ಸಲ್ಮಾನ್ ಖಾನ್ ಮೇಲೆ ದಾಳಿ ನಡೆಸಲು M16, AK-47 ಮತ್ತು AK-92 ರೈಫಲ್‌ಗಳನ್ನು ಖರೀದಿಸಲು ಪಾಕಿಸ್ತಾನದಲ್ಲಿರುವ ಡೋಗಾ ಎಂಬ ಶಸ್ತ್ರಾಸ್ತ್ರ ವ್ಯಾಪಾರಿಯೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಸ್ಪೋಟಕ ಮಾಹಿತಿಯನ್ನು ಬಂಧಿತ ಆರೋಪಿ ಅಜಯ್ ಕಶ್ಯಪ್ ಪೊಲೀಸ್ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ.
ಮುಂಬೈ: ಜೈಲುಪಾಲಾಗಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (gangster Lawrence Bishnoi's gang) ಬಾಲಿವುಡ್ ನಟ ಸಲ್ಮಾನ್ ಖಾನ್ (Bollywood Actor Salman Khan) ಹತ್ಯೆಗೆ ಸಂಚು ರೂಪಿಸಿತ್ತು ಎಂದು ವರದಿಯಾಗಿದೆ. ಮುಂಬೈನ ಪನ್‌ವೇಲ್ ಬಳಿಯಲ್ಲಿರುವ ಫಾರ್ಮ್‌ಹೌಸ್ ಬಳಿಯಲ್ಲಿಯೇ (Farmhouse, Panvel) ಸಲ್ಮಾನ್ ಕೊಲೆಗೆ ನಾಲ್ವರು ಎಕೆ-47 ಗನ್ ಹಿಡಿದು ಕಾರ್‌ನಲ್ಲಿ ಕಾಯುತ್ತಿದ್ದರು. ಈ ಪ್ರಕರಣ ಸಂಬಂಧ ಮಹಾರಾಷ್ಟ್ರ ಪೊಲೀಸರು (Maharashtra Police) ಬಿಷ್ಣೋಯ್ ಗ್ಯಾಂಗ್‌ನ ನಾಲ್ವರು ಶಾರ್ಪ್ ಶೂಟರ್‌ಗಳನ್ನು ಬಂಧಿಸಿದ್ದಾರೆ.
ಶೂಟರ್‌ಗಳನ್ನು ಧನಂಜಯ್ಬ ತಪ್‌ಸಿಂಗ್ ಅಲಿಯಾಸ್ ಅಜಯ್ ಕಶ್ಯಪ್, ಗೌರವ್ ಭಟಿಯಾ ಅಲಿಯಾಸ್ ನ್ಹಾವಿ, ವಾಪ್ಸಿ ಖಾನ್ ಅಲಿಯಾಸ್ ವಾಸೀಂ ಚಿಕ್ನಾ ಮತ್ತು ರಿಜ್ವಾನ್ ಖಾನ್ ಅಲಿಯಾಸ್ ಜಾವೇದ್ ಖಾನ್ ಎಂದು ಗುರುತಿಸಲಾಗಿದೆ. ಪೊಲೀಸರು ಬಂಧಿತದಿಂದ ಎಕೆ-47 ರೈಫಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಾಲ್ವರು ಫಾರ್ಮ್‌ಹೌಸ್ ಬಳಿಯೇ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು. ಇವರು ಅಲ್ಲಿಯೇ ರಿಹರ್ಸಲ್ ನಡೆಸುತ್ತಿದ್ದರು ಎಂದು ಇಂಡಿಯಾ ಟುಡೇ ವರದಿ ಪ್ರಕಟಿಸಿದೆ.
undefined
ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳ ಖರೀದಿ
ನಟ ಸಲ್ಮಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆಸುವಂತೆ ನೀಡಿದ ಸಂದೇಶದ ವಿಡಿಯೋಗಳು ಬಂಧಿತರ ಮೊಬೈಲ್‌ನಲ್ಲಿ ಪತ್ತೆಯಾಗಿವೆ. ಪೊಲೀಸರು ಬಂಧಿತರ ಬಳಿಯಲ್ಲಿದ್ದ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸಲ್ಮಾನ್ ಖಾನ್ ಮೇಲೆ ದಾಳಿ ನಡೆಸಲು M16, AK-47 ಮತ್ತು AK-92 ರೈಫಲ್‌ಗಳನ್ನು ಖರೀದಿಸಲು ಪಾಕಿಸ್ತಾನದಲ್ಲಿರುವ ಡೋಗಾ ಎಂಬ ಶಸ್ತ್ರಾಸ್ತ್ರ ವ್ಯಾಪಾರಿಯೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಸ್ಪೋಟಕ ಮಾಹಿತಿಯನ್ನು ಬಂಧಿತ ಆರೋಪಿ ಅಜಯ್ ಕಶ್ಯಪ್ ಪೊಲೀಸ್ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ ಎಂದು ವರದಿಯಾಗಿದೆ.
'ಪ್ರಕಟಿಸಿದ್ರೆ ಹುಷಾರ್' ಪತ್ರಕರ್ತೆಯನ್ನು ಬಲವಂತವಾಗಿ ಮನೆಗೆ ಡ್ರಾಪ್ ಮಾಡಿ ಬೆದರಿಕೆ ಹಾಕಿದ್ದ ಸಲ್ಮಾನ್ ಖಾನ್!
ಪನ್‌ವೇಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಪ್ರಕಾರ, ಪೊಲೀಸರಿಗೆ ಲಭ್ಯವಾಗಿರುವ ವಿಡಿಯೋವೊಂದರಲ್ಲಿ ಅಜಯ್ ಕಶ್ಯಪ್, ಶಸ್ತ್ರಾಸ್ತ್ರಗಳು ಬಂದ ನಂತರ ಸಲ್ಮಾನ್ ಖಾನ್‌ಗೆ ತಕ್ಕ ಪಾಠ ಕಲಿಸಲಾಗುವುದು. ನಂತರ ಕೆನಡಾದಲ್ಲಿರುವ ಗೋಲ್ಡಿ ಬ್ರಾರ್ ಮೂಲಕ ಹಣ ಸಿಗಲಿದೆ ಎಂದು ಹೇಳಿಕೊಂಡಿದ್ದಾನೆ.
ದೊಡ್ಡ ಮೊತ್ತಕ್ಕೆ ಡೀಲ್
ಸಲ್ಮಾನ್ ಖಾನ್ ಹತ್ಯೆ ಬಳಿಕ ಶೂಟರ್‌ಗಳಿಗೆ ದೊಡ್ಡ ಮೊತ್ತದ ಹಣ ನೀಡುವ ಬಗ್ಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಕೆನಡಾದ ಗೋಲ್ಡಿ ಬ್ರಾರ್ ಭರವಸೆ ನೀಡಿತ್ತು ಎಂಬ ಮಾಹಿತಿ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.
ನಿಜವಾಗ್ಲೂ ಒಂದು ಕಿಸ್ಸಿಂದ ಸಲ್ಮಾನ್ ಖಾನ್ - ಕತ್ರೀನಾ ಕೈಫ್ ಬ್ರೇಕ್‌ಅಪ್ ಆಯ್ತಾ?
ಏಪ್ರಿಲ್ 14ರಂದು ಸಲ್ಮಾನ್ ನಿವಾಸದ ಬಳಿ ಗುಂಡಿನ ದಾಳಿ
ಏಪ್ರಿಲ್ 14ರಂದು ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ನಿವಾಸದ ಹೊರಗಡೆ ಬೈಕ್‌ನಲ್ಲಿ ಬಂದ ಇಬ್ಬರು ಗುಂಡಿನ ದಾಳಿ ನಡೆಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತಿನಲ್ಲಿ ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಹಾಗೂ ಏಪ್ರಿಲ್ 26ರಂದು ಪಂಜಾಬ್‌ನಲ್ಲಿ ಅನುಜ್ ಥಾಪನ್ ಎಂಬಾತನನ್ನು ಬಂಧಿಸಲಾಗಿತ್ತು. ಮೇ 1ರಂದು ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಅನುಜ್ ಥಾಪನ್ ಸಾವನ್ನಪ್ಪಿದ್ದನು.