ನಕಲಿ ವಿಶ್ವವಿದ್ಯಾಲಯಗಳು UP, ದೆಹಲಿಯಲ್ಲೇ ಹೆಚ್ಚು!

By Suvarna News  |  First Published Aug 3, 2021, 3:57 PM IST

ದೇಶದಲ್ಲಿ ಫೇಕ್ ಅಥವಾ ಮಾನ್ಯತೆ ಇಲ್ಲದ 24 ವಿಶ್ವವಿದ್ಯಾಲಯಗಳನ್ನು ಪಟ್ಟಿ ಮಾಡಿ ಆ ಬಗ್ಗೆ ಸಾರ್ವಜನಿಕರ ಗಮನ ಸೆಳೆಯಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶ ಮತ್ತು ದೆಹಲಿ ರಾಜ್ಯಗಳಲ್ಲೇ ಅತಿ ಹೆಚ್ಚು ನಕಲಿ ವಿಶ್ವವಿದ್ಯಾಲಯಗಳಿರುವುದು ಕಂಡು ಬಂದಿದೆ.


ದೇಶದಲ್ಲಿ ಸ್ವಘೋಷಿತ ಮತ್ತು ನಕಲಿ ವಿಶ್ವವಿದ್ಯಾಲಯಗಳು ಕಾರ್ಯಾಚರಣೆ ನಡೆಸುತ್ತಿರುವುದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನಕಲಿ ವಿಶ್ವವಿದ್ಯಾಲಯಗಳ ಬಗ್ಗೆ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಒಟ್ಟು 24 ಸ್ವಘೋಷಿತ ಮತ್ತು ನಕಲಿ ವಿಶ್ವವಿದ್ಯಾಲಯಗಳಿವೆ. ಇವುಗಳ  ಜತೆಗೆ ಎರಡು ಇನ್ನೂ ವಿಶ್ವವಿದ್ಯಾಲಯಗಳಿವೆ ಎಂದು ಲೋಕಸಭೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳು, ಪೋಷಕರು, ಸಾಮಾನ್ಯರು ಜನರು ನೀಡಿರುವ ದೂರಿನ ಆಧಾರದ ಮೇಲೆ ಯುಜಿಸಿ ಸ್ವಘೋಷಿತ 24 ಶಿಕ್ಷಣ ಸಂಸ್ಥೆಗಳನ್ನು ನಕಲಿ ಎಂದು ಘೋಷಿಸಿದೆ ಎಂದು ಅವರು ತಿಳಿಸಿದ್ದಾರೆ.

Tap to resize

Latest Videos

ವೈದ್ಯಕೀಯ ಶಿಕ್ಷಣದಲ್ಲಿ ಐತಿಹಾಸಿಕ ನಿರ್ಧಾರ; OBCಗೆ ಶೇ. 27, ಆರ್ಥಿಕ ದುರ್ಬಲರಿಗೆ ಶೇ.10 ಮೀಸಲಾತಿ!

ಈ 24 ವಿಶ್ವವಿದ್ಯಾಲಯಗಳಲ್ಲದೇ ಲಖನೌನ ಭಾರತೀಯ ಶಿಕ್ಷಾ ಪರಿಷತ್ ಮತ್ತು ನ್ಯೂದಿಲ್ಲಿಯ ಇನ್ಸಿಟಿಟ್ಯೂಟ್ ಆಫ್ ಪ್ಲ್ಯಾನಿಂಗ್ ಮತ್ತು ಮ್ಯಾನೇಜ್ಮೆಂಟ್(ಐಐಪಿಎಂ), ಕುತುಬ್ ಎನ್‌ಕ್ಲೇವ್ ಕೂಡ 1956ರ ಯುಜಿಸಿ ಕಾಯ್ದೆಯನ್ನು ಉಲ್ಲಂಘಿಸಿ ಕಾರ್ಯಾಚರಣೆ ಮಾಡುತ್ತಿವೆ. ಈ ಪೈಕಿ ಭಾರತೀಯ ಶಿಕ್ಷಾ ಪರಿಷತ್ ಮತ್ತು ಐಐಪಿಎಂಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಪ್ರಧಾನ್ ಅವರು ಹೇಳಿದ್ದಾರೆ. 

ಅತಿ ಹೆಚ್ಚು ನಕಲಿ ವಿವಿಗಳು ಉತ್ತರ ಪ್ರದೇಶದಲ್ಲಿವೆ. ಈ ರಾಜ್ಯದಲ್ಲಿ ಒಟ್ಟು 8 ಇಂಥ ವಿಶ್ವವಿದ್ಯಾಲಯಗಳಿವೆ. ವಾರಣಾಸಿಯ ವರ್ಣಾಶೇಯ ಸಂಸ್ಕೃತ ವಿಶ್ವ ವಿದ್ಯಾಲಯ, ಅಲಹಬಾದ್‌ನ ಮಹಿಳಾ ಗ್ರಾಮ ವಿದ್ಯಾಪೀಠ, ಗಾಂಧಿ ಹಿಂದಿ ವಿದ್ಯಾಪೀಠ, ಕಾನ್ಪುರದ ನ್ಯಾಷನಲ್ ಯುನಿರ್ವಸಿಟಿ ಆಫ್ ಎಲೆಕ್ಟ್ರಿಕೋ ಕಾಂಪ್ಲೆಕ್ಸ್ ಹೋಮಿಯೋಪಥಿ, ಅಲಿಗಢದ ನೇತಾಜಿ ಸುಭಾಶ ಚಂದ್ರ ಭೋಸ್ ಓಪನ್ ವಿವಿ, ಮಥುರಾದ ಉತ್ತರ ಪ್ರದೇಶ ವಿಶ್ವವಿದ್ಯಾಲಯ, ಪ್ರತಾಪ್‌ಗಢದ ಮಹಾರಾಣಾ ಪ್ರತಾಪ್ ಶಿಕ್ಷಾ ನಿಕೇತನ, ನೋಯ್ಡಾದ ಇಂದ್ರಪ್ರಸ್ಥ ಶಿಕ್ಷಾ ಪರಿಷತ್ ‌ ಸಂಸ್ಥೆಗಳನ್ನು ನಕಲಿ ವಿವಿಗಳೆಂದು ಗುರುತಿಸಲಾಗಿದೆ.

ಕೋವಿಡ್‌ ಏರಿಕೆ: ಶಾಲೆಗಳು, ಪಿಯು ಕಾಲೇಜು ವಿಳಂಬ?

ಉತ್ತರ ಪ್ರದೇಶದ ನಂತರದ ಸ್ಥಾನದಲ್ಲಿ ದಿಲ್ಲಿ ಇದ್ದು, ಏಳು ನಕಲಿ ವಿವಿಗಳನ್ನು ಪತ್ತೆ ಮಾಡಲಾಗಿದೆ. ದಿಲ್ಲಿಯ ಕಮರ್ಷಿಯಲ್ ಯುನಿರ್ವಿಸಿಟಿ ಲಿ., ಯುನೈಟೆಡ್ ನೇಷನ್ಸ್ ಯುನಿವರ್ಸಿಟಿ, ವೊಕೇಷನಲ್ ಯುನಿರ್ವಿಸಿಟಿ, ಎಡಿಆರ್ ಸೆಂಟ್ರಿಕ್ ಜುರಿಡ್ರಿಷಿಯಲ್ ಯುನಿರ್ವಿಸಿಟಿ, ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಆಂಡ್ ಎಂಜಿನಿಯರಿಂಗ್ , ವಿಶ್ವಕರ್ಮ ಓಪನ್ ಯುನಿರ್ವಿಸಿಟಿ ಪಾರ್ ಸೆಲ್ಫ್ ಎಂಪ್ಲಾಯಮೆಂಟ್ ಮತ್ತು ಆಧ್ಯಾತ್ಮಿಕ ಯುನಿರ್ವಿಸಿಟಿಗಳನ್ನು ನಕಲಿ ಎಂದು ಗುರುತಿಸಲಾಗಿದೆ. 

ಇದೇ ವೇಳೆ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಎರಡು ನಕಲಿ ವಿಶ್ವವಿದ್ಯಾಲಯಗಳಿವೆ. ಕೋಲ್ಕೋತ್ತಾದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಅಲ್ಟರ್ನೇಟಿವ್ ಮೆಡಿಸಿನ್, ಇನ್ಸಿಟ್ಯೂಟ್ ಆಫ್ ಅಲ್ಟರ್ನೇಟಿವ್ ಮೆಡಿಸಿನ್ ಆಂಡ್ ರಿಸರ್ಚ್ ವಿವಿಗಳು ಪಶ್ಚಿಮ ಬಂಗಾಳದ್ದಾದರೆ, ಒಡಿಶಾದಲ್ಲಿ ನವಭಾರತ್ ಶಿಕ್ಷಾ ಪರಿಷತ್ ಮತ್ತು ನಾರ್ಥ್ ಒಡಿಶಾ ಯುನಿರ್ವಿಸಿಟಿ ಎಜುಕೇಷನ್ ಸೊಸೈಟಿಗಳಿವೆ.

ಹಾಗೆಯೇ, ಕರ್ನಾಟಕ, ಮಹಾರಾಷ್ಟ್ರ ಮತ್ತು ಪುದುಚೆರಿಯಲ್ಲೂ ತಲಾ ಒಂದೊಂದು ನಕಲಿ ವಿವಿಗಳಿರುವುದನ್ನು ಕೇಂದ್ರ ಸರ್ಕಾರ ಪತ್ತೆ ಹಚ್ಚಿದೆ. ಪುದುಚೆರಿಯ ಶ್ರೀಬೋದಿ ಆಕಾಡೆಮಿ ಆಪ್ ಹೈಯರ್ ಎಜುಕೇಷನ್, ಆಂಧ್ರಪ್ರದೇಶದ  ಕ್ರೈಸ್ಟ್ ನ್ಯೂ ಟೆಸ್ಟೆಮೆಂಟ್ ಡೀಮ್ಡ್ ವಿವಿ, ನಾಗ್ಪುರದ ರಾಜಾ ಅರೆಬಿಕ್ ಯುನಿರ್ವಿಸಿಟಿ, ಕೇರಳದ ಸೇಂಟ್ ಜಾನ್ಸ್ ಯುನಿರ್ವಟಿಸಿ ಮತ್ತು ಕರ್ನಾಟಕದ ಬಡಗಣವಿ ಸರ್ಕಾರ್ ವರ್ಲ್ಡ್ ಓಪನ್ ಯುನಿರ್ವಿಸಿಟಿ ಎಜುಕೇಷನ್ ಸೊಸೈಟಿಗಳನ್ನು ಫೇಕ್ ಎಂದು ಗುರುತಿಸಲಾಗಿದೆ. 

ಓರ್ವ ವಿದ್ಯಾರ್ಥಿನಿಯಿಂದ SSLC ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿ ಸಿಕ್ತು 1 ಕೃಪಾಂಕ

ಈ ನಕಲಿ ಅಥವಾ ಮಾನ್ಯತೆ ಇಲ್ಲದ ವಿವಿಗಳ ವಿರುದ್ದ ಕ್ರಮಕ್ಕೆ ಸಂಬಂಧಿಸಿದಂತೆ ಯುಜಿಸಿ ಸಾರ್ವಜನಿಕ ನೋಟಿಸ್ ಪ್ರಕಟಿಸಿ, ನಕಲಿ ವಿವಿಗಳ ಬಗ್ಗೆ ಮಾಹಿತಿಯನ್ನು ನೀಡಿದೆ. ರಾಷ್ಟ್ರೀಯ ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

click me!