ದೇವರ ಉಪಾಸನೆಯು ಹಲವಾರು ಕ್ರಮಗಳನ್ನು ಒಳಗೊಂಡಿದೆ. ಈ ಕ್ರಮಗಳಲ್ಲಿ ಅಭೀಷೇಕ, ಅಲಂಕಾರ, ಧೂಪ ಸೇವೆ, ನೈವೇದ್ಯಗಳಲ್ಲಿ ಮಂಗಳಾರತಿ ಒಳಗೊಂಡಿದೆ. ಇದು ನಮ್ಮಲ್ಲಿರುವ ಕೆಡುಕನ್ನು ಸುಟ್ಟುಹಾಕುವುದಲ್ಲದೇ, ಸಕಾರಾತ್ಮಕ ಮನೋಭಾವನೆ ಮೂಡಲು ಸಹಾಯಕವಾಗುತ್ತದೆ. ಹಾಗಾಗಿ ಮಂಗಳಾರತಿಯ ಬಗ್ಗೆ ಮತ್ತಷ್ಟು ತಿಳಿಯೋಣ...
ದೇವಸ್ಥಾನದಲ್ಲಾಗಲಿ (Temple) ಅಥವಾ ಮನೆಯಲ್ಲಾಗಲಿ (Home) ದೇವರ ಪೂಜೆಯ ಕ್ರಮ ವಿಶೇಷವಾಗಿರುತ್ತದೆ. ದೇವರಿಗೆ ಅಭಿಷೇಕ ಮಾಡುವುದು, ಗಂಧ, ಚಂದನ, ಕುಂಕುಮ, ಧೂಪ – ದೀಪ, ಪುಷ್ಪಗಳಿಂದ ಅಲಂಕರಿಸುವುದು. ನೈವೇದ್ಯ ಅರ್ಪಿಸುವುದು ಆನಂತರದಲ್ಲಿ ಮಹಾಮಂಗಳಾರತಿ ಮಾಡುವುದು. ಮಹಾಮಂಗಳಾರತಿಗೆ ವಿಶೇಷ ಮಹತ್ವವಿದ್ದು (Importance), ಆ ಸಮಯದಲ್ಲಿ ಕೋರಿಕೊಂಡ ಇಷ್ಟಾರ್ಥಗಳನ್ನು ದೇವರು ನೇರವೇರಿಸುತ್ತಾರೆ. ಮಂಗಳಾರತಿ ಸಮಯದಲ್ಲಿ ದೇವರ ಮೇಲಿಂದ ಪ್ರಸಾದ ಸಹ ಆಗುವುದನ್ನು ನಾವು ನೋಡಿರುತ್ತೇವೆ, ಇಲ್ಲವೇ ಕೇಳಿರುತ್ತೇವೆ. ಗಂಟಾನಾದದೊಂದಿಗೆ (Bell) ಆಗುವ ಮಂಗಳಾರತಿಯ ಬಗ್ಗೆ ಮತ್ತಷ್ಟು ತಿಳಿಯೋಣ...ದೇವಸ್ಥಾನಗಳಲ್ಲಿ, ಮನೆಯಲ್ಲಿ ಪೂಜೆ ಮಾಡುವಾಗ ದೇವರಿಗೆ ಮಂಗಳಾರತಿಯನ್ನು ಬೆಳಗಲಾಗುತ್ತದೆ. ಆ ಸಮಯದಲ್ಲಿ ದೇವರಲ್ಲಿ ಭಕ್ತಿ ಮತ್ತು ಶ್ರದ್ಧೆಯಿಂದ ಪ್ರಾರ್ಥನೆ (Prayer) ಮಾಡಿಕೊಂಡು ಮನಸ್ಸಿನಲ್ಲಿರುವುದನ್ನು ನೇರವೇರಿಸೆಂದು ಬೇಡಿಕೊಂಡರೆ ಅದು ಈಡೇರುತ್ತದೆ ಎಂಬ ನಂಬಿಕೆ ಇದೆ. ಇದು ಹಲವರ ಅನುಭವದ ಮಾತೂ ಸಹ ಆಗಿದೆ.
ಧಾರ್ಮಿಕ ಮಹತ್ವವುಳ್ಳ ಮಂಗಳಾರತಿ ಕ್ರಮದ ಬಗ್ಗೆ ಹಿಂದೂ ಧರ್ಮದಲ್ಲಿ ಸವಿವರವಾಗಿ ಉಲ್ಲೇಖಿಸಿದ್ದಾರೆ. ಧಾರ್ಮಿಕವಾಗಿ ನಡೆದುಕೊಂಡು ಬಂದಿರುವ ಪರಂಪರೆ, ಆಚಾರ ಕ್ರಮಗಳು (Procedure), ಅಭೀಷೇಕ, ಪೂಜೆ, ನೈವೇದ್ಯ ಇತ್ಯಾದಿಗಳಲ್ಲಿ ಮಂಗಳಾರತಿಯು ಸಹ ಒಂದಾಗಿದೆ. ಸ್ಕಂದ ಪುರಾಣದಲ್ಲಿ (Skanda purana) ಮಂಗಳಾರತಿಗೆ ವಿಶೇಷ ಮಹತ್ವವಿರುವುದರ ಬಗ್ಗೆ ಉಲ್ಲೇಖಿಸಲಾಗಿದೆ. ಪೂಜೆ, ಹೋಮ-ಹವನಗಳಲ್ಲಿ, ಅನುಷ್ಠಾನದ ಕೊನೆಯಲ್ಲಿ ಒಂದು ತಟ್ಟೆಯಲ್ಲಿ ದೀಪವನ್ನು ಇಟ್ಟು ಬೆಳಗುವ ಕ್ರಮ ಎಲ್ಲ ಕಡೆಗಳಲ್ಲಿ ಕಂಡು ಬರುತ್ತದೆ. ಭಕ್ತಿ-ಶ್ರದ್ಧೆಗಳಿಂದ ಆರತಿ (Arati) ಮಾಡಿದರೆ ಅದಕ್ಕೆ ತಕ್ಕ ಫಲವಿದೆ. ಆ ಸಮಯದಲ್ಲಿ ಸಕಾರಾತ್ಮಕ ಶಕ್ತಿ (Positivity) ನಮ್ಮನ್ನು ಪ್ರವೇಶಿಸುತ್ತದೆ. ವ್ಯಕ್ತಿಯ ವ್ಯಕ್ತಿತ್ವದಲ್ಲಿ ತೇಜಸ್ಸು ಉಂಟಾಗುತ್ತದೆ. ಯಾವುದೇ ಮಂತ್ರ, ಪೂಜಾ ವಿಧಾನಗಳು ತಿಳಿಯದಿದ್ದರೂ ಆರತಿಯನ್ನು ಶ್ರದ್ಧೆಯಿಂದ (Dedication) ಮಾಡಿದಾಗ ದೇವರ ಕೃಪೆ ವ್ಯಕ್ತಿಯ ಮೇಲೆ ಆಗುತ್ತದೆ. ಅಂತಹ ಪೂಜೆಯನ್ನು ದೇವರು ಸ್ವೀಕರಿಸಿ ಆಶೀರ್ವದಿಸುತ್ತಾನೆ ಎಂದು ಸ್ಕಂದ ಪುರಾಣ ಹೇಳುತ್ತದೆ. ಹಲವು ಬಗೆಯಲ್ಲಿ ಆರತಿಯನ್ನು ಮಾಡುವ ಕ್ರಮವಿದೆ, ಪ್ರತಿ ಆರತಿಗೂ ಅದರದ್ದೇ ವಿಶೇಷತೆ ಇದೆ.
ಈ 4 ನಕ್ಷತ್ರದವರಲ್ಲಿ ಯಾರು ರಿಚ್, ಸೆಲ್ಫಿಶ್, ಲಕ್ಕಿ ಮತ್ತು ಅಟ್ರ್ಯಾಕ್ಟಿವ್?
ತುಪ್ಪದಾರತಿಯಿಂದ ಯಶಸ್ಸು (Ghee - Success)
ಗೋಘೃತ ಅಂದರೆ ತುಪ್ಪ, ಇದು ಸಮೃದ್ಧಿಯ ಸಂಕೇತವಾಗಿದೆ. ತುಪ್ಪ ಮನಸ್ಸನ್ನು ತಿಳಿಗೊಳಿಸುವುದಲ್ಲದೇ ತಂಪನ್ನು ನೀಡುತ್ತದೆ. ಮುನಿಸುಗಳಿದ್ದರೆ ಅದನ್ನು ನಿವಾರಿಸುವ ಶಕ್ತಿ ತುಪ್ಪಕ್ಕಿದೆ ಎಂದು ಶಾಸ್ತ್ರ ಹೇಳುತ್ತದೆ. ಕೆಲಸಗಳಿಗೆ ಯಾವುದೇ ಅಡೆತಡೆಯಾಗದೇ ಸುಲಭವಾಗಿ ಪೂರ್ತಿಯಾಗುವಂತೆ ಮಾಡಿಕೊಡು ಎಂದು ದೇವರಲ್ಲಿ ಬೇಡಿಕೊಳ್ಳುವಾಗ ತುಪ್ಪದ ದೀಪವನ್ನು ಹಚ್ಚಿಡಬೇಕು. ತುಪ್ಪದಾರತಿಯು ಆತ್ಮದ ಜ್ಯೋತಿಯ (Light) ಪ್ರತೀಕವಾಗಿದೆ. ಅಂತರ್ಮನದಿಂದ ದೇವರಿಗೆ ಆರತಿ ಮಾಡಿದರೆ ಅದು ಪಂಚಾರತಿ ಆಗುತ್ತದೆ. ಈ ಪಂಚಾರತಿಯು ವ್ಯಕ್ತಿಯ ಜೀವ ಮತ್ತು ಆತ್ಮಕ್ಕೆ (Soul) ನೆಮ್ಮದಿಯನ್ನು ಕಲ್ಪಿಸುತ್ತದೆ.
ದೇವರನ್ನು ಆಹ್ವಾನಿಸಲು ಕರ್ಪೂರದಾರತಿ (Camphor)
ಕರ್ಪೂರಕ್ಕೆ ಶಾಸ್ತ್ರದಲ್ಲಿ ವಿಶೇಷ ಮಹತ್ವವಿದೆ. ಕರ್ಪೂರದ ಘಮ ವಾತಾವರಣವನ್ನು ಶುದ್ಧಿಗೊಳಿಸುತ್ತದೆ. ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಪೂಜಾ ಸ್ಥಳಕ್ಕೆ ದೇವರನ್ನು ಆಹ್ವಾನಿಸಲು ಕರ್ಪೂರದ ಆರತಿ ಮಾಡುತ್ತಾರೆ.
ಘಂಟಾನಾದ ಮತ್ತು ಶಂಖಧ್ವನಿ (Conch)
ಮಂಗಳಾರತಿಯನ್ನು ಮಾಡುವಾಗ ಅದರ ಜೊತೆ ಜೊತೆಗೆ ಘಂಟಾನಾದವನ್ನು ಸಹ ಮಾಡಲಾಗುತ್ತದೆ. ಶಂಖ ನಾದವು ಮೊಳಗುವುದರಿಂದ ಮನಸ್ಸು ಒಂದು ಕಡೆ ಕೇಂದ್ರಿತವಾಗುತ್ತದೆ. ಏಕಾಗ್ರತೆ ಉತ್ಪನ್ನವಾಗುತ್ತದೆ. ಶರೀರದ ಸುಪ್ತ ಶಕ್ತಿಗಳು ಜಾಗೃತವಾಗುವುದಲ್ಲದೇ, ದೇಹಕ್ಕೆ ಹೊಸ ಚೈತನ್ಯ ಮೂಡುತ್ತದೆ.
ಎಷ್ಟು ಬಾರಿ ಆರತಿ ಮಾಡಬೇಕು?
ಆರತಿ ಮಾಡುವ ಕ್ರಮ ಹೀಗಿದೆ : ಒಂದರಿಂದ (one) ಐದು(Five) ಬಾರಿ (Time) ಆರತಿ ಮಾಡಬಹುದಾಗಿದೆ. ವಿಶೇಷ ಸಂದರ್ಭಗಳನ್ನು ಹೊರತುಪಡಿಸಿದರೆ, ಪ್ರತಿ ನಿತ್ಯ ಮನೆಯಲ್ಲಿ ಎರಡು ಬಾರಿ ಆರತಿಯನ್ನು ಮಾಡಬಹುದಾಗಿದೆ. ಒಂದು ಪ್ರಾತಃಕಾಲ ಪೂಜಾ ಸಮಯದಲ್ಲಿ, ಇನ್ನೊಂದು ಸಂಧ್ಯಾಕಾಲದಲ್ಲಿ ಮಾಡಬಹುದಾಗಿದೆ. ವಿಶೇಷ ಸಂದರ್ಭಗಳಲ್ಲಿ ಐದು ವಸ್ತುಗಳಿಂದ ಆರತಿಯನ್ನು ಮಾಡುತ್ತೇವೆ. ಧೂಪ, ದೀಪ, ಶುಭ್ರ ವಸ್ತ್ರದಿಂದ, ಕರ್ಪೂರದಿಂದ ಮತ್ತು ನೀರಿನಿಂದ ಆರತಿಯನ್ನು ಮಾಡುತ್ತಾರೆ.
ಈ 3 ರಾಶಿಗಳಿಗೆ ಜುಲೈನಲ್ಲಿ ಕುಬೇರನ ಕೃಪೆ - ಧನಲಾಭ
ಆರತಿ ಮಾಡುವ ಕ್ರಮ (Procedure)
ಆರತಿಯನ್ನು ಮಾಡುವಾಗ ಓಂ (Om) ಆಕಾರ (Shape) ಬರುವ ರೀತಿಯಲ್ಲಿ ಕೈಯನ್ನು ತಿರುಗಿಸಬೇಕು. ನಮ್ಮ ಎಡಭಾಗದಿಂದ ಆರಂಭಿಸಿ ಬಲಭಾಗದ ವರೆಗೆ ತರಬೇಕು, ಮೊದಲು ದೇವರ ಪಾದಗಳಿಗೆ ನಾಲ್ಕುಬಾರಿ, ನಾಭಿಯ ಬಳಿ ಎರಡು ಬಾರಿ, ಮುಖದ ಬಳಿ ಒಂದು ಸಾರಿ ಆರತಿ ಮಾಡಬೇಕು ಆನಂತರ ಮೂರ್ತಿಯ ಬಳಿ ಏಳು ಬಾರಿ ದುಂಡಾಕಾರವಾಗಿ ಆರತಿ ಬೆಳಗಬೇಕು. ಆರತಿಯಾದ ಬಳಿಕ ತಟ್ಟೆಯ ನಾಲ್ಕು ಕಡೆಗೆ ಜಲವನ್ನು ಪ್ರೋಕ್ಷಿಸಬೇಕು ಇದರಿಂದ ಆರತಿ ಶಾಂತವಾಗುತ್ತದೆ.
ದೇವರಿಗೆ ಎಷ್ಟು ಬಾರಿ ಆರತಿ
ಬೇರೆ ಬೇರೆ ದೇವತೆಗಳಿಗೆ ಆರತಿಯನ್ನು ಮಾಡುವಾಗ ತಿರುಗಿಸುವ ಸಂಖ್ಯೆ ಬೇರೆ ಇದೆ. ಶಿವನಿಗೆ ಮೂರು ಅಥವಾ ಐದು ಬಾರಿ. ಗಣಪತಿಗೆ ನಾಲ್ಕು ಬಾರಿ. ವಿಷ್ಣುವಿಗೆ ಹನ್ನೆರಡು ಬಾರಿ, ಸೂರ್ಯನಿಗೆ ಏಳು ಬಾರಿ ಮತ್ತು ದೇವಿ ದುರ್ಗೆಗೆ ಒಂಭತ್ತು ಬಾರಿ ತಿರುಗಿಸುವ ಬಗೆಯಿಂದ ಆರತಿ ಮಾಡಬೇಕು.
ಮಂಗಳಾರತಿ ತೆಗೆದುಕೊಳ್ಳುವ ಸರಿಯಾದ ಕ್ರಮ
ಆರ್ತಿಕ್ಯಗ್ರಹಣೇ ಕಾಲೇ ಏಕಹಸ್ತೇನ ಯೋಜಯೇತ್/ಯದಿ ಹಸ್ತ ದ್ವಯೇನೈವ ಮಮ ದ್ರೋಹಿ ನ ಸಂಶಯಃ//
ದೇವರಿಗೆ ಮಾಡಿದ ಮಂಗಳಾರತಿಯನ್ನು ತೆಗೆದುಕೊಳ್ಳುವಾಗ ಎರಡೂ ಕೈಯಿಂದ ತೆಗೆದುಕೊಳ್ಳಬಾರದು. ಆರತಿಯನ್ನು ಬಲಗೈಯಿಂದ ಮಾತ್ರ ತೆಗೆದುಕೊಳ್ಳಬೇಕು.
ವರಾಹ ದೇವರು ತನ್ನ ಪತ್ನಿಗೆ ಈ ವಿಷಯದ ಬಗ್ಗೆ ತಿಳಿಸುತ್ತಾನೆ. ಆರತಿಯನ್ನು ಮೊದಲು ತಲೆಗೆ ತೆಗೆದುಕೊಂಡು, ನಂತರ ನಾಭಿಯ ಎಡಭಾಗದಲ್ಲಿ ತೆಗೆದುಕೊಳ್ಳಬೇಕು. ಶಿರದಲ್ಲಿ ಇರುವ ಅಮೃತವನ್ನು ಹೃದಯಕ್ಕೆ ತಂದು, ಹೃದಯದಲ್ಲಿರುವ ಅಗ್ನಿಯನ್ನು ನಾಭಿಯ ಎಡಭಾಗದಲ್ಲಿ ಇರುವ ಪಾಪಪುರುಷನಲ್ಲಿ ಸುಡಬೇಕು. ಆಗ ನಮ್ಮ ಶರೀರ (Body) ಶುದ್ಧವಾದಂತೆ. ಮಹಾಮಂಗಳಾರತಿಯು ವ್ಯಕ್ತಿಯ ಪಾಪನಾಶ ಮಾಡುವುದಲ್ಲದೇ, ಇಷ್ಟಾರ್ಥವನ್ನು ಕರುಣಿಸುತ್ತದೆ.