* ಮಲೆನಾಡಿನಲ್ಲಿ ಚೌಡಿಹಬ್ಬ ಸಂಭ್ರಮ, ಮುಂಗಾರು ಮಳೆ ಪೂರ್ವದಲ್ಲಿ ನಡೆಯುವ ದೇವರ ಪೂಜೆ
* ಮುಂಗಾರು ಮಳೆ ಪೂರ್ವದಲ್ಲಿ ನಡೆಯುವ ದೇವರ ಪೂಜೆ
* ಕಾಫಿ ಕುಯ್ಲಿ ಮುಗಿದು ಬಳಿಕ ಇನ್ನು ಕೆಲವೊಂದು ಕಡೆ ಕುಯ್ಲಿ ಆರಂಭಕ್ಕೂ ಮುನ್ನ ನಡೆಯುವ ಹಬ್ಬ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಏ.25): ಮಲೆನಾಡಿನ ಸಂಸ್ಕೃತಿ ವಿಭಿನ್ನವಾಗಿದ್ದು ತನ್ನದೇ ವೈಶಿಷ್ಟತೆಯನ್ನು ಹೊಂದಿದೆ. ಹಲವಾರು ಆಚರಣೆಗಳು ಮಲೆನಾಡಿನಲ್ಲಿ(Malnad) ನಡೆಯುವುದು ವಿಶೇಷವಾಗಿದ್ದು ಅದ್ರಲ್ಲಿ ಚೌಡಿಹಬ್ಬವೂ (Chowdi Festival) ಸಹ ಒಂದು. ಮಲೆನಾಡಿನಾದ್ಯಂತ ಮುಂಗಾರು ಮಳೆ ಪೂರ್ವದಲ್ಲಿ ಪ್ರತಿ ವರ್ಷವೂ ಮಲೆನಾಡು ಭಾಗದಲ್ಲಿ ಚೌಡಿಹಬ್ಬ ಆಚರಿಸುವುದು ಸಾಮಾನ್ಯವಾಗಿದೆ...
ಕೆಲವೊಂದು ಗ್ರಾಮಗಳಲ್ಲಿ ಕಾಫಿ ಕುಯ್ಲಿ ಮುಗಿದು ಬಳಿಕ ಇನ್ನು ಕೆಲವೊಂದು ಕಡೆ ಕುಯ್ಲಿ ಆರಂಭಕ್ಕೂ ಮುನ್ನ ನಡೆಯುವ ಹಬ್ಬ. ಮಲೆನಾಡಿನ ಭಾಗವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗ ಎಲ್ಲೆಡೆ ಚೌಡಿಹಬ್ಬದ ಸಂಭ್ರಮ ಮನೆ ಮಾಡಿದೆ.ಸಾಮಾನ್ಯವಾಗಿ ಕಾಫಿ ಕುಯ್ಲಿ ಮುಗಿದ ಬಳಿ ಮುಂಗಾರು ಮಳೆ ಪೂರ್ವದಲ್ಲಿ ಚೌಡಿ ಹಬ್ಬ ಮಾಡಲಾಗುತ್ತದೆ. ಭಾನುವಾರ ಅಥವಾ ಗುರುವಾರದಂದು ಚೌಡಿಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಊರೊಟ್ಟಿನ ಅಂದರೆ ಊರಿನವರೇ ವಂತಿಕೆ (ಹಣ) ಹಾಕಿ ಚೌಡಿಹಬ್ಬ ಆಚರಿಸುತ್ತಾರೆ. ಕೆಲವರು ಖಾಸಗಿಯಾಗಿ ಮನೆಗಳಲ್ಲಿಯೂ ಕೂಡ ಚೌಡಿಹಬ್ಬ ಆಚರಿಸುತ್ತಾರೆ.
undefined
ಏ. 26ರಂದು Varuthini Ekadashi, ಆಚರಣೆ ಹೇಗೆ? ವ್ರತ ಕತೆಯೇನು?
ಮುಂಚೆ ಕಾಡಿನ ನಡುವೆ ಚೌಡಿಹಬ್ಬವನ್ನು ಆಚರಿಸಲಾಗುತ್ತಿತ್ತು. ಕಾಲ ಕಳೆದಂತೆ ಕಾಡುಗಳು ತೋಟಗಳಾಗಿ ಪರಿವರ್ತನೆಯಾಗಿದ್ದು ಆಯಾ ತೋಟದವರು ಚೌಡಿಹಬ್ಬವನ್ನು ಆಚರಿಸುತ್ತಾರೆ.
ಕಾಫಿ ತೋಟ, ಮನೆಯ ಹಿಂಭಾಗ, ಗೆದ್ದ ಹೋಲದಲ್ಲಿ ದೇವರಿಗೆ ಹರಿಕೆ ನೀಡುವ ಹಬ್ಬ
ಮಲೆನಾಡಿನ ಚಿಕ್ಕಮಗಳೂರು ಮೂಡಿಗೆರೆ, ಕೊಪ್ಪ ,ಬಾಳೆಹೊನ್ನೂರು, ಶೃಂಗೇರಿ ಸುತ್ತಮುತ್ತ ಈ ಚೌಡಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.ಮನೆ ಹಿಂಭಾಗ, ತೋಟ, ಹೋಲ,ಗೆದ್ದೆಯಲ್ಲಿ ಈ ಹಬ್ಬ ವನ್ನು ಆಚರಣೆ ಮಾಡಲಾಗುತ್ತೆ. ಮರದ ಬಳಿ ದೇವರ ಪ್ರತಿಷ್ಠಾಪನೆ ಮಾಡಲಾಗಿರುತ್ತದೆ ಅಲ್ಲಿಗೆ ಗ್ರಾಮವರು, ಮನೆಯವರು ಹರಿಕೆ ರೂಪದಲ್ಲಿ ಹಬ್ಬವನ್ನು ಆಚರಣೆ ಮಾಡುವ ಪದ್ಥತಿ ರೂಢಿಯಲ್ಲಿ ಇದೆ. ಚೌಡಿಹಬ್ಬದ ಹಬ್ಬದ ಹಿಂದಿನ ದಿನ ಅಥವಾ ಹಬ್ಬದ ದಿನ ಬೆಳಿಗ್ಗೆ ಸ್ಥಳ ಶುದ್ದಿ ಮಾಡಲಾಗುತ್ತದೆ. ಆ ನಂತರ ಮೊಸರನ್ನ, ಸಿಹಿ ನೈವೈದ್ಯವನ್ನು ದೇವರಿಗೆ ಸಮರ್ಪಣೆ ಮಾಡಲಾಗುತ್ತದೆ. ದೈವ ಬಂಟಗಳಿಗೆ ಮಾಂಸದುಡಗೆಯನ್ನು ಸಮರ್ಪಣೆ ಮಾಡಿ ಮನೆಯವರು, ಹರಿಕೆ ಕೊಟ್ಟವರು ಒಟ್ಟಿಗೆ ಊಟ ಮಾಡುವ ಪರಿಪಾಠ ರೂಢಿಯಲ್ಲಿದೆ.
ದನಕರು, ಆಸ್ತಿ, ಬೆಳೆಯನ್ನು ಕಳ್ಳಕಾಕರಿಂದ ರಕ್ಷಣೆ ಮಾಡುವಂತೆ ಪ್ರಾರ್ಥಿಸಿ ಪ್ರತಿ ವರ್ಷ ಚೌಡಿಹಬ್ಬ ಆಚರಿಸಲಾಗುತ್ತದೆ. ಹಿಂದಿನಿಂದಲೂ ಮನೆತನದಿಂದ ಚೌಡಿಹಬ್ಬ ಆಚರಿಸಿಕೊಂಡು ಬರಲಾಗುತ್ತಿದ್ದು ಚೌಡಿಹಬ್ಬ ಆಚರಿಸದೇ ಇದ್ದರೆ ಮನೆಮಂದಿಗೆ ಕೂಡುಕುಟುಂಬಕ್ಕೆ ತೊಂದರೆಯಾಗುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ.ಚೌಡಿಹಬ್ಬದ ಸಂದರ್ಭದಲ್ಲಿ ಮದುವೆ ಮಾಡಿ ಕೊಟ್ಟ ಹೆಣ್ಣು ಮಕ್ಕಳು ದೂರದೂರಿನಿಂದ ಹಬ್ಬಕ್ಕೆ ಬರುತ್ತಾರೆ. ಕುಟುಂಬದ ಎಲ್ಲಾರೂ ಚೌಡಿಹಬ್ಬಕ್ಕೆ ಆಗಮಿಸಿ ಪೂಜೆಯಲ್ಲಿ ಭಾಗವಹಿಸುವುದು ಮತ್ತೋಂದು ವಿಶೇಷವಾಗಿದೆ...