ಪ್ರತಿ ವರ್ಷ ಶಿವರಾತ್ರಿ ಬಳಿಕ ಸುಕ್ಷೇತ್ರ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆ ವೇಳೆ ಇಲ್ಲಿ ನುಡಿಯುವ ಕಾಲಜ್ಞಾನದ ಕಾರ್ಣಿಕ ಖ್ಯಾತಿ ಪಡೆದಿದ್ದು, ಈ ಬಾರಿ 2024ರ ಕಾಲಜ್ಞಾನದ ಭವಿಷ್ಯ ನಿಜವಾಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ.
ವಿಜಯಪುರ (ಜು.6): ಪ್ರತಿ ವರ್ಷ ಶಿವರಾತ್ರಿ ಬಳಿಕ ಸುಕ್ಷೇತ್ರ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆ ವೇಳೆ ಇಲ್ಲಿ ನುಡಿಯುವ ಕಾಲಜ್ಞಾನದ ಕಾರ್ಣಿಕ ಖ್ಯಾತಿ ಪಡೆದಿದ್ದು, ಈ ಬಾರಿ 2024ರ ಕಾಲಜ್ಞಾನದ ಭವಿಷ್ಯ ನಿಜವಾಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ. ಮುತ್ಯಾನ ಕಾಲಜ್ಞಾನದ ನುಡಿಯಂತೆ ರಾಜಕೀಯದಲ್ಲಿ ಉತ್ತಮ ವ್ಯಕ್ತಿಗೆ ಗೆಲುವು ಆಗುತ್ತದೆ ಎಂದು ಬಬಲಾದಿ ಮಠಾಧೀಶರು ಮತ್ತು ಕಾರ್ಣಿಕರಾದ ಸಿದ್ರಾಮಯ್ಯ ಹೊಳಿಮಠ ಭವಿಷ್ಯ ನುಡಿದಿದ್ದರು.
ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ಯೋಜನೆ ಇಂಜಿನಿಯರನ್ನು ಗಲ್ಲಿಗೇರಿಸಬೇಕು: ಶಾಸಕ ಬೆಲ್ಲದ್
undefined
ವ್ಯಾಪಾರಸ್ಥರಿಗೆ ಮಧ್ಯಮ ಫಲ, ಕುಲ-ಜಾತಿಗಳಲ್ಲಿ ಕಲಹ ಜಾಸ್ತಿ, ಉತ್ತರಕ್ಕೆ ಬರ ಹಾಗೂ ಕೆಡಕು ಇದೆ. ದೊಡ್ಡ ದೊಡ್ಡ ಮಹಾಜನರ ಯೋಗ ಅಳಿಯುವುದು ಎಂದು ಬೆಂಕಿ ಭವಿಷ್ಯ ನುಡಿದಿದ್ದರು. ಅಲ್ಲಲ್ಲಿ ರಾಜಕೀಯ ಗೊಂದಲಗಳು ಉಂಟಾಗುತ್ತವೆ. ಭಯೋತ್ಪಾದನೆ, ಧರ್ಮ ಧರ್ಮಗಳ ಮಧ್ಯೆ ಕಿತ್ತಾಟ ಜಾಸ್ತಿ ಆಗುತ್ತದೆ. ಉತ್ತಮ ಅರ್ಹ ವ್ಯಕ್ತಿಯ ಮರ್ದನ ಆಗುತ್ತದೆ. ಗಡಿ ಕಾಯುವ ಯೋಧರಿಗೆ ನೋವು ಇದೆ. ಕಣ್ಣಿನ ಕಾಯಿಲೆಗಳು ಜಾಸ್ತಿ ಆಗುತ್ತವೆ. ಜ್ಯೇಷ್ಠ ಮಾಸದಲ್ಲಿ ಲಿಂಗ, ಸಮಾನತೆ ಎಲ್ಲರೂ ಒಂದೇ ಎನ್ನುವ ಕಾಲ ಬರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಮಳೆಬೆಳೆಯ ಕುರಿತು ಐದಾಣೆ ಮಳೆ, ನಾಲ್ಕಾನೆ ಬೆಳೆ ಎಂದಿದ್ದಾರೆ.
ಮದ್ಯವೇ ನೈವೇದ್ಯ: ಬೆಂಕಿ ಬಬಲಾದಿ ಎಂದೇ ಗುರುತಿಸಿಕೊಂಡಿರುವ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಮುತ್ಯಾನ ಮಠದಲ್ಲಿ ಜಾತ್ರೆಯ ವೇಳೆ ಸದಾಶಿವನಿಗೆ ತೀರ್ಥದ ರೂಪದಲ್ಲಿ ಮದ್ಯವನ್ನು ನೈವೇದ್ಯವಾಗಿ ಅರ್ಪಿಸುವುದು ಪ್ರಚಲಿತದಲ್ಲಿದೆ. ಸುಮಾರು 700 ವರ್ಷಗಳ ಇತಿಹಾಸವಿರುವ ಈ ಸದಾಶಿವ ಮುತ್ಯಾಗೆ ಬಂದ ಭಕ್ತರೆಲ್ಲ ಮದ್ಯವನ್ನು ಅರ್ಪಿಸುತ್ತಾರೆ. ತಾವು ಕೇಳಿಕೊಂಡ ಹರಕೆಗಳು ಈಡೇರಿದಾಗಲೂ ಇಲ್ಲಿಗೆ ಬಂದು ಮದ್ಯವನ್ನು ಅರ್ಪಿಸುವುದು ರೂಢಿಯಲ್ಲಿದೆ.
ಬಿಬಿಎಂಪಿ ಮಹಾ ಅಕ್ರಮ, ಅಸ್ತಿತ್ವದಲ್ಲೇ ಇಲ್ಲದ 27 ಸಹಕಾರಿ ಸಂಘಗಳಿಗೆ ₹18 ಕೋಟಿ ಹಣ ವರ್ಗಾವಣೆ!
ಮುತ್ಯಾನ ಈ ಭವಿಷ್ಯ ಗಮಮನಿಸಿದರೆ ರಾಜ್ಯದಲ್ಲಿ ನಡೆಯುತ್ತಿರು ಸದ್ಯ ಆಗುತ್ತಿರುವ ವಿಚಾರಗಳಿಗೆ ಹೊಂದಾಣಿಕೆ ಆಗುತ್ತಿದೆ. ಅದು ರಾಜಕೀಯವಾಗಿ ಇರಬಹುದು. ಅಥವಾ ದರ್ಶನ್ ವಿಚಾರವೇ ಆಗಿರಬಹುದು. ಸಿಎಂ ಕುರ್ಚಿಯ ಬಗ್ಗೆ ಚರ್ಚೆಯಾಗಿದೆ. ಜಾತಿಯಾಧಾರಿತವಾಗಿ ಸಿಎಂ ಮತ್ತು ಡಿಸಿಎಂ ಹುದ್ದೆ ಹಂಚಿಕೆ ವಿಚಾರದಲ್ಲಿ ಚರ್ಚೆಯಾಗಿದೆ.
ರಾಜ್ಯ ಸರ್ಕಾರದ ಹಗರಣಗಳು ಒಂದೊಂದಾಗಿ ಹೊರಬರುತ್ತಿದೆ. ವಾಲ್ಮಿಕಿ ಅನುದಾನ ಹಗರಣ, ಮುಡಾ ಹಗರಣ, ಬಿಬಿಎಂಪಿ ಹಗರಣ ಹೀಗೆ ಒಂದೊಂದೇ ಹಗರಣಗಳು ಬೆಳಕಿಗೆ ಬರುತ್ತಿದೆ. ಮುಡಾ ಹಗರಣದಲ್ಲಿ ಸಿಎಂ ಪತ್ನಿ ಪಾರ್ವತಿಗೆ ಸೈಟು ಹಂಚಿಕೆ ಹಗರಣವಾಗಿದೆ.
ದೊಡ್ಡ ದೊಡ್ಡ ಮಹಾಜನರ ಯೋಗ ಅಳಿಯುವುದು ಎಂದು ಬೆಂಕಿ ಭವಿಷ್ಯ ಎಂದು ಹೇಳಿದ್ದು, ಅದರಂತೆ ವಾಲ್ಮೀಕಿ ಹರಗಣದಲ್ಲಿ ಸಿಲುಕಿದ ಬಳ್ಳಾರಿ ಶಾಸಕ ನಾಗೇಶ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಇನ್ನು ಲೈಂಗಿಕ ಹಗರಣ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಜೈಲಿನಲ್ಲಿದ್ದರೆ. ಇವರಿಬ್ಬರ ತಂದೆ ಮಾಜಿ ಸಚಿವ , ಹಾಲಿ ಶಾಸಕ ಹೆಚ್ ಡಿ ರೇವಣ್ಣ ಜೈಲಿಗೆ ಹೋಗಿ ಬಂದಿದ್ದರು. ಪ್ರಜ್ವಲ್ ಈ ಬಾರಿ ಲೋಕಸಭಾ ಚುನಾವಣೆದಯಲ್ಲಿ ಸೋಲುಕಂಡಿದ್ದಾರೆ. ಇಷ್ಟು ಮಾತ್ರವಲ್ಲ ಚಿತ್ರರಂಗದಲ್ಲಿ ಉನ್ನತ ಹೆಸರು ಮಾಡಿರುವ ನಟ ದರ್ಶನ್ ಕೂಡ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದಾನೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಡಿಕೆ ಸುರೇಶ್ ಸೋಲು, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ, ಪ್ರತಾಪ್ ಸಿಂಹಗೆ ಲೋಕಾ ಟಿಕೆಟ್ ಕೈ ತಪ್ಪಿದ್ದು, ಇದಲ್ಲದೆ ಇನ್ನಷ್ಟು ವಿವಾದಿತ ಘಟನೆಗಳು ರಾಜ್ಯದಲ್ಲಿ ನಡೆದಿದೆ.
ರಾಜಕೀಯದಲ್ಲಿ ಉತ್ತಮ ವ್ಯಕ್ತಿಗೆ ಗೆಲುವು ಆಗುತ್ತದೆ ಎಂದಿದ್ದರು. ಅದರಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ರಾಜಕೀಯದಿಂದ ರಾಷ್ಟ್ರ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವುದು ಮಾತ್ರವಲ್ಲದೆ. ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.