ಮಿಸ್ಡ್ ಕಾಲ್ ಕೊಡಿ; ಪಾಠ ಕೇಳಿ ಖ್ಯಾತಿಯ ಶಿಕ್ಷಕ ಉಮೇಶ್‌ಗೆ ರಾಷ್ಟ್ರಪತಿಯಿಂದ ಪ್ರಶಸ್ತಿ ಪ್ರದಾನ

By Kannadaprabha NewsFirst Published Sep 6, 2022, 1:44 PM IST
Highlights

ಕೊರೋನಾ ಸಂಕಷ್ಟಕಾಲದಲ್ಲಿ ಹೊಸಿಲು ದಾಟದೆ ಮನೆಗಳಲ್ಲಿ ಬಂಧಿಗಳಾಗಿದ್ದ ಸರ್ಕಾರಿ ಶಾಲಾ ಮಕ್ಕಳಿಗೆ ಮಿಸ್‌ಕಾಲ್‌ ಕೊಡಿ ಪಾಠ ಕೇಳಿ ಅಭಿಯಾನ ಆರಂಭಿಸಿ ಪೋಷÜಕರು, ಮಕ್ಕಳು ಮತ್ತು ಶಿಕ್ಷಣ ಇಲಾಖಾ ಅಧಿಕಾರಿಗಳ ಮನಗೆದ್ದಿದ್ದ, ಸಮೀಪದ ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಟಿ.ಪಿ. ಉಮೇಶ್‌ ಇಂದು ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಶಿಕ್ಷಕ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಪಡೆದುಕೊಂಡರು.

ಸಿರಿಗೆರೆ (ಸೆ.6) : ಕೊರೋನಾ ಸಂಕಷ್ಟಕಾಲದಲ್ಲಿ ಹೊಸಿಲು ದಾಟದೆ ಮನೆಗಳಲ್ಲಿ ಬಂಧಿಗಳಾಗಿದ್ದ ಸರ್ಕಾರಿ ಶಾಲಾ ಮಕ್ಕಳಿಗೆ ಮಿಸ್‌ಕಾಲ್‌ ಕೊಡಿ ಪಾಠ ಕೇಳಿ ಅಭಿಯಾನ ಆರಂಭಿಸಿ ಪೋಷÜಕರು, ಮಕ್ಕಳು ಮತ್ತು ಶಿಕ್ಷಣ ಇಲಾಖಾ ಅಧಿಕಾರಿಗಳ ಮನಗೆದ್ದಿದ್ದ, ಸಮೀಪದ ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಟಿ.ಪಿ. ಉಮೇಶ್‌ ಇಂದು ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಶಿಕ್ಷಕ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಪಡೆದುಕೊಂಡರು.

ಕೋಟೆನಾಡಿನ ಕುಗ್ರಾಮದ ಶಿಕ್ಷಕನಿಗೆ ರಾಷ್ಟ್ರೀಯ ಅತ್ಯತ್ತಮ ಶಿಕ್ಷಕ ಗರಿ!

ದೇಶದ ಹಲವು ರಾಜ್ಯಗಳಿಂದ ಆಯ್ಕೆಯಾಗಿದ್ದ ಪುರಸ್ಕೃತರಿಗೆ ರಾಷ್ಟ್ರಪತಿ(President) ಅವರು  ಪ್ರಶಸ್ತಿ ಪ್ರದಾನ ಮಾಡಿದರು. ಉಮೇಶ್‌(Umesh) ಸರತಿಯಲ್ಲಿ 41ನೆಯವರಾಗಿ ಪ್ರಶಸ್ತಿ ಸ್ವೀಕಾರ ಮಾಡಿದರು. ರಾಷ್ಟ್ರಪತಿಗಳಿಗೆ ಗೌರವ ಸೂಚಿಸಿದ ನಂತರ ಪ್ರಶಸ್ತಿ ಪಡೆದುಕೊಂಡರು. ಇದಕ್ಕೂ ಮೊದಲು ಅವರ ಸಾಧನೆಯ ಕುರಿತಾದ ವಿಡಿಯೋ ಪ್ರದರ್ಶನವೂ ನಡೆಯಿತು.

ಈ ಬಾರಿ ಕರ್ನಾಟಕ(Karnataka) ರಾಜ್ಯದಿಂದ ಕೇವಲು ಇಬ್ಬರು ಶಿಕ್ಷಕರು(Teachers) ಮಾತ್ರವೇ ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗಿದ್ದು, ಅದರಲ್ಲಿ ಉಮೇಶ್‌ ಪ್ರಮುಖರಾಗಿದ್ದಾರೆ. ಅಮೃತಾಪುರ ಸರ್ಕಾರಿ ಶಾಲೆ(Amritapura Govt School)ಯಲ್ಲಿ ಕೆಲಸ ಮಾಡುತ್ತಿರುವ ಉಮೇಶ್‌, ಖಾಸಗಿ ಶಾಲೆಗಳಿಗೆ ಪೈಪೋಟಿ ಎಂಬಂತೆ ತಾವು ಕೆಲಸ ಮಾಡುತ್ತಿರುವ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಸಂಘ ಸಂಸ್ಥೆಗಳಿಂದ ಸುಮಾರು 30 ರಿಂದ 40 ಲಕ್ಷ ರು.ಗಳ ದೇಣಿಗೆ ಪಡೆದು ಶಾಲಾ ಕಟ್ಟಡದ ಅಭಿವೃದ್ಧಿ, ವಿಜ್ಞಾನ ಪ್ರಯೋಗಾಲಯಗಳು, ಕಂಪ್ಯೂಟರ್‌ ತರಬೇತಿ ಪ್ರಯೋಗಾಲಯ, ಪೀಠೋಪಕರಣಗಳು, ಸ್ಮಾರ್ಚ್‌ ಟಿವಿ, ಪ್ರಾಥಮಿಕ ಶಾಲೆಗಳಲ್ಲಿ ನಿರೀಕ್ಷೆಗೂ ಮೀರಿದ ಗ್ರಂಥಾಲಯ, ಮುಂತಾದ ಸಲಕರಣೆಗಳನ್ನು ಶಾಲೆಯಲ್ಲಿ ಅಳವಡಿಸಿದ್ದಾರೆ.

ಬುಡಕಟ್ಟು ಜನರೇ ಇರುವ ಗ್ರಾಮದಲ್ಲಿ ಶಾಲೆಯು ರಜಸ್ವಾಲೆಯಾಗುವ ಮಹಿಳೆಯರ ವಾಸಸ್ಥಾನವಾಗಿ ಬಳಕೆಯಾಗುತ್ತಿತ್ತು. ಗ್ರಾಮಸ್ಥರಿಗೆ ಮೂಢನಂಬಿಕೆಗಳು, ಕಂದಾಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಉಮೇಶ್‌ ಮಾಡಿದರು. ಶಿಕ್ಷಣದ ಜೊತೆಗೆ ಸಮುದಾಯದ ಮಾರ್ಗದರ್ಶಕರಾಗಿ ಕೆಲಸ ಮಾಡಿದರು. ಹಳ್ಳಿಯಲ್ಲಿ ಮದ್ಯಪಾನದ ವಿರುದ್ಧ ಜಾಗೃತಿ ಉಂಟು ಮಾಡಿದರು. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಪೋಷಕರ ಮನವೊಲಿಸಿದರು. ಕೋವಿಡ್‌ ಸಂಕಷ್ಟಸಮಯದಲ್ಲಿ ಎರಡು ವರ್ಷಗಳ ಕಾಲ ಶಾಲೆಗೆ ರಜೆ ಹಾಕದೇ ಹಳ್ಳಿಯ ಶಾಲೆಯಲ್ಲಿಯಲ್ಲಿಯೇ ಉಳಿದು ಮಕ್ಕಳ ಯೋಗಕ್ಷೇಮಕ್ಕೆ ಆದ್ಯತೆ ನೀಡಿದರು. ಕೋವಿಡ್‌ ಸಂದರ್ಭದಲ್ಲಿ ಸುತ್ತಲಿನ ಹಳ್ಳಗಳಲ್ಲಿ ಆಗುತ್ತಿದ್ದ ಸಾವುಗಳನ್ನು ಗಮನಿಸಿ ಆ ಊರಲ್ಲಿ ಅಪರಿಚಿತರು ಬಾರದಂತೆ, ಗ್ರಾಮಸ್ಥರು ಆರೋಗ್ಯದ ಕಡೆ ನಿಗಾವಹಿಸುವಂತೆ ಎಚ್ಚರಿಕೆ ಪಾಠ ಮಾಡಿದರು.

ಶಿಕ್ಷಕರಿಗೆ ‘Google Guru’ ಸ್ಪರ್ಧಿ: ಬಸವರಾಜ ಬೊಮ್ಮಾಯಿ ಎಚ್ಚರಿಕೆ

ತಾವು ಜಾರಿಗೊಳಿಸಿದ ಕಾರ‍್ಯಕ್ರಮಗಳ ಪರಿಣಾಮವಾಗಿ ಶಾಲಾ ಮಕ್ಕಳ ದಾಖಲಾತಿಯಲ್ಲಿ ಪ್ರಗತಿ ಉಂಟಾಯಿತು. ಜೊತೆಗೆ ಬಾಲ ಕಾರ್ಮಿಕರಾಗುವ ಮಕ್ಕಳನ್ನು ಶಾಲೆಗೆ ತಂದು ಅವರಿಗೆ ಅಕ್ಷರದ ಗೀಳು ಅಂಟಿಸಿದರು. ಈ ಎಲ್ಲಾ ಸಾಧನೆಗಳನ್ನು ಗಣನೆಗೆ ತೆಗೆದುಕೊಂಡು ಅವರಿಗೆ ನೀಡಲಾಗಿರುವ ಪ್ರಶಸ್ತಿಗೆ ಮೆರಗು ಬಂದಂತಾಗಿದೆ

click me!