Tulu Nadu: ಇದು ಸುಮಾರು 900 ವರ್ಷ ಹಳೆಯ ಮನೆ. ಈ ಪ್ರದೇಶ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ನಾನು ಇಲ್ಲಿಯೇ ಹುಟ್ಟಿರೋ ಕಾರಣ ಈ ಮನೆ ನನಗೆ ತುಂಬಾ ವಿಶೇಷ ಅಂತ ನಟ ದಯಾನಂದ್ ಶೆಟ್ಟಿ ಹೇಳಿದ್ದಾರೆ.
ಬೆಂಗಳೂರು: ಇತ್ತೀಚೆಗಷ್ಟೇ ಬಾಲಿವುಡ್ ನಟ ಸುನಿಲ್ ಶೆಟ್ಟಿ (Bollywood Actor Suniel Shetty), ತುಳುನಾಡು (Tulu Nadu) ಎಷ್ಟು ಚೆಂದ ಅಲ್ಲವಾ ಎಂದು ಇಲ್ಲಿಯ ಸಂಸ್ಕೃತಿ ಮತ್ತು ಜನತೆಯ ಬಾಂಧವ್ಯವನ್ನು ಪರಿಚಯಿಸುವ ಕೆಲಸ ಮಾಡಿದ್ದರು. ತುಳುನಾಡು ಬಣ್ಣದ ಲೋಕಕ್ಕೆ ಹಲವು ಪ್ರತಿಭಾನ್ವಿತ ಕಲಾವಿದರನ್ನು (Artist) ನೀಡಿದ ಭೂಮಿ. ತುಳುನಾಡಿನ ಜನರು ಎಲ್ಲೇ ಹೋಗಲಿ ತಮ್ಮ ಸಂಸ್ಕೃತಿ (Tulu Nadu Culture) ಮತ್ತು ಭಾಷೆಯನ್ನು ಎಂದಿಗೂ ಮರೆಯಲ್ಲ. ಇದು ಹಲವು ಸನ್ನಿವೇಶಗಳಲ್ಲಿ ಸಾಬೀತು ಸಹ ಆಗಿದೆ. ಕಿರುತೆರೆಯಲ್ಲಿ ದಶಕಗಳ ಕಾಲ ಇನ್‌ಸ್ಪೆಕ್ಟರ್ ಆಗಿ ಮಿಂಚಿರುವ ದಯಾ (Inspector Daya) ಸಹ ತುಳುನಾಡಿನವರು. ಕೆಲ ದಿನಗಳ ಹಿಂದೆ ತಮ್ಮ ಜನ್ಮಭೂಮಿಗೆ ಭೇಟಿ ನೀಡಿದ್ದ ದಯಾನಂದ್ ಶೆಟ್ಟಿ (Actor Dayanand Shetty), ಮನೆ ಮತ್ತು ತಮ್ಮ ಕುಲದೇವರ ಕುರಿತು ಮಾತನಾಡಿದ್ದಾರೆ.
ಇಂದು ನಾನು ಉಡುಪಿ ಜಿಲ್ಲೆಯ ನದಿಬೆಟ್ಟು ಪ್ರದೇಶದ ಶಿರ್ವ ಮನೆಯಲ್ಲಿದ್ದೇವೆ. ಇದೇ ಮನೆಯಲ್ಲಿ ನಾನು ಹುಟ್ಟಿದ್ದು, ಇದು ಸುಮಾರು 900 ವರ್ಷ ಹಳೆಯ ಮನೆ. ಈ ಪ್ರದೇಶ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ನಾನು ಇಲ್ಲಿಯೇ ಹುಟ್ಟಿರೋ ಕಾರಣ ಈ ಮನೆ ನನಗೆ ತುಂಬಾ ವಿಶೇಷ. ಈ ಮನೆಯ ಹಾಲ್‌ಗೆ ಯಾವುದೇ ಬಾಗಿಲ್ಲ ಇಲ್ಲ. ಒಳಗಡೆ ನಮ್ಮ ಕುಲದೇವರು ಇದೆ. ಯಾರು ಬೇಕಾದ್ರೂ ಬಂದು ದೇವರಿಗೆ ನಮಸ್ಕರಿಸಿ ಹೋಗುತ್ತಾರೆ.
ಮನೆ ಪಕ್ಕದಲ್ಲೇ ನಡೆಯುತ್ತೆ ಕಂಬಳ
ವರ್ಷಕ್ಕೊಮ್ಮೆ ಇಲ್ಲಿ ಜಾತ್ರೆಯೂ ನಡೆಯುತ್ತದೆ. ಮನೆ ಪಕ್ಕದಲ್ಲಿಯೇ ಕಂಬಳ ಸ್ಪರ್ಧೆ ನಡೆಯುತ್ತದೆ. ಡಿಸೆಂಬರ್ ಮತ್ತು ಜನವರಿ ವೇಳೆ ತುಂಬಾ ದೊಡ್ಡಮಟ್ಟದಲ್ಲಿ ಕಂಬಳ ನಡೆಯುತ್ತದೆ. ಇಲ್ಲಿಗೆ ನಾನು ಬಂದಿದ್ದರಿಂದ ಈ ಸಣ್ಣ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅಂತ ಅನ್ನಿಸಿತು ಎಂದು ದಯಾನಂದ್ ಶೆಟ್ಟಿ ಹೇಳಿದ್ದಾರೆ. ಮೂರು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡಿದ್ದು, 61 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.
ಖಾಸಗಿ ವಾಹಿನಿಯಲ್ಲಿ ದಶಕಗಳ ಕಾಲ ಪ್ರಸಾರವಾದ ಸಿಐಡಿ ಧಾರಾವಾಹಿ ಪ್ರಮುಖ ಪಾತ್ರದಲ್ಲಿ ದಯಾನಂದ್ ಚಂದ್ರಶೇಖರ್ ನಟಿಸಿದ್ದಾರೆ. ಇದೇ ಧಾರಾವಾಹಿಯಲ್ಲಿ ಶಿವಾಜಿ ಸತಮ್, ಆದಿತ್ಯ ಶ್ರೀವಾಸ್ತವ್ ಸೇರಿದಂತೆ ದೊಡ್ಡ ತಾರಾಬಳಗವನ್ನೇ ಹೊಂದಿತ್ತು.
ತೆಂಗಿನ ಮರಗಳ ಮಧ್ಯೆ ಲೆಹೆಂಗಾದಲ್ಲಿ ಮಿಂಚಿದ ಪೂಜಾ ಹೆಗ್ಡೆ: ಇದು ನಮ್ಮ ತುಳುನಾಡು ಎಂದ ಫ್ಯಾನ್ಸ್!
ಬೆಸ್ಟ್ ಲುಕಿಂಗ್ ಅವಾರ್ಡ್
ಕ್ರೈಂ ಕಥೆಗಳನ್ನು ಆಧರಿಸಿ ಧಾರವಾಹಿ ಪ್ರಸಾರವಾಗುತ್ತಿತ್ತು. ದಯಾನಂದ್ ನಟನೆಯ ಜೊತೆಯಲ್ಲಿ ಹಲವು ಸಂಚಿಕೆಗಳ ಕಥೆಯನ್ನು ಬರೆದಿದ್ದಾರೆ. 200ರಲ್ಲಿ ಖಾಸಗಿ ವಾಹಿನಿಯ ಸ್ಪರ್ಧೆಯೊಂದರಲ್ಲಿ ಬೆಸ್ಟ್ ಲುಕಿಂಗ್ ಯುವಕ ಎಂಬ ಬಿರುದು ಪಡೆದುಕೊಂಡಿದ್ದರು.
ನಮ್ಮ ತುಳುನಾಡು ಎಷ್ಟು ಚೆಂದ ಅಲ್ಲವಾ? ಇಲ್ಲಿಯ ಶ್ರೀಮಂತಿಕೆ ಸಂಸ್ಕೃತಿಯನ್ನ ಹೇಳಿದ ಬಾಲಿವುಡ್ ನಟ & ಕ್ರಿಕೆಟಿಗ
ಸಿಂಗಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟನೆ
ಧಾರಾವಾಹಿಗಳ ಜೊತೆಯಲ್ಲಿ ಹಲವು ಸಿನಿಮಾಗಳಲ್ಲಿ ದಯಾನಂದ್ ಶೆಟ್ಟಿ ಅಭಿನಯಿಸಿದ್ದಾರೆ. ದಿಲ್‌ಜಲೆ, ಜಾನಿ ಗದ್ದಾರ್, ರಬನ್‌ವೇ, ಸಿಂಗಂ ರಿಟರ್ನ್, ದಿ ಟೆನೆಂಟ್, ಸಿಂಗಂ ಅಗೇನ್ ದಯಾನಂದ್ ನಟಿಸಿದ ಪ್ರಮುಖ ಚಿತ್ರಗಳಾಗಿವೆ.
ಐಶ್ವರ್ಯಾ ರೈ ಬಚ್ಚನ್, ಸುನಿಲ್ ಶೆಟ್ಟಿ, ಶಿಲ್ಪಾ ಶೆಟ್ಟಿ, ಪೂಜಾ ಹೆಗಡೆ ಸೇರಿದಂತ ಹಲವು ಸ್ಟಾರ್‌ಗಳು ತುಳುನಾಡಿನ ಮೂಲದವರು. ಬಾಲಿವುಡ್‌ನಲ್ಲಿ ತಮ್ಮದೇಯಾದ ಹೆಜ್ಜೆ ಗುರುತು ಮೂಡಿಸಿರುವ ಕಲಾವಿದರು, ತುಳುನಾಡು ಭಾಗದ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತಾರೆ.