರೆ ಹೀಗೆ ತಿನ್ನಲು ರುಚಿ ರುಚಿಯಾಗಿರುವ ಫಿಶ್ ಕಾಸ್ಟ್ಲೀ ಕೂಡಾ ಆಗಿರುತ್ತೆ ಅನ್ನೋದು ಸಹ ನಿಜ. ಮೀನಿನ ಬೆಲೆ ಸಾಮಾನ್ಯವಾಗಿ ಸಾವಿರದಲ್ಲಿ ಇರುತ್ತೆ. ಆದ್ರೆ ಚೀನಾದಲ್ಲಿ ಮಾರಾಟವಾಗಿರೋ ಮೀನಿನ ಬೆಲೆ ಭರ್ತಿ 2 ಕೋಟಿ ರೂ. ಅಂದ್ರೆ ನಂಬ್ತೀರಾ ?
ಮೀನು ಅಂದ್ರೆ ಸಾಕು ಮಾಂಸಾಹಾರ ಪ್ರಿಯರ ಬಾಯಲ್ಲಿ ನೀರೂರುತ್ತೆ. ಖಾರ, ಹುಳಿ, ಉಪ್ಪು ಹಿತಮಿತವಾಗಿ ಹಾಕಿಕೊಂಡು ಕರಿ, ಫ್ರೈ ಯಾವುದನ್ನಾದರೂ ಮಾಡಿ ಅನ್ನ, ಚಪಾತಿಯ ಜೊತೆಗೆ ಸವಿಯಬಹುದು. ಕರಾವಳಿಗರಿಗೆ ಮೀನು ಸಾಮಾನ್ಯವಾಗಿದ್ದರೂ ನಗರದಲ್ಲಿರುವವರು ಹೆಚ್ಚು ಹಣ ಪಾವತಿಸಿ ಮೀನು ಖರೀದಿಸಬೇಕಾಗುತ್ತದೆ. ಮೀನಿನಲ್ಲಿ ಹಲವು ವೆರೈಟಿಗಳಿವೆ. ಬೂತಾಯಿ, ಬಂಗುಡೆ, ಕಾಣೆ, ಸಿಲ್ವರ್ ಫಿಶ್, ಅಂಜಲ್ ಹೀಗೆ ಹಲವು ವೆರೈಟಿ ಮೀನುಗಳನ್ನು ನೋಡಬಹುದು. ಆಯಾ ಪ್ರದೇಶಕ್ಕೆ ತಕ್ಕಂತೆ ಮೀನುಗಳ ಪ್ರಬೇಧಗಳು ಸಹ ಬದಲಾಗುತ್ತಾ ಹೋಗುತ್ತವೆ. ಅದರಂತೆ ಬೆಲೆಯೂ ಸಹ ವ್ಯತಸ್ಥವಾಗುತ್ತಾ ಹೋಗುತ್ತದೆ. ನೂರು ರೂಪಾಯಿಯಿಂದ ತೊಡಗಿ ಸಾವಿರ ದಾಟುವ ಕಾಸ್ಟ್ಲೀ ಮೀನುಗಳೂ ಇವೆ. ಆದ್ರೆ ಮೀನೊಂದರ ಬೆಲೆ ಭರ್ತಿ 2 ಕೋಟಿ ರೂ. ಇರ್ಬೋದು ಅಂದ್ರೆ ನೀವ್ ನಂಬ್ತೀರಾ ?
ನಂಬೋಕೆ ಕಷ್ಟವಾದರೂ ಇದು ನಿಜ. ಜಪಾನ್‌ನಲ್ಲಿ ಬ್ಲೂಫಿನ್ ಟ್ಯೂನ ಎಂಬ ಮೀನು (Fish) ಭರ್ತಿ 2 ಕೋಟಿ ರೂ.ಗೆ ಮಾರಾಟ (Sale)ವಾಗಿದೆ. ಬ್ಲೂಫಿನ್ ಟ್ಯೂನವನ್ನು ಪ್ರಪಂಚದಾದ್ಯಂತದ ಉನ್ನತ-ಮಟ್ಟದ ಸುಶಿ ರೆಸ್ಟೋರೆಂಟ್‌ಗಳಲ್ಲಿ ವಿಶೇಷ ಖಾದ್ಯವಾಗಿ ಸಿದ್ಧಪಡಿಸುತ್ತಾರೆ. ಹರಾಜಿನಲ್ಲಿ (Auction) ಬ್ಲೂಫಿನ್ ಟ್ಯೂನ ಮೀನು 2 ಕೋಟಿ ರೂ.ಗೂ ಹೆಚ್ಚು ಬೆಲೆಗೆ ಮಾರಾಟವಾಗಿದೆ. ವರ್ಷದ ಮೊದಲ ಮಾರಾಟವು ಕಳೆದ ವರ್ಷದ ಬೆಲೆ (Price)ಗಿಂತ ಎರಡು ಪಟ್ಟು ಹೆಚ್ಚಾಗಿದೆ.
Kitchen Tips: ಮೀನಿನ ದುರ್ವಾಸನೆ ದೂರ ಮಾಡಲು ಈ ಟಿಪ್ಸ್ ಫಾಲೋ ಮಾಡಿ
ಬ್ಲೂಫಿನ್ ಟ್ಯೂನ ಯಾಕಿಷ್ಟು ದುಬಾರಿಯಾಗಿದೆ ?
ಎರಡು ವಿಭಿನ್ನ ರೀತಿಯ ಬ್ಲೂಫಿನ್ ಟ್ಯೂನಗಳಿವೆ. ಪೆಸಿಫಿಕ್ ಬ್ಲೂಫಿನ್ ಟ್ಯೂನ ಮತ್ತು ಅಟ್ಲಾಂಟಿಕ್ ಬ್ಲೂಫಿನ್ ಟ್ಯೂನ. ಎಲ್ಲಾ ಟ್ಯೂನ ಜಾತಿಗಳಲ್ಲಿ, ಇವು ದೊಡ್ಡದಾಗಿದೆ. ಅವು ನಾಲ್ಕು ಮೀಟರ್‌ಗಳಷ್ಟು ದೊಡ್ಡದಾಗಿರುತ್ತವೆ ಮತ್ತು ಸುಮಾರು 600 ಕಿಲೋಗಳಷ್ಟು ತೂಗುತ್ತವೆ. ಈ ಮೀನುಗಳು ಬೆಳೆಯುತ್ತಿರುವಾಗ ಅವುಗಳನ್ನು 'ಮೆಜಿ' ಅಥವಾ 'ಯೋಕೋವಾ"' ಎಂದು ಕರೆಯಲಾಗುತ್ತದೆ. ಮತ್ತು ತೆಳುವಾಗಿ ಕತ್ತರಿಸಿ ಮಾರಾಟ ಮಾಡಲಾಗುತ್ತದೆ. ಆದತೆ ಇವುಗಳು ದೊಡ್ಡದಾದಾಗ ಬ್ಲೂಫಿನ್ ಟ್ಯೂನ ಎಂಬ ಹೆಸರನ್ನು ಪಡೆದುಕೊಳ್ಳುತ್ತವೆ. ಬ್ಲೂಫಿನ್ ಟ್ಯೂನವನ್ನು ವಿಶ್ವದ ಅತ್ಯಂತ ಬೆಲೆಬಾಳುವ ಮೀನು (Costly fish) ಎಂದು ಕರೆಯುತ್ತಾರೆ.
ಜಪಾನ್‌ನಲ್ಲಿ, ಬ್ಲೂಫಿನ್ ಟ್ಯೂನ ಇದು ಕೊಬ್ಬನ್ನು ಸಂಗ್ರಹಿಸುವ ಚಳಿಗಾಲದ (Winter) ಋತುವಿನಲ್ಲಿ ಒಂದು ಸವಿಯಾದ ಪದಾರ್ಥವಾಗಿದೆ. ದಶಕಗಳ ಹಿಂದೆ, ಬ್ಲೂಫಿನ್ ಟ್ಯೂನ ಮೀನುಗಳನ್ನು 'ಕಸದ ಮೀನು' ಎಂದು ಕರೆಯಲಾಗುತ್ತಿತ್ತು. 1970 ರ ದಶಕದಲ್ಲಿ ಜಪಾನ್‌ಗೆ ಎಲ್ಲವೂ ಬದಲಾಯಿತು. ಬೀಫ್ ಜನಪ್ರಿಯತೆಯನ್ನು ಗಳಿಸಿದ ನಂತರ ಬ್ಲೂಫಿಶ್ ಟ್ಯೂನ ಬೇಡಿಕೆ ಹೆಚ್ಚಾಯಿತು. ಯುನೈಟೆಡ್ ಸ್ಟೇಟ್ಸ್‌ಗೆ ಇತ್ತೀಚಿನ ಎಲೆಕ್ಟ್ರಾನಿಕ್ಸ್ ಅನ್ನು ತಲುಪಿಸಿದ ನಂತರ ಜಪಾನ್‌ಗೆ ಹಿಂದಿರುಗಿದ ಸರಕು ವಿಮಾನಗಳು ಅಗ್ಗದ ಟ್ಯೂನ ಮೀನುಗಳನ್ನು ಖರೀದಿಸಲು ಪ್ರಾರಂಭಿಸಿದವು ಮತ್ತು ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಪ್ರಾರಂಭಿಸಿದವು.
Ghol Fish: ಮಲ್ಪೆ ಬಂದರಿನಲ್ಲಿ 1 ಮೀನು ₹2.23 ಲಕ್ಷಕ್ಕೆ ಮಾರಾಟ!
ದೈತ್ಯ ರೆಸ್ಟೋರೆಂಟ್ ಮಾಲೀಕರ ಮಧ್ಯೆ ಹರಾಜಿನ ಜಟಾಪಟಿ
ಜಪಾನ್ ಟೈಮ್ಸ್ ಪ್ರಕಾರ, ಟೋಕಿಯೊದ ಟೊಯೊಸು ಸಗಟು ಮಾರುಕಟ್ಟೆಗೆ ಕಳುಹಿಸಲಾದ ದೇಶೀಯ ಬ್ಲೂಫಿನ್ ಟ್ಯೂನ ಸಂಖ್ಯೆಯು ಡಿಸೆಂಬರ್ 1 ಮತ್ತು ಶುಕ್ರವಾರದ ನಡುವೆ ಸುಮಾರು 220 ಆಗಿತ್ತು. ಆದರೆ ಕಳೆದ ವರ್ಷಕ್ಕಿಂತ ಶೇ 50ರಷ್ಟು ಕುಸಿತವಾಗಿದೆ. ಬಿಸಿನೆಸ್ ಇನ್ಸೈಡರ್ ಪ್ರಕಾರ, ಗ್ರಾಹಕರು ಬ್ಲೂಫಿನ್ ಟ್ಯೂನಕ್ಕೆ ಪಾವತಿಸುವ ಬೆಲೆಯು ಮೀನು ಎಲ್ಲಿಂದ ಬಂದಿದೆ, ಅದನ್ನು ಎಲ್ಲಿ ಬೆಳೆಸಲಾಗಿದೆ ಮತ್ತು ಗ್ರಾಹಕರು ಎಲ್ಲಿ ನೆಲೆಸಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಬ್ಯುಸಿನೆಸ್ ಇನ್ಸೈಡರ್ ಪ್ರಕಾರ ಓಮಾದಿಂದ ಬರುವ ಟ್ಯೂನ ಮೀನುಗಳನ್ನು ವಿಶ್ವದಲ್ಲೇ ಅತ್ಯುತ್ತಮವೆಂದು ಪರಿಗಣಿಸಲಾಗಿದೆ.
ಈ ಬಾರಿ ದೈತ್ಯ ಟ್ಯೂನ ಮೀನನ್ನು ಖರೀದಿಸಲು ದೈತ್ಯ ರೆಸ್ಟೋರೆಂಟ್ ಮಾಲೀಕರ ಮಧ್ಯೆ ಹರಾಜಿನ ಯುದ್ಧವೇ ನಡೆದುಹೋಯಿತು. ಕೊನೆಗೆ ಸುಶಿ ಹಿಂಜಾ ಹೊನೊಡೆರಾ ಎಂಬ ರೆಸ್ಟೋರೆಂಟ್ ನಡೆಸ್ತಿರೋ ಟೋಕಿಯೋ ಮೂಲಕ ಇಂಟರ್ ಮೀಡಿಯೇಟ್ ವೋಲ್‌ಸೇಲರ್ ಆಗಿರೋ ಯಮಾಯುಕಿ ಆಂಡ್ ಕಂಪೆನಿ ಈ ಬಿಡ್ ಗೆದ್ದಿದ್ದು 2 ಕೋಟಿಗೂ ಅಧಿಕ ಮೊತ್ತ ಕೊಟ್ಟು ಒಂದೇ ಮೀನನ್ನು ಖರೀದಿಸಿದೆ. 1999ರ ಬಳಿಕ ಈಗ ಅಂದ್ರೆ 2023ರಲ್ಲಿ ಈ ಪ್ರಬೇಧದ ಮೀನು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಜಪಾನ್‌ನಲ್ಲಿ ವರ್ಷದ ಮೊದಲ ಟ್ಯೂನ ಮೀನು ಯಾವಾಗಲೂ ಅತ್ಯಧಿಕ ಬೆಲೆಗೆ ಹೋಗುತ್ತದೆ. ಕೆಲವು ಕಂಪನಿಗಳು ತಮ್ಮ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಲು ಇದಕ್ಕಾಗಿ ಕೋಟಿ ಕೋಟಿ ಪಾವತಿಸುತ್ತವೆ.