Nandamuri Balakrishna Latest Video: ತೆಲುಗು ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಅವರು ಪ್ರಚಾರ ಕಾರ್ಯಕ್ರಮವೊಂದರಲ್ಲಿ ನಟಿ ಅಂಜಲಿ ಅವರನ್ನು ತಳ್ಳಿರುವ ವಿಡಿಯೋ ವೈರಲ್ ಆಗುತ್ತಿದೆ. ಇದನ್ನು ಸ್ಪೋರ್ಟಿವ್ ಆಗಿ ತೆಗೆದುಕೊಂಡರೂ ಜನ ಬಾಲಯ್ಯ ಅವರನ್ನು ಟೀಕಿಸುತ್ತಿದ್ದಾರೆ.
ಹೈದರಾಬಾದ್: ತೆಲುಗು ಸಿನಿಮಾ ಲೋಕದ ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ (Actor Nandamuri Balakrishna ) ವೇದಿಕೆ ಮೇಲಿದ್ದ ನಟಿ ಅಂಜಲಿಯನ್ನು (Actress Anjali) ತಳ್ಳಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಯನ್ನು ನಟಿ ಅಂಜಲಿ ತಮಾಷೆಯಾಗಿ ತೆಗೆದುಕೊಂಡರೂ ನೆಟ್ಟಿಗರು ನಂದಮೂರಿ ಬಾಲಕೃಷ್ಣರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀವು ತಳ್ಳಿರೋದು ಜೂನಿಯರ್ ಆರ್ಟಿಸ್ಟ್ ಅಲ್ಲ, ಅವರು ನಟಿ ಅಂಜಲಿ, ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಅನುಭವವನ್ನು ಹೊಂದಿರುವ ಕಲಾವಿದೆ ಎಂದು ನೆಟ್ಟಿಗರೊಬ್ಬರು ಟೀಕಿಸಿದ್ದಾರೆ.
ಕೃಷ್ಣ ಚೈತನ್ಯ ನಿರ್ದೇಶನದ ಗ್ಯಾಂಗ್ಸ್ ಆಫ್ ಗೋದಾವರಿ (Gangs Of Godavari) ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಈ ಸಿನಿಮಾ ಪ್ರಚಾರ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ನಂದಮೂರಿ ಬಾಲಕೃಷ್ಣ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ನಂದಮೂರಿ ಬಾಲಕೃಷ್ಣ ವೇದಿಕೆ ಮೇಲೆ ಬಂದಾಗ ಅವರಿಗಿಂತ ಮೊದಲೇ ನಟಿಯರಾದ ನೇಹಾ ಶೆಟ್ಟಿ ಮತ್ತು ಅಂಜಲಿ ನಿಂತಿದ್ದರು.
ನೋಡ ನೋಡುತ್ತಿದ್ದಂತೆ ಅಂಜಲಿಯನ್ನ ತಳ್ಳಿದ ನಟ
ನಂದಮೂರಿ ವೇದಿಕೆ ಮಧ್ಯಭಾಗಕ್ಕೆ ಬರುತ್ತಿದ್ದಂತೆ ನಟಿಯರಿಗೆ ಪಕ್ಕಕ್ಕೆ ಸರಿಯುವಂತೆ ಹೇಳುತ್ತಾರೆ. ನಟಿಯರಿಬ್ಬರು ಸರಿಯುವ ಮುನ್ನವೇ ಅಂಜಲಿಯನ್ನು ನಂದಮೂರಿ ಬಾಲಕೃಷ್ಣ ತಳ್ಳುತ್ತಾರೆ. ಅಂಜಲಿ ಹೈಹೀಲ್ಸ್ ಹಾಕಿದ್ದರಿಂದ ನಂದಮೂರಿ ಬಾಲಕೃಷ್ಣ ತಳ್ಳುತ್ತಿದ್ದಂತೆ ಬ್ಯಾಲೆನ್ಸ ಕಳೆದುಕೊಳ್ಳುತ್ತಾರೆ. ಕೂಡಲೇ ಪಕ್ಕದಲ್ಲಿದ್ದ ನಟಿ ನೇಹಾರನ್ನು ಹಿಡಿದುಕೊಂಡು ನಿಂತುಕೊಳ್ಳುತ್ತಾರೆ. ಇಷ್ಟಾದ್ರೂ ನಂದಮೂರಿ ಮುಖದಲ್ಲಿ ಕೋಪ ಕಾಣುತ್ತಿದೆ. ಈ ಘಟನೆಯನ್ನು ಅಂಜಲಿ ಗಂಭೀರವಾಗಿ ತೆಗೆದುಕೊಳ್ಳದೇ ನಕ್ಕಿದ್ದಾರೆ. ಇದಾದ ಬಳಿಕ ಅಂಜಲಿ ಜೊತೆಯಲ್ಲಿ ನಂದಮೂರಿ ಕೆಲವು ಹಾಡುಗಳನ್ನು ಹಾಡಿದ್ದಾರೆ.
ನಿಜಕ್ಕೂ ಇದು ಅವಳೇನಾ? ಅದಿತಿ ರಾವ್ ಹಳೆಯ ಫೋಟೋ ನೋಡಿ ಫ್ಯಾನ್ಸ್ ಶಾಕ್!
ನೆಟ್ಟಿಗರ ಅಭಿಪ್ರಾಯ ಏನು?
ನಂದಮೂರಿ ಬಾಲಕೃಷ್ಣ ಹಿರಿಯ ನಟ, ಶಾಸಕರಾಗಿದ್ದು, ಮಾಜಿ ಸಿಎಂ ಪುತ್ರ. ಆದರೂ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಹಿರಿಯರ ಸ್ಥಾನದಲ್ಲಿದ್ದರು ಅವರ ಅಹಂಕಾರ, ಗರ್ವ ಯಾವುದೂ ಕಂಡಿಲ್ಲ. ಕಳೆದ 22 ವರ್ಷಗಳಿಂದ ಚಿತ್ರರಂಗದಲ್ಲಿರುವ ಅಂಜಲಿ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಇದರಲ್ಲಿ ಅರ್ಧಕ್ಕಿಂತ ಅಧಿಕ ಚಿತ್ರಗಳು ಯಶಸ್ಸು ಕಂಡಿವೆ. ಮಹಿಳೆಯನ್ನು ತಳ್ಳುವ ಮೂಲಕ ಪುರುಷತ್ವ ತೋರಿಸಿದಂತೆ ಕಾಣಿಸುತ್ತಿದೆ ಎಂಬ ಚರ್ಚೆಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿವೆ.
Appalling behaviour by Balakrishna and an understandable reaction by the junior artist who laughed it off, but the most horrifying part of this video is the crowd’s reaction to a blatant act of assault, cheering and hooting in approval.
pic.twitter.com/kVO1UgYsP1
ಬಿಗ್ ಟ್ರಬಲ್ ಇನ್ 'ಪುಷ್ಪ2'.. ಡಲ್ ಆಯ್ತಾ ಅಲ್ಲು ಅರ್ಜುನ್ ಮಾರ್ಕೆಟ್? ಬೇಡಿಕೆ ಕಡಿಮೆ ಆಗಲು ಕಾರಣ ಏನು?
ಕೃಷ್ಣ ಚೈತನ್ಯ ನಿರ್ದೇಶನದ ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾ ಮೇ 31ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ವಿಶ್ವಕ್ ಸೇನ್, ಅಂಜಲಿ, ನೇಹಾ ಶೆಟ್ಟಿ, ನಸ್ಸಾರ್, ಪಿ.ಸಾಯಿಕುಮಾರ್ಮ ಹೈಪರ್ ಆದಿ ಸೇರಿದಂತೆ ದೊಡ್ಡ ತಾರಾಬಳಗವನ್ನು ಸಿನಿಮಾ ಹೊಂದಿದೆ. ನಂದಮೂರಿ ಬಾಲಕೃಷ್ಣ 109ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
Who is this scumbag? https://t.co/KUVZjMZY2M
— Hansal Mehta (@mehtahansal)