ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರದೋಷ ವ್ರತವನ್ನು ಪ್ರತಿ ತಿಂಗಳ ತ್ರಯೋದಶಿ ತಿಥಿಯಂದು ಆಚರಿಸಲಾಗುತ್ತದೆ. ಈ ವರ್ಷ ಆಷಾಢದಲ್ಲಿ ಪ್ರದೋಷ ವ್ರತವು ಜುಲೈ 25, 2022ರಂದು ಬರುತ್ತದೆ. ಈ ದಿನ, ಉಪವಾಸ ಇರುತ್ತದೆ. ಪ್ರದೋಷ ಉಪವಾಸದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದು ಅಗತ್ಯವೆಂದು ಪರಿಗಣಿಸಲಾಗಿದೆ.
ಹಿಂದೂ ಧರ್ಮದಲ್ಲಿ, ಪ್ರದೋಷ ವ್ರತವನ್ನು ಶಿವನಿಗೆ ಸಮರ್ಪಿಸಲಾಗಿದೆ. ಈ ಬಾರಿ ಪ್ರದೋಷ ವ್ರತವು ಶಿವನ ದಿನವಾದ ಸೋಮವಾರವೇ ಬಂದಿರುವುದು ಇನ್ನಷ್ಟು ವಿಶೇಷ. ಸೋಮವಾರ ಬಂದಿರುವುದರಿಂದ ಇದನ್ನು ಸೋಮ ಪ್ರದೋಷ ವ್ರತ ಇಲ್ಲವೇ ಚಂದ್ರ ಪ್ರದೋಷ ವ್ರತ ಎನ್ನಲಾಗುತ್ತದೆ. ಜುಲೈ 25, 2022ರಂದು, ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಎಂಬ ಎರಡು ಮಂಗಳಕರ ಯೋಗಗಳಲ್ಲಿ ಸೋಮ ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಈ ದಿನದಂದು ಶಿವನನ್ನು ನಿಯಮಾನುಸಾರ ಪೂಜಿಸುವ ಮತ್ತು ಉಪವಾಸವನ್ನು ಆಚರಿಸುವ ಭಕ್ತನು ಎಲ್ಲ ತೊಂದರೆಗಳಿಂದ ಮುಕ್ತಿಯನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಆದರೆ ಪ್ರದೋಷ ವ್ರತದ ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಸಹ ಅಗತ್ಯ. ಹಾಗಾದರೆ ಸೋಮ ಪ್ರದೋಷ ವ್ರತದ ಶುಭ ಸಮಯ ಮತ್ತು ಪೂಜಾ ನಿಯಮಗಳನ್ನು ತಿಳಿಯೋಣ.
ಜುಲೈ 25ರಂದು ಸೋಮ ಪ್ರದೋಷ ವ್ರತ, ಪೂಜೆಯ ಮಂಗಳಕರ ಸಮಯ ಮತ್ತು ಉಪವಾಸದಲ್ಲಿ ಯಾವ ವಿಷಯಗಳನ್ನು ನಿಷೇಧಿಸಲಾಗಿದೆ ಎಂಬುದನ್ನು ತಿಳಿಯಿರಿ.
ಮೀನ ರಾಶಿಯಲ್ಲಿ ಗುರು ವಕ್ರಿ: ಯಶಸ್ಸಿಗಾಗಿ ಯಾವ ರಾಶಿ ಏನು ಮಾಡಬೇಕು?
ಸೋಮ ಪ್ರದೋಷ ವ್ರತ 2022 ಶುಭ ಮುಹೂರ್ತ
ಸೂರ್ಯಾಸ್ತದ ಬಳಿಕ ಅಂದರೆ ಆ ದಿನದ ರಾತ್ರಿ ಆಗಮನದ ಮೊದಲ ಸಮಯವನ್ನು ಪ್ರದೋಷ ಕಾಲ ಎನ್ನಲಾಗುತ್ತದೆ. ಸಾಮಾನ್ಯವಾಗಿ ಸಂಜೆ ನಾಲ್ಕು ಮೂವತ್ತರಿಂದ ಆರೂವರೆಯವರೆಗೆ ಈ ಕಾಲ ಇರುತ್ತದೆ. ಈ ಸಮಯದಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ತ್ರಯೋದಶಿ ತಿಥಿಯು 25 ಜುಲೈ 2022 ರಂದು ಸಂಜೆ 4:15ರಿಂದ ಪ್ರಾರಂಭವಾಗುತ್ತದೆ ಮತ್ತು 26 ಜುಲೈ 2022ರಂದು ಸಂಜೆ 6:04ಕ್ಕೆ ಕೊನೆಗೊಳ್ಳುತ್ತದೆ. ಅಲ್ಲದೆ, ಸೋಮ ಪ್ರದೋಷ ವ್ರತದಲ್ಲಿ ಶಿವನನ್ನು ಪೂಜಿಸುವ ಶುಭ ಸಮಯವು ಜುಲೈ 25ರಂದು ಸಂಜೆ 7:17 ರಿಂದ 9:21 ರವರೆಗೆ ಇರುತ್ತದೆ.
ಹಿನ್ನೆಲೆ ಪುರಾಣ(Mythology)
ಅಮೃತಕ್ಕಾಗಿ ದೇವ ದಾನವರ ನಡುವೆ ಕ್ಷೀರ ಸಾಗರ ಮಂಥನ ನಡೆಯಿತು. ಈ ಸಂದರ್ಭದಲ್ಲಿ ವಿಷವು ಉಕ್ಕಿ ಬಂದಿತು. ಆಗ ಧ್ಯಾನಾವಸ್ಥೆಯಲ್ಲಿದ್ದ ಶಿವನು ಲೋಕವನ್ನು ವಿಷದಿಂದ ಕಾಪಾಡಲು ಎಚ್ಚರಗೊಂಡ. ಹಾಗೆ ಶಿವ ಲೋಕಕಲ್ಯಾಣಾರ್ಥವಾಗಿ ಎಚ್ಚರಗೊಂಡ ಕಾಲವೇ ಪ್ರದೋಷ ಕಾಲ. ಅದು ತ್ರಯೋದಶಿಯಾಗಿದ್ದರಿಂದ ಪ್ರತಿ ತಿಂಗಳ ತ್ರಯೋದಶಿಯಂದು ಪ್ರದೋಷ ವ್ರತ ಆಚರಿಸುವುದನ್ನು ದೇವತೆಗಳು ಆರಂಭಿಸಿದರು.
ಪ್ರತಿ ದಿನ ಅದೃಷ್ಟ ಆಕರ್ಷಿಸಲು ಯಾವ ವಾರ ಏನು ಮಾಡ್ಬೇಕು?
ನಿಯಮಗಳು(Pradosh vrat rules)