ಬ್ರೇಕಪ್ ವದಂತಿ ಬೆನ್ನಲ್ಲೇ ಜೀವನದಲ್ಲಿ ಎರಡು ಆಯ್ಕೆ ಅಂತ ಹೇಳಿದ್ರಾ ಅರ್ಜುನ್ ಕಪೂರ್?

By Mahmad Rafik  |  First Published Jun 1, 2024, 6:55 PM IST

ನಟಿ ಕುಶಾ ಕಪಿಲಾ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ. ಪತಿ ಜೋರಾವರ್ ಅಹ್ಲುವಾಲಿಯಾದಿಂದ ಬೇರ್ಪಡುವುದಾಗಿ ಘೋಷಿಸಿದ ನಂತರ ಕುಶಾ ಕಪಿಲಾ ಮತ್ತು ಅರ್ಜುನ್ ಕಪೂರ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.


ಮುಂಬೈ: ಎಜ್ ಇಸ್ ಜಸ್ಟ್ ನಂಬರ್ ಎಂದು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ನಟ ಅರ್ಜುನ್ ಕಪೂರ್ (Actor Arjun Kapoor) ಮತ್ತು ನಟಿ ಮಲೈಕಾ ಅರೋರಾ (Malaika Arora) ಬೇರೆ ಬೇರೆಯಾಗಿದ್ದಾರೆ ಎಂದು ವರದಿಗಳು ಪ್ರಕಟವಾಗುತ್ತಿವೆ. ಆರು ವರ್ಷಗಳಿಂದ ಅರ್ಜುನ್ ಮತ್ತು ಮಲೈಕಾ ಕೈ ಹಿಡಿದುಕೊಂಡು ದೇಶಗಳನ್ನು (Arjun-Malaika Relationship) ಸುತ್ತಿದ್ದರು. ಆದರೆ ಭಾರತದಲ್ಲಿ ಎಲ್ಲಿಯೂ ಜೊತೆಯಾಗಿ ಅರ್ಜುನ್ ಕಪೂರ್ ಮತ್ತು ಮಲೈಕಾ ಆರೋರಾ ಕಾಣಿಸಿಕೊಳ್ಳುತ್ತಿರಲಿಲ್ಲ. ಆದ್ರೆ ಇದೆಲ್ಲಾ ಸುಳ್ಳು ಸುದ್ದಿ ಎಂದು ಮಲೈಕಾ ಅರೋರಾ ಮ್ಯಾನೇಜರ್ ಹೇಳಿದ್ದಾರೆ.

ಈ ಎಲ್ಲಾ ಊಹಾಪೋಹಾಗಳ ನಡುವೆ ಅರ್ಜುನ್ ಕಪೂರ್ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಅಪ್ಲೋಡ್ ಮಾಡಿಕೊಂಡಿದ್ದು, ಕೆಲವು ಸಾಲುಗಳನ್ನು ಬರೆದುಕೊಂಡು ಸಣ್ಣ ಸುಳಿವು ನೀಡಿದ್ದಾರೆ. ಒಬ್ಬ ವ್ಯಕ್ತಿಗೆ ಜೀವನದಲ್ಲಿ ಎರಡು ಆಯ್ಕೆಗಳಿರುತ್ತವೆ. ಹಳೆಯ ನೆನಪುಗಳಲ್ಲಿ ಬಂಧಿಯಾಗುಯವುದು ಅಥವಾ ಹೊಸದನ್ನು ಅನ್ವೇಷನೆ ಮಾಡುತ್ತಾ ಸಿಗುವ ಆಯ್ಕೆಗಳ ಜೊತೆ ಹೋಗುವುದು. ಅರ್ಜುನ್ ಕಪೂರ್ ಈ ಸಾಲುಗಳು ಹಲವು ಹೊಸ ವ್ಯಾಖ್ಯಾನಗಳಿಗೆ ಕಾರಣವಾಗಿದೆ. 

Tap to resize

Latest Videos

ಆರು ವರ್ಷಗಳ ಲಿವ್‌ ಇನ್‌ ಸಂಬಂಧಕ್ಕೆ ಬಿತ್ತು ಬ್ರೇಕ್‌? ಮಲೈಕಾ- ಅರ್ಜುನ್‌ ನಡುವೆ ಆಗಿದ್ದೇನು?

ಮಲೈಕಾ ಆರೋರಾ ಜೊತೆಗಿನ ನೆನಪುಗಳಲ್ಲಿಯೇ ಬಂಧಿಯಾಗ್ತಾರಾ ಅಥವಾ ಎಲ್ಲವನ್ನು ಮರೆತು ಎರಡನೇ ಆಯ್ಕೆಯನ್ನು ಅರ್ಜುನ್ ಕಪೂರ್ ಆರಿಸಿಕೊಳ್ಳುತ್ತಾರೆ ಎಂಬ ಚರ್ಚಗಳು ಅಭಿಮಾನಿಗಳಲ್ಲಿ ಶುರುವಾಗಿವೆ. ಇತ್ತ ಮಲೈಕಾ ಅರೋರಾ ಸಹ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಆಧ್ಯಾತ್ಮಕವಾಗಿ ಕೆಲವು ಸಾಲು ಬರೆದುಕೊಂಡಿದ್ದಾರೆ. 

ಮಲೈಕಾ ಆರೋರಾ ಪೋಸ್ಟ್ ಏನು?

ಜಗತ್ತಿನಲ್ಲಿ ಯಾರು ನಿಮ್ಮನ್ನು ಬೆಂಬಲಿಸಿರುತ್ತಾರೆ? ಯಾರಿಂದ ನಿಮಗೆ ಪ್ರೀತಿ ಸಿಕ್ಕಿದೆಯೋ ಅವರನ್ನು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ. ಅವರ ಸ್ಥಾನ ಯಾರೂ ಸಹ ತುಂಬಲಾರರು. ಪ್ರತಿಯೊಬ್ಬರು ಜೀವನದಲ್ಲಿ ಬದಲಾಯಿಸಲಾಗದ ವ್ಯಕ್ತಿಯೊಬ್ಬರು ಇರುತ್ತಾರೆ ಎಂದು ಬರೆದುಕೊಳ್ಳುವ ಮೂಲಕ ಅರ್ಜುನ್ ಕಪೂರ್ ತಮ್ಮ ಜೀವನದಲ್ಲಿ ಎಷ್ಟು ಪ್ರಮುಖ ಎಂಬ ಸುಳಿವನ್ನು ನೀಡಿದ್ದರು. ಆದ್ರೆ ಅರ್ಜುನ್ ಕಪೂರ್ ಮಾತ್ರ ತಮ್ಮ ಮುಂದೆ ಎರಡು ಆಯ್ಕೆಗಳಿವೆ ಎಂದು ಹೇಳಿಕೊಂಡಿದ್ದಾರೆ. 

ಮದ್ವೆ ಯಾವಾಗ, ಹುಡುಗ ಯಾರೆಂದು ಅಮ್ಮನನ್ನೇ ಪ್ರಶ್ನಿಸಿದ ಅರ್ಹಾನ್‌: ಮಲೈಕಾ ಅರೋರಾ ಹೇಳಿದ್ದೇನು?

ಮಲೈಕಾ ಅರೋರಾ ಮ್ಯಾನೇಜರ್ ಹೇಳಿದ್ದೇನು?

ಮಾಧ್ಯಮವೊಂದರ ಜೊತೆ ಮಾತನಾಡಿರುವ ಮಲೈಕಾ ಅರೋರಾ ಮ್ಯಾನೇಜರ್, ಇಬ್ಬರ ಮಧ್ಯೆ ಯಾವುದೇ ಬಿರುಕು ಮೂಡಿಲ್ಲ. ಇಬ್ಬರು ಚೆನ್ನಾಗಿಯೇ ಇದ್ದಾರೆ. ಬ್ರೇಕಪ್, ದೂರ ಆಗ್ತಿದ್ದಾರೆ ಎಂಬ ಸುದ್ದಿಗಳೆಲ್ಲವೂ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಇಬ್ಬರು ದೂರ ಆಗುತ್ತಿರೋದಕ್ಕೆ ಫ್ಯಾಷನ್ ಸಂಪಾದಕಿ, ನಟಿ ಕುಶಾ ಕಪಿಲಾ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ. ಪತಿ ಜೋರಾವರ್ ಅಹ್ಲುವಾಲಿಯಾದಿಂದ ಬೇರ್ಪಡುವುದಾಗಿ ಘೋಷಿಸಿದ ನಂತರ ಕುಶಾ ಕಪಿಲಾ ಮತ್ತು ಅರ್ಜುನ್ ಕಪೂರ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

click me!