ಬೆಳಗಾವಿ (ಜು.28): ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿ 18 ವರ್ಷಗಳು ಕಳೆದಿವೆ. ಇಷ್ಟು ದಿನ ಗಡಿ ವಿವಾದ ಕ್ಯಾತೆ ತಗೆಯುತ್ತಿದ್ದ ಮಹಾರಾಷ್ಟ್ರ ಸರ್ಕಾರ ಈಗ ವಿಶ್ವವಿದ್ಯಾಲಯಗಳನ್ನು ಮುಂದೆ ಬಿಟ್ಟು ತನ್ನ ಕುತಂತ್ರ ಬುದ್ದಿ ಪ್ರದರ್ಶಿಸಲು ಮುಂದಾಗಿದೆ. ಗಡಿಭಾಗದ ಮರಾಠಿ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲಾಪುರದ ಶಿವಾಜಿ ವಿದ್ಯಾಪೀಠ ಹೊಸದೊಂದು ಯೋಜನೆ ರೂಪಿಸಿದ್ದು ಗಡಿ ಭಾಗಗಳಿಗೆ ತೆರಳಿ ಶಿಬಿರ ಆಯೋಜನೆ ಮಾಡುತ್ತಿದೆ. ಇದಕ್ಕೆ ನಾಡದ್ರೋಹಿ ಎಂಇಎಸ್ ಹಾಗೂ ಶಿವಸೇನೆ ನಾಯಕರು ಸಾಥ್ ನೀಡುತ್ತಿದೆ.
ಕರ್ನಾಟಕ(Karnataka) ಮಹಾರಾಷ್ಟ್ರ(Maharashtra) ಗಡಿ ವಿವಾದ ಸುಪ್ರೀಂಕೋರ್ಟ್(Suprim Court) ಮೆಟ್ಟಿಲೇರಿ 18 ವರ್ಷಗಳಾಗಿವೆ. ಈ ವಿಚಾರಣೆ ಕೈಗೆತ್ತಿಕೊಳ್ಳಬೇಕೋ ಬೇಡವೋ ಎಂಬ ನಿರ್ಧಾರವನ್ನೇ ಇನ್ನು ಸುಪ್ರೀಂಕೋರ್ಟ್ ಮಾಡಿಲ್ಲ. ಇದೆಲ್ಲದರ ಮಧ್ಯೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಂದರೆ ಕರ್ನಾಟಕದ ಗಡಿಯಲ್ಲಿ ಇರುವ 865 ಹಳ್ಳಿಗಳು ತಮಗೆ ಸೇರಿದ್ದು ಎಂದು ಪ್ರತಿಪಾದಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ತಂತ್ರಗಾರಿಕೆ ಹೆಣೆಯುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಮಹಾರಾಷ್ಟ್ರದ ಕೊಲ್ಲಾಪುರದ ಶಿವಾಜಿ ವಿದ್ಯಾಪೀಠ ಗಡಿಭಾಗದ ವಿದ್ಯಾರ್ಥಿಗಳಿಗೆ ಘೋಷಿಸಿರುವ ಉಚಿತ ಶಿಕ್ಷಣ(Free Education) ಯೋಜನೆ.
Belagavi: ರಾಜ್ಯ ಸರ್ಕಾರವನ್ನು ಟೀಕಿಸಿ ಎಂಇಎಸ್ ಉದ್ಧಟತನ
ಮಹಾರಾಷ್ಟ್ರದ ಶಿವಾಜಿ ವಿದ್ಯಾಪೀಠ((Shivaji Vidyapeetha) ಗಡಿಭಾಗದ 865 ಹಳ್ಳಿಗಳ ವಿದ್ಯಾರ್ಥಿಗಳಿಗಾಗಿ ಉಚಿತ ಶಿಕ್ಷಣ ಯೋಜನೆಯೊಂದನ್ನು ರೂಪಿಸಿದೆ. ಈ ಸಂಬಂಧ ಬೆಳಗಾವಿ(Belagavi)ಯಲ್ಲಿ ಶಿಬಿರ ಆಯೋಜನೆ ಮಾಡಿದ್ದ ಶಿವಾಜಿ ವಿದ್ಯಾಪೀಠ ಈ ಶಿಬಿರಕ್ಕೆ ನಾಡದ್ರೋಹಿ ಎಂಇಎಸ್(MES) ಮುಖಂಡರನ್ನು ಆಹ್ವಾನಿಸಿತ್ತು. ಸಭೆಯಲ್ಲಿ ಎಂಇಎಸ್ ಮುಖಂಡರಾದ ಮನೋಹದ ಕಿಣೇಕರ್(Manohar Kinekar), ಶಿವಾಜಿ ಸುಂಟಕರ(Shivaji Suntakar), ದೀಪಕ ದಳವಿ(Deepak Dalavi), ಶುಭಂ ಶೆಳಕೆ(Shubham Shelke) ಸೇರಿ ಹಲವರು ಭಾಗಿಯಾಗಿದ್ದರು. ಶಿವಾಜಿ ವಿದ್ಯಾಲಯದ ಮೂರು ಸ್ನಾತಕ ಹಾಗೂ 30ಕ್ಕೂ ಹೆಚ್ಚು ಸ್ನಾತಕೋತ್ತರ ಕೋರ್ಸ್‌ಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಉಚಿತ ಶಿಕ್ಷಣ ಯೋಜನೆಗೂ ಮಹಾರಾಷ್ಟ್ರ ಸರ್ಕಾರಕ್ಕೂ ಸಂಬಂಧ ಇಲ್ವಂತೆ..!
ಮಹಾರಾಷ್ಟ್ರದ ಕೊಲ್ಲಾಪುರ(Kollapur)ದ ಶಿವಾಜಿ ವಿಶ್ವವಿದ್ಯಾಲಯ ಆಡಳಿತ ಮಂಡಳಿಯ ಕೌನ್ಸಿಲ್ ಸದಸ್ಯೆ, ಗಡಿಭಾಗದ 865 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಯೋಜನೆಯ ಅಧ್ಯಕ್ಷೆ ಪ್ರೊಫೆಸರ್ ಡಾ.ಭಾರತಿ ಪಾಟೀಲ್(Dr.Bharati Patil) ಮಾತನಾಡಿ, 'ಗಡಿಭಾಗದ 865 ಗ್ರಾಮಗಳ ವಿದ್ಯಾರ್ಥಿಗಳಿಗೆ ಶಿವಾಜಿ ವಿಶ್ವವಿದ್ಯಾಲಯ ವತಿಯಿಂದ ಯೋಜನೆ ರೂಪಿಸಿದ್ದೆವೆ. ಈ ಯೋಜನೆಯನ್ವಯ ಈ ವಿದ್ಯಾರ್ಥಿಗಳಿಗೆ ಗ್ರ್ಯಾಂಟೇಡ್ ಕೋರ್ಸ್‌ಗಳಿಗೆ ಶೇಕಡ ನೂರರಷ್ಟು ಉಚಿತ ಶಿಕ್ಷಣ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಉಚಿತ ನೀಡಲಾಗುವುದು. ಊಟದ ವ್ಯವಸ್ಥೆ ವಿದ್ಯಾರ್ಥಿಗಳೇ ಮಾಡಿಕೊಳ್ಳಬೇಕು. ಶೇಕಡ 10ರಷ್ಟು ಗಡಿ ವಿದ್ಯಾರ್ಥಿಗಳಿಗೆ ಮೀಸಲು ಇಡಲಾಗುವುದು. ಗಡಿಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಆಗಲು ಈ ಯೋಜನೆ ತಂದಿದ್ದೇವೆ. ಶಿವಾಜಿ ವಿಶ್ವವಿದ್ಯಾಲಯ ಕೊಲ್ಲಾಪುರದಲ್ಲಿ ಇದೆ. ಕೊಲ್ಲಾಪುರ ಜೊತೆ 865 ಗಡಿಹಳ್ಳಿಗಳ ಜೊತೆ ಭಾವನಾತ್ಮಕ ಸಂಬಂಧ ಇದೆ. ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ವಜ್ರಮಹೋತ್ಸವ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಈ ಯೋಜನೆ ಜಾರಿ ತರುತ್ತಿದ್ದೇವೆ. ನೀವು ನಿಮ್ಮ ಮಕ್ಕಳನ್ನು ನಮ್ಮತ್ತ ಕಳಿಸಿ ನಾವು ಶಿಕ್ಷಣ ನೀಡುತ್ತೇವೆ. ಪ್ರಸಕ್ತ ವರ್ಷದಿಂದಲೇ ಈ ಯೋಜನೆ ಜಾರಿ ಆಗುತ್ತಿದ್ದು, ಗಡಿ ಭಾಗದ ವಿದ್ಯಾರ್ಥಿಗಳಿಗೆ ಶೇಕಡ 100ರಷ್ಟು ಉಚಿತ ಶಿಕ್ಷಣ ನೀಡುತ್ತಿರೋದು ಶಿವಾಜಿ ವಿವಿ ಇತಿಹಾಸದಲ್ಲೇ ಇದೇ ಮೊದಲ ಬಾರಿ. ಇದಕ್ಕೂ ಮಹಾರಾಷ್ಟ್ರ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ನಮಗೆ ಮಹಾರಾಷ್ಟ್ರ ಸರ್ಕಾರದ ಯಾವುದೇ ನಿರ್ದೇಶನವೂ ಬಂದಿಲ್ಲ' ಎಂದಿದ್ದಾರೆ.
ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಎಂಇಎಸ್ ಪುಂಡರಿಂದ ಗೂಂಡಾಗಿರಿ!
ಇನ್ನು ಶಿಬಿರದಲ್ಲಿ ಭಾಗವಹಿಸಿದ್ದ ಎಂಇಎಸ್ ಮುಖಂಡ ಶುಭಂ ಶೆಳಕೆ ಮಾತನಾಡಿ, 'ಗಡಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಆಗಲು ಶಿವಾಜಿ ವಿವಿ ಕಾರ್ಯಕ್ರಮ ಆಯೋಜಿಸಿದೆ. ಗಡಿಭಾಗದ 865 ಹಳ್ಳಿಗಳ ವಿದ್ಯಾರ್ಥಿಗಳಿಗಾಗಿ ಇದು ಅನುಕೂಲ ಆಗಲಿದೆ. ಶಿವಾಜಿ ವಿವಿ ಕೋರ್ಸ್‌ನಲ್ಲಿ ಶೇಕಡ 10ರಷ್ಟು ಗಡಿಭಾಗದ ವಿದ್ಯಾರ್ಥಿಗಳಿಗೆ ಮೀಸಲು ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. ಬೆಳಗಾವಿ ಸಹಿತ 865 ಹಳ್ಳಿಗಳ ಮರಾಠಿ ಭಾಷಿಕ ವಿದ್ಯಾರ್ಥಿಗಳಿಗೆ ಈ ಯೋಜನೆ ಅನುಕೂಲಕರವಾಗಲಿದೆ' ಎಂದು ತಿಳಿಸಿದ್ದಾರೆ.
'ಗಡಿ ಸಂರಕ್ಷಣಾ ಆಯೋಗ ಕಚೇರಿ ಬೆಳಗಾವಿಗೆ ಸ್ಥಳಾಂತರಿಸಿ'
ಇನ್ನು ಮಹಾರಾಷ್ಟ್ರದ ಕೊಲ್ಲಾಪುರದ ಶಿವಾಜಿ ವಿವಿಯಿಂದ ಕರ್ನಾಟಕ ಗಡಿಭಾಗದ ಮಕ್ಕಳಿಗೆ ಉಚಿತ ಶಿಕ್ಷಣ ಸೌಲಭ್ಯ ವಿಚಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್ ನಾಗಾಭರಣ(T.S.Nagabharan) ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ(CM Basavaraj Bommai) ನಾಗಾಭರಣ ಪತ್ರ ಬರದಿದ್ದಾರೆ. ಕರ್ನಾಟಕದ ಬೆಳಗಾವಿಯಿಂದ ಬೀದರ್‌ವರೆಗಿನ 865 ಹಳ್ಳಿಗಳ ಮರಾಠಿ ವಿದ್ಯಾರ್ಥಿಗಳಿಗೆ(Marathi Students) ಉಚಿತ ಶಿಕ್ಷಣ, ಇತರ ಸೌಲಭ್ಯ ನೀಡಲು ಶಿವಾಜಿ ವಿದ್ಯಾಪೀಠ ನಿರ್ಣಯ ಕೈಗೊಂಡಿದೆ.
ಬೆಳಗಾವಿಯಲ್ಲಿ ಜುಲೈ 26ರಂದು ಮಹಾರಾಷ್ಟ್ರ ಏಕೀಕರಣ ಸಮಿತಿ, ಶಿವಸೇನೆ ನಾಯಕರ ಸಮ್ಮುಖದಲ್ಲಿ ಮೊದಲ ಶಿಬಿರ ನಡೆದಿದೆ. ಮುಂದಿನ ಒಂದು ವಾರದಲ್ಲಿ ಬೀದರ್ ಜಿಲ್ಲೆಯ ಭಾಲ್ಕಿ ಸೇರಿ ವಿವಿಧೆಡೆ ಶಿಬಿರ ಆಯೋಜಿಸಲು ನಿರ್ಧರಿಸಿದೆ. ಮಹಾರಾಷ್ಟ್ರ ಸರ್ಕಾರ 865 ಹಳ್ಳಿ, ಪಟ್ಟಣಗಳು ತನಗೆ ಸೇರಬೇಕೆಂದು ಕೋರಿ ಸರ್ವೋಚ್ಚ ನ್ಯಾಯಾಲಯ ಮೊರೆ ಹೋಗಿದೆ. ಇದೇ ಪ್ರದೇಶಗಳ ಮರಾಠಿಗರ ಸೆಳೆಯಲು ಹೊಸ ತಂತ್ರ ರೂಪಿಸಿದೆ. ಮಹಾರಾಷ್ಟ್ರದ ಈ ತಂತ್ರ ಕರ್ನಾಟಕದ ನಾಡು, ನುಡಿ, ಗಡಿ ಹಿತಾಸಕ್ತಿಗೆ ಮಾರಕ. ಮಹಾರಾಷ್ಟ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ತನ್ನ ಪರ ಹೊಸ ಸಾಕ್ಷ್ಯಾಧಾರ ಸಲ್ಲಿಸಲು 865 ಹಳ್ಳಿಗಳ ಮರಾಠಿಗರ ಸೆಳೆಯಲು ಆರಂಭಿಸಿರುವುದು ನಿಸ್ಸಂಶಯ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022 ಅನುಷ್ಠಾನವಾದಲ್ಲಿ ಈ ಸಮಸ್ಯೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ. ಬೆಂಗಳೂರಲ್ಲಿ ಇರುವ ಗಡಿ ಸಂರಕ್ಷಣಾ ಆಯೋಗದ ಕಚೇರಿ ಬೆಳಗಾವಿಗೆ ಸ್ಥಳಾಂತರಿಸಿ, ಬೆಳಗಾವಿಯ ಹಿರಿಯ ಹೋರಾಟಗಾರರನ್ನು ಅಧ್ಯಕ್ಷರನ್ನಾಗಿ ನೇಮಿಸಿದರೆ ಒಳ್ಳೆಯದು' ಎಂದು ತಿಳಿಸಿದ್ದಾರೆ.
Belagavi: MES ಪುಂಡರ ಮೇಲೆ ದೇಶದ್ರೋಹದ ಕೇಸ್ ಇಲ್ಲ, ಒತ್ತಡಕ್ಕೆ ಮಣಿಯಿತಾ ಸರ್ಕಾರ?
ಇನ್ನು ಮಹಾರಾಷ್ಟ್ರದ ಶಿವಾಜಿ ವಿದ್ಯಾಪೀಠದ ನಿರ್ಣಯಕ್ಕೆ ಬೆಳಗಾವಿ ಕನ್ನಡಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, 'ಮಹಾರಾಷ್ಟ್ರದ ಶಿವಾಜಿ ವಿದ್ಯಾಪೀಠ ಶೈಕ್ಷಣಿಕವಾಗಿ ಯೋಜನೆ ಜಾರಿ ಮಾಡುತ್ತಿರುವುದು ಮೊದಲನೇ ಸಲ. 2004ರಲ್ಲಿ ಸುಪ್ರೀಂಕೋರ್ಟ್ ನಲ್ಲಿ ಗಡಿವಿವಾದ ಸಂಬಂಧ ಕೇಸ್ ದಾಖಲಿಸಿರುವ ಮಹಾರಾಷ್ಟ್ರ ಸರ್ಕಾರ ಬೆಳಗಾವಿ ನಗರ ಸೇರಿ 865 ಹಳ್ಳಿಗಳು ತಮಗೆ ಸೇರಿದ್ದು ಅಂತಾ ವಾದಿಸುತ್ತಿದೆ. ಈ ಹಳ್ಳಿಗಳ ಯುವಸಮೂಹಕ್ಕೆ ಉಚಿತ ಶಿಕ್ಷಣ ಆಸೆಯೊಡ್ಡಿ ಆ ಯುವ ಸಮೂಹವನ್ನು ತನ್ನತ್ತ ಸೆಳೆಯಲು ಹುನ್ನಾರ ನಡೆಸುತ್ತಿದೆ. ಸಿಎಂ ಇದನ್ನ ಗಂಭೀರವಾಗಿ ಪರಿಗಣಿಸಿ ಗಡಿಭಾಗದ ಚಿಂತಕರ ಹೋರಾಟಗಾರ ಸಭೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.