Teachers Day: ಶಿಕ್ಷಕರೂ ಹೋಂ ವರ್ಕ್ ಮಾಡಬೇಕು!

By Kannadaprabha NewsFirst Published Sep 5, 2022, 2:44 PM IST
Highlights

ಮಕ್ಕಳನ್ನು ಉತ್ತಮ ಪ್ರಜೆಯಾಗಿಸುವಲ್ಲಿ ಶಿಕ್ಷಕರ ಪಾತ್ರ ಕೂಡ ಅತ್ಯಂತ ಹಿರಿದು. ಹೀಗಾಗಿ ಶಿಕ್ಷಕ ಕೂಡ ಮಕ್ಕಳಂತೆ ಮನೆಯಲ್ಲಿ ಹೋಂ ವರ್ಕ್ ಮಾಡಬೇಕು. ಬೇರೆ ಬೇರೆ ಕಾರಣಗಳಿಂದ ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ. ಶಾಲೆಗೆ ಬರುವ ಮಕ್ಕಳ ಮೇಲೆ ಶಿಕ್ಷಕನಾದವನು ನಿಗಾ ಇಡಬೇಕು. ಅವರ ಆಸಕ್ತಿ ವಿಷಯಗಳು, ಪಾಠ ಪ್ರವಚನಗಳನ್ನು ಚೆನ್ನಾಗಿ ಕೇಳುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಗಮನಿಸುತ್ತಿರಬೇಕು

ಲೇಖನ: ಪೊನಶಂಕರಿ, ತುಮಕೂರು, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕಿ

ಕಲಿಕೆಗೆ ಕೊನೆಯೆಂಬುದೇ ಇಲ್ಲ ಎನ್ನುತ್ತಾರೆ ಐ.ವಿ.ಬೇಕರ್‌ ಪ್ರೀಸ್ಟ್‌. ಇವರ ಈ ನುಡಿಗಟ್ಟು ಕಲಿಕೆ ಮೂಲಕ ಹೇಗೆ ಸವಾಲುಗಳನ್ನು ಅವಕಾಶಗಳನ್ನಾಗಿ ಮಾರ್ಪಡಿಸಿಕೊಳ್ಳಬಹುದು ಎಂಬುದನ್ನು ಸೂಚಿಸುತ್ತದೆ. 2020ರಲ್ಲಿ ವಿಶ್ವಾದ್ಯಂತ ಅಪ್ಪಳಿಸಿದ ಕೋವಿಡ್‌ ಸಾಂಕ್ರಾಮಿಕದಿಂದ ಇಡೀ ಶಾಲೆಯ ವ್ಯವಸ್ಥೆಯೇ ಆನ್‌ಲೈನ್‌ ಮೂಲಕ ನಡೆಯುವಂತಾಯಿತು. ನಿಜಕ್ಕೂ ಇದೊಂದು ದೊಡ್ಡ ಸವಾಲೇ ಆಗಿತ್ತು. ಇಷ್ಟುವರ್ಷಗಳ ಕಾಲ ನಾವು ಸಾಂಪ್ರದಾಯಿಕ ಶಿಕ್ಷಣ ಪದ್ಧತಿಗೆ ಒಗ್ಗಿಕೊಂಡಿದ್ದೆವು. ಶಿಕ್ಷಕನೂ ಶಾಲಾ ಕೊಠಡಿಯಲ್ಲಿ ಮಕ್ಕಳೆದುರು ಪಾಠ ಪ್ರವಚನ ಮಾಡುವ ಮಾದರಿ ಪದ್ಧತಿ ಇತ್ತು. ದಶಕಗಳ ಕಾಲ ಒಂದು ಮಾದರಿ ಪದ್ಧತಿ ಮೂಲಕ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕರಿಗೆ ಏಕಾಏಕಿ ಅಪ್ಪಳಿಸಿದ ಕೋವಿಡ್‌ ಸಾಂಕ್ರಾಮಿಕದಿಂದಾಗಿ ಹೊಸ ರೀತಿಯ ಕಲಿಕೆಗೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಯಿತು.

 

 

ಮಕ್ಕಳು ಸುಳ್ಳು ಹೇಳುತ್ತಾರೆಯೆ? ಈ ಅಭ್ಯಾಸ ಹೀಗೆ ಬದಲಾಯಿಸಿ

ಆಫ್‌ಲೈನ್‌ ಮೂಲಕ ಶಿಕ್ಷಣ ನೀಡುತ್ತಿದ್ದ ಶಿಕ್ಷಕರು ಆನ್‌ಲೈನ್‌ ಮೋಡ್‌ಗೆ ಶಿಫ್‌್ಟಆಗಬೇಕಾಯಿತು. ಶಿಕ್ಷಣ ಕ್ಷೇತ್ರದಲ್ಲಿನ ಈ ಹೊಸ ಪರಿಸ್ಥಿತಿಗೆ ಶಿಕ್ಷಕರು ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು. ಈ ಮಾದರಿಯಲ್ಲೂ ಶಿಕ್ಷಕರು ಗೆದ್ದರು ಕೂಡ. ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ಮಕ್ಕಳನ್ನು ಶಾಲೆಯಲ್ಲಿ ಒಂದು ವಿಷಯದ ಮೇಲೆ ಹಿಡಿದಿಟ್ಟುಕೊಳ್ಳುವುದು ಸವಾಲಿನ ಕೆಲಸವೇ. ಹೀಗಾಗಿ ಅವರಿಗೆ ಕುತೂಹಲ ಮೂಡಿಸುವ ಸಂಗತಿಗಳನ್ನು ಉದಾಹರಣೆ ನೀಡುವ ಮೂಲಕ ಅವರನ್ನು ಪಠ್ಯದ ಬಗ್ಗೆ ಹೆಚ್ಚು ಕೇಂದ್ರೀಕರಣಗೊಳಿಸುವಂತೆ ಮಾಡಬೇಕು.

ಮಕ್ಕಳ ಮಿತಿ, ಶಕ್ತಿ ಅರಿಯಬೇಕು: ಶಿಕ್ಷಕರಲ್ಲಿ ಕ್ರಿಯಾಶೀಲತೆ ಇರಬೇಕು. ದಯೆ ಇರಬೇಕು. ಅಂತಹ ಶಿಕ್ಷಕ ಮಕ್ಕಳನ್ನು ಸತ್ೊ್ರಜೆಯಾಗಿ ರೂಪಿಸಬಲ್ಲ. ಒಂದು ದೊಡ್ಡ ತರಗತಿಯಲ್ಲಿ ಹಲವಾರು ಮಕ್ಕಳಿರುತ್ತಾರೆ. ಹೀಗಾಗಿ ಮಕ್ಕಳ ಮಿತಿ ಮತ್ತು ಶಕ್ತಿಯನ್ನು ಕಂಡು ಹಿಡಿಯುವುದು ಕಷ್ಟಸಾಧ್ಯ. ವಿದ್ಯಾರ್ಜನೆಯಲ್ಲಿ ಕೊಂಚ ಹಿಂದೆ ಇರುವ ಮಕ್ಕಳಿಗೆ ವಿಶೇಷ ಆಸ್ಥೆ ವಹಿಸಿ ಅವರಿಗೆ ಹೆಚ್ಚೆಚ್ಚು ಗಮನಹರಿಸಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ.

ಶಾಲೆಗೆ ಬರುವ ಮಕ್ಕಳಿಗೆ ಹಲವಾರು ಸಮಸ್ಯೆಗಳಿರುತ್ತದೆ. ಅವರು ಓದುತ್ತಿರುವ ಶಾಲೆಗಳಲ್ಲಿ ಮೂಲಭೂತ ಸೌಲಭ್ಯ ಇಲ್ಲದೇ ಇರಬಹುದು. ಕೆಲ ಶಾಲೆಗಳಲ್ಲಿ ಕಡಿಮೆ ಶಿಕ್ಷಕರಿರಬಹುದು. ತಮ್ಮ ಗ್ರಾಮಗಳಿಂದ ಶಾಲೆಗೆ ಬಂದು ಹೋಗಲು ಸಾರಿಗೆ ವ್ಯವಸ್ಥೆ ಇಲ್ಲದೇ ಇರಬಹುದು. ಹೀಗಾಗಿ ಮಕ್ಕಳಿಗೆ ಹಲವಾರು ಸಮಸ್ಯೆಗಳಿರುತ್ತವೆ. ಅಷ್ಟೆಲ್ಲಾ ತೊಂದರೆ ಪಟ್ಟುಕೊಂಡು ಬರುವ ಮಕ್ಕಳಿಗೆ ವಿಶೇಷ ಅಸ್ಥೆಯನ್ನು ಶಿಕ್ಷಕರು ನೀಡಬೇಕಾಗಿದೆ.

ಶಿಕ್ಷಕನೂ ಹೋಂ ವರ್ಕ್ ಮಾಡಬೇಕು: ಮಕ್ಕಳನ್ನು ಉತ್ತಮ ಪ್ರಜೆಯಾಗಿಸುವಲ್ಲಿ ಶಿಕ್ಷಕರ ಪಾತ್ರ ಕೂಡ ಅತ್ಯಂತ ಹಿರಿದು. ಹೀಗಾಗಿ ಶಿಕ್ಷಕ ಕೂಡ ಮಕ್ಕಳಂತೆ ಮನೆಯಲ್ಲಿ ಹೋಂ ವರ್ಕ್ ಮಾಡಬೇಕು. ಬೇರೆ ಬೇರೆ ಕಾರಣಗಳಿಂದ ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ. ಶಾಲೆಗೆ ಬರುವ ಮಕ್ಕಳ ಮೇಲೆ ಶಿಕ್ಷಕನಾದವನು ನಿಗಾ ಇಡಬೇಕು. ಅವರ ಆಸಕ್ತಿ ವಿಷಯಗಳು, ಪಾಠ ಪ್ರವಚನಗಳನ್ನು ಚೆನ್ನಾಗಿ ಕೇಳುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಗಮನಿಸುತ್ತಿರಬೇಕು. ಮುಖ್ಯವಾಗಿ ಮಕ್ಕಳ ಪೋಷಕರಿಗೆ ಮಕ್ಕಳ ಬಗ್ಗೆ ಮಾಹಿತಿ ರವಾನಿಸಬೇಕು. ಹೀಗಾಗಿ ಪೋಷಕರು ಸರಿಪಡಿಸುವ ಕೆಲಸವನ್ನು ಪೋಷಕರು ಮಾಡಲು ಸಹಕಾರಿಯಾಗುತ್ತದೆ.

ತರಗತಿಯಲ್ಲಿ ಪಾಠ ಕೇಳುವ ಮಕ್ಕಳಿಗೆ ಪ್ರಶ್ನೆ ಕೇಳುವ ಮೂಲಕ ಆಯಾ ವಿಷಯದತ್ತ ಇನ್ನಷ್ಟುಗಮನಹರಿಸುವಂತೆ ಮಾಡಬೇಕು. ಅಲ್ಲದೇ ನಿರಂತರವಾಗಿ ಟೆಸ್ಟ್‌ಗಳನ್ನು ಮಕ್ಕಳಿಗೆ ನೀಡುವ ಮೂಲಕ ಅವರ ತಪ್ಪುಗಳನ್ನು ತಿದ್ದುವ ಕೆಲಸ ಶಿಕ್ಷಕರದ್ದಾಗಿದೆ.

Teachers Day 2022: ಶಿಕ್ಷಕರು ಜೀವನದಲ್ಲಿ ಯಾಕೆ ಮುಖ್ಯ ಗೊತ್ತಾ?

ಒಬ್ಬ ವಿದ್ಯಾರ್ಥಿ ಅತ್ಯಂತ ಎತ್ತರದ ಸ್ಥಾನಕ್ಕೆ ಹೋದಾಗ ಅತಿ ಹೆಚ್ಚು ಸಂಭ್ರಮಿಸುವುದು ಶಿಕ್ಷಕನೇ. ಪೋಷಕರನ್ನು ಬಿಟ್ಟರೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಿ ಅವರ ಏಳಿಗೆಗೆ ಶ್ರಮಿಸುವವನೇ ಶಿಕ್ಷಕ. ಇಂತಹ ಪವಿತ್ರ ವೃತ್ತಿಯಲ್ಲಿ ಇರುವ ಎಲ್ಲಾ ಶಿಕ್ಷಕರು ಹಲವಾರು ಸವಾಲುಗಳ ನಡುವೆಯೇ ಮಕ್ಕಳನ್ನು ಉತ್ತಮ ಸತ್ೊ್ರಜೆಯನ್ನಾಗಿ ರೂಪಿಸಬೇಕಾದ ದೊಡ್ಡ ಜವಾಬ್ದಾರಿಯಂತೂ ಇದೆ.

click me!