ಆ ನಟಿಯಷ್ಟು ನನ್ನ ಎದೆಭಾಗ ದೊಡ್ಡದಿಲ್ಲ ಎಂದ ಬಾಲಿವುಡ್ ನಟಿ

By Mahmad Rafik  |  First Published Jun 1, 2024, 11:10 AM IST

ಹಾಲಿವುಡ್‌ನ ಬೇವಾಚ್‌ ಸಿನಿಮಾದ ನಾಯಕಿ ಪಮೇಲಾ ಆಂಡರ್ಸನ್ ಪಾತ್ರ ಮಾಡಬೇಕು ಎಂದ ಆಸೆ ನಿಮಗೆ ಇದೆ ಅಂತೆ, ಇದು ನಿಜಾನಾ ಎಂದು ಕಪಿಲ್ ಶರ್ಮಾ ಕೇಳಿದ್ದರು. ಇದಕ್ಕೆ ಒಂದು ಕ್ಷಣವೂ ತಡಮಾಡದೇ ಉತ್ತರ ನೀಡಿದ ನೀನಾ ಗುಪ್ತಾ, ನನಗೆ ಅಷ್ಟು ದೊಡ್ಡ ಬೂಬ್ಸ್ ಇಲ್ಲ ಎಂದು ಹೇಳಿದ್ದರು.


ಮುಂಬೈ: ಬಾಲಿವುಡ್ ಹಿರಿಯ ನಟಿ ನೀನಾ ಗುಪ್ತಾ (Bollywood Actress Neena Gupta) ತಮ್ಮ ಹೇಳಿಕೆಗಳಿಂದಲೇ ಸುದ್ದಿ ಆಗುತ್ತಿರುತ್ತಾರೆ. ಕಳೆದ ಒಂದೂವರೆ ದಶಕದಿಂದ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನೀನಾ ಗುಪ್ತಾ ನಟನೆಯ ಪಂಚಾಯತ್ ಸೀಸನ್ 3 ಬಿಡುಗಡೆಗೊಂಡಿದೆ. ದೆಹಲಿ ಮೂಲದವರಾಗಿರುವ ನೀನಾ ಗುಪ್ತಾ ಮುಂಬೈನಲ್ಲಿ ಬದುಕು ಕಟ್ಟಿಕೊಂಡಿದ್ದು ಹೇಗೆ? ಮದುವೆಗೂ ಮುನ್ನ ಗರ್ಭಿಣಿಯಾಗಿರುವ ವಿಷಯವನ್ನ ಹಲವು ವೇದಿಕೆಗಳಲ್ಲಿ ನೀನಾ ಗುಪ್ತಾ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇದೀಗ ನೀನಾ ಗುಪ್ತಾ ಹೇಳಿಕೆಯ (Neena Gupta Statement) ಹಳೆ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದವು. ಹಾಸ್ಯ  ಕಲಾವಿದ ಕಪಿಲ್ ಶರ್ಮಾ (Kapil Sharma Show) ನಿರೂಪಣೆಯ ಕಾರ್ಯಕ್ರಮವೊಂದರಲ್ಲಿ ಈ ಹೇಳಿಕೆಯನ್ನು ನೀಡಿದ್ದರು. 

ಬಾಲಿವುಡ್ ಚಿತ್ರ ಪಂಗಾ ಚಿತ್ರದ ಪ್ರಚಾರದಲ್ಲಿ ಭಾಗವಹಿಸಿದ್ದ ನೀನಾ ಗುಪ್ತಾ ಯಾವುದೇ ಹಿಂಜರಿಕೆ ಇಲ್ಲದೇ ಈ ಮಾತುಗಳನ್ನಾಡಿದ್ದರು. ಇದೇ ಕಾರ್ಯಕ್ರಮದಲ್ಲಿದ್ದ ನಟಿ ಅರ್ಚನಾ ಪೂರಣ್ ಸಿಂಗ್ (Actress Archana puran Singh) ಜೋರಾಗಿ ನಗುತ್ತಾ, ಬೇರೆ ಯಾರು ಸಹ ಈ ರೀತಿ ಓಪನ್‌ ಆಗಿ ಮಾತನಾಡಲ್ಲ ಎಂದು ಹೇಳಿದರು. ಇದೇ ವೇದಿಕೆಯಲ್ಲಿದ್ದ ಕಂಗನಾ ರಣಾವತ್ ಸೇರಿದಂತೆ ಇತರೆ ಕಲಾವಿದರು ಒಂದು ಕ್ಷಣ ಶಾಕ್ ಆಗಿ, ನಕ್ಕಿದ್ದಾರೆ. ಇತ್ತ ಪ್ರಶ್ನೆ ಕೇಳಿದ್ದ ನಿರೂಪಕ ಕಪಿಲ್ ಶರ್ಮಾ ಮುಜುಗರಕ್ಕೊಳಗಾದಂತೆ ಕಾಣಿಸುತ್ತಿತ್ತು. 

Tap to resize

Latest Videos

ಕಪಿಲ್ ಶರ್ಮಾ ಕೇಳಿದ ಪ್ರಶ್ನೆ ಏನು?

ನೀವು ಹಾಲಿವುಡ್‌ನ ಬೇವಾಚ್‌ ಸಿನಿಮಾದ ನಾಯಕಿ ಪಮೇಲಾ ಆಂಡರ್ಸನ್ ಪಾತ್ರ ಮಾಡಬೇಕು ಎಂದ ಆಸೆ ನಿಮಗೆ ಇದೆ ಅಂತೆ, ಇದು ನಿಜಾನಾ ಎಂದು ಕಪಿಲ್ ಶರ್ಮಾ ಕೇಳಿದ್ದರು. ಇದಕ್ಕೆ ಒಂದು ಕ್ಷಣವೂ ತಡಮಾಡದೇ ಉತ್ತರ ನೀಡಿದ ನೀನಾ ಗುಪ್ತಾ, ನನಗೆ ಅಷ್ಟು ದೊಡ್ಡ ಬೂಬ್ಸ್ ಇಲ್ಲ ಎಂದು ಹೇಳಿದ್ದರು. ಈ ಶೋಗಾಗಿ ವೆಜ್ ಆನ್ಸರ್ ಕೊಡಿ ಅಂತ ಕಪಿಲ್ ಶರ್ಮಾ ಕೇಳುತ್ತಾರೆ. ನೀವು ವೆಜ್ ಪ್ರಶ್ನೆ ಕೇಳಿದ್ರೆ ನಮ್ಮ ಉತ್ತರವು ವೆಜ್ ಆಗಿರುತ್ತದೆ. ಪಮೇಲಾ ವೆಜ್ ಆಗಲ್ಲ ಎಂದು ನೀನಾ ಗುಪ್ತಾ ಹೇಳುತ್ತಾರೆ. ದೀಗ ಈ ಹೇಳಿಕೆಯ ವಿಡಿಯೋ ವೈರಲ್ ಆಗಿದೆ.

ಮಿಡಲ್ ಏಜ್ ಲೈಂಗಿಕತೆ ಅಸಹ್ಯ ಅಲ್ಲ, ಅನಿವಾರ್ಯ ಅನ್ನೋ ಶಾರ್ಟ್ ಮೂವಿ ಈಗ ವೈರಲ್!

ಮೊದಲು ಲಿಪ್‌ಲಾಕ್ ಮಾಡಿದ ನಟಿ 

ಬಾಲಿವುಡ್‌ನಲ್ಲಿ ಮೊದಲು ಲಿಪ್ ಲಾಕ್ ಮಾಡಿದ ನಟಿ ಎಂದು ನೀನಾ ಗುಪ್ತಾ ಗುರುತಿಸಿಕೊಳ್ಳುತ್ತಾರೆ. ದಿಲ್‌ಲಗಿ ಸಿನಿಮಾದಲ್ಲಿ ನಟ ದಿಲೀಪ್ ಧವನ್ ಜೊತೆ ತುಟಿಗೆ ತುಟಿ ಸೇರಿಸಿದ್ದರು, ಚಿತ್ರೀಕರಣದ ಹಿಂದಿನ ರಾತ್ರಿ ನಿದ್ದೆ ಇಲ್ಲದೇ ಕಾಲ ಕಳೆದಿದ್ದರು. ಚುಂಬನ ದೃಶ್ಯ ಮಾಡಿದ ಬಳಿಕ ಡೆಟಾಲ್‌ನಿಂದ ಬಾಯಿ ತೊಳೆದುಕೊಂಡಿದ್ದೆ ಎಂದು ನೀನಾ ಗುಪ್ತಾ ಹೇಳಿಕೊಂಡಿದ್ದರು. ಪ್ರೀತಿಸದ ಯಾರನ್ನಾದರೂ ಚುಂಬಿಸೋದು ತುಂಬಾ ಕಷ್ಟದ ಕೆಲಸ. ಆದ್ರೆ ಇಂದು ಕಿಸ್ಸಿಂಗ್ ಸೀನ್‌ಗಳು ಕಾಮನ್ ಆಗಿವೆ ಎಂದು ನೀನಾ ಹೇಳುತ್ತಾರೆ. 

ದುಡ್ಡಿಗಾಗಿ ಎಲ್ಲವನ್ನೂ ಮಾಡಿಬಿಟ್ಟೆ, ದೇವ್ರೇ ಈ ಚಿತ್ರ ರಿಲೀಸ್​ ಆಗದೇ ಇರ್ಲಿಯಂತ ಬೇಡಿಕೊಳ್ತಿದ್ದೆ- ನೀನಾ ಗುಪ್ತಾ

ಸ್ತ್ರೀವಾದದ ಬಗ್ಗೆ ನೀನಾ ಮಾತು 

ಸ್ತ್ರೀವಾದದ ಬಗ್ಗೆಯೂ ನೀನಾ ಗುಪ್ತಾ ಮುಕ್ತವಾಗಿ ಮಾತನಾಡಿದ್ದಾರೆ. ಸ್ತ್ರೀವಾದ ಎನ್ನುತ್ತಾ ಹೋರಾಟ ಮಾಡುವ ಬದಲು, ಮೊದಲು  ಆರ್ಥಿಕವಾಗಿ ಸಬಲರಾಗುವುದನ್ನು ನೋಡಿ. ಮಾಡಬೇಕಾಗಿರುವ ಕೆಲಸದತ್ತ ಗಮನ ಕೊಡಿ ಎಂದು ನಟಿ ನೀನಾ ಗುಪ್ತಾ ಹೇಳಿದ್ದರು. ಗಂಡು-ಹೆಣ್ಣು ಸಮಾನರಲ್ಲ. ಗಂಡು ಗರ್ಭ ಧರಿಸಲು ಸಾಧ್ಯವಾದ್ರೆ ಮಾತ್ರ ಇಬ್ಬರು ಸಮಾನರು ಎಂದು ಹೇಳಬಹುದು. ಗಂಡು ಗರ್ಭ ಧರಿಸೋದು ಹೇಗೆ ಸಾಧ್ಯವಿಲ್ಲವೋ? ಹಾಗೆ ಗಂಡು-ಹೆಣ್ಣು ಸಮಾನರು ಆಗಲ್ಲ. ನಾವು ನಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗಬೇಕು ಎಂದು ನೀನಾ ಗುಪ್ತಾರ ಅಭಿಪ್ರಾಯವಾಗಿದೆ.

click me!