#Factcheck: ಕೊರೋನಾ ಸೋಂಕಿತೆ ಮೇಲೆ ಅತ್ಯಾಚಾರ ನಡೆಯಿತಾ?

By Suvarna News  |  First Published Apr 17, 2020, 8:48 AM IST

ಭಾರತದ ಕೊರೋನಾ ವೈರಸ್ ಐಸೋಲೇಷನ್ ವಾರ್ಡಿನಲ್ಲಿ ಗರ್ಭಿಣಿ ಮೇಲೆ, ಕೆಲವೆಡೆ ಯುವತಿ ಮೇಲೆ ವೈದ್ಯರೇ ಅತ್ಯಾತಾರವೆಸಗಿದ್ದಾರೆ ಎಂಬ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ. ಈ ಸುದ್ದಿಯ ಸತ್ಯಾಸತ್ಯತೆ ಏನು? ರೇಪ್ ನಡೆದಿದ್ದು ಹೌದು. ಆದರೆ, ಯಾವಾಗ?


ಆಸ್ಪತ್ರೆ ಹಾಸಿಗೆ ಮೇಲೆ ಮಲಗಿರುವ ಮಹಿಳೆಯ ಫೋಟೋವನ್ನು ಪೋಸ್ಟ್‌ ಮಾಡಿ, ಕೊರೋನಾ ವೈರಸ್‌ ಸೋಂಕು ತಗುಲಿ ಆಸ್ಪತ್ರೆಯ ಐಸೋಲೇಶನ್‌ ವಾರ್ಡಿನಲ್ಲಿ ದಾಖಲಾಗಿದ್ದ ಗರ್ಬಿಣಿ ಮೇಲೆ ವೈದ್ಯರೇ ನಿರಂತರ ಅತ್ಯಾಚಾರ ಎಸಗಿದ ಪರಿಣಾಮ ಈ ಮಹಿಳೆ ಮೃತಪಟ್ಟಿದ್ದಾರೆ ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಸುದ್ದಿಯೊಂದು ಹರಿದಾಡುತ್ತಿದೆ.

‘ಕೊರೋನಾ ವೈರಸ್‌ ಸೋಂಕು ಹಿನ್ನೆಲೆಯಲ್ಲಿ 2 ತಿಂಗಳ ಗರ್ಬಿಣಿ ಬಿಹಾರದ ಗಯಾದಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೇ 2 ದಿನ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಈ ಮಹಿಳೆ ಅತ್ತೆಯ ಬಳಿ ಪೂರ್ತಿ ಘಟನೆ ಹೇಳಿ, ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದ್ದಾರೆ. ಆದರೆ ರಕ್ತಸ್ರಾವ ನಿಲ್ಲದೇ ಮೃತಪಟ್ಟಿದ್ದಾರೆ’ ಎಂದು ಹೇಳಲಾಗಿದೆ.

Tap to resize

Latest Videos

undefined

Fact Check: ಕೊರೋನಾ ಮಾರಿಗೆ ಚೀನಾದಲ್ಲಿ ಬಲಿಯಾದವರ ಅಸಲಿ ಲೆಕ್ಕ , ಸಾವಿರದಲ್ಲಿಲ್ಲ!

ಈ ಸಂದೇಶದ ಹಿಂದಿನ ಸತ್ಯಾಸತ್ಯ ಪರಿಶೀಲಿಸಿದಾಗ ಕೊರೋನಾ ಸೋಂಕಿತೆ ಮೇಲೆ ಅತ್ಯಾಚಾರ ನಡೆದಿಲ್ಲ ಎಂಬ ವಾಸ್ತವ ಬಯಲಾಗಿದೆ. 2017ರಲ್ಲಿ ಹದಿಹರೆಯದ ಹುಡುಗಿಯೊಬ್ಬಳ ಮೇಲೆ ಉತ್ತರಪ್ರದೇಶದ ಕಾನ್ಪುರ ಆಸ್ಪತ್ರೆಯ ವಾರ್ಡ್‌ ಬಾಯ್‌ ಅತ್ಯಾಚಾರ ಎಸಗಿದ್ದ ಸುದ್ದಿಯ ಫೋಟೋವನ್ನೇ ಬಳಸಿಕೊಂಡು ಮತ್ತೊಂದು ಕತೆ ಕಟ್ಟಿಸುಳ್ಳುಸುದ್ದಿ ಹರಡಲಾಗುತ್ತಿದೆ.

ವರದಿಗಳ ಪ್ರಕಾರ ಉತ್ತರ ಪ್ರದೇಶದ ಕಾನ್ಪುರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 16 ವರ್ಷ ವಿದ್ಯಾರ್ಥಿನಿ ಮೇಲೆ ಆಸ್ಪತ್ರೆ ವಾರ್ಡ್‌ ಬಾಯ್‌ ಅತ್ಯಾಚಾರ ಎಸಗಿದ್ದ. ಈ ಘಟನೆಯ ಫೋಟೋ ಬಳಸಿಕೊಂಡು ಸದ್ಯ ಸುಳ್ಳುಸುದ್ದಿ ಹರಡಲಾಗುತ್ತಿದೆ.

ಈ ಸುದ್ದಿ ಪ್ರಕಟಿಸಿ, ಇನ್‌ಸ್ಟಾಗ್ರಾಮಿನಲ್ಲಿ ಶೇರ್ ಮಾಡಿರುವ ಲಿಂಕ್ ಇದೀಗ ಡಿಲೀಟ್ ಆಗಿದೆ. 

- ವೈರಲ್ ಚೆಕ್ 

click me!