Swimmer Gangadhar Kadekar: 66ರ ಹರೆಯದ ಉಡಪಿಯ ಈಜುಪಟುವಿನಿಂದ ವಿದ್ಯಾರ್ಥಿಗಳಿಗೆ ಉಚಿತ ಈಜು ತರಬೇತಿ

By Suvarna News  |  First Published Mar 7, 2022, 11:57 PM IST

ಉಡುಪಿ ಜಿಲ್ಲೆ ಕಡೇಕಾರ್ ಗ್ರಾಮದ ಬಳಿಯ ದೇವರಕೆರೆ ಬಳಿ  66 ವರ್ಷದ ಈಜು ಪಟು ಗಂಗಾಧರ್ 15 ಉತ್ಸಾಹಿ ವಿದ್ಯಾರ್ಥಿಗಳಿಗೆ ಈಜುಕಲಿಸುತ್ತಿದ್ದಾರೆ.


ಉಡುಪಿ: ಉಡುಪಿ  (Udupi)ಜಿಲ್ಲೆ ಕಡೇಕಾರ್ (Kadekar) ಗ್ರಾಮದ ಬಳಿಯ ದೇವರಕೆರೆ (Devarakere) ಬಳಿ ಸುಮಾರು 15 ಉತ್ಸಾಹಿ ವಿದ್ಯಾರ್ಥಿಗಳು ಬೆಳಂಬೆಳಿಗ್ಗೆಯೇ ಈಜು ಕ್ರೀಡೆಯನ್ನು ಕಲಿಯಲು ಸಜ್ಜಾಗುತ್ತಾರೆ. ಇಲ್ಲಿನ ಕೆರೆಯನ್ನು ಸುಮಾರು 10 ವರ್ಷಗಳ ಹಿಂದೆ ಪುನರುಜ್ಜೀವನಗೊಳಿಸಲಾಗಿದ್ದು, 66 ವರ್ಷದ ಈಜು ಪಟು ಗಂಗಾಧರ್ ಜಿ. ಕಡೇಕಾರ್ (Gangadhar G Kadekar) ಅದನ್ನು ಬಳಸಿಕೊಂಡು ಕೆಲವೊಂದು ಅಗ್ಯತ ಜೀವನ ಕೌಶಲ್ಯದೊಂದಿಗೆ ಈಜಿನ ಬಗ್ಗೆ ವಿದ್ಯಾರ್ಥಿಗಳಿಗೆ (Students) ಹೇಳಿಕೊಡುತ್ತಾರೆ.

ವಿದ್ಯಾರ್ಥಿಗಳು ಒಂದು ಬಾರಿ ಈ ಕೆರೆ ಬಳಿಗೆ ಬಂದರೆ ಸಾಕು, ಅದನ್ನು ದಿನಚರಿಯಾಗಿ ಮಾಡಿಕೊಳ್ಳುತ್ತಾರೆ. ವಯಸ್ಸು ಅಥವಾ ಹಿನ್ನೆಲೆ ಎನ್ನದೇ ಎಲ್ಲ ರೀತಿಯ ವಯೋಮಾನದವರು ವಾರಕ್ಕೊಮ್ಮೆ ಈ ಕೆರೆಯ ಬಳಿ ಬಂದು, ಕೆರೆಯನ್ನು ಸ್ವಚ್ಛಗೊಳಿಸಿ, ಈಜಾಡುತ್ತಾರೆ. ಹದಿಹರೆಯದ ಮಕ್ಕಳು ಮಾತ್ರವಲ್ಲದೆ 55 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೂ ಗಂಗಾಧರ್ ಈಜು (swimming) ಹೇಳಿಕೊಡುತ್ತಾರೆ. 

Tap to resize

Latest Videos

ಬ್ರಹ್ಮಾವರದ ಶಾಲೆಯೊಂದರ ನಾಲ್ಕನೇ ತರಗತಿ ವಿದ್ಯಾರ್ಥಿ ವಿನೀಶ್ ಕೇವಲ ವಾರಗಳಲ್ಲಿ ಈಜು ಕಲಿತಿದ್ದಾರೆ. ಅಂಬಾಲಪಡಿಯ ರಾಹುಲ್ ಗೆ ಮಾತು ಸರಿಯಾಗಿ ಬರಲ್ಲ, ಆದರೆ, ನಾಲ್ಕು ವರ್ಷದ ಹಿಂದೆಯೇ ಗಂಗಾಧರ್ ಅವರಿಂದ ಈಜು ಕಲಿತಿದ್ದಾರೆ. ಅಟಿಸಂ ರೋಗಗಳಿಂದ ಬಳಲುತ್ತಿರುವ ಮುಸ್ಲಿಂ ಹುಡುಗಿಯೊಬ್ಬಳು ಕೂಡಾ ಅವರಿಂದಲೇ ಈಜು ಕಲಿತಿದ್ದಾಳೆ. ಆಕೆಯ ಆರೋಗ್ಯ ಪರಿಸ್ಥಿತಿ ಸುಧಾರಣೆಗಾಗಿ ಈಜು ಕಲಿಸುವಂತೆ ವೈದ್ಯರ ಸಲಹೆ ಮೇರೆಗೆ ಆಕೆಗೆ ಈಜಿನ ಬಗ್ಗೆ ತರಬೇತಿ ನೀಡುತ್ತಿದ್ದು, ಆಕೆಯ ಪೋಷಕರು ಸಂತಸದಲ್ಲಿದ್ದಾರೆ.

West Bengal 10th Exam: SSLC ಪರೀಕ್ಷೆ ಹಿನ್ನೆಲೆ ಇಂಟರ್ನೆಟ್ ಬಂದ್‌ ಮಾಡಿದ ದೀದಿ ಸರಕಾರ

ಮಾನಸಿಕ ಹಾಗೂ ದೈಹಿಕ ಒತ್ತಡಗಳ ನಿವಾರಣೆಗೆ ಕ್ರೀಡೆ ನೆರವಾಗುತ್ತದೆ ಎಂದು ಹೇಳುವ ಗಂಗಾಧರ್, ಮಾನಸಿಕ ಹಾಗೂ ದೈಹಿಕ ಸದೃಢತೆಗಾಗಿ ಪ್ರತಿದಿನ ಕೇವಲ ಒಂದು ಗಂಟೆ ಈಜು ಕಲಿಯಲು ತಮ್ಮನ್ನು ಭೇಟಿಯಾಗಿ ಎನ್ನುತ್ತಾರೆ. ಗಂಗಾಧರ್  'ಜೈ ದುರ್ಗಾ ಸ್ವಿಮ್ಮಿಂಗ್ ಕ್ಲಬ್  ರಿಜಿಸ್ಟರ್ ಮಾಡಿಸಿದ್ದು, ಅವರ ತರಗತಿಗೆ ಸೇರಬಯಸುವವರು ಫಾರಂ ಒಂದನ್ನು ಭರ್ತಿ ಮಾಡಬೇಕು. ನೀತಿ, ನಿಯಮಗಳು ಮತ್ತು ಡ್ರೆಸ್ ಕೋಡ್ ಬಗ್ಗೆ ಅವರ ಫೋಷಕರು ಲಿಖಿತವಾಗಿ ಒಪ್ಪಿಗೆ ನೀಡಬೇಕು ಆದರೆ, ಈಜು ತರಗತಿಗಳಿಗೆ ಅವರು ಯಾವುದೇ ಶುಲ್ಕ ಪಡೆಯುವುದಿಲ್ಲ.

ದುರಾದೃಷ್ಟವಶಾತ್, ಸಮುದ್ರ ತೀರದಲ್ಲಿ ಅನೇಕ ಯುವಕರು ಸಾವನ್ನಪ್ಪುತ್ತಿದ್ದರಿಂದ ಈ ಭಾಗದಲ್ಲಿ ಯುವಕರನ್ನು ಬದುಕುಳಿಸುವ ನಿಟ್ಟಿನಲ್ಲಿ ಅವರಿಗೆ ಈಜು ಕಲಿಸಲು ಯೋಚಿಸಿದ್ದಾಗಿ ಗಂಗಾಧರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಅತ್ಯುತ್ತಮ ತರಬೇತುದಾರರಿಂದ ಉಚಿತವಾಗಿ ಈಜು ಕಲಿತಿರುವುದಕ್ಕೆ ಅನೇಕ ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸುತ್ತಾರೆ. 

ಕುತೂಹಲಕಾರಿ ವಿಷಯವೆಂದರೆ, ಗಂಗಾಧರ್ ಕೂಡಾ 50 ವರ್ಷ ಇರುವಾಗ ಈಜು ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಂಡು ರಾಷ್ಟ್ರ, ಅಂತಾರಾಷ್ಟ್ರದ ಮಟ್ಟದ ದಾಖಲೆಗಳನ್ನು ಮಾಡಿದ್ದಾರೆ. ಜನವರಿ 24, 2022 ರಂದು ಪುದುಕೆರೆಯಲ್ಲಿ ಕಾಲಿಗೆ ಸರಪಳಿ ಕಟ್ಟಿಕೊಂಡು ಸುಮಾರು ಐದುವರೆ ತಾಸುಗಳ ಕಾಲ 3.5 ಕಿ.ಮಿ ದೂರ ಈಜಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದರು. ಜನವರಿ 24, 2021 ರಂದು ಪದ್ಮಾಸನದಲ್ಲಿ 73.7 ನಿಮಿಷದಲ್ಲಿ 1.4 ಕಿ. ಮೀ ದೂರ ಸಾಗಿ ಇಂಡಿಯನ್ ಬುಕ್ ಆಪ್ ರೆಕಾರ್ಡ್ ನಲ್ಲಿ ತನ್ನ ಹೆಸರು ದಾಖಲಿಸಿಕೊಂಡಿದ್ದರು. 

ಶಿಕ್ಷಕನ ಶಿಕ್ಷೆಗೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಲೇರಿದ ತೆಲಂಗಾಣದ 2 ನೇ ತರಗತಿಯ ಬಾಲಕ!

ತರಬೇತುದಾರರಾಗಿ ಗಂಗಾಧರ್, ಫ್ರೀ ಸ್ಟೈಲ್, ಬ್ಯಾಕ್ ಸ್ಟ್ರೋಕ್, ಬ್ರೆಸ್ಟ್ ಸ್ಟ್ರೋಕ್, ಬಟರ್ ಪ್ಲೈ ಸೇರಿದಂತೆ ವಿವಿಧ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ. ಕೆರೆ ಅಥವಾ ಕೊಳದಲ್ಲಿ ತರಬೇತಿ ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮೂಡಿಸಲು ನೆರವಾಗುತ್ತದೆ. ತಮ್ಮ ಅನೇಕ ವಿದ್ಯಾರ್ಥಿಗಳು ಅನೇಕ ಸ್ಪರ್ಧೆಗಳಲ್ಲಿ ಗೆದಿದ್ದಾರೆ. ಶುಕ್ರವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಗ್ಗೆ 6-30 ರಿಂದ 8-30 ರವರೆಗೂ ಗಂಗಾಧರ್ ತರಬೇತಿ ಇರುತ್ತದೆ ಎಂದು ಜೈ ದುರ್ಗಾ ಸ್ವಿಮ್ಮಿಂಗ್ ಕ್ಲಬ್ ಉಪಾಧ್ಯಕ್ಷ ಚಂದ್ರ ಕುಂದರ್ ಹೇಳಿದ್ದಾರೆ. 

ಗಂಗಾಧರ್ ಕಾಲಿಯಾನ್ ಪುರದ ಮಿಲಗ್ರೇಸ್ ಕಾಲೇಜಿನಿಂದ 1979ರಲ್ಲಿ ಬಿ. ಕಾಂ ಪದವಿ ಪಡೆದಿದ್ದು, ಆರ್ ಟಿಒನಲ್ಲಿ ಎಫ್ ಡಿಎ ಆಗಿ ಕೆಲಸ ಮಾಡಿದ್ದಾರೆ. 1984ರಲ್ಲಿ ಉಡುಪಿಯ ವೈಕುಂಟ ಬಾಳಿಗಾ ಕಾಲೇಜಿನಲ್ಲಿ ಎಲ್ ಎಲ್ ಬಿ ಪೂರ್ಣಗೊಳಿಸಿದ್ದಾರೆ. ಬಾಲ್ಯದಲ್ಲಿ ಈಜಿನ ಬಗ್ಗೆ ತಿಳಿದಿದ್ದ ಗಂಗಾಧರ್, 50 ವರ್ಷ ಮುಗಿದ ನಂತರ ಅದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅವರ ಪತ್ನಿ ಪದ್ಮಾವತಿ ಬಿ.ಕಾಂ ಪೂರ್ಣಗೊಳಿಸಿದ್ದು, ಗೃಹಿಣಿಯಾಗಿದ್ದಾರೆ. ಅವರ ಮಗ ಮನೋಹರ್ ಕೂಡಾ ಉತ್ತಮ ಸ್ಮಿಮ್ಮರ್ ಹಾಗೂ ಪುಟ್ಬಾಲ್ ಆಟಗಾರರಾಗಿದ್ದಾರೆ. 

click me!