ಜುಲೈನಿಂದ ಸೆಪ್ಟೆಂಬರ್ ಆರಂಭದವರೆಗೆ ಗೋದಾವರಿ ಪ್ರದೇಶದಲ್ಲಿ ಮಾತ್ರ ಮೀನುಗಳು ವಿರಳವಾಗಿ ಕಂಡುಬರುತ್ತವೆ. ಗೋದಾವರಿ ಪ್ರದೇಶದ ಸ್ಥಳೀಯ ಮಾರುಕಟ್ಟೆಗಳಲ್ಲಿ ಒಂದು ಕೆಜಿ 4 ಸಾವಿರ ರೂಪಾಯಿಯಂತೆ ಈ ಮೀನು ಮಾರಾಟವಾಗುತ್ತದೆ. ಒಂದೊಂದು ಮೀನು 20 ಸಾವಿರದಂತೆ ಮಾರಾಟವಾಗುತ್ತದೆ ಎನ್ನಲಾಗಿದೆ.
ಹೈದರಾಬಾದ್ (ಜು.19): ಮಳೆಗಾಲದ ಆರಂಭವು ಆಂಧ್ರಪ್ರದೇಶದಲ್ಲಿ ತೀರಾ ಅಪರೂಪವಾಗಿ ಸಿಗುವ ಪುಲಸ ಮೀನಿಗೆ ಅಪಾರವಾದ ಬೇಡಿಕೆಯನ್ನು ತರುತ್ತದೆ. ಈ ಬಾರಿಯ ಪುಲಸ ಮೀನು 20 ಸಾವಿರಕ್ಕಿಂತಲೂ ಅಧಿಕ ರೂಪಾಯಿಗೆ ಬಿಕರಿಯಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಅತ್ಯಂತ ವಿರಳವಾಗಿ ಸಿಗುವ ಹಾಗೂ ಪರಿಮಳಯುಕ್ತ ಮೀನು ಇದಾಗಿದೆ. ಚೇಪಾಲ ಪುಲುಸು ಎನ್ನುವ ಮೀನಿನ ಖಾದ್ಯದಿಂದಲೇ ಈ ಮೀನಿಗೆ ಪುಲಸ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ. ಚೇಪಾಲ ಪುಲುಸು ಎಂದರೆ ಮೀನು ಸಾರು ಎಂದರ್ಥ. ತನ್ನ ವಿಶೇಷ ರುಚಿಯಿಂದಾಗಿ ಇಡೀ ಆಂಧ್ರದಲ್ಲಿ ಇದು ಫೇಮಸ್ ಆಗಿದೆ. ಪುಲಸ ಮೀನು ಆಂಧ್ರಪ್ರದೇಶದಲ್ಲಿ ಎಷ್ಟು ಫೇಮಸ್ ಎಂದರೆ, ಈ ಮೀನು ಸಿಗುವ ಋತುವಿನ ಮುಂಚಿತವಾಗಿಯೇ ಗ್ರಾಹಕರು ಮೀನುಗಾರರಿಗೆ ಮೀನುನ ಅಡ್ವಾನ್ಸ್ ಹಣವನ್ನು ಪಾವತಿ ಮಾಡಿರುತ್ತಾರೆ. ಇದರಿಂದಲೇ ಈ ಮೀನು ಎಷ್ಟು ಫೇಮಸ್ ಎನ್ನುವುದು ನೀವು ತಿಳಿಯಬಹುದು. ಆಂಧ್ರದ ಕರಾವಳಿ ಪ್ರದೇಶದ ಕುಟುಂಬಗಳು ಚೇಪಾಲ ಪುಲುಸುವನ್ನು ರಾಜ ಭಕ್ಷ್ಯವೆಂದು ಪರಿಗಣಿಸುವುದು ಮಾತ್ರವಲ್ಲ, ಹಾಗೇನಾದರೂ ಮೀನುಗಾರಿಕೆಗೆ ಹೋದಾದ ಈ ಮೀನು ಸಿಕ್ಕಲ್ಲಿ ಅದನ್ನು ಊರಿನ ಪ್ರಭಾವಿ ಜನರಿಗೆ ಉಡುಗೊರೆಯಾಗಿ ನೀಡುತ್ತಾರೆ.
ಪುಲಸ ಮೀನಿಗೆ ಯಾಕಿಷ್ಟು ಬೆಲೆ: ಜುಲೈನಿಂದ ಸೆಪ್ಟೆಂಬರ್ ಆರಂಭದವರೆಗೆ ಗೋದಾವರಿ ಪ್ರದೇಶದಲ್ಲಿ ಮಾತ್ರ ಮೀನುಗಳು ವಿರಳವಾಗಿ ಕಂಡುಬರುತ್ತವೆ. 'ಹಿಲ್ಸಾ' ಎಂದೂ ಕರೆಯಲ್ಪಡುವ ಈ ಮೀನುಗಳು ಮಳೆಗಾಲದಲ್ಲಿ ಸಂತಾನೋತ್ಪತ್ತಿಗಾಗಿ ನದಿಮುಖಜಗಳಿಗೆ ವಲಸೆ ಹೋಗುತ್ತವೆ. ನದೀಮುಖಗಳು ಕರಾವಳಿಯ ಜಲಮೂಲಗಳಾಗಿವೆ, ಅಲ್ಲಿ ಭೂಮಿ ಸಮುದ್ರಕ್ಕೆ ಪರಿವರ್ತನೆಯಾಗುತ್ತದೆ ಮತ್ತು ನದಿಗಳು ಮತ್ತು ತೊರೆಗಳಿಂದ ಸಿಹಿನೀರು ಸಮುದ್ರದಿಂದ ಉಪ್ಪುನೀರಿನೊಂದಿಗೆ ಬೆರೆಯುತ್ತದೆ. ಸಂತಾನೋತ್ಪತ್ತಿ ಅವಧಿಯ ನಂತರ ಪುಲಸ ಮೀನುಗಳು ಸಾಯುತ್ತವೆ. ಆದ್ದರಿಂದ ಸೂಕ್ತವಾದ ಸಮಯದಲ್ಲಿ ಮೀನುಗಳನ್ನು ಹಿಡಿಯಬೇಕು.
ಮೀನು ಉಪ್ಪುನೀರಿನಿಂದ ಸಿಹಿನೀರಿಗೆ ಚಲಿಸುವಾಗ ಬದಲಾವಣೆಗಳಿಗೆ ಒಳಗಾಗುತ್ತದೆ, ಆಗ ಮೀನು ತನ್ನ ಪರಿಮಳವನ್ನು ಹೆಚ್ಚಿಸಿಕೊಳ್ಳುತ್ತದೆ. ಗೋದಾವರಿ ಪ್ರದೇಶದ ಸ್ಥಳೀಯ ಮಾರುಕಟ್ಟೆಗಳಲ್ಲಿ ಒಂದು ಕಿಲೋಗ್ರಾಂ ಮೀನು 4,000 ರೂ.ಗೆ ಮಾರಾಟವಾಗುತ್ತದೆ. ಆಗಾಗ ಈ ಮೀನುಗಳನ್ನು ಹರಾಜು ಹಾಕಲಾಗುತ್ತದೆ. ಒಮ್ಮೊಮ್ಮೆ ಒಂದು ಮೀನು 20 ಸಾವಿರಕ್ಕೂ ಅಧಿಕ ಬೆಲೆಗೆ ಮಾರಾಟವಾಗುತ್ತದೆ. ಪುಲಸ ಮೀನಿನ ಬೆಲೆಗಳ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ವೈರಲ್ ಆಗಿದ್ದು, ವೈವಿಧ್ಯತೆಯನ್ನು ಮತ್ತಷ್ಟು ಪ್ರಚಾರ ಮಾಡುತ್ತಿವೆ.
Puffer Fish: ಮೀನುಸಾರು ತಿಂದು ಪತ್ನಿ ಸಾವು, ಗಂಡ ಕೋಮಾದಲ್ಲಿ!
ಈ ಕುರಿತಾಗಿ ಮಾತನಾಡಿರುವ ವಿಶಾಖಪಟ್ಟಣ ಮೀನುಗಾರಿಕೆ ಇಲಾಖೆ ನಿರ್ದೇಶಕಿ ವಿಜಯಾ ಪುಲಸ ಮೀನು ಏಕೆ ವಿರಳ ಎನ್ನುವುದಕ್ಕೆ ಕಾರಣಗಳನ್ನು ನೀಡಿದ್ದಾರೆ. "ಮೀನುಗಳು ಮಳೆಗಾಲದಲ್ಲಿ ನದಿಗಳ ಮೇಲ್ಭಾಗಕ್ಕೆ ವಲಸೆ ಹೋಗುತ್ತವೆ. ಗೋದಾವರಿ ನದಿಯ ಕೆಸರು ನೀರು ಸಂತಾನೋತ್ಪತ್ತಿಯನ್ನು ಉತ್ತೇಜಿಸುತ್ತದೆ. ಮೀನುಮರಿಗಳು ಅಥವಾ ಮರಿ ಮೀನುಗಳು ಮತ್ತೆ ಸಾಗರಕ್ಕೆ ವಲಸೆ ಹೋಗುತ್ತವೆ ಮತ್ತು ಮಾನ್ಸೂನ್ ಸಮಯದಲ್ಲಿ ಮಾತ್ರ ಸಂತಾನೋತ್ಪತ್ತಿಗಾಗಿ ಹಿಂತಿರುಗುತ್ತವೆ. ಒರಿಸ್ಸಾದ ಕೆಲವು ಭಾಗಗಳಲ್ಲಿ ಪುಲಸ ಲಭ್ಯವಿದೆ, ಆದರೆ ರುಚಿ ಮತ್ತು ಜನಪ್ರಿಯತೆಯಿಂದಾಗಿ ಗೋದಾವರಿ ಪುಲಸವು ದುಬಾರಿಯಾಗಿದೆ ಎಂದಿದ್ದಾರೆ. "ಮೀನು ಅಳಿವಿನಂಚಿನಲ್ಲಿರುವ ಕಾರಣ ವಿರಳವಾಗಿದೆ ಮತ್ತು ಇದು ಕಡಿಮೆ ಪ್ರಮಾಣದಲ್ಲಿ ಮಾತ್ರ ಲಭ್ಯವಿದೆ" ಎಂದು ವಿಜಯಾ ಹೇಳುತ್ತಾರೆ.
Bengaluru: ಪ್ರಾಣಿಗಳನ್ನು ಬಿಟ್ರೂ ಪ್ರೀತಿಯ ಮೀನನ್ನು ಬಿಡದ ಏರ್‌ಇಂಡಿಯಾ ವಿರುದ್ಧ ಪ್ರಯಾಣಿಕ ಕಿಡಿ!
ಅತಿಯಾದ ಮೀನುಗಾರಿಕೆ, ಮಾಲಿನ್ಯ ಮತ್ತು ಸಂರಕ್ಷಣಾ ಪ್ರಯತ್ನಗಳ ಕೊರತೆಯಿಂದಾಗಿ ಪುಲಸ ತಳಿಯ ಮೀನುಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಮೀನುಗಾರರು ಇನ್ನೂ ಚೆನ್ನಾಗಿ ಬೆಳೆಯದ ಮೀನುಗಳನ್ನು ಹಿಡಿಯುತ್ತಾರೆ ಎಂದು ಹೇಳಲಾಗಿದೆ. “ಸರ್ಕಾರವು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಆಸಕ್ತಿ ವಹಿಸಬೇಕು. ನಿರ್ವಹಣೆ ಮತ್ತು ಸಂರಕ್ಷಣಾ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕು, ”ಎಂದು ಪ್ರಾಣಿಶಾಸ್ತ್ರದ ಸಂಶೋಧಕ ಪಿ ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.