ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡಿದ Article 370 ಟ್ರೇಲರ್‌!

By Santosh NaikFirst Published Feb 8, 2024, 6:15 PM IST
Highlights

ಆದಿತ್ಯ ಸುಹಾಸ್ ಜಂಭಾಲೆ ನಿರ್ದೇಶನದ, ಯಾಮಿ ಗೌತಮ್ ಮತ್ತು ಪ್ರಿಯಾಮಣಿ ಅಭಿನಯದ ಆರ್ಟಿಕಲ್ 370 ಫೆಬ್ರವರಿ 23 ರಂದು ಬಿಡುಗಡೆಯಾಗಲಿದೆ.
 

ಬೆಂಗಳೂರು (ಫೆ.8): ಉರಿ: ದಿ ಸರ್ಜಿಕಲ್‌ ಸ್ಟ್ರೈಕ್‌ ಸಿನಿಮಾದ ಬಳಿಕ ಮತ್ತೊಮ್ಮೆ ನಟಿ ಯಾಮಿ ಗೌತಮ್‌ ಅದೇ ಮಾದರಿಯ ಸಿನಿಮಾದೊಂದಿಗೆ ತೆರೆಯ ಮೇಲೆ ಬರೋಕೆ ಸಜ್ಜಾಗಿದ್ದಾರೆ. ಭಾರತೀಯ ಸೇನೆ ಹಾಗೂ ಜಮ್ಮು ಕಾಶ್ಮೀರದ ವಿಚಾರವಿಟ್ಟುಕೊಂಡು ಬಂದ ಇತ್ತೀಚಿನ ಬಹುತೇಕ ಎಲ್ಲಾ ಚಿತ್ರಗಳು ಯಶಸ್ವಿಯಾಗಿದೆ. ಅದರ ಬೆನ್ನಲ್ಲಿಯೇ ಜಮ್ಮು ಕಾಶ್ಮೀರದ ವಿಶೇಷಾಧಿಕಾರವಾದ ಆರ್ಟಿಕಲ್‌ 370ಯನ್ನು ತೆಗೆದಿದ್ದರ ಕಥಾ ಹಂದರವನ್ನು ಹೊಂದಿರುವ 'Article 370' ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ನಟಿ ಯಾಮಿ ಗೌತಮ್‌ ಖಡಕ್‌ ಎನ್‌ಐಎ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದು, ಫೆಬ್ರವರಿ 23 ರಂದು ಸಿನಿಮಾ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ. ಗುರುವಾರ ತಮ್ಮ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಸಿನಿಮಾದ ಟ್ರೇಲರ್‌ ಬಿಡುಗಡೆಯ ಮಾಹಿತಿ ನೀಡಿರುವ ತಂಡ, 'ಪೂರಾ ಕಾ ಪೂರಾ ಕಾಶ್ಮೀರ್, ಭಾರತ್‌ ದೇಶ್‌ ಕಾ ಹಿಸ್ಸಾ ಥಾ, ಹೇ, ಔರ್‌ ರೆಹೇಗಾ..' (ಕಾಶ್ಮೀರ ಎಲ್ಲಾ ಭಾಗಗಳು ಭಾರತದ ಭಾಗವಾಗಿತ್ತು, ಭಾಗವಾಗಿದೆ ಹಾಗೂ ಭಾಗವಾಗಿ ಇರಲಿದೆ) ಆರ್ಟಿಕಲ್‌ 370 ಟ್ರೇಲರ್‌ ಈಗ ಹೊರಬಿದ್ದಿದೆ' ಫೆಬ್ರವರಿ  23 ರಂದು ಸಿನಿಮಾಮಂದಿರಗಳಲ್ಲಿ ಬಿಡುಗಡೆಯಾಗಲಿದೆ' ಎಂದು ಸಿನಿಮಾ ತಂಡ ಬರೆದುಕೊಂಡಿದೆ.

2 ನಿಮಿಷ 40 ಸೆಕೆಂಡ್‌ನ ದೀರ್ಘ ಟ್ರೇಲರ್, ಯಾಮಿ ಗೌತಮ್‌ ಕಾಶ್ಮೀರವನ್ನು ಈಗಾಗಲೇ ಕಳೆದುಕೊಂಡಿರುವ ಕೇಸ್‌ ಎನ್ನುವುದರೊಂದಿಗೆ ಆರಂಭವಾಗುತ್ತದೆ. ಕಾಶ್ಮೀರಕ್ಕೆ ನೀಡಿರುವ ವಿಶೇಷಾಧಿಕಾರದಿಂದ ಆಕೆಯ ಗುಪ್ತಚರ ಇಲಾಖೆಯ ಕೆಲಸ ಎಷ್ಟು ಕಷ್ಟವಾಗುತ್ತಿದೆ ಎಂದು ತಿಳಿಸುವುದರೊಂದಿಗೆ ಟ್ರೇಲರ್‌ ಶುರುವಾಗುತ್ತದೆ. ಅದರೊಂದಿಗೆ ಕಾಶ್ಮೀರದಲ್ಲಿ ಭಯೋತ್ಪಾದನೆ ಬೆಳೆಯುವ ಬಗ್ಗೆಯೂ ಟ್ರೇಲರ್‌ ತೋರಿಸಿದೆ. ಉಗ್ರಗಾಮಿಗಳು ಈ ಪ್ರದೇಶದಲ್ಲಿ ಹಿಡಿತ ಸಾಧಿಸಲು ಮಾಡುವ ಪ್ರಯತ್ನಗಳನ್ನು ತೋರಿಸಿದೆ. ಅದರ ಬೆನ್ನಲ್ಲಿಯೇ ಯಾಮಿ ಗೌತಮ್‌ ಪಾತ್ರ ಎನ್‌ಐಎಗೆ ಸೇರುವುದನ್ನು ತೋರಿಸಿದೆ. ಅದರೊಂದಿಗೆ ಕಾಶ್ಮೀರದಲ್ಲಿ ಯಾವುದೇ ಕಾರ್ಯಾಚರಣೆ ಆರಂಭಿಸಲು ಮುಕ್ತ ಸ್ವಾತಂತ್ರ್ಯ ನೀಡಲಾಗುತ್ತದೆ ಎಂದು ತಿಳಿಸಸಲಾಗಿದೆ. ಇನ್ನೊಂದೆಡೆ ಪ್ರಧಾನಿ ಪಾತ್ರ ಮಾಡಿರುವ ವ್ಯಕ್ತಿ, ಅದೆಷ್ಟೇ ಕಷ್ಟವಾದರೂ ಆರ್ಟಿಕಲ್‌ 370 ತೆಗೆದು ಹಾಕುವುದು ನಿಶ್ಚಿತ ಎನ್ನುತ್ತಾರೆ. ರಾಜಕೀಯ ನಿರ್ಧಾರಗಳಿಂದಾಗಿ ಘರ್ಷಣೆಯ ನಡುವೆಯೂ ಅವಳು ಮತ್ತು ಸರ್ಕಾರವು ಹೇಗೆ ಬಲವಾಗಿ ಉಳಿಯುತ್ತದೆ ಎಂಬುದನ್ನು ಟ್ರೇಲರ್ ತೋರಿಸುತ್ತದೆ. ಶಾಶ್ವತ್ ಸಚ್‌ದೇವ್ ಅವರ ಹಿನ್ನಲೆ ಸಂಗೀತ ಟ್ರೇಲರ್‌ಗೆ ಇನ್ನಷ್ಟು ಮೆರುಗು ನೀಡಿದೆ.

ಜುಬಿನ್ ನೌಟಿಯಾಲ್ ಅವರ ಗಾಯನ ಮತ್ತು ಶಾಶ್ವತ್ ಅವರ ಸಂಗೀತದೊಂದಿಗೆ ಚಿತ್ರದ ದುವಾ ಹಾಡನ್ನು ಸಿನಿಮಾ ತಂಡ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ನಿಸ್ವಾರ್ಥ ಸೇವೆ ಸಲ್ಲಿಸಿದ ರಾಷ್ಟ್ರದ ಎಲ್ಲ ವೀರರಿಗೆ ಈ ಹಾಡು ಗೌರವ ಸಲ್ಲಿಸುತ್ತದೆ. ಈ ಹಾಡಿಗೆ ಸಾಹಿತ್ಯವನ್ನು ಕುಮಾರ್ ಬರೆದಿದ್ದಾರೆ ಮತ್ತು ಹಲವಾರು ಗಾಯಕರು ಹಿನ್ನಲೆ ಗಾಯನವನ್ನು ಮಾಡಿದ್ದಾರೆ. ಹಾಡಿನ ಬಗ್ಗೆ ಮಾತನಾಡಿದ  ಯಾಮಿ, “ನಾನು ಮೊದಲ ಬಾರಿಗೆ ಹಾಡನ್ನು ಕೇಳಿದಾಗ ತುಂಬಾ ಭಾವುಕಳಾಗಿದ್ದೆ. ಸಾಹಿತ್ಯವು ಎಷ್ಟು ಶಕ್ತಿಯುತವಾಗಿದೆ ಎಂದರೆ ಅವು ನಿಮ್ಮ ಹೃದಯವನ್ನು ಚುಚ್ಚುತ್ತವೆ. ಅಲ್ಲದೆ, ಇದನ್ನು ಕಾಶ್ಮೀರದ ಸುಂದರ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ನಿಸ್ವಾರ್ಥವಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಎಲ್ಲರಿಗೂ ಇದು ಸುಂದರವಾದ ಗೌರವವಾಗಿದೆ' ಎಂದು ತಿಳಿಸಿದ್ದರು.

'ಉರಿ'ಯಲ್ಲಿ ಪ್ರೀತಿ, 'ಆರ್ಟಿಕಲ್​ 370'ಯಲ್ಲಿ ಗರ್ಭಿಣಿ! ಫೇರ್​ ಅಂಡ್​ ಲವ್ಲಿ ಬ್ಯೂಟಿ ಯಾಮಿ ಗೌತಮ್​ ಗುಡ್​​ ನ್ಯೂಸ್​

ಯಾಮಿ ಹೊರತುಪಡಿಸಿ, ಆರ್ಟಿಕಲ್ 370 ರಲ್ಲಿ ಪ್ರಿಯಾಮಣಿ, ಅರುಣ್ ಗೋವಿಲ್, ವೈಭವ್ ತತ್ವವಾದಿ, ಸ್ಕಂದ ಠಾಕೂರ್, ಅಶ್ವಿನಿ ಕೌಲ್, ಕಿರಣ್ ಕರ್ಮಾರ್ಕರ್, ದಿವ್ಯಾ ಸೇಠ್ ಶಾ, ರಾಜ್ ಝುತ್ಶಿ, ಸುಮಿತ್ ಕೌಲ್, ರಾಜ್ ಅರ್ಜುನ್, ಅಸಿತ್ ಗೋಪಿನಾಥ್ ರೆಡಿಜ್, ಅಶ್ವನಿ ಕುಮಾರ್ ಮತ್ತು ಇರಾವತಿ ಹರ್ಷೆ ಮಾಯದೇವ್ ನಟಿಸಿದ್ದಾರೆ. ಆದಿತ್ಯ ಧರ್ ಮತ್ತು ಮೋನಾಲ್ ಥಾಕರ್ ಕಥೆಯನ್ನು ಬರೆದಿದ್ದಾರೆ, ಆದಿತ್ಯ ಸುಹಾಸ್ ಜಂಭಾಲೆ ಮತ್ತು ಅರ್ಜುನ್ ಧವನ್ ಅವರ ಚಿತ್ರಕಥೆ ಮತ್ತು ಸಂಭಾಷಣೆ ಈ ಚಿತ್ರಕ್ಕಿದೆ.

370ನೇ ವಿಧಿ ವಾಪಾಸ್‌ ತರುವ ಯಾವ ಶಕ್ತಿ ಕೂಡ ಜಗತ್ತಿನಲ್ಲಿಲ್ಲ, ಸಂಸತ್ತಿನಲ್ಲಾದ ಘಟನೆ ಕಳವಳಕಾರಿ: ಪ್ರಧಾನಿ ಮೋದಿ

click me!