ಈಗ ಯೋಗ ಕೇವಲ ಭಾರತೀಯ ಕಾಲದ ಒಂದು ವೈದ್ಯಕೀಯ ಪದ್ಧತಿಯಾಗಿ ಅಥವಾ ಆಧ್ಯಾತ್ಮ ಧ್ಯಾನದ ಪದ್ಧತಿಯಾಗಿ ಉಳಿದಿಲ್ಲ. ಅದು ಅಧ್ಯಾತ್ಮದ ಪರದಿಯನ್ನು ದಾಟಿ ದೆ ಮತ್ತು ಅದಕ್ಕೆ ವೃತ್ತಿಪರತೆ ಜನಪ್ರಿಯತೆ ಸಿಕ್ಕಿದೆ. ಅಂದರೆ, ನೀವು ಯೋಗ ವಿಜ್ಞಾನ ಪದವೀಧರರಾಗಿದ್ದರೆ ಕೈ ತುಂಬ ಸಂಬಳ ನೀಡುವ ಹಲವು ಉದ್ಯೋಗಗಳು ನಿಮಗಾಗಿ ಕಾಯುತ್ತಿವೆ ಎಂಬುದನ್ನು ಮರೆಯಬೇಡಿ.
ಯೋಗ ಎಂಬುದು ಈಗ ಕೇವಲ ನಿಮ್ಮ ಆರೋಗ್ಯವನ್ನು ವೃದ್ಧಿಸುವ ಭಾರತೀಯ ಕಲೆಯಾಗಿ ಉಳಿದಿಲ್ಲ. ಯೋಗಕ್ಕೀಗ ವಾಣಿಜ್ಯ ಆಯಾ ದಕ್ಕಿದೆ. ಅದರಲ್ಲೂ ವೃತ್ತಿಪರತೆ ಕಾಣಿಸಿಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಯೋಗಾಭ್ಯಾಸವನ್ನು ವೃತ್ತಿಯನ್ನಾಗಿ ಸ್ವೀಕರಿಸುವವರ ಸಂಖ್ಯೆಯೇನೂ ಕಡಿಮೆ ಇಲ್ಲ.
School on Scooty: ಈ ಶಿಕ್ಷಕನಿಗೆ ನೀವು ಸೆಲ್ಯೂಟ್ ಹೊಡೆಯಲೇಬೇಕು!
ನಿಜ. ನೀವು ಯೋಗವನ್ನ ಚೆನ್ನಾಗಿ ಕಲಿತವರು ಎಂಬುದು ಗೊತ್ತಾದರೆ ನಿಮಗೆ ಎಲ್ಲಿಲ್ಲದ ಬೇಡಿಕೆ ಇದೆ. ಯೋಗ ಇನ್ಸ್‌ಟ್ರಕ್ಟರ್ ಆಗಿ ಕೆಲಸ ಮಾಡಬಹುದು ಮತ್ತು ಕೈ ತುಂಬ ಸಂಬಳ ಎಣಿಸಬಹುದು. ಇಲ್ಲವೇ ನಿಮ್ಮದೇ ಸ್ವಂತಃ ಯೋಗ ಕ್ಲಾಸ್‌ಗಳನ್ನು ಶುರು ಮಾಡಿ ಆ ಮೂಲಕವೂ ಹಣ ಸಂಪಾದನೆ ಮಾಡಬಹುದು. ಹಾಗಾಗಿ, ಕೆಲವೊಬ್ಬರು ಹವ್ಯಾಸಕ್ಕೆ ಕಲಿತ ಯೋಗದಿಂದಲೇ ಈಗ ತಮ್ಮ ಜೀವನವನ್ನು ಸಾಗಿಸುವ ದಾರಿಯನ್ನಾಗಿ ಮಾಡಿಕೊಂಡಿದ್ದಾರೆ. ವೃತ್ತಿ ಮತ್ತು ಪ್ರವೃತ್ತಿಗಳರೆಡೂ ಯೋಗವೇ ಆಗುತ್ತಿದೆ.
ಈ ನೀವು ಯೋಗವನ್ನು ಅಕಡೆಮಿಕ್ ಆಗಿ ಕಲಿತು, ಇತರ ಪದವಿಗಳಂತೆ ನೀವು ಕೂಡ ಯೋಗದಲ್ಲಿ ಪದವಿಯನ್ನು ಪಡೆದುಕೊಳ್ಳಬಹುದು. ಇದು ನಿಮ್ಮ ವೃತ್ತಿಪರತೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಯೋಗ ಶಿಕ್ಷಕ ವೃತ್ತಿಗೆ ಈಗ ತುಂಬ ಬೇಡಿಕೆ ಇದೆ.
ಯೋಗ ಮತ್ತ ಧ್ಯಾನದ ವೈಜ್ಞಾನಿಕ ಕ್ರಮದ ಬಗ್ಗೆ ಯಾರು ಜ್ಞಾನವನ್ನು ಹೊಂದಿದ್ದಾರೋ ಅವರನ್ನು ಯೋಗ ಗುರುಗಳು ಅಥವಾ ಯೋಗ ಶಿಕ್ಷಕರು ಎಂದು ಕರೆಯಲಾಗುತ್ತದೆ. ವೈದ್ಯಕೀಯ ಉಪಚಾರಕ್ಕೆ ಪರ್ಯಾಯವಾಗಿ ಯೋಗ ಜನಪ್ರಿಯವಾಗ ತೊಡಗಿದ ಬೆನ್ನಲ್ಲೇ, ಯೋಗ ಶಿಕ್ಷಕರು ಅಥವಾ ಗುರುಗಳಾಗುವುದು ಬಹುದೊಡ್ಡ ವೃತ್ತಿಪರ ಆಯ್ಕೆ ಎನಿಸಿಕೊಳ್ಳುತ್ತಿದೆ ಇತ್ತೀಚಿನ ದಿನಗಳಲ್ಲಿ. ಜೊತೆಗೆ ನಿಮಗೆ ಒಳ್ಳೆಯ ವೇತನವೂ ದೊರೆಯುತ್ತದೆ.
ನೀವು ಯೋಗ ಟೀಚರ್ ಅಥವಾ ಇನ್ಸ್‌ಟ್ರಕ್ಟರ್ ಆಗಲು ಯೋಗ ಥೆರಪಿಯಲ್ಲಿ ಬಿ.ಎ ಅಥವಾ ಬಿ.ಎಸ್ಸಿ ಪದವಿ ಪಡೆಯಬಹುದು. ಪದವಿ ಪ್ರವೇಶ ಪಡೆಯಲು ಅಭ್ಯರ್ಥಿಗಳು ಶೇ.50ರಷ್ಟು ಅಂಕಗಳೊಂದಿಗೆ ಇದಕ್ಕೆ 10 ಪ್ಲಸ್ 2 ಪಾಸಾಗಿರಬೇಕು. ಹಾಗೆಯೇ ಯೋಗ ಥೆರಪಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಳ್ಳಬಹುದು. ಯೋಗ ಥೆರಪಿಯಲ್ಲಿ ಎಂಎ/ಎಂಎಸ್‌ಸಿ ಮಾಡಲು ಅಭ್ಯರ್ಥಿಗಳು ಪದವಿ ಹಂತದಲ್ಲಿ ಯೋಗ ಥೆರಪಿಯನ್ನು ಓದಿರಬೇಕು.
3,479 ಶಿಕ್ಷಕ ಹುದ್ದೆಗೆ ನೇಮಕಾತಿ ಶುರು, ಕೂಡಲೇ ಅರ್ಜಿ ಹಾಕಿ
ಏನೆಲ್ಲ ಅವಕಾಶಗಳಿವೆ?
ಯೋಗ ಮತ್ತು ನ್ಯಾಚುರಪಥಿಯಲ್ಲಿ ಸಂಶೋಧನಾಧಿಕಾರಿ, ಯೋಗಾ ಏರೋಬಿಕ್ ಇನ್ಸ್‌ಟ್ರಕ್ಟರ್, ಅಸಿಸ್ಟಂಟ್ ಆಯುರ್ವೇದಿಕ್ ಡಾಕ್ಟರ್, ಕ್ಲಿನಿಕಲ್ ಸೈಕಾಲಿಜಿಸ್ಟ್, ಯೋಗ ಥೆರಪಿಸ್ಟ್, ಯೋಗ ಟೀಚರ್, ಥೆರಪಿಸ್ಟ್ ಮತ್ತು ನ್ಯಾಚುರೋಪಾಥ್ಸ್, ಹೆಲ್ತ್ ಕ್ಲಬ್ ಟ್ರೈನರ್/ಇನ್ಸಟ್ರಕ್ಟರ್... ಹೀಗೆ ಹಲವು ರೀತಿಯಲ್ಲಿ ನೀವು ಉದ್ಯೋಗಾವಕಾಶಗಳನ್ನು ಹುಡುಕಿಕೊಳ್ಳಬಹುದು. ಇಷ್ಟು ಮಾತ್ರವಲ್ಲದೇ ಇನ್ನೂ ಹಲವು ಮಾದರಿಯ ಯೋಗ ಪದವಿಯಿಂದಲೇ ಜಾಬ್ ಪಡೆಯಬಹುದಾಗಿದೆ.
ಸಂಬಳ ಎಷ್ಟು?
ಯೋಗ ಪದವೀಧರ ಫ್ರೆಶರ್‌ಗೆ ಕನಿಷ್ಠ ತಿಂಗಳಿಗೆ 10,000 ರೂ.ನಿಂದ 50,000 ರೂ. ದೊರೆಯಲಿದೆ. ಈ ಕ್ಷೇತ್ರದಲ್ಲಿ ಅನುಭವ ಹೆಚ್ಚಾದಂತೆ ವೇತನದ ಗ್ರಾಫ್ ಕೂಡ ಏರಿಕೆಯಾಗುತ್ತಾ ಹೋಗುತ್ತದೆ. ಆದಾಗ್ಯೂ, ಇತರ ವೃತ್ತಿಗಳಿಗೆ ಹೋಲಿಸಿದಾಗ ಯೋಗ ಬೋಧನೆ ಕಡಿಮೆ ಲಾಭದಾಯಕವಾಗಿದೆ. ಆದರೆ ಇದು ವೃತ್ತಿಯೊಂದಿಗೆ ಮಾನಸಿಕ ತೃಪ್ತಿಯನ್ನು ಒದಗಿಸುತ್ತದೆ. ಹಾಗೂ ಇತರರನ್ನು ಗಮನಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಆದರೆ ನೀವು ಈ ಕ್ಷೇತ್ರದಲ್ಲಿ ಎಕ್ಸಲೆಂಟ್ ಪ್ರದರ್ಶನ ತೋರಿಸುವ ಬಯಕೆ ಇದ್ದರೆ ಚಾಲೆಂಜ್ ಆಗಿ ತೆಗೆದುಕೊಳ್ಳಬಹುದು. ಹಾಗಾಗಿ, ಇತ್ತೀಜಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚುತ್ತದೆ. ಮತ್ತು ಭಾರತೀಯ ಪುರಾತನ ಕಲೆಯಾದ ಯೋಗದ ಬಗ್ಗೆ ಎಲ್ಲಿಲ್ಲದ ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ, ಯೋಗ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಒಳ್ಳೆಯ ಉದ್ಯೋಗಾವಕಾಶಗಳು ಮತ್ತು ಕೈ ತುಂಬ ಸಂಬಳ ಸಿಗುವುದರಲ್ಲಿ ಯಾವುದೇ ಸಂಶಯವೇ ಇಲ್ಲ.
ಪತ್ರ ಬರೆದು, ಚಿನ್ನದ ಪದಕ ಗೆದ್ದು, ಸ್ವಿಜರ್ಲೆಂಡ್‌ಗೆ ಹೋಗಿ!
ಯೋಗ ವಿಜ್ಞಾನ ಕಲಿಸುವ ಕಾಲೇಜ್‌ಗಳಾವವು?
ಹಲವು ಸರ್ಕಾರಿ ಮತ್ತು ಖಾಸಗಿ ಕಾಲೇಜ್‌ಗಳಲ್ಲಿ ಯೋಗ ಪದವಿಯನ್ನು ಕಲಿಸಲಾಗುತ್ತಿದೆ. ಈ ಪೈಕಿ ಹೈದ್ರಾಬಾದ್‌ನ ಗವರ್ನ್‌ಮೆಂಟ್ ನ್ಯಾಚುರೋಪಥಿಕ್ ಮೆಡಿಕಲ್ ಕಾಲೇಜ್, ನಮ್ಮ ರಾಜ್ಯದ ಉಜಿರೆಯಲ್ಲಿರುವ ಎಸ್‌ಡಿಎಂ ಕಾಲೇಜ್ ಆಫ್ ನ್ಯಾಚುರೋಥಿ ಯೋಗಿಕ್ ಸೈನ್ಸಸ್, ಮೂಡುಬಿದಿರೆಯ ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸಸ್, ಬೆಳಗಾವಿಯ ಕೆಎಲ್‌ಇ ಕಾಲೇಜ್ ಆಫ್ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸಸ್, ಮೈಸೂರಿನ ಪಿಕೆಆಟಿಆರ್ ಹಾಸ್ಪಿಟಲ್‌ನ ಗವರ್ನ್‌ಮೆಂಟ್ ನೇಚರ್ ಕ್ಯುರ್ ಮತ್ತು ಯೋಗ ಕಾಲೇಜ್‌ಗಳಲ್ಲಿ ಯೋಗ ಪದವಿಗಳನ್ನ ಕಲಿಸಲಾಗುತ್ತದೆ. ಆಸಕ್ತರು ಈ ಕಾಲೇಜ್‌ಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.