ಅಯೋಧ್ಯೆಯಿಂದ 1000 ಕಿ.ಮೀ. ದೂರದಲ್ಲಿರುವ ಈ ಗ್ರಾಮದಲ್ಲಿ ಮುಸ್ಲಿಮರೇ ಬಹುಸಂಖ್ಯಾತರಾಗಿದ್ದು, ರಾಮನ ಪ್ರತಿಷ್ಠಾಪನೆಯನ್ನು ಇವರು ಹಬ್ಬದಂತೆ ಸಂಭ್ರಮಿಸಿದರು. ರಾಮಾಯಣದೊಂದಿಗೆ ಇವರ ಪ್ರತಿದಿನ ಬೆಸೆದುಕೊಂಡಿದೆ ಎಂಬುದು ಇದಕ್ಕೆ ಕಾರಣ!
ಅಯೋಧ್ಯೆಯಿಂದ ಸುಮಾರು 1000 ಕಿ.ಮೀ.ದೂರದಲ್ಲಿರುವ ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ನಯಾ ಗ್ರಾಮದಲ್ಲಿ ಮುಸ್ಲಿಂಮರೇ ಬಹುಸಂಖ್ಯಾತರು. ಆದರೂ, ಸೋಮವಾರ ಇಲ್ಲಿ ಊರಿಗೂರೇ ರಾಮಲಲ್ಲಾ ಪ್ರತಿಷ್ಠಾಪನೆಯನ್ನು ಹಬ್ಬದಂತೆ ಸಂಭ್ರಮಿಸಿತು. ಹರ್ಷೋದ್ಗಾರಗಳು ಮೊಳಗಿದವು.
ಇಲ್ಲಿ ಮುಸ್ಲಿಮರೇ ಬಹುಸಂಖ್ಯಾತರಾಗಿದ್ದರೂ ಅವರ ಕಾಯಕವು ರಾಮಾಯಣದೊಂದಿಗೆ ಬೆಸೆದುಕೊಂಡಿರುವುದು ವಿಶೇಷ. ಹೌದು, ಇಲ್ಲಿ ಪ್ರತಿ ಕುಟುಂಬವೂ ರಾಮಾಯಣವನ್ನು ಆಧರಿಸಿದ ಪಟಚಿತ್ರ ತಯಾರಿಕೆಯಲ್ಲಿ ತೊಡಗಿಕೊಂಡಿದೆ.
ರಾಮನ ಸುತ್ತ ಸುತ್ತುವ ಬದುಕು
ಮಹಾಕಾವ್ಯವನ್ನು ಆಧರಿಸಿದ ಪಟಚಿತ್ರಗಳನ್ನು (ಸಾಂಪ್ರದಾಯಿಕ ಬಟ್ಟೆ-ಆಧಾರಿತ ಸುರುಳಿಗಳು) ಚಿತ್ರಿಸುವುದರಿಂದ ಹಿಡಿದು ಅಖಂಡ ರಾಮಾಯಣವನ್ನು ಓದುವುದು ಮತ್ತು ಈ ಸಂಬಂಧಿ ಹಾಡುಗಳನ್ನು ಹಾಡುವುದು.. ಒಟ್ಟಾರೆ ಈ ಹಳ್ಳಿಗರ ಜೀವನವು ಭಗವಾನ್ ರಾಮ ಮತ್ತು ಅವನ ಕಥೆಗಳ ಸುತ್ತ ಸುತ್ತುತ್ತದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯಿಂದ ತಮ್ಮ ಕಲೆಗೂ ಬೆಲೆ ಹೆಚ್ಚುತ್ತದೆ ಎಂಬ ಆಶಯ ಇವರಲ್ಲಿದೆ.
ತಾಯಿ ರವೀನಾ ಟಂಡನ್ ಜೊತೆ 12 ಜ್ಯೋತಿರ್ಲಿಂಗಗಳ ದರ್ಶನ ಅಭಿಯಾನದಲ್ಲಿ ಮಗಳು ರಾಶಾ ಥಡಾನಿ
ನಯಾ ಹಳ್ಳಿಗರು ಪಟುವಾ ಸಮುದಾಯದವರು. ಇವರ ಪಟಚಿತ್ರಗಳು ರಾಮಾಯಣವನ್ನು ದೇಶದ ವಿವಿಧ ಮೂಲೆಗಳಿಗೆ ಮಾತ್ರವಲ್ಲದೆ ಗಡಿಯಾಚೆಗೂ ಕೊಂಡೊಯ್ದಿವೆ. ಈ ಗ್ರಾಮದ ಪ್ರತಿ ಮನೆಯ ಗೋಡೆಯೂ ಕೂಡಾ ಒಂದು ಕ್ಯಾನ್ವಾಸ್ ಆಗಿದೆ. ಮತ್ತು ಇಲ್ಲಿ ಪ್ರತಿಯೊಬ್ಬರೂ ಪ್ರಾಚೀನ ಜಾನಪದ ಕಲೆಯ ಒಂದು ರೂಪವಾದ 'ಪಟಚಿತ್ರ'ವನ್ನು ಅಭ್ಯಾಸ ಮಾಡುತ್ತಾರೆ. ಕೇವಲ ಚಿತ್ರ ಬಿಡಿಸಿ ಸುಮ್ಮನವಾಗುವುದಿಲ್ಲ, ಅವರು ಸುರುಳಿಯನ್ನು ಬಿಡಿಸಿ ಪ್ರೇಕ್ಷಕರಿಗೆ ತಮ್ಮ ಕಲಾತ್ಮಕತೆಯನ್ನು ತೋರಿಸುವಂತೆ ಹಾಡುತ್ತಾರೆ.
ಕತೆಯ ವೈವಿಧ್ಯತೆ
ಈ ಕಲೆಯಲ್ಲಿ ಹೆಚ್ಚಾಗ ರಾಮಾಯಣವನ್ನು ಕಾಣಬಹುದಾದರೂ ಅದರ ಹೊರತಾಗಿ ಇತರೆ ಸಾಂಪ್ರದಾಯಿಕ ಪೌರಾಣಿಕ ಅಥವಾ ಬುಡಕಟ್ಟು ಕತೆಗಳೂ ಬೆರೆಯುತ್ತವೆ. ಆಧುನಿಕ ಭಾರತದ ಇತಿಹಾಸ ಮತ್ತು ಸಮಕಾಲೀನ ಸಮಸ್ಯೆಗಳವರೆಗಿನ ಕತೆಗಳು ಪಟಚಿತ್ರಗಳಲ್ಲಿ ಒಡಮೂಡುತ್ತವೆ. ಅವರು ತಮ್ಮ ಕಲೆಗೆ ಬಳಸುವ ಬಣ್ಣಗಳನ್ನು ನೈಸರ್ಗಿಕ ಮೂಲಗಳಿಂದ ಅಂದರೆ, ಚೆಂಡು ಹೂ, ಕೇಸರಿ, ಅರಿಶಿನ ಮತ್ತು ಕೆಲವೊಮ್ಮೆ ಮರಗಳ ತೊಗಟೆಗಳು ಇತರೆ ಹೂವು ಹಣ್ಣುಗಳ ಪುಡಿ ಮಾಡಿಕೊಂಡು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ನಂತರ ಇವುಗಳನ್ನು ಬೆಂಗಾಲ್ ಕ್ವಿನ್ಸ್ ಹೂವಿನ ಗಮ್‌ನೊಂದಿಗೆ ಬೆರೆಸಿ ಬಣ್ಣವನ್ನು ತಯಾರಿಸುತ್ತಾರೆ. ಅಗತ್ಯವಿರುವ ಹೆಚ್ಚಿನ ಸಸ್ಯಗಳನ್ನು ಸ್ಥಳೀಯವಾಗಿ ಬೆಳೆಸಲಾಗುತ್ತದೆ. ಸಾಮಾನ್ಯವಾಗಿ ಈ ನೈಸರ್ಗಿಕ ಬಣ್ಣಗಳನ್ನು ತೆಂಗಿನ ಚಿಪ್ಪುಗಳಲ್ಲಿ ತಯಾರಿಸಲಾಗುತ್ತದೆ ಮತ್ತು ವರ್ಷಪೂರ್ತಿ ಬಳಸಲು ಪ್ಲಾಸ್ಟಿಕ್ ಜಾಡಿಗಳಲ್ಲಿ ಸಂಗ್ರಹಿಸಲಾಗುತ್ತದೆ.
ರಾಮನಿಗಾಗಿ ಹವನ ಮಾಡಿದ ಉರ್ಫಿ; ಘರ್ ವಾಪ್ಸಿನಾ ಕೇಳಿದ್ರು ಫಾಲೋವರ್ಸ್
ಈ ಗ್ರಾಮದಲ್ಲಿ ಮುಸ್ಲಿಂ ಬಾಹುಳ್ಯವಿದ್ದರೂ, ಹಿಂದೂಗಳೊಂದಿಗೆ ಬೆರೆತು ಬದುಕುತ್ತಾರೆ. ಯಾರನ್ನೂ ಅವರ ಧರ್ಮದಿಂದ ಗುರುತಿಸುವುದಿಲ್ಲ. ಆದರೆ, ಅವರ ಕೆಲಸದಿಂದ ಗುರುತಿಸಲಾಗುತ್ತದೆ. ಈ ಪಟುವಾ ಸಮುದಾಯದ ಇತಿಹಾಸವು ಸುಮಾರು 13ನೇ ಶತಮಾನದಷ್ಟು ಹಿಂದಿನದು. ಇವರು ತಮ್ಮ ಕಲೆಯನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸಿಕೊಂಡು ಬರುತ್ತಿದ್ದಾರೆ.
ಕೋಲ್ಕತ್ತಾದಿಂದ ಕಾರ್ ಮೂಲಕ ಅಥವಾ ಕೋಲ್ಕತ್ತಾದಿಂದ ಬಲಿಚಕ್‌ಗೆ ಖರಗ್‌ಪುರ ಮಾರ್ಗದಲ್ಲಿ ದೈನಂದಿನ ರೈಲುಗಳ ಮೂಲಕ ಗ್ರಾಮವನ್ನು ತಲುಪಬಹುದು. ಈ ಪ್ರದೇಶದಲ್ಲಿ ಯಾವುದೇ ಹೋಟೆಲ್‌ಗಳಿಲ್ಲ. ಆದರೆ, ಈ ಕಲಾವಿದರ ಮನೆಯನ್ನೇ ಹೋಂ ಸ್ಟೇಯಾಗಿ ಬಳಸಬಹುದು.