ಬಣ್ಣ ಎಸೆಯದಿದ್ದರೂ ಕಲರ್‌ಫುಲ್ ಆಗಿರುತ್ತೆ ಕರಾವಳಿಯಲ್ಲಿ ಹೋಳಿ ಹಬ್ಬದ ಸಂಭ್ರಮ

Published : Mar 06, 2023, 07:00 PM IST
ಬಣ್ಣ ಎಸೆಯದಿದ್ದರೂ ಕಲರ್‌ಫುಲ್ ಆಗಿರುತ್ತೆ ಕರಾವಳಿಯಲ್ಲಿ ಹೋಳಿ ಹಬ್ಬದ ಸಂಭ್ರಮ

ಸಾರಾಂಶ

ಕರಾವಳಿ ಜಿಲ್ಲೆಗಳಲ್ಲಿ ಜನ ಹೋಳಿ ಹಬ್ಬವನ್ನು ಡಿಫರೆಂಟಾಗಿ ಆಚರಿಸ್ತಾರೆ.  ಬಣ್ಣವನ್ನೇ ಬಳಸದಿದ್ದರೂ, ಅತ್ಯಂತ ಕಲರ್ ಫುಲ್ ಆಗಿ ಆಚರಿಸುವ ಹೋಳಿ ನಿಜಕ್ಕೂ ಒಂದು ಅದ್ಭುತ ಆಚರಣೆಯಾಗಿದೆ.

ಉಡುಪಿ (ಮಾ.6): ಕರಾವಳಿ ಜಿಲ್ಲೆಗಳಲ್ಲಿ ಜನ ಹೋಳಿ ಹಬ್ಬವನ್ನು ಡಿಫರೆಂಟಾಗಿ ಆಚರಿಸ್ತಾರೆ. ಮರಾಠಿ ಮತ್ತು ಕುಡ್ಬಿ ಜನಾಂಗದವರು ಆಚರಿಸುವ ಜನಪದ ಹೋಳಿ ಜನಪದ ಸಂಸ್ಕೃತಿಯ ಪ್ರತೀಕವಾಗಿದೆ. ಬಣ್ಣವನ್ನೇ ಬಳಸದಿದ್ದರೂ, ಅತ್ಯಂತ ಕಲರ್ ಫುಲ್ ಆಗಿ ಆಚರಿಸುವ ಹೋಳಿ ನಿಜಕ್ಕೂ ಒಂದು ಅದ್ಭುತ ಆಚರಣೆಯಾಗಿದೆ. ಕಣ್ಣಿಗೆ ಮುದನೀಡುವ ವಸ್ತ್ರಾಲಂಕಾರ; ಗುಮ್ಟೆ ಎಂಬ ಚರ್ಮವಾದ್ಯದ ಝೇಂಕಾರ. ಹೋಳಿ ಬಂತೂಂದ್ರೆ ಕರಾವಳಿಯ ಹಳ್ಳಿ ಮನೆಗಳಲ್ಲಿ ಬಣ್ಣದ ಲೋಕವೇ ತೆರೆದುಕೊಳ್ಳುತ್ತೆ, ಅದು ಎರಚುವ ಬಣ್ಣವಲ್ಲ, ಬದಲಿಗೆ ವರ್ಣಮಯ ವೇಷಭೂಷಣಗಳ ಸೊಬಗಿನ ಚಿತ್ತಾರ. ಮೂರ್ನಾಲ್ಕು ಶತಮಾನಗಳ ಹಿಂದೆ ಗೋವಾ ಮತ್ತು ಮಹಾರಾಷ್ಟ್ರದ ಕಡೆಯಿಂದ ವಲಸೆ ಬಂದ ಮರಾಠಿ ಜನಾಂಗದವರಿಗೆ ಹೋಳಿ ಅತೀ ದೊಡ್ಡ ಹಬ್ಬ. ಹೋಳಿ ಹಬ್ಬದ ಸಂದರ್ಭದಲ್ಲಿ ಕುಣಿಯುತ್ತಾ ನಲಿಯುತ್ತಾ ಊರೆಲ್ಲಾ ಸುತ್ತೋದು ಈ ಜನಾಂಗದ ವಿಶಿಷ್ಟ ಸಂಪ್ರದಾಯ. ಶತಮಾನಗಳು ಉರುಳಿದರೂ ಆಚರಣೆಗೆ ಧಕ್ಕೆಯಾಗದಂತೆ ಈ ಮಂದಿ ನಡೆದುಕೊಳ್ಳುತ್ತಾರೆ.

ತುಳಜಾ ಭವಾನಿ ಇವರ ಆರಾಧ್ಯ ದೇವತೆ. ಆಕೆಗೆ ಪೂಜೆ ಸಲ್ಲಿಸಿದ ಬಳಿಕ ಕೂಡು ಕುಟುಂಬದ ಯಜಮಾನರೊಂದಿಗೆ ತಂಡ ಕಟ್ಟಿಕೊಂಡು ಇವರು ಮನೆಮನೆ ಸುತ್ತುತ್ತಾರೆ. ಏಕಾದಶಿಯಿಂದ ಐದು ದಿನ ಈ ಜನಪದ ಮೇಳ ಸಂಚಾರಕ್ಕೆ ಹೊರಡುತ್ತೆ. ಮನೆಯಂಗಳದಲ್ಲಿ ಕುಣಿಯುವ ಇವರ ನೃತ್ಯ ಆಕರ್ಷಕವಾಗಿರುತ್ತೆ. ಗುಮ್ಟೆಯ ನಾದಕ್ಕೆ ಹಿರಿ ಕಿರಿಯರೆಂಬ ಬೇಧವಿಲ್ಲದೆ ಬಗೆಬಗೆಯಾಗಿ ಹೆಜ್ಜೆ ಹಾಕುತ್ತಾರೆ. ಕೋಲಾಟವಾಡುತ್ತಾರೆ. ಇನ್ನು ಕುಡ್ಬಿ ಜನಾಂಗದವರು ತಲೆಯಲ್ಲಿ ಗರಿಗಳನ್ನು ಧರಿಸಿ ಕುಣಿಯೋದು ಇನ್ನೊಂದು ವಿಶೇಷ.

Holi: ಹೋಳಿ ದಿನ ಅಪ್ಪಿತಪ್ಪಿಯೂ ಇದನ್ನ ದಾನ ಮಾಡ್ಬೇಡಿ

ಇವರು ಬಂದು ಕುಣಿದು ಹೋದರೆ ಆ ಮನೆಗೆ ಶುಭವಾಗುತ್ತೆ ಅನ್ನೋ ನಂಬಿಕೆ ಇರೋದ್ರಿಂದ ಇವರನ್ನು ವಿಶೇಷ ಆದರದಿಂದ ಕಾಣಲಾಗುತ್ತೆ. ಇವರು ಕುಣಿದು ಹೋದ ಮನೆಯಲ್ಲಿ ಫಲ ನೀಡದ ತೆಂಗಿನ ಮರವಿದ್ದರೆ ಅದೂ ಫಲ ನೀಡುತ್ತೆ ಅನ್ನೋದು ನಂಬಿಕೆ. ಮನೆ ಮಕ್ಕಳಿಗೆ ರೋಗ ಬಾಧೆ ಇದ್ದರೆ, ಈ ವೇಷಧಾರಿಗಳ ಕೈಯ್ಯಲ್ಲಿ ಕೊಟ್ಟು ಕುಣಿಸಿದರೆ ಸಮಸ್ಯೆ ಬಗೆಹರಿಯುತ್ತೆ ಅನ್ನೋದು ಜನರ ವಿಶ್ವಾಸ.

ಹೋಳಿ ಬಳಿಕ ಶುರುವಾಗಲಿದೆ ಈ ರಾಶಿಗಳಿಗೆ ಗಜಕೇಸರಿ ರಾಜಯೋಗ, ಮುಟ್ಟಿದ್ದೆಲ್ಲ ಆಗಲಿದೆ ಚಿನ್ನ!

ಆಧುನಿಕ ಜೀವನ ಪದ್ದತಿಯಲ್ಲೂ ಮೂಲ ಆಚರಣೆಯನ್ನು ಉಳಿಸಿಕೊಂಡಿರುವ ಮರಾಠರು ನಿಜಕ್ಕೂ ಸಂಸ್ಕೃತಿಪ್ರಿಯರು. ಈ ಆಚರಣೆಯಲ್ಲಿ ಭಾಗವಹಿಸೋದು ತಪ್ಪಿದರೆ, ದಂಡವನ್ನೂ ವಿಧಿಸಲಾಗುತ್ತೆ. ಇಷ್ಟೊಂದು ಕಟ್ಟುನಿಟ್ಟು ಇರೋದ್ರಿಂದಲೇ ಈ ಅಪೂರ್ವ ಪರಂಪರೆ ಶತಮಾನಗಳಿಂದ ಉಳಿದುಬಂದಿದೆ.

PREV
Read more Articles on
click me!

Recommended Stories

ಈ ಅದ್ಭುತ ರಾಜಯೋಗಗಳು 2026 ರಲ್ಲಿ, ಈ ರಾಶಿಗೆ ಬೊಂಬಾಟ್‌ ಲಕ್‌, ಲಾಟರಿ
ಶುಕ್ರನು ಮೀನ ರಾಶಿಯಲ್ಲಿ ಸಾಗಲಿದ್ದು, ಅಪರೂಪದ ಕಾಕತಾಳೀಯತೆಯನ್ನು ಸೃಷ್ಟಿಸುತ್ತದೆ, ಈ 3 ರಾಶಿಯವರು ಶ್ರೀಮಂತವಾಗಿರುತ್ತವೆ