ರಾಜ್ಯದಲ್ಲಿ 15ಕ್ಕಿಂತ ಕಡಿಮೆ ಮಕ್ಕಳು ಇರುವ ಸುಮಾರು 22 ಸಾವಿರ ಶಾಲೆಗಳಿವೆ. ಕಡಿಮೆ ಮಕ್ಕಳಿರುವ ಶಾಲೆಗಳನ್ನು ಉತ್ತಮ ಶಾಲೆಗಳೊಂದಿಗೆ ಸೇರಿಸಲಾಗುವುದು. ಕೆಪಿಎಸ್‌ಸಿ ಮಾದರಿ ಶಾಲೆಗಳಿಗೆ 8 ರಿಂದ 10 ಸಾವಿರ ಕೋಟಿ ರು. ಬೇಕಾಗುತ್ತದೆ.
ಶಿವಮೊಗ್ಗ (ಆ.28): ರಾಜ್ಯದಲ್ಲಿ 15ಕ್ಕಿಂತ ಕಡಿಮೆ ಮಕ್ಕಳು ಇರುವ ಸುಮಾರು 22 ಸಾವಿರ ಶಾಲೆಗಳಿವೆ. ಕಡಿಮೆ ಮಕ್ಕಳಿರುವ ಶಾಲೆಗಳನ್ನು ಉತ್ತಮ ಶಾಲೆಗಳೊಂದಿಗೆ ಸೇರಿಸಲಾಗುವುದು. ಕೆಪಿಎಸ್‌ಸಿ ಮಾದರಿ ಶಾಲೆಗಳಿಗೆ 8 ರಿಂದ 10 ಸಾವಿರ ಕೋಟಿ ರು. ಬೇಕಾಗುತ್ತದೆ. ಈ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಎಲ್ಲ ಕಡೆ ಎನ್‌ಇಪಿ ಜಾರಿಯಾಗಿಲ್ಲ. ಎಲ್ಲೆಲ್ಲಿ ಜಾರಿಯಾಗಿದೆಯೋ ಅಲ್ಲೆಲ್ಲ ಹಂತ ಹಂತವಾಗಿ ಮಕ್ಕಳಿಗೆ ತೊಂದರೆಯಾಗದ ರೀತಿಯಲ್ಲಿ ತೆಗೆಯುತ್ತೇವೆ. ಅದರ ಬದಲಾಗಿ ಜನರ ಅಪೇಕ್ಷೆಯಂತೆ ಎಸ್‌ಇಪಿ ಜಾರಿಗೆ ತರುತ್ತೇವೆ. ಎನ್‌ಇಪಿಯಿಂದ ಪಠ್ಯದಲ್ಲಿ ಕೆಲ ಅನಗತ್ಯ ವಿಚಾರಗಳು ಸೇರಿಸಲಾಗಿದೆ. ಅವುಗಳನ್ನು ಬದಲಿಸಲೇಬೇಕಾದ ಅನಿವಾರ್ಯತೆ ಇದೆ. ಪಕ್ಷದ ಪ್ರಣಾಳಿಕೆಯಲ್ಲಿಯೇ ನಾವು ಎನ್‌ಇಪಿ ರದ್ದು ಮಾಡುತ್ತೇವೆ ಎಂದಿದ್ದೇವೆ. ಅದನ್ನ ಒಪ್ಪಿಯೇ ಜನ ನಮಗೆ ಮತ ನೀಡಿದ್ದಾರೆ. ಎನ್‌ಇಪಿಗಿಂತ ಎಸ್‌ಇಪಿಯೇ ಚೆನ್ನಾಗಿದೆ ಎಂದರು.
ಚಿತ್ರದುರ್ಗದ ಹೊರವಲಯದಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸಿ: IMA ಅಧ್ಯಕ್ಷರಿಂದ ಸರ್ಕಾರಕ್ಕೆ ಒತ್ತಾಯ!
ಎಸ್‌ಇಪಿ ಜಾರಿಗೆ ಕಾಂಗ್ರೆಸ್ ಬದ್ಧ: ಚುನಾವಣೆ ಪೂರ್ವದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದಂತೆ ರಾಜ್ಯದಲ್ಲಿ ಎನ್‌ಇಪಿ ಬದಲಾಗಿ ಎಸ್‌ಇಪಿ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಎಲ್ಲ ಕಡೆ ಎನ್‌ಇಪಿ ಜಾರಿಯಾಗಿಲ್ಲ. ಎಲ್ಲೆಲ್ಲಿ ಜಾರಿಯಾಗಿದೆ ಅಲ್ಲಿ ಹಂತ-ಹಂತವಾಗಿ ಮಕ್ಕಳಿಗೆ ತೊಂದರೆಯಾಗದ ರೀತಿಯಲ್ಲಿ ಎನ್‌ಇಪಿ ತೆಗೆಯುತ್ತೇವೆ. ಭಾರತ ವೈವಿಧ್ಯಮಯ ಸಂಸ್ಕೃತಿ ಹೊಂದಿರುವ ದೇಶ. ಎನ್‌ಇಪಿಯಿಂದ ಬೇರೆ ಸಂಸ್ಕೃತಿಗಳನ್ನು ಕೆಲಸ ಆಗುತ್ತದೆ.
ಎನ್‌ಇಪಿಯಿಂದ ಕೆಲ ಅನಗತ್ಯ ವಿಚಾರಗಳು ಸೇರಿಸಲಾಗಿದೆ. ಅವುಗಳನ್ನು ಬದಲಿಸಲೇ ಬೇಕಾದ ಅನಿವಾರ್ಯತೆ ಇದೆ. ಪ್ರಣಾಳಿಕೆಯಲ್ಲಿ ಎನ್‌ಇಪಿ ರದ್ದು ಮಾಡುತ್ತೇವೆ ಎಂದಿದ್ದೇವೆ. ಅದನ್ನ ಒಪ್ಪಿ ಜನ ನಮಗೆ ಮತ ಕೊಟ್ಟಿದ್ದಾರೆ. ಎನ್‌ಇಪಿಗಿಂತ ಎಸ್‌ಇಪಿ ಚೆನ್ನಾಗಿದೆ. ಜನರ ಅಪೇಕ್ಷೆಯಂತೆ ಎಸ್‌ಇಪಿ ಜಾರಿಗೆ ತರುತ್ತೇವೆ ಎಂದರು. ಹೊಸ ಪಾಲಿಸಿಯಿಂದ ರಾಜ್ಯ ಸರ್ಕಾರ ಅನುದಾನದ ಕೊರತೆ ಆಗುತ್ತದೆ. ಇದರಿಂದ ಬೇರೆ ಇಲಾಖೆಗೆ ಅನುದಾನ ಕೊರತೆಯಾಗಿದೆ. ರಾಜ್ಯದಿಂದ ಕೇಂದ್ರ ಸರ್ಕಾರ ಹೆಚ್ಚಿನ ಟ್ಯಾಕ್ಸ್ ತೆಗೆದುಕೊಳ್ಳುತ್ತಿದೆ. ಪ್ರತಿ ವಿದ್ಯಾರ್ಥಿಗೆ ಕೇಂದ್ರ ಸರ್ಕಾರ 6 ಸಾವಿರ ಖರ್ಚು ಮಾಡಬೇಕು.
ಉತ್ತರ ಭಾರತಕ್ಕೀಗ ಹೊಸ ಅಡಕೆಯೇ ಬೇಕು!: ಮಾರುಕಟ್ಟೆಯಲ್ಲೀಗ ಹೊಸ ಟ್ರೆಂಡ್ ಶುರು
ತೆಲಂಗಾಣ, ತಮಿಳುನಾಡು, ಗುಜರಾತ್, ರಾಜಸ್ತಾನದಲ್ಲಿ ಕೇಂದ್ರ ಸರ್ಕಾರ ಪ್ರತಿ ವಿದ್ಯಾರ್ಥಿಗೆ 6 ಸಾವಿರ ಕೊಡುತ್ತಿದೆ. ಕರ್ನಾಟಕ ರಾಜ್ಯಕ್ಕೆ 2 ಸಾವಿರ ಮಾತ್ರ ಕೊಡುತ್ತಿದೆ. ಇಲ್ಲಿನ ಮಕ್ಕಳ ಭವಿಷ್ಯವನ್ನು ಯಾಕೆ ಹಾಳುಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ಗ್ಯಾರಂಟಿ ಜೊತೆಗೆ ಪುಸ್ತಕ, ವಾರಕ್ಕೆ ಎರಡು ದಿನ ಮೊಟ್ಟೆ. ಊಟ ಎಲ್ಲವೂ ಕೊಡುತ್ತಿದೇವೆ. ಕಳೆದ ಸರ್ಕಾರ ಕೇಂದ್ರದಿಂದ ಹೆಚ್ಚಿನ ಅನುದಾನ ಕೇಳಲಿಲ್ಲ. ನಮ್ಮ ತೆರಿಗೆ ಹಣವನ್ನು ಕೇಳುವುದು ನಮ್ಮ ಹಕ್ಕು. ಈಗ ನಾವು ಅನುದಾನ ತರುವ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ಹೆಜ್ಜೆ ಇಟ್ಟಿದ್ದೇವೆ ಎಂದರು.