Fact Check: ಹತ್ರಾಸ್ ಅತ್ಯಾಚಾರ:ಠಾಕೂರದ್ದು ಬಿಸಿ ರಕ್ತ ಎಂದರಾ ಯೋಗಿ ಆದಿತ್ಯನಾಥ್?

By Suvarna News  |  First Published Oct 6, 2020, 9:32 AM IST

ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಠಾಕೂರ್ ಸಮುದಾಯದ ನಾಲ್ವರನ್ನು ಬಂಧಿಸಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಠಾಕೂರರ ಪರ ಬ್ಯಾಟಿಂಗ್ ಮಾಡಿದರೆ? ನಿಜನಾ ಈ ಸುದ್ದಿ? 


ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೂ ಉತ್ತರ ಪ್ರದೇಶ ಸರ್ಕಾರ ವಹಿಸಿದೆ. ಈ ಆರೋಪದ ಮೇಲೆ ಠಾಕೂರ್‌ ಸಮುದಾಯದ ನಾಲ್ವರು ಆರೋಪಿಗಳನ್ನೂ ಬಂಧಿಸಲಾಗಿದೆ.

ಈ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ‘ಠಾಕೂರರದ್ದು ಬಿಸಿ ರಕ್ತ. ಇಂಥ ತಪ್ಪುಗಳು ಆಗಾಗ ಆಗುತ್ತಿರುತ್ತವೆ’ ಎಂದು ಹೇಳಿದ್ದಾರೆ ಎನ್ನಲಾದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಸುದ್ದಿವಾಹಿನಿಯೊಂದರ ಬ್ರೇಕಿಂಗ್‌ ನ್ಯೂಸ್‌ ಸ್ಕ್ರೀನ್‌ಶಾಟ್‌ ರೀತಿಯಲ್ಲಿ ಈ ಹೇಳಿಕೆ ವೈರಲ್‌ ಆಗುತ್ತಿದೆ. ನೆಟ್ಟಿಗರು ಇದನ್ನು ಪೋಸ್ಟ್‌ ಮಾಡಿ ಯೋಗಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸಾಮೂಹಿಕ ಅತ್ಯಾಚಾರವನ್ನು ಖಂಡಿಸದೆ ಯೋಗಿ ಠಾಕೂರರ ಪರವಾಗಿ ನಿಂತಿದ್ದಾರೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Latest Videos

undefined

 fact Check: ಹತ್ರಾಸ್ ಆರೋಪಿ ತಂದೆ ಜೊತೆ ಕಾಣಿಸಿಕೊಂಡ್ರಾ ಮೋದಿ?

ಆದರೆ ನಿಜಕ್ಕೂ ಯೋಗಿ ಆದಿತ್ಯನಾಥ್‌ ಈ ಹೇಳಿಕೆ ನೀಡಿದ್ದರೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ, ಆಜ್‌ತಕ್‌ ಸುದ್ದಿವಾಹಿನಿಯ ಹಳೆಯ ಬ್ರೇಕಿಂಗ್‌ ನ್ಯೂಸನ್ನು ಫೋಟೋಶಾಪ್‌ ಮೂಲಕ ಎಡಿಟ್‌ ಈ ಸುದ್ದಿ ಹರಡಲಾಗಿದೆ ಎಂದು ತಿಳಿದುಬಂದಿದೆ. ರಿವರ್ಸ್‌ ಇಮೇಜ್‌ನಲ್ಲಿ ಈ ಬಗ್ಗೆ ಪರಿಶೀಲಿಸಿದಾಗ ಯಾವುದೇ ಸುದ್ದಿವಾಹಿನಿಗಳೂ ಈ ಬಗ್ಗೆ ವರದಿ ಮಾಡಿಲ್ಲ. ಯೋಗಿ ಅವರ ಟ್ವೀಟರ್‌ ಟೈಮ್‌ಲೈನ್‌ನಲ್ಲೂ ಈ ಕುರಿತ ಹೇಳಿಕೆ ಕಂಡುಬಂದಿಲ್ಲ. ಬಳಿಕ ಸುದ್ದಿವಾಹಿನಿಯ ಹಳೆಯ ಬುಲೆಟಿನ್‌ಗಳನ್ನು ಪರಿಶೀಲಿಸಿದಾಗ ವೈರಲ್‌ ಸ್ಕ್ರೀನ್‌ಶಾಟ್‌ನ ಮೂಲ ಪತ್ತೆಯಾಗಿದೆ. ಸುದ್ದಿವಾಹಿನಿಯು ‘ಹಾಥ್ರಸ್‌ ಎಸ್‌ಪಿ ಮತ್ತು ಡಿಎಸ್‌ಪಿ ಅಮಾನತು’ ಎಂದು ಬ್ರೇಕ್ರಿಂಗ್‌ ನ್ಯೂಸ್‌ ನೀಡಿದ್ದ ವರದಿಯನ್ನೇ ತಿರುಚಿ ಈ ರೀತಿ ಸುಳ್ಳುಸುದ್ದಿ ಹಬ್ಬಿಸಲಾಗಿದೆ. ಹಾಗಾಗಿ ಈ ಸುದ್ದಿ ಸುಳ್ಳು.

- ವೈರಲ್ ಚೆಕ್ 

click me!