Asianet Suvarna News Asianet Suvarna News

ಬಿಗ್ ಟ್ರಬಲ್ ಇನ್ 'ಪುಷ್ಪ2'.. ಡಲ್ ಆಯ್ತಾ ಅಲ್ಲು ಅರ್ಜುನ್ ಮಾರ್ಕೆಟ್? ಬೇಡಿಕೆ ಕಡಿಮೆ ಆಗಲು ಕಾರಣ ಏನು?

ಪುಷ್ಪ2 ಸಿನಿಮಾದ ಬಾಕ್ಸಾಫೀಸ್​ ಕಲೆಕ್ಷನ್ ಮೇಲೂ ಭಾರಿ ಲೆಕ್ಕಾಚಾರಗಳು ಶುರುವಾಗಿದ್ದು, ಸಾವಿರ ಕೋಟಿ ಕಲೆಕ್ಷನ್ ಮಾಡುತ್ತೆ ಅಂತ ಟಾಲಿವುಡ್​​ನಲ್ಲಿ ಟಾಕ್ ಇದೆ. ಆದ್ರೆ ಈ ಟೈಂನಲ್ಲಿ ಪುಷ್ಪ2 ಬಗ್ಗೆ ಬ್ಯಾಡ್ ನ್ಯೂಸ್ ಒಂದು ಹೊರ ಬಂದಿದೆ.
 

ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪರಾಜ್​ ಆಗಿ ಬೆಳ್ಳಿತೆರೆ ಮೇಲೆ ಅಬ್ಬರಿಸೋ ಟೈಂ ತೀರಾ ಹತ್ತಿರದಲ್ಲೇ ಇದೆ. ಅಗಸ್ಟ್ 15ಕ್ಕೆ ಪುಷ್ಪ2 ಸಿನಿಮಾ ವರ್ಲ್ಡ್​ ವೈಡ್​ ರಿಲೀಸ್ ಆಗಿ ಬಾಕ್ಸಾಫೀಸ್ ದೋಚಲಿದೆ. ಪುಷ್ಪ ಪಾರ್ಟ್​ ಒನ್ ಸಿನಿಮಾ ಗಲ್ಲಾಪೆಟ್ಟಿಗಯಲ್ಲಿ 373 ಕೋಟಿ ಗಳಿಸಿ ಅಲ್ಲು ಅರ್ಜುನ್ ಸಿನಿ ಖರಿಯರ್​ನಲ್ಲಿ ಇತಿಹಾಸ ಬರೆದಿತ್ತು. ಹೀಗಾಗಿ ಪುಷ್ಪ2 ಸಿನಿಮಾದ ಬಾಕ್ಸಾಫೀಸ್​ ಕಲೆಕ್ಷನ್ ಮೇಲೂ ಭಾರಿ ಲೆಕ್ಕಾಚಾರಗಳು ಶುರುವಾಗಿದ್ದು, ಸಾವಿರ ಕೋಟಿ ಕಲೆಕ್ಷನ್ ಮಾಡುತ್ತೆ ಅಂತ ಟಾಲಿವುಡ್​​ನಲ್ಲಿ ಟಾಕ್ ಇದೆ. ಆದ್ರೆ ಈ ಟೈಂನಲ್ಲಿ ಪುಷ್ಪ2 ಬಗ್ಗೆ ಬ್ಯಾಡ್ ನ್ಯೂಸ್ ಒಂದು ಹೊರ ಬಂದಿದೆ. ಸಾಮಾನ್ಯವಾಗಿ ಸಕ್ಸಸ್​ ಸಿನಿಮಾಗಳ ಕಂಟಿನ್ಯೂ ಪಾರ್ಟ್​ ಬರುತ್ತೆ ಅಂದಾಗ ಬೇಡಿಕೆ ಹೆಚ್ಚಿರುತ್ತೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್​ ಕೆಜಿಎಫ್​​ ಬಾಹುಬಲಿ ಸಿನಿಮಾಗಳು. 

ಆದರೆ ಪುಷ್ಪ2 ಸಿನಿಮಾದಲ್ಲಿ ಹಾಗಾಗುತ್ತಿಲ್ಲ. ಪುಷ್ಪ2 ಇನ್ ಟ್ರಬಲ್ ಅಂತೆ. ಯಾಕಂದ್ರೆ ಅಲ್ಲು ಅರ್ಜುನ್​ರ ಪುಷ್ಪ2 ಗೆ ಮಾರ್ಕೆಟ್ ಇಲ್ವಂತೆ. ಇನ್ನು ಎರಡು ವರೆ ತಿಂಗಳಲ್ಲಿ ರಿಲೀಸ್ ಆಗಲಿರೋ ಪುಷ್ಪ2 ಸಿನಿಮಾವನ್ನ ಕೊಂಡುಕೊಳ್ಳಲು ಸಿನಿಮಾ ವಿತರಕರು ಮುಂದೆ ಬರುತ್ತಿಲ್ಲವಂತೆ. 'ಪುಷ್ಪ2' ಸಿನಿಮಾಗೆ ಬೇಡಿಕೆ ಕಡಿಮೆ ಆಗಲು ಕಾರಣ ಏನು ಗೊತ್ತಾ..? ಪುಷ್ಪ ಪಾರ್ಟ್ 1 ಸಿನಿಮಾ ಡಿಸ್ಟ್ರಿಬ್ಯೂಟ್ ಮಾಡಿದವರಿಗೆ ಹೇಳಿಕೊಳ್ಳುವ ಲಾಭ ತಂದುಕೊಟ್ಟಿಲ್ಲವಂತೆ. ಮತ್ತೆ ಈಗ ಪುಷ್ಪ2 ವಿತರಣೆ ಮಾಡೋಕೆ ಕೇಳಿದ್ರೆ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್​​ನವರು ಒನ್​ ಟು ಡಬಲ್ ರೇಟ್ ಹೇಳಿದ್ದಾರಂತೆ. ಹೀಗಾಗಿ ಆಂಧ್ರಪ್ರದೇಶ ತೆಲಂಗಾಣದಲ್ಲಿ ಪುಷ್ಪ2 ಸಿನಿಮಾ ವಿತರಣೆ ಹಕ್ಕು ಪಡೆಯಲು ಯಾರು ಮುಂದೆ ಬರುತ್ತಿಲ್ಲವಂತೆ. 

ಇದರ ಎಫೆಕ್ಟ್​ ನಿಂದ ಎಚ್ಚೆತ್ತುಕೊಂಡಿರೋ ಮೈತ್ರಿ ಮೂವಿ ಮೇಕರ್ಸ್​ ಸಂಸ್ಥೆ ಈಗ ಕಡಿಮೆ ರೇಟ್​ಗೆ ಪುಷ್ಪ2 ವಿತರಣೆ ಹಕ್ಕು ಮಾರಾಟ ಮಾಡುತ್ತೇವೆ ಬನ್ನಿ ಅಂತ ಕರೆಯುತ್ತಿದ್ದಾರಂತೆ. ಮತ್ತೊಂದ್ ಕಡೆ ಪುಷ್ಪ2 ಸಿನಿಮಾದ ಒಂದೊಂದೇ ಸ್ಯಾಂಪಲ್ಸ್​ಗಳು ರಿಲೀವ್​ ಆಗುತ್ತಿವೆ. ಪುಷ್ಪ2 ಸಿನಿಮಾದ ಕಪಲ್ ಸಾಂಗ್ ಹೊರ ಬಂದಿದೆ ನಟಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿಯಾಗಿ ಪುಷ್ಪರಾಜ್ ಅಲ್ಲು ಅರ್ಜುನ್ ಜತೆ ಡಾನ್ಸ್ ಮಾಡಿದ್ದಾರೆ. ಮೊದಲ ಸಿನಿಮಾದಲ್ಲಿ ಪುಷ್ಪ, ಶ್ರೀವಲ್ಲಿಯ ಅಂದ ಹೊಗಳಿ ಸಾಂಗ್ ಹಾಡಿದ್ರು. ಈಗ ‘ಪುಷ್ಪ 2’ ಶ್ರೀವಲ್ಲಿ, ಪುಷ್ಪನ ವ್ಯಕ್ತಿತ್ವ ಹೊಗಳಿ ಹಾಡು ಹಾಡಿದ್ದಾಳೆ. ಇಂದು ಬಿಡುಗಡೆ ಆಗಿರುವ ವಿಡಿಯೋ ಹಾಡಿನಲ್ಲಿ, ಶ್ರೀವಲ್ಲಿ, ತನ್ನ ಪತಿ ಪುಷ್ಪನನ್ನು ಹೇಗೆ ನೋಡುತ್ತಾಳೆ, ಹಾಗೂ ಆಕೆಯ ದೃಷ್ಟಿಕೋನ ಸಮಾಜದ ದೃಷ್ಟಿಕೋನದಿಂದ ಸಂಪೂರ್ಣ ಭಿನ್ನವಾಗಿ ಹೇಗಿದೆ ಎಂಬುದನ್ನು ಸಾರುತ್ತಿದೆ.

ಜನರೆಲ್ಲ ಪುಷ್ಪನನ್ನು, ಒರಟ, ಮೊಂಡ ಎನ್ನುತ್ತಾರೆ ಆದರೆ ಶ್ರೀವಲ್ಲಿಗೆ ಮಾತ್ರ ಪುಷ್ಪ ಮಹಾರಾಜ ಎನ್ನುವ ಹಾಗೆ ಈ ಹಾಡು ಮೂಡಿ ಬಂದಿದೆ. ಈ ಹಾಡಿನ ಜತೆ ಮೇಕಿಂಗ್ ಮಾತ್ರ ರಿಲೀಸ್ ಆಗಿದ್ದು, ಮೇಕಿಂಗ್ ಕೂಡ ಸಖತ್ ಮಜ ಇದೆ. ‘ಪುಷ್ಪ’ ಸಿನಿಮಾದ ಮೊದಲ ಭಾಗದಲ್ಲಿ ಪ್ರತಿ ಹಾಡಿಗೂ ಒಂದೊಂದು ಭಿನ್ನವಾದ ‘ಹುಕ್ ಸ್ಟೆಪ್’ಗಳಿದ್ದವು. ಹಾಗೆಯೇ ಈ ಹಾಡಿಗೂ ಒಂದು ಹುಕ್ ಸ್ಟೆಪ್ ಅನ್ನು ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಸೃಷ್ಟಿಸಿದ್ದಾರೆ. ಲೇಜಿಯಾಗಿ ಕಾಣುವ ಈ ಹುಕ್ ಸ್ಟೆಪ್, ರೀಲ್ಸ್ ಮಾಡುವವರ ಮೆಚ್ಚಿನ ಸ್ಟೆಪ್ ಆದ್ರು ಆಶ್ಚರ್ಯ ಇಲ್ಲ. ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಮತ್ತೊಮ್ಮೆ ಹಿಟ್ ಲೀಸ್ಟ್ ಸೇರೋ ಎಲ್ಲಾ ಸಾಧ್ಯತೆ ಇದೆ. 

ಈ ಹಾಡಿನಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೊತೆಗೆ ನಿರ್ದೇಶಕ ಸುಕುಮಾರ್, ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಇನ್ನೂ ಕೆಲವು ತಂತ್ರಜ್ಞರು ಸಹ ಸ್ಟೆಪ್ ಹಾಕಿದ್ದಾರೆ. ಅಂದಹಾಗೆ ಈ ಹಾಡಿಗೆ ಸಾಹಿತ್ಯ ಬರೆದಿರೋದು ಆಸ್ಕರ್ ವಿಜೇತ ಚಂದ್ರಭೋಸ್. ಕನ್ನಡ ಸೇರಿ ಐದು ಭಾಷೆಯಲ್ಲಿ ಹಾಡು ಬಿಡುಗಡೆ ಆಗಿದೆ. ಖ್ಯಾತ ಗಾಯಕಿ ಶ್ರೆಯಾ ಘೋಷಾಲ್ ಧ್ವನಿಯಲ್ಲಿ ಸಾಂಗ್ ಮೂಡಿ ಬಂದಿದೆ. ‘ಪುಷ್ಪ 2’ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡುತ್ತಿದ್ದು, ಮೈತ್ರಿ ಮೂವಿ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ಡಾಲಿ ಧನಂಜಯ್, ಫಹಾದ್ ಫಾಸಿಲ್, ಸುನಿಲ್ ಇನ್ನೂ ಹಲವು ಕಲಾವಿದರು ನಟಿಸಿದ್ದಾರೆ. ಸಿನಿಮಾ ಆಗಸ್ಟ್ 15 ರಂದು ತೆರೆಗೆ ಬರಲಿದೆ.