Nalanda University Past Glory: ಸಾವಿರ ವರ್ಷಗಳ ನಂತರ ಗತವೈಭವಕ್ಕೆ ಮರಳಿದ ನಳಂದಾ ವಿಶ್ವವಿದ್ಯಾಲಯ

By Suvarna News  |  First Published Feb 14, 2022, 2:19 PM IST

ನಶಿನಿ ಹೋಗಿದ್ದ 5 ನೇ ಶತಮಾನದಲ್ಲಿ ಸ್ಥಾಪಿತವಾದ  ಪ್ರಾಚೀನ ಕಾಲದ ಉನ್ನತ ವ್ಯಾಸಂಗ ಕೇಂದ್ರ ನಳಂದಾ ವಿಶ್ವವಿದ್ಯಾಲಯದ ಗತ ವೈಭವ ಮರಳುವಂತೆ ಮಾಡಲಾಗಿದೆ. 


ಬೆಂಗಳೂರು(ಫೆ.14): ನಳಂದ (Nalanda ), ಇದು ಭಾರತ ದೇಶದ ಬಿಹಾರ‌ದಲ್ಲಿ (Bihar) 5 ನೇ ಶತಮಾನದಲ್ಲಿ ಸ್ಥಾಪಿತವಾದ  ಪ್ರಾಚೀನ ಕಾಲದ ಉನ್ನತ ವ್ಯಾಸಂಗ ಕೇಂದ್ರದ ಪ್ರಸಿದ್ಧ ಹೆಸರು. ನಳಂದ ಪ್ರಾಂತ್ಯವು ಭಾರತದ ರಾಜ್ಯ ಬಿಹಾರ‌ದ ರಾಜಧಾನಿಯಾದ ಪಾಟ್ನಾದ ಆಗ್ನೇಯ ಭಾಗದಲ್ಲಿ ಸುಮಾರು 55 ಮೈಲು ದೂರದಲ್ಲಿದೆ ಮತ್ತು ಕ್ರಿ.ಶ. 427 ರಿಂದ 1197 ವರೆಗೆ ಬುದ್ಧ ಪ್ರಣೀತ ತತ್ವಜ್ಞಾನದ ವ್ಯಾಸಂಗ ಕೇಂದ್ರವಾಗಿತ್ತು. ಇದು ಇತಿಹಾಸದಲ್ಲಿ ನಮೂದಿತವಾದ ಮೊದಲ ಅತಿ ಶ್ರೇಷ್ಠವಾದ ವಿಶ್ವವಿದ್ಯಾಲಯವಾಗಿದೆ. 

1193 ರಲ್ಲಿ, ಆಕ್ರಮಣಕಾರ ಭಕ್ತಿಯಾರ್ ಖಿಲ್ಜಿ ನಳಂದಾ ವಿಶ್ವವಿದ್ಯಾಲಯವನ್ನು ಸಂಪೂರ್ಣವಾಗಿ ನಾಶಪಡಿಸಿದ್ದ.  ಅಂದಿನಿಂದ ಈ ವಿಶ್ವವಿದ್ಯಾನಿಲಯವು ಅವಶೇಷಗಳಾಗಿ ಮಾರ್ಪಟ್ಟಿತ್ತು, ಆದರೆ 2006ರಲ್ಲಿ ಸಿಂಗಪೂರ್, ಚೈನಾ, ಭಾರತ, ಜಪಾನ್ ಮತ್ತು ಇತರ ದೇಶಗಳು ಈ ಐತಿಹಾಸಿಕ ಪ್ರಾಂತ್ಯವನ್ನು ನಳಂದ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ (Nalanda International University) ಎಂದು ನವೀಕರಿಸುವ ಮತ್ತು ಪುನರುಜ್ಜೀವನಗೊಳಿಸುವ ಯೋಜನೆಯ ಪ್ರಸ್ತಾಪವನ್ನು ಮುಂದಿಟ್ಟಿತು. ಈಗ ನಳಂದ ವಿಶ್ವವಿದ್ಯಾಲಯದ ಭವ್ಯವಾದ ಇತಿಹಾಸ ಮರುಸ್ಥಾಪನೆಯಾಗಿದೆ. 

Tap to resize

Latest Videos

ನಳಂದಾ ವಿಶ್ವವಿದ್ಯಾಲಯದ ಗತ ವೈಭವ ಮರಳುವಂತೆ ಮಾಡಲಾಗಿದೆ. ನಳಂದ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಅನ್ನು 456 ಎಕರೆಯಲ್ಲಿ ನಿರ್ಮಿಸಲಾಗಿದೆ. ವಿಶ್ವವಿದ್ಯಾನಿಲಯದ ಮೆಟ್ಟಿಲುಗಳು ಮತ್ತು ಕಟ್ಟಡಗಳ ವಾಸ್ತುಶಿಲ್ಪವನ್ನು ಹಳೆಯ ನಳಂದಾ ವಿಶ್ವವಿದ್ಯಾನಿಲಯದ ರೀತಿಯಲ್ಲೇ ಪುನರ್‌ ನಿರ್ಮಾಣ ಮಾಡಲಾಗಿದೆ. ಮುಖ್ಯ ದ್ವಾರದಲ್ಲಿ ಮಳೆನೀರು ಕೊಯ್ಲು ಮತ್ತು ಆಕರ್ಷಕ ಬೆಳಕಿನ ವ್ಯವಸ್ಥೆಗಳನ್ನು ಮಾಡಲಾಗಿದೆ, ಇದು ಆಧುನಿಕ ಶೈಲಿಯ ಭವ್ಯವಾದ ನೋಟವನ್ನು ನೀಡುತ್ತದೆ. ಇದಲ್ಲದೇ ನಳಂದ ವಿಶ್ವವಿದ್ಯಾಲಯದ ಕಟ್ಟಡವನ್ನು ಹವಾಮಾನ ಸ್ನೇಹಿಯಾಗಿ ನಿರ್ಮಾಣ ಮಾಡಲಾಗಿದೆ. ಅಲ್ಲಿ ಬೇಸಿಗೆಯಲ್ಲಿ ತಂಪು ಮತ್ತು ಶೀತದಲ್ಲಿ ಶಾಖದ ಅನುಭವವಾಗಲಿದೆ. ಈ ಕಟ್ಟಡದ ಸುತ್ತಲೂ ಸ್ಪುಟವಾದ ನೀಲಿ ನೀರು ಗೋಚರಿಸುತ್ತದೆ.

YOUNG SCIENTIST GITANJALI RAO: ಅನ್ವೇಷಣೆಯ ಹಾದಿಯಲ್ಲಿ ಸೋಲಿನ ಬಗ್ಗೆ ಭಯ ಬೇಡವೆಂದ ಯುವ ವಿಜ್ಞಾನಿ ಗೀತಾಂಜಲಿ ರಾವ್‌

ಎಪಿಜೆ ಅಬ್ದುಲ್ ಕಲಾಂ ಅವರ ಸಲಹೆ ಮೇರೆಗೆ ನಿತೀಶ್ ಕುಮಾರ್ ಸರ್ಕಾರ ಹೊಸ ಕಟ್ಟಡ ನಿರ್ಮಿಸಲು ನಿರ್ಧರಿಸಿತ್ತು. 2007 ರಲ್ಲಿ, ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರ ಸಮ್ಮುಖದಲ್ಲಿ ಕೇಂದ್ರ ಸರ್ಕಾರವು ಚೀನಾ, ಸಿಂಗಾಪುರ್, ಜಪಾನ್ ಮತ್ತು ಥೈಲ್ಯಾಂಡ್‌ನ ಪ್ರತಿನಿಧಿಗಳನ್ನು ಒಳಗೊಂಡ ಮಾರ್ಗದರ್ಶಿ ಗುಂಪನ್ನು ಇದಕ್ಕಾಗಿ ರಚಿಸಿತು. ನಂತರ ಮಾರ್ಗದರ್ಶಕ ಗುಂಪು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಾಯಿತು.

ಇದೇ ಸಮಯದಲ್ಲಿ ಜಪಾನ್, ಸಿಂಗಾಪುರ ನಳಂದ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ನೆರವು ನೀಡಿದ್ದವು. ಇದರ ಮರುವ ಸ್ಥಾಪನೆಗೆ 16 ದೇಶಗಳು ಒಪ್ಪಿಗೆ ಸೂಚಿಸಿದೆ. 2010 ರಲ್ಲಿ ಸಂಸತ್ತಿನಲ್ಲಿ ಈ ಕಾಯಿದೆಯನ್ನು ಅಂಗೀಕರಿಸಲಾಯಿತು.  21 ಸೆಪ್ಟೆಂಬರ್ 2010 ರಂದು, ರಾಷ್ಟ್ರಪತಿಗಳು ಇದಕ್ಕೆ ತಮ್ಮ ಅನುಮೋದನೆ ನೀಡಿದರು ಮತ್ತು ನವೆಂಬರ್ 25 ರಂದು ಈ ವಿಶ್ವವಿದ್ಯಾಲಯವು ಅಸ್ತಿತ್ವಕ್ಕೆ ಬಂದಿತು. ಸ್ಕೂಲ್ ಆಫ್ ಹಿಸ್ಟಾರಿಕಲ್ ಸ್ಟಡೀಸ್ ಮತ್ತು ಸ್ಕೂಲ್ ಆಫ್ ಎಕಾಲಜಿ ಆಂಡ್ ಎನ್ವಿರಾನ್ಮೆಂಟ್ ನಳಂದ ವಿಶ್ವವಿದ್ಯಾಲಯದ ಮೊದಲ ಸೆಷನ್‌ನಲ್ಲಿ ಪ್ರಾರಂಭವಾಯಿತು. ಅಲ್ಲಿಂದ ಈ ವಿಶ್ವವಿದ್ಯಾಲಯವು ಶೈಕ್ಷಣಿಕ ಅಧ್ಯಯನಗಳಲ್ಲಿ ಒಂದೊಂದೆ ವಿಷಯಗಳನ್ನು ಸೇರಿಸುತ್ತಾ ಮುಂದುವರೆದಿದೆ. ಜೊತೆಗೆ ಸಂಶೋಧನಾ ಕೇಂದ್ರವಾಗಿಯೂ ಅಭಿವೃದ್ಧಿಯಾಗುತ್ತಿದೆ.

IGNOU January 2022 Admissions Extended: ಜನವರಿ ಸೆಶನ್ ಪ್ರವೇಶಾತಿ ವಿಸ್ತರಣೆ

ನಳಂದವು ಜಗತ್ತಿನ ಮೊತ್ತ ಮೊದಲ ವಸತಿಸೌಕರ್ಯ ಹೊಂದಿದ್ದ ವಿಶ್ವವಿದ್ಯಾಲಯವಾಗಿತ್ತು, ಅಂದರೆ ವಿದ್ಯಾರ್ಥಿಗಳಿಗೆ ವಸತಿಗೃಹಗಳಿದ್ದವು. ಇದು ಅತ್ಯಂತ ಪ್ರಸಿದ್ಧವಾದ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿತ್ತು. ಇದು ತನ್ನ ಉತ್ತುಂಗ ಸ್ಥಿತಿಯಲ್ಲಿದ್ದಾಗ ಸುಮಾರು 10,000 ವಿದ್ಯಾರ್ಥಿಗಳನ್ನು ಮತ್ತು 2,000 ಅಧ್ಯಾಪಕರನ್ನು ಒಳಗೊಂಡಿತ್ತು. ನಳಂದವು ಎಂಟು ಬೇರೆ ಬೇರೆ ಮೋಟು ಗೋಡೆಗಳನ್ನು ಮತ್ತು ಹತ್ತು ದೇವಾಲಯಗಳು, ಅಲ್ಲದೆ ಅನೇಕ ಧ್ಯಾನದ ಹಜಾರಗಳು ಮತ್ತು ಪಾಠದ ಕೋಣೆಗಳನ್ನು ಹೊಂದಿತ್ತು. ಮೈದಾನದಲ್ಲಿ ಸರೋವರಗಳು ಮತ್ತು ಉದ್ಯಾನವನಗಳಿದ್ದವು.

ಗ್ರಂಥಾಲಯವು ಒಂಬತ್ತು ಅಂತಸ್ತುಗಳ ಕಟ್ಟಡವಾಗಿತ್ತು, ಅಲ್ಲಿ ಶಾಸ್ತ್ರದ ಸೂಕ್ಷ್ಮ ಪ್ರತಿಗಳನ್ನು ಇಡಲಾಗಿತ್ತು.  ಧರ್ಮಗಂಜಾ ಎಂದು ಕರೆಯಲಾಗುವ ನಳಂದ ಗ್ರಂಥಾಲಯ , ಆ ಕಾಲದಲ್ಲಿ ವಿಶ್ವದಲ್ಲಿಯೇ ಹೆಚ್ಚು ಚಿರಪರಿಚಿತ ಬೌದ್ಧೀಯ ಜ್ಞಾನದ ಖಜಾನೆಯಾಗಿದ್ದ ಅತಿ ದೊಡ್ಡ ಉಗ್ರಾಣವಾಗಿತ್ತು. ಈ ಸಂಗ್ರಹದಲ್ಲಿ ಸಾವಿರಾರು ನೂರುಗಳಷ್ಟು ಸಂಪುಟಗಳನ್ನು ಹೊಂದಿತ್ತು, ಆದ್ದರಿಂದ ಮುಸ್ಲಿಂ ದಾಳಿಕಾರರು ಹತ್ತಿಸಿದ ಬೆಂಕಿಯಿಂದ ತಿಂಗಳುಗಟ್ಟಲೆ ಉರಿದಿತ್ತು. ನಳಂದ ವಿಶ್ವವಿದ್ಯಾಲಯದ ಗ್ರಂಥಾಲಯವು ಎಷ್ಟು ದೊಡ್ಡದಿತ್ತೆಂದರೆ, ಮೊಘಲರು ಅಲ್ಲಿ ಬೆಂಕಿ ಹಚ್ಚಿದ ಮೂರು ತಿಂಗಳವರೆಗೂ ಆ ಸ್ಥಳವು ಉರಿಯುತ್ತಿತ್ತೆಂದು ವರದಿಯಾಗಿತ್ತು. 

click me!