ಷಷ್ಠಿ ಪಂಚಮಿಯಂದು ಹಾವಿನ ಹುತ್ತಕ್ಕೆ ಕೋಳಿ ಮೊಟ್ಟೆ, ರಕ್ತ ಅರ್ಪಿಸಿದರೆ ಹಾವು ಕಚ್ಚೊಲ್ಲ!

By Sathish Kumar KH  |  First Published Dec 18, 2023, 8:33 PM IST

ಷಷ್ಠಿ ಪಂಚಮಿಯ ದಿನ ಹಾವಿನ ಹುತ್ತಕ್ಕೆ ಹಾಲಿನ ಬದಲು ಕೋಳಿಯ ರಕ್ತ ಹಾಗೂ ಕೋಳಿ ಮೊಟ್ಟೆಯನ್ನು ಹಾಕಿದರೆ ಹಾವು ಕಚ್ಚುವುದಿಲ್ಲ.


ವರದಿ -ಪುಟ್ಟರಾಜು.ಆರ್.ಸಿ., ಏಷ್ಯಾನೆಟ್  ಸುವರ್ಣ  ನ್ಯೂಸ್
ಚಾಮರಾಜನಗರ (ಡಿ.18):
ಷಷ್ಠಿ ಪಂಚಮಿ ಅಂದ್ರೆ ಹಾವಿನ ಹುತ್ತಕ್ಕೆ ಹಾಲು, ತುಪ್ಪ ಎರೆಯುವುದು ಎಲ್ಲಾ ಭಾಗಗಳಲ್ಲಿ ಆಚರಣೆಯಲ್ಲಿರುವ ಸಂಪ್ರದಾಯ. ಅದ್ರೆ ಹುತ್ತಕ್ಕೆ ಕೋಳಿ ಕೂಯ್ದು ರಕ್ತದ ನೈವೇಧ್ಯ ಮಾಡಿ, ಮೊಟ್ಟೆ ಹಾಕಿ ಹರಕೆ ತೀರಿಸುತ್ತಾರೆ ಅಂದ್ರೆ ನೀವು ನಂಬ್ತೀರಾ. ಆಶ್ಚರ್ಯ ಎನಿಸಿದರೂ ನಂಬಲೇ ಬೇಕು. 

ಈ ಸಂಪ್ರದಾಯ ಚಾಮರಾಜನಗರ ಜಿಲ್ಲೆಯಲ್ಲಿನ ಹಿಂದೂಳಿದ ವರ್ಗಗಳು ಮತ್ತು ಪರಿಶಿಷ್ಟರಲ್ಲಿ ಅನಾದಿ ಕಾಲದಿಂದಲೂ ಜಾಲ್ತಿಯಲ್ಲಿದೆ. ಷಷ್ಠಿ ದಿನ ಹುತ್ತಕ್ಕೆ ಹಾಲು, ತುಪ್ಪದ ಜೊತೆಗೆ ಕೋಳಿ ಬಲಿ ನೀಡಿ ಹುತ್ತಕ್ಕೆ ರಕ್ತದ ಅಭಿಷೇಕವನ್ನ ಮಾಡುವ ಮೂಲಕ ವರ್ಷಗಳಿಂದ ಹೊತ್ತು ಕೊಂಡಿದ್ದ ಹರಕೆಯನ್ನ ತೀರಿಸುತ್ತಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಆಚರಿಸುವ ಷಷ್ಠಿ ಹಬ್ಬ ಬೇರೆ ಜಿಲ್ಲೆಗಳಿಗಿಂತ ಭಿನ್ನ. ಸಾಮಾನ್ಯವಾಗಿ ಷಷ್ಠಿ ಹಬ್ಬ ಬಂದರೆ ಜಿಲ್ಲೆಯ ಕೆಲ ಪುರಷರು ಗ್ರಾಮದ ಹೊರಭಾಗದಲ್ಲಿರುವ ಹುತ್ತಗಳನ್ನ ಗುದ್ದಲಿಗಳಿಂದ ಸ್ವಚ್ಚಗೊಳಿಸಿ, ಪೊರಕೆ ಹಿಡಿದು ಸ್ವಚ್ಚಗೊಳಿಸುತ್ತಾರೆ.

Tap to resize

Latest Videos

undefined

ಕಲ್ಲು ಬಂಡೆಗೆ, ತಲೆಯಿಂದ ಡಿಚ್ಚಿ ಹೊಡೆಯೋ ಜಾತ್ರೆ: ರಕ್ತನೂ ಬರೊಲ್ಲ, ಗಾಯವೂ ಆಗೊಲ್ಲ!

ಮಹಿಳೆಯರು ಹುತ್ತದ ಸುತ್ತ ರಂಗೋಲಿ ಬಿಟ್ಟು ಶೃಂಗರಿಸುತ್ತಾರೆ. ನಂತರ ಗ್ರಾಮಸ್ಥರು ಹುತ್ತದ ಬಳಿ ಬಂದು ಬಾಳೆ ಎಲೆ ಇಟ್ಟು ಅದರ ಮೇಲೆ ಸಂಪ್ರದಾಯದಂತೆ ಐದು ಕಲ್ಲುಗಳನ್ನ ಇಟ್ಟು ಅವುಗಳಿಗೆ ಅರಿಶಿಣ ಕುಂಕುಮ, ಬಾಳೆ ಹಣ್ಣು ಇಟ್ಟು ಕಾಯಿ ಒಡೆದು ಪೂಜಿಸುತ್ತಾರೆ. ನಂತರ ಮಹಿಳೆಯರು ತಂದಿದ್ದ ಹಾಲು, ತುಪ್ಪ, ಮೊಟ್ಟೆಗಳನ್ನ ಹುತ್ತದ ತೂತಗಳಿಗೆ ಹಾಕಿ ಒಳ್ಳೆಯದು ಮಾಡು ಎಂದು ನಾಗಪ್ಪನಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ. ಮತ್ತೊಂದು ಕಡೆ ಕೋಳಿ ಕೂಯ್ದು ಹುತ್ತಕ್ಕೆ ರಕ್ತದ ಅಭಿಷೇಕ ಮಾಡಲಾಗುತ್ತದೆ. ಒಂದು ವರ್ಷದಿಂದ ತಾವುಗಳೇ ಸಾಕಿದ ಹೂಂಜ(ಗಂಡು ಕೋಳಿ)ವನ್ನ ಬಲಿ ಕೊಡಲಾಗುತ್ತದೆ. ದಂಪತಿಗಳ ಸಮೇತ ಆಗಮಿಸಿ ಕೋಳಿ ಬಲಿಕೊಡುತ್ತಾರೆ. ಹುತ್ತಕ್ಕೆ ಕೋಳಿ ಬಲಿ ಕೊಡುವಾಗ ಬಹಳ ಶ್ರದ್ಧೆ ಭಕ್ತಿಯಿಂದ ಇರಬೇಕಾಗುತ್ತದೆ. 

ಮದ್ಯಾಹ್ನದವರೆಗೆ ಉಪವಾಸ ವಿದ್ದು ನಂತರ ಹುತ್ತಕ್ಕೆ ಕೋಳಿಯ ಬಲಿ ಕೊಡಲಾಗುತ್ತದೆ. ಈ ಸಂಪ್ರದಾಯ ಪರಿಶಿಷ್ಟರು ಮತ್ತು ಹಿಂದೂಳಿದ ವರ್ಗಗಳಲ್ಲಿ ಆಶ್ಚರ್ಯಕರ ರೀತಿಯಲ್ಲಿ ಆಚರಿಸುತ್ತಾರೆ. ಹುತ್ತಕ್ಕೆ ಕೋಳಿ ರಕ್ತ, ಕೋಳಿ ತಲೆ, ಮೊಟ್ಟೆ ಹಾಕುವ ಪದ್ದತಿ ಇಂದಿನದಲ್ಲ. ಆನಾದಿ ಕಾಲದಿಂದಲೂ ರೂಡಿಯಲ್ಲಿದೆ. ದಿನ ಕಳೆದತಂತೆ ಕೆಲವೊಂದು ಮಾರ್ಪಾಡುಗಳಾಗಿದ್ದರೂ ಹುತ್ತಕ್ಕೆ ಕೋಳಿ ಬಲಿ ಕೊಡುವ ಸಂಪ್ರದಾಯ ಮಾತ್ರ ಇಂದಿಗೂ ಇದೆ. ಷಷ್ಠಿ ದಿನದಂದು ಕೋಳಿ ಬಲಿ ನೀಡಿ ಹುತ್ತಕ್ಕೆ ರಕ್ತದ ನೈವೇಧ್ಯ ಮಾಡುವ ಸಂಪ್ರದಾಯವನ್ನ ಉತ್ತಳ್ಳಿ, ಮೂಡ್ಲುಪುರ, ಯಡಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ  ಸಂಪ್ರದಾಯವನ್ನ ಮಾಡಿ ಕೊಂಡು ಬರುತ್ತಿದ್ದಾರೆ..

Davanagere: ಉಪ್ಪಿನಕಾಯಿ ಕೇಳೋಕೆ ಬಂದು ಅತ್ಯಾಚಾರಕ್ಕೆ ಯತ್ನಿಸಿ, ಕೆನ್ನೆ ಕಚ್ಚಿದ: ಮಹಿಳೆ ಚೀರಾಡ್ತಿದ್ದಂತೆ ಪರಾರಿ!

ರೈತರು ಭೂಮಿಯನ್ನ ದೇವರ ರೀತಿಯಲ್ಲಿ ಪೂಜಿಸಿ ಆರಾಧಿಸುತ್ತಾರೆ. ಪ್ರತಿನಿತ್ಯ ಜಮೀನೊಂದಿಗೆ ಭಾಂದವ್ಯ ಹೊಂದಿರುವ ಮಣ್ಣಿನ ಮಕ್ಕಳು ಜಮೀನಿಗೆ ತೆರಳುವಾಗ, ಜಮೀನಲ್ಲಿ ಕೆಲಸ ಮಾಡುವಾಗ ಹಾವುಗಳು ಕಾಣಿಸಿಬಾರದು, ಕಚ್ಚಬಾರು ಎಂಬ ಉದ್ದೇಶದಿಂದ ಷಷ್ಠಿ ದಿನದಂದು ಹುತ್ತಕ್ಕೆ ಕೋಳಿ ರಕ್ತದ ನೈವೇಧ್ಯ ಮಾಡುಲಾಗುತ್ತದೆ. ಜಮೀನಲ್ಲಿ ಹಾವು ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ಮನೆಯ ಹಿರಿಯವರು ಇನ್ನು ಮುಂದೆ ಯಾರಿಗೂ ಕಾಣಿಸಿಕೊಳ್ಳಬೇಡ, ತೊಂದರೆ ಕೊಡಬೇಡ ನಾಗಪ್ಪ ಎಂದು ಹರಕೆ ಹೊತ್ತುಕೊಳ್ಳುತ್ತಾರೆ. ಆ ದಿನವೇ (ಹುಂಜ) ಗಂಡು ಕೋಳಿಯನ್ನ ಹರಕೆ ತೀರಿಸಲು ಬಿಡಲಾಗುತ್ತದೆ. ತಾವು ಹರಕೆ ಹೊತ್ತು ಕೊಂಡಂತೆ ಶ್ರದ್ಧೆಯಿಂದ ಷಷ್ಠಿ ದಿನದಂದು ಕೋಳಿ ರಕ್ತವನ್ನ ಹುತ್ತಕ್ಕೊ ನೈವೇಧ್ಯ ಮಾಡಲಾಗುತ್ತದೆ. ಎಲ್ಲಾ ಹರಕೆ ತೀರಿಸಿದ ನಂತರ ನಾಗಪ್ಪ ಯಾವುದೇ ರೀತಿ ತೊಂದರೆ ಕೊಡುವುದಿಲ್ಲ ಎಂಬ ನಂಬಿಕೆ ಹಳ್ಳಿಗರದ್ದು..

ಒಟ್ನಲ್ಲಿ ಚಾಮರಾಜನಗರ ಅಂದ್ರೆ ವಿಶಿಷ್ಟ,ವಿಶೆಷ ಆಚರಣೆಗೆ ಹೆಸರುವಾಸಿ.ಬಹುಶಃ ಹುತ್ತದ ಒಳಗಿರುವ ಹಾವುಗಳಿಗೆ ಹಾಲೆರೆದರೆ  ಅವುಗಳಿಗೆ ತೊಂದರೆ ಉಂಟಾಗಬಹುದು, ಹುತ್ತಕ್ಕೆ ಹಾಲಿನ ಬದಲಾಗಿ ಕೋಳಿ ಮೊಟ್ಟೆ ಹಾಗೂ ಕೋಳಿಯ ತಲೆ ಭಾಗವನ್ನು ಹಾಕಿದರೆ ಹಾವುಗಳಿಗೆ ಆಹಾರವಾದರು ಆಗಲಿ ಎಂಬ ದೃಷ್ಠಿಯಿಂದ ಹಿರಿಯರು ಈ ಸಂಪ್ರದಾಯ ಹುಟ್ಟು ಹಾಕಿರಬಹುದು ಎಂಬುದು ನಾಸ್ತಿಕರ ವಾದವಾಗಿದೆ.

click me!