ಯಪ್ಪಾ..ಮಹಿಳೆಯರು ಹಾಕಿರೋ ಬ್ರಾ ಸೈಜ್‌ ನೋಡಿ ಫ್ರೀ ಡ್ರಿಂಕ್ಸ್ ಕೊಡ್ತಾರಂತೆ!

By Kannadaprabha NewsFirst Published Jun 6, 2023, 2:35 PM IST
Highlights

ಬಿಸಿನೆಸ್ ಚೆನ್ನಾಗಿ ಆಗಲು ಶಾಪ್ಸ್‌, ಟೆಕ್ಸ್‌ಟೈಲ್ಸ್‌ ಮೊದಲಾದವು ನಾನಾ ರೀತಿಯ ಟೆಕ್ನಿಕ್ ಅನುಸರಿಸುತ್ತವೆ. ಹಾಗೆಯೇ ಇಲ್ಲೊಂದು ಬಾರ್‌, ತನ್ನ ಗ್ರಾಹಕರನ್ನು ಸೆಳೆಯಲು ವಿಚಿತ್ರ ಆಫರ್ ಕೊಟ್ಟಿದೆ. ಇದು ಸದ್ಯ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. 
 

ಆಸ್ಪ್ರೇಲಿಯಾದ ಒಂದು ಪಬ್‌ನಲ್ಲಿ ಮಹಿಳೆಯರ ಒಳ ಉಡುಪಿನ ಗಾತ್ರದ ಆಧಾರದ ಮೇಲೆ ಅವರಿಗೆ ಉಚಿತವಾಗಿ ಪಾನೀಯವನ್ನು ನೀಡಲಾಗುತ್ತದೆ. ಎ, ಬಿ, ಸಿ ಎಂದು ಒಳ ಉಡುಪಿನ ಗಾತ್ರವನ್ನು ವರ್ಗೀಕರಿಸಿ ಎ ಗಾತ್ರ ಹೊಂದಿವರಿಗೆ 1, ಬಿ,ಗೆ 2, ಸಿ,ಗೆ 4 ಪಾನೀಯಗಳನ್ನು ಅಥವಾ ಮದ್ಯವನ್ನು ಉಚಿತವಾಗಿ ನೀಡಲಾಗುತ್ತದೆ. ಇದನ್ನು ಪ್ರಚಾರ ಮಾಡುವ ಉದ್ದೇಶದಿಂದ ಪಬ್‌ನಲ್ಲಿ ಮಹಿಳೆಯರ ಒಳ ಉಡುಪನ್ನು ನೇತು ಹಾಕಲಾಗಿತ್ತು. ನಂಬೋಕೆ ತುಸು ಕಷ್ಟವೆನಿಸಿದರೂ ಇದು ನಿಜ. ಬಾರ್‌ಗೆ ಜನರನ್ನು ಬರುವಂತೆ ಮಾಡಲು ಈ ಟೆಕ್ನಿಕ್ ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. 

ಬಿಸಿನೆಸ್ ಚೆನ್ನಾಗಿ ಆಗಲು ಶಾಪ್ಸ್‌, ಟೆಕ್ಸ್‌ಟೈಲ್ಸ್‌ ಮೊದಲಾದವು ನಾನಾ ರೀತಿಯ ಟೆಕ್ನಿಕ್ ಅನುಸರಿಸುತ್ತವೆ. ಹಾಗೆಯೇ ಇಲ್ಲೊಂದು ಬಾರ್‌, ತನ್ನ ಗ್ರಾಹಕರನ್ನು ಸೆಳೆಯಲು ವಿಚಿತ್ರ ಆಫರ್ (Weird offer) ಕೊಟ್ಟಿದೆ. ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿರುವ ಹಿಂಡ್ಲಿಯಲ್ಲಿರುವ ವೂಲ್‌ಶೆಡ್ ವಿವಾದಾತ್ಮಕ ವಿಧಾನವನ್ನು ಅನುಸರಿಸಿದೆ. ಅದು ಮಹಿಳೆಯರಿಗೆ ಅವರ ಬ್ರಾ ಸೈಜ್‌ನ ಗಾತ್ರವನ್ನು ಆಧರಿಸಿ ಉಚಿತ ಪಾನೀಯಗಳನ್ನು ನೀಡುವುದಾಗಿ ಘೋಷಿಸಿದೆ.

ನೀಟ್‌ ಪರೀಕ್ಷೆ ವೇಳೆ ಒಳ ಉಡುಪು ಪರಿಶೀಲಿಸಿದ ಅಧಿಕಾರಿಗಳು: ಬ್ರಾ ಧರಿಸದೆ ಎಕ್ಸಾಂ ಬರೆದ ವಿದ್ಯಾರ್ಥಿನಿಯರು!

ಬ್ರಾ ಸೈಜ್‌ನ ಗಾತ್ರವನ್ನು ಆಧರಿಸಿ ಉಚಿತ ಪಾನೀಯ
ಪಬ್ ಸಾಮಾಜಿಕ ಮಾಧ್ಯಮದಲ್ಲಿ ಈವೆಂಟ್ ಅನ್ನು ಜಾಹೀರಾತು (Advertisement) ಪೋಸ್ಟ್ ಮಾಡಿದೆ. 'ಬ್ರಾ ನೇತು ಹಾಕಿ, ಸೈಜ್‌ಗೆ ತಕ್ಕಂತ ಉಚಿತ ಡ್ರಿಂಕ್ಸ್ ಪಡೆಯಿರಿ' ಎಂದು ಇದಕ್ಕೆ ಶೀರ್ಷಿಕೆ ನೀಡಲಾಗಿದೆ. A ಕಪ್ ಹೊಂದಿರುವವರು ಒಂದು ಉಚಿತ ಪಾನೀಯವನ್ನು ಪಡೆಯುತ್ತಾರೆ, B ಕಪ್ ಎರಡು ಪಾನೀಯಗಳನ್ನು ಉಚಿತವಾಗಿ (Free) ಪಡೆಯುತ್ತಾರೆ ಮತ್ತು C ಕಪ್ ಮೂರು ಉಚಿತ ಪಾನೀಯಗಳನ್ನು ಪಡೆಯುತ್ತಾರೆ. ಎಂದು ತಿಳಿಸಲಾಗಿದೆ.

ಪೋಸ್ಟ್ ಮಾಡಿದ ತಕ್ಷಣವೇ ಈ ಜಾಹೀರಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು (User) 'ಒಳಉಡುಪಿನ ಮೇಲೆ ಈ ರೀತಿ ಜಾಹೀರಾತು ನೀಡಿರುವುದು ನಿಜಕ್ಕೂ ವಿಷಾದನೀಯ ಎಂದಿದ್ದಾರೆ. ಇನ್ನೊಬ್ಬರು "ಇದು ಒಳ್ಳೆಯ ಆಲೋಚನೆ ಎಂದು ಭಾವಿಸಿರುವುದು ನಿರಾಶಾದಾಯಕವಾಗಿದೆ' ಎಂದು ಹೇಳಿದರು. ಮತ್ತೊಬ್ಬ ವ್ಯಕ್ತಿ 'ಇದು ನಿಜವಾಗಲೂ ಒಂದು ಭಯಾನಕ ಕಲ್ಪನೆ, ಯಾರು ಅದನ್ನು ಸೂಚಿಸಿದರೋ ಅವರು ಮೂರ್ಖರು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Only for Ladies! ಬಿಗ್ ಬಾಸ್ ಸೋನು ಗೌಡ ಬ್ರಾ ವಿಡಿಯೋ ವೈರಲ್!

ಜನರು ಸಾಕಷ್ಟು ಟೀಕೆಗಳನ್ನು ಎದುರಿಸಿದ ನಂತರ ವೂಲ್‌ಶೆಡ್ ತನ್ನ ಪೋಸ್ಟ್ ಅನ್ನು ತೆಗೆದುಹಾಕಿತು. ಮಹಿಳೆಯರ (Women) ಘನತೆಗೆ ಧಕ್ಕೆ ತರುವ  ಪೋಸ್ಟ್ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿತು. ತಮ್ಮ ಫೇಸ್ಬುಕ್ ಪುಟದಲ್ಲಿ 'ನಮ್ಮ ನೈಟ್‌ಕ್ಲಬ್‌ನಿಂದ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಎದ್ದಿರುವ ಕಳವಳಗಳನ್ನು ನಾವು ಪರಿಹರಿಸಲು ಬಯಸುತ್ತೇವೆ. ಪೋಸ್ಟ್ ನಮ್ಮ ಕೆಲವು ಪೋಷಕರಿಗೆ ಅನಾನುಕೂಲ ಮತ್ತು ದೇಹ (Body)ವನ್ನು ನಾಚಿಕೆಪಡಿಸುವಂತೆ ಮಾಡಿದೆ ಎಂದು ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಹೀಗೆ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ' ಎಂದು ಕ್ಷಮೆಯಾಚಿಸಲಾಗಿದೆ.

The Woolshed on Hindley has taken down and apologised for its recent promotion offering free drinks based on bra size. https://t.co/fdQrkoh1NK

— 7NEWS Adelaide (@7NewsAdelaide)
click me!